ಬಾಲಕ ಮೋಹಿತ್ ಸಾವಿನ ಕಾರಣ ಬಹಿರಂಗ

ಬುಧವಾರ ನಸುಕಿನ ವೇಳೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್ ಬರುತ್ತಿದ್ದ ವೇಳೆ ಉದ್ಯಮಿ ಪ್ರದೀಪ್ ಕುಮಾರ್ ಕಾರು ಮೇಲು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಟೊಯೊಟಾ ಇನ್ನೋವಾದಲ್ಲಿ ಐದು ಮಂದಿ ಗಾಯಗೊಂಡು ಬಾಲಕನೊಬ್ಬ ಮೃತಪಟ್ಟಿದ್ದ.

ಹಿಂದಿನ ಸೀಟಿನಲ್ಲಿ ತಾಯಿ ರೀನಾ ಜೊತೆಗಿದ್ದ ಆರು ವರ್ಷದ ಬಾಲಕ ಮೋಹಿತ್ ಪಿ ಗೌಡ ಸಾವಿಗೆ ಸೀಟ್ ಬೆಲ್ಟ್ ಧರಿಸದೇ ಇದ್ದದ್ದು ಕೂಡ ಪ್ರಮುಖ ಕಾರಣ. ವಾಹನ ಸವಾರಿಯಲ್ಲಿ ಮಕ್ಕಳ ಸುರಕ್ಷತೆಗೂ ಹೆಚ್ಚು ಗಮನ ನೀಡುವುದು ಅತ್ಯಂತ ಅಗತ್ಯ.

ಕಾರಿನ ಹಿಂದಿನ ಸೀಟಿನಲ್ಲಿ ಮಕ್ಕಳು ಕುಳಿತಿದ್ದರೆ ಅವರಿಗೂ ಸೀಟ್ ಬೆಲ್ಟ್ ಧರಿಸುವುದು ಸೂಕ್ತ. ಪುಟ್ಟ ಮಕ್ಕಳಿದ್ದರೆ ಮಕ್ಕಳಿಗಾಗಿರುವ ವಿಶೇಷ ಸುರಕ್ಷಿತ ಸೀಟುಗಳಿದ್ದರೆ ಒಳಿತು. ಕನ್ನಡ ಡ್ರೈವ್ ಸ್ಪಾರ್ಕಿನಲ್ಲಿ ಸುರಕ್ಷತೆಯ ಸವಾರಿಗಾಗಿ ಸಾಕಷ್ಟು ಸಲಹೆಗಳನ್ನು ನೀಡಲಾಗಿದೆ. ಅದರಲ್ಲೂ ಸೀಟ್ ಬೆಲ್ಟ್ ಧರಿಸುವ ಔಚಿತ್ಯದ ಕುರಿತು ಪದೇ ಪದೇ ನೆನಪಿಸುತ್ತಿದ್ದೇವೆ.

ವಾಹನದಲ್ಲಿ ಹೆಚ್ಚಾಗಿ ಚಾಲಕ ಮತ್ತು ಪ್ರಯಾಣಿಕ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಗಳು ಸೀಟ್ ಬೆಲ್ಟ್ ಧರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಮಕ್ಕಳಿಗೆ ಸೀಟ್ ಬೆಲ್ಟ್ ಧರಿಸುವಂತೆ ಸೂಚಿಸಬೇಕು. ಸುರಕ್ಷಿತ ವಾಹನ ಚಾಲನೆಗಾಗಿ ತೆಗೆದುಕೊಳ್ಳಬೇಕಾದ ಇನ್ನಷ್ಟು ಮುಂಜಾಗ್ರತೆ ಕ್ರಮಗಳು ಇಲ್ಲಿವೆ.

ಸುರಕ್ಷಿತ ವಾಹನ ಚಾಲನೆಗೆ ಸಲಹೆಗಳು
* ಕಾರಿನ ವೇಗದ ಮಿತಿ ಕಾಪಾಡಿಕೊಳ್ಳಿ
* ಕುಡಿದು ವಾಹನ ಚಲಾಯಿಸದಿರಿ.
* ಸೀಟು ಬೆಲ್ಟ್ ಧರಿಸಿ.
* ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಬೇಡಿ.
* ಅಡ್ಡ ರಸ್ತೆ, ಉಬ್ಬು ತಗ್ಗು ಇರುವ ರಸ್ತೆಗಳಲ್ಲಿ ವಾಹನಗಳನ್ನು ಓವರ್ ಟೆಕ್ ಮಾಡದಿರಿ.
* ಇಕ್ಕಟ್ಟಾದ ಸ್ಥಳದಲ್ಲಿ ಓವರ್ ಟೆಕ್ ಒಳ್ಳೆಯದಲ್ಲ.
* ವಾಹನವನ್ನು ಹೆಚ್ಚು ಹೊತ್ತು ನಿಲ್ಲಿಸಬೇಕಾದ ಸಮಯದಲ್ಲಿ ಹ್ಯಾಂಡ್ ಬ್ರೇಕ್ ಹಾಕಲು ಮರೆಯದಿರಿ.
* ಕಾರಿನಲ್ಲಿ ಸಾಕಷ್ಟು ಪೆಟ್ರೊಲ್/ ಡೀಸಲ್ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಪ್ರಯಾಣಿಸಿ.
* ಟೈರ್ ಸುರಕ್ಷತೆ ಗಮನದಲ್ಲಿರಲಿ.
* ಜೋರಾಗಿ ಮ್ಯೂಸಿಕ್ ಹಾಕಿ ಡ್ರೈವ್ ಮಾಡದಿರಿ. ಹೀಗೆ ಮಾಡಿದರೆ ಹೊರಗಿನ ಸದ್ದು, ಹಾರ್ನ್ ಕೇಳಿಸದು.
* ವಾಹನ ನಿಮ್ಮದಾಗಿರಬಹುದು, ರಸ್ತೆ, ರಸ್ತೆಯಲ್ಲಿರುವರ ಪ್ರಾಣ ನಿಮ್ಮದಲ್ಲ. ನೆನಪಿರಲಿ
* ಯಾವುದಾದರೂ ಕಡೆಗೆ ವಾಹನ ತಿರುಗಿಸುವಾಗ ಇಂಡಿಕೇಟರ್ ಹಾಕಿರಿ.
* ವಾಹನ ಚಲಾಯಿಸುವಾಗ ತಾಂತ್ರಿಕ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆಯಿಂದ ನಿಭಾಯಿಸಿ.
* ಕಾರಿನಲ್ಲಿ ಓವರ್ ಲೋಡ್ ಮಾಡದಿರಿ.

Most Read Articles

Kannada
English summary
Wearing a seat belt is something that every car passenger must follow. It not only protects you from suffering serious injuries in case of an accident but also prevents you from falling out of a car if it topples. Especially seat belts for kids in rear seats is must must must.
Story first published: Thursday, May 3, 2012, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X