ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ವಾಹನಕ್ಕೆ ಎಂಜಿನ್ ಆಯಿಲ್ ಬಹಳ ಮುಖ್ಯ. ನಿಮ್ಮ ವಾಹನಕ್ಕೆ ಉತ್ತಮ ಎಂಜಿನ್ ಆಯಿಲ್ ಆಯ್ಕೆ ಮಾಡುವುದು ಕೂಡ ಅಷ್ಟೇ ಮುಖ್. ಜನರು ಸಾಮಾನ್ಯವಾಗಿ ಇಂಜಿನ್ ಆಯಿಲ್‌ಗೆ ಸಂಬಂಧಿಸಿದಂತೆ ಅನೇಕ ರೀತಿಯ ಗೊಂದಲಗಳನ್ನು ಹೊಂದಿರುತ್ತಾರೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಎಂಜಿನ್ ಆಯಿಲ್ ಇಂಜಿನ್‌ಗೆ ಲೂಬ್ರಿಕೇಶನ್ ಆಗಿ ಕಾರ್ಯನಿರ್ವಹಿಸುತ್ತದೆ ಆದರೆ ಎಂಜಿನ್‌ನ ತಾಪಮಾನವನ್ನು ನಿಯಂತ್ರಿಸುತ್ತದೆ ಇದರಿಂದ ಎಂಜಿನ್‌ನಲ್ಲಿರುವ ಭಾಗಗಳು ಅತಿಯಾದ ಶಾಖದಿಂದ ಹಾನಿಯಾಗುವುದಿಲ್ಲ. ಎಂಜಿನ್ ಆಯಿಲ್ ನಲ್ಲಿ ಹಲವು ವಿಧ ಗಳಿವೆ. ಅವುಗಳಲ್ಲಿ ಪ್ರತಿಯೊಂದರ ನಡುವಿನ ವ್ಯತ್ಯಾಸವೇನು? ಈ ಲೇಖನದಲ್ಲಿ ನೀವು ಪ್ರಶ್ನೆಗಳಿಗೆ ಉತ್ತರಗಳನ್ನು ನೋಡಬಹುದು. ನೀವು ಎಂಜಿನ್ ಆಯಿಲ್ ಖರೀದಿಸಲು ಹೋಗುವ ಮೊದಲು ನಿಮ್ಮ ಕಾರಿಗೆ ಯಾವ ರೀತಿಯ ಎಂಜಿನ್ ಆಯಿಲ್ ಬೇಕು? ಎಂಬ ಮಾಹಿತಿಗಳನ್ನು ಕೂಡ ತಿಳಿದುಕೊಳ್ಳಬೇಕು. ಇನ್ನು ಎಂಜಿನ್ ಬಗ್ಗೆ ನಿಮಗೆ ತಿಳಿದಿರಬೇಕಾದ ಕೆಲವು ಪ್ರಮುಖ ಮಾಹಿತಿಗಳು ಇಲ್ಲಿದೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಕನ್ವೆನ್ಷನಲ್ ಆಯಿಲ್ (Conventional Oil)

ಈ ಕನ್ವೆನ್ಷನಲ್ ಆಯಿಲ್ ಪ್ರಮಾಣಿತ ಮೋಟಾರ್ ಆಯಿಲ್ ಆಗಿದೆ. ಇದನ್ನು ಕಚ್ಚಾ ತೈಲದಿಂದ ತಯಾರಿಸಲಾಗುತ್ತದೆ. ಕಾರ್ಖಾನೆಯಲ್ಲಿ ನೆಲದಿಂದ ತೆಗೆದ ಕಚ್ಚಾ ತೈಲವನ್ನು ಸಂಸ್ಕರಿಸುವ ಮೂಲಕ ಖನಿಜ ಎಂಜಿನ್ ತೈಲವನ್ನು ತಯಾರಿಸಲಾಗುತ್ತದೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಖನಿಜ ಎಂಜಿನ್ ತೈಲದ ಸ್ನಿಗ್ಧತೆಯನ್ನು (ಸಾಂದ್ರತೆ) ಹೆಚ್ಚಿಸಲು ವಿವಿಧ ಸೇರ್ಪಡೆಗಳನ್ನು ಸೇರಿಸಲಾಗುತ್ತದೆ. ಹೀಗೆ ನಾನಾ ಪ್ರಕ್ರಿಯೆಗಳ ನಂತರ ಬಾಟಲಿಯಲ್ಲಿ ತುಂಬಿ ಮಾರಾಟಕ್ಕೆ ತರಲಾಗುತ್ತದೆ. ಮಿನರಲ್ ಎಂಜಿನ್ ಆಯಿಲ್ ಅಥವಾ ಕನ್ವೆನ್ಷನಲ್ ಆಯಿಲ್ ಆಧುನಿಕ ಎಂಜಿನ್ ತೈಲಗಳ ಪ್ರವರ್ತಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ರೀತಿಯ ಎಂಜಿನ್ ಆಯಿಲ್ ಹೋಲಿಸಿದರೆ ಕನ್ವೆನ್ಷನಲ್ ಎಂಜಿನ್ ಆಯಿಲ್ ಅಗ್ಗವಾಗಿದೆ. ಇದು ಖನಿಜ ಎಂಜಿನ್ ತೈಲದ ದೊಡ್ಡ ಪ್ಲಸ್ ಆಗಿದೆ. ಆದರೆ ಕನ್ವೆನ್ಷನಲ್ ಇಂಜಿನ್ ಆಯಿಲ್‌ನ ದೊಡ್ಡ ಸಮಸ್ಯೆಯೆಂದರೆ ಅದು ಘರ್ಷಣೆಯಿಂದ ಉಂಟಾಗುವ ಶಾಖದ ವಿರುದ್ಧ ಕಡಿಮೆ ರಕ್ಷಣೆ ನೀಡುತ್ತದೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಹಾಗೆಯೇ ಕನ್ವೆನ್ಷನಲ್ ಎಂಜಿನ್ ಆಯಿಲ್ ಶೀತ ವಾತಾವರಣದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೆ ಕನ್ವೆನ್ಷನಲ್ ಎಂಜಿನ್ ಆಯಿಲ್ ಅನ್ನು ಆಗಾಗ ಬದಲಾಯಿಸುತ್ತಿರಬೇಕು. ಹಾಗಾಗಿ ಕಡಿಮೆ ಬೆಲೆಗೆ ಲಭ್ಯವಿದ್ದರೂ ಕನ್ವೆನ್ಷನಲ್ ಎಂಜಿನ್ ಆಯಿಲ್ ಖರೀದಿಸುವ ಮುನ್ನ ಯೋಚಿಸಬೇಕು. ನೀವು ಈ ಕನ್ವೆನ್ಷನಲ್ ಆಯಿಲ್ ಅನ್ನು ಆಯ್ಕೆ ಮಾಡುವಾಗ ಈ ಅಂಶವನ್ನು ಕೂಡ ಪರಿಗಣಿಸಿ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಫುಲ್ ಸಿಂಥೆಟಿಕ್ ಆಯಿಲ್ (Full-Synthetic Oil)

ಫುಲ್ ಸಿಂಥೆಟಿಕ್ ಇಂಜಿನ್ ಆಯಿಲ್ ಆಯಿಲ್ ಅನ್ನು ಸಂಪೂರ್ಣವಾಗಿ ಕಾರ್ಖಾನೆ ಅಥವಾ ಪ್ರಯೋಗಾಲಯದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಣದಿಂದಾಗಿ ಅವು ತುಂಬಾ ಏಕರೂಪವಾಗಿರುತ್ತವೆ. ಇದು ಎಂಜಿನ್ ಆಯಿಲ್ ತಂತ್ರಜ್ಞಾನದಲ್ಲಿ ಅತ್ಯಾಧುನಿಕವಾಗಿ ಕಂಡುಬರುತ್ತದೆ. ಫುಲ್ ಸಿಂಥೆಟಿಕ್ ಎಂಜಿನ್ ಆಯಿಲ್ ಅತ್ಯುತ್ತಮ ರಕ್ಷಣೆ ನೀಡುತ್ತದೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಜೊತೆಗೆ ಇಂಧನ ಮಿತವ್ಯಯಕ್ಕೆ ಮಹತ್ವದ ಕೊಡುಗೆಯನ್ನು ನೀಡುವುದು, ಅಂದರೆ ಮೈಲೇಜ್ ಹೆಚ್ಚಿಸುವುದು. ಫುಲ್ ಸಿಂಥೆಟಿಕ್ ಆಯಿಲ್ ಹೆಚ್ಚಿನ ಒತ್ತಡ ಅಥವಾ ಕಡಿಮೆ ಮತ್ತು ಹೆಚ್ಚಿನ ತಾಪಮಾನದಂತಹ ಎಲ್ಲಾ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಆಯಿಲ್ ತಯಾರಿಸುವುದರ ಹಿಂದಿನ ವೈಜ್ಞಾನಿಕ ವೆಚ್ಚವು ಅಗಾಧ ಮತ್ತು ಕಷ್ಟಕರವಾಗಿದೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಇದರಿಂದಾಗಿ ಫುಲ್ ಸಿಂಥೆಟಿಕ್ ಆಯಿಲ್ ಬೆಲೆಯೂ ಅಧಿಕವಾಗಿದೆ. ಆದರೆ ಫುಲ್ ಸಿಂಥೆಟಿಕ್ ಆಯಿಲ್ ದೀರ್ಘಕಾಲದವರೆಗೆ ಇರುತ್ತದೆ. ಹಾಗಾಗಿ ಮಿನರಲ್ ಇಂಜಿನ್ ಆಯಿಲ್ ಆಗಿ ಇದನ್ನು ಹೆಚ್ಚಾಗಿ ಬದಲಾಯಿಸುವ ಅಗತ್ಯವಿಲ್ಲ. ಫುಲ್ ಸಿಂಥೆಟಿಕ್ ಆಯಿಲ್ ದುಬಾರಿಯಾಗಿದ್ದರೂ ಸಹ ಹೆಚ್ಚು ಪ್ರಯೋಜನೆಕಾರಿಯಾಗಿದೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಸಿಂಥೆಟಿಕ್ ಬ್ಲೆಂಡ್ ಆಯಿಲ್ (Synthetic Blend Oil)

ಇದು ಖನಿಜ ಮತ್ತು ಸಂಪೂರ್ಣ ಸಿಂಥೆಟಿಕ್ ಎಂಜಿನ್ ತೈಲದ ಮಿಶ್ರಣವಾಗಿದೆ. ಇದು ಖನಿಜ ತೈಲದಂತೆಯೇ ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ಆದರೆ ಫುಲ್ ಸಿಂಥೆಟಿಕ್ ಆಯಿಲ್ ಯಂತೆಯೇ ಅದೇ ಕಾರ್ಯಕ್ಷಮತೆಯನ್ನು ನೀಡುತ್ತದೆ. ಖನಿಜ ಎಂಜಿನ್ ಆಯಿಲ್ ಗಿಂತ ಸೆಮಿ ಸಿಂಥೆಟಿಕ್ ಆಯಿಲ್ 3 ಪಟ್ಟು ಹೆಚ್ಚು ರಕ್ಷಣೆ ನೀಡುತ್ತದೆ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಸೆಮಿ-ಸಿಂಥೆಟಿಕ್ ಎಂಜಿನ್ ಆಯಿಲ್ ಅನ್ನು ಖನಿಜ ಎಂಜಿನ್ ಆಯಿಲ್ ನೊದಿಗೆ ಸಣ್ಣ ಪ್ರಮಾಣದ ಸಿಂಥೆಟಿಕ್ ಆಯಿಲ್ ಅನ್ನು ಬೆರೆಸಿ ತಯಾರಿಸಲಾಗುತ್ತದೆ. ಆದ್ದರಿಂದ ಸಿಂಥೆಟಿಕ್ ಬ್ಲೆಂಡ್ ಆಯಿಲ್ ಎಂಬ ಹೆಸರು ಬಂದಿದೆ. ಇಲ್ಲಿ ಬ್ಲೆಂಡ್ ಪದದ ಅರ್ಥ ಸಂಯುಕ್ತ. ಇದು ಮಿನರಲ್ ಇಂಜಿನ್ ಆಯಿಲ್ ಗಿಂತ ಉತ್ತಮವಾಗಿದ್ದರೂ, ಸಂಪೂರ್ಣ ಸಿಂಥೆಟಿಕ್ ಎಂಜಿನ್ ಆಯಿಲ್ ನಷ್ಟು ಉತ್ತಮವಾಗಿಲ್ಲ.

ವಿವಿಧ ರೀತಿಯ ಎಂಜಿನ್ ಆಯಿಲ್‌ಗಳ ನಡುವೆ ಇರುವ ವ್ಯತ್ಯಾಸಗಳಿವು..

ಹೈ ಮೈಲೇಜ್ ಆಯಿಲ್ (High-Mileage Oil)

ಹೈ ಮೈಲೇಜ್ ಆಯಿಲ್ ಎಂಜಿನ್ ಸೀಲ್‌ಗಳನ್ನು ರಕ್ಷಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಅನನ್ಯ ಸೇರ್ಪಡೆಗಳ ಮಿಶ್ರಣವನ್ನು ಹೊಂದಿವೆ, ಇದು ತೈಲ ಆವಿಯಾಗುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಅಲ್ಲದೇ ಕಾರಿನ ಮೈಲೇಜ್ ಅನ್ನು ಹೆಚ್ಚಿಸುತ್ತದೆ. ದೂರದ ಪ್ರಯಾಣದ ವಾಹನಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ನಿಮ್ಮ ಕಾರು ಅಥವಾ ಬೈಕ್ ಅನ್ನು ನೀವು ಹೆಚ್ಚು ಬಳಸುತ್ತಿದ್ದರೆ, ಹೆಚ್ಚಿನ ಮೈಲೇಜ್ ನೀಡುವ ಎಂಜಿನ್ ಆಯಿಲ್ ಉತ್ತಮ ಆಯ್ಕೆಯಾಗಿದೆ.

Most Read Articles

Kannada
English summary
Types of engine oil for car bike find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X