ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಕಾರು ಬಳಕೆದಾರರು ವೀಲ್ ಅಲೈನ್‌ಮೆಂಟ್‌ ಬಗ್ಗೆ ಕಂಡಿತವಾಗಿಯೂ ತಿಳಿದಿರಬೇಕು. ಕಾರಿಗೆ ಸ್ಟೀರಿಂಗ್ ಎಷ್ಟು ಮುಖ್ಯವೋ ವೀಲ್ ಅಲೈನ್‌ಮೆಂಟ್‌ ಕೂಡ ಅಷ್ಟೇ ಮುಖ್ಯ. ಕಾರು ನಮ್ಮ ನಿಯಂತ್ರಣದಲ್ಲಿದ್ದು, ಡ್ರೈವಿಂಗ್‌ ವೇಳೆ ಯಾವುದೇ ಸಮಸ್ಯೆಗಳು ಎದುರಾಗದಿರುವಂತೆ ಮಾಡುವಲ್ಲಿ ವೀಲ್‌ ಅಲೈನ್‌ಮೆಂಟ್ ಪ್ರಮುಖ ಪಾತ್ರ ವಹಿಸುತ್ತದೆ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ವೀಲ್ ಅಲೈನ್‌ಮೆಂಟ್‌ ಸರಿಯಾಗಿ ಇಲ್ಲದಿದ್ದರೆ ಯಾವೆಲ್ಲಾ ಸಮಸ್ಯೆಗಳು ಎದರಾಗಬಹುದು? ವೀಲ್‌ ಅಲೈನ್‌ಮೆಂಟ್‌ ಅನ್ನು ಯಾವಾಗ ಮಾಡಿಸಬೇಕು ಹಾಗೂ ಎಷ್ಟು ಬಾರಿ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಕಾರುಗಳನ್ನು ತಯಾರಿಸುವಾಗ ಚಕ್ರಗಳನ್ನು ಉತ್ಪಾದನಾ ಸ್ಥಾವರಗಳಲ್ಲಿ ಹಲವು ಬಾರಿ ಪರೀಕ್ಷಿಸಿ ಪರಿಪೂರ್ಣವಾಗಿ ರಸ್ತೆಗೆ ಹೊಂದಿಕೊಳ್ಳುವಂತೆ ತಯಾರಿಸಲಾಗುತ್ತದೆ. ಇದರಿಂದ ಅವು ಎಲ್ಲಾ 4 ಬದಿಗಳಲ್ಲಿ ಒಂದೇ ಸಮಾನತೆಯಲ್ಲಿ ಇರುತ್ತವೆ. ಬಳಿಕ ನಾವು ಕಾರುಗಳನ್ನು ಹೇಗೆ ಬಳಸುತ್ತೇವೆ ಎಂಬುದರ ಆಧಾರದ ಮೇಲೆ ಹೊಂದಿಸಲಾದ ಚಕ್ರದ ಜೋಡಣೆಯು ಬದಲಾಗುತ್ತದೆ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಹೀಗೆ ವೀಲ್ ಅಲೈನ್‌ಮೆಂಟ್ ಬದಲಾದಲ್ಲಿ ವಾಹನದ ಕಾರ್ಯಕ್ಷಮತೆ, ಮೈಲೇಜ್ ಮತ್ತು ಡ್ರೈವಿಂಗ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ಕಾರಿನ ವೀಲ್ ಅಲೈನ್‌ಮೆಂಟ್ ಅನ್ನು ನಿಯತಕಾಲಿಕವಾಗಿ ಪರಿಶೀಲಿಸುವುದು ಅತ್ಯಗತ್ಯ. ಮೊದಲಿಗೆ ವಾಹನಗಳ ವೀಲ್ ಅಲೈನ್‌ಮೆಂಟ್ ಯಾವ ಕಾರಣಕ್ಕೆ ಬದಲಾಗುತ್ತವೆ ಎಂಬುದನ್ನು ನೋಡೋಣ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ವಾಹನ ಚಾಲನೆಯಲ್ಲಿರುವಾಗಲೇ ಚಕ್ರದ ಜೋಡಣೆಯು ಬದಲಾಗಲು ಪ್ರಾರಂಭಿಸುತ್ತದೆ. ಆದರೆ ಸಾಮಾನ್ಯ ಡ್ರೈವಿಂಗ್‌ನಲ್ಲಿ ಬಹಳ ಕಡಿಮೆ ಪ್ರಮಾಣದ ವ್ಯತ್ಯಾಸವಿರುತ್ತದೆ. ಒರಟು ರಸ್ತೆಗಳು, ವಾಹನದಲ್ಲಿ ಭಾರವಾದ ವಸ್ತುಗಳನ್ನು ಸಾಗಿಸಿದಾಗ ಮತ್ತು ಹೆಚ್ಚಿನ ತಿರುವುಗಳನ್ನು ಮೂಲಕ ಸಾಗಿದಾಗ ವೀಲ್‌ ಅಲೈನ್‌ಮೆಂಟ್ ಬದಲಾಗಬಹುದು.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಸಾಮಾನ್ಯವಾಗಿ ವಾಹನದ ಚಕ್ರವು ನೇರವಾಗಿ ಸಸ್ಪೆನ್ಷನ್‌ಗೆ ಸಂಪರ್ಕ ಹೊಂದಿರುತ್ತದೆ. ಒರಟು ರಸ್ತೆಗಳಲ್ಲಿ ಕಂಪನಗಳನ್ನು ತಡೆದುಕೊಳ್ಳಲು ಈ ಸಸ್ಪೆನ್ಷನ್‌ಗಳನ್ನು ಬಳಸಲಾಗುತ್ತದೆ. ಹೀಗಾಗಿ ಚಕ್ರಗಳು ಒರಟು ಟ್ರ್ಯಾಕ್‌ಗಳ ನಡುವೆ ನೇರವಾಗಿ ಸಿಲುಕಿಕೊಳ್ಳುತ್ತವೆ. ವೇಗವಾಗಿ ಹೋಗುವಾಗ ಟ್ರ್ಯಾಕ್‌ನಲ್ಲಿರುವ ರಿಡ್ಜ್ ಗ್ರೂವ್‌ಗಳನ್ನು ಚಕ್ರವು ಹೊಡೆಯುವುದರಿಂದ ಮೂಲ ಸ್ಥಾನವನ್ನು ನಿಧಾನವಾಗಿ ಕಳೆದುಕೊಳ್ಳುತ್ತವೆ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಇದು ಒರಟು ರಸ್ತೆಗಳಲ್ಲಿ ಮಾತ್ರವಲ್ಲದೇ ಉತ್ತಮ ರಸ್ತೆಯಲ್ಲಿ ಪ್ರಯಾಣಿಸುವಾಗ ದೊಡ್ಡ ಹೊಂಡಕ್ಕೆ ಬಿದ್ದರೂ ಅಲೈನ್ ಮೆಂಟ್ ಬದಲಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಬಳಸುವ ವಾಹನದ ವಿಧಾನವನ್ನು ಅವಲಂಬಿಸಿ ಇದು ಬದಲಾಗುತ್ತದೆ. ಹೆಚ್ಚು ಒರಟು ರಸ್ತೆಗಳಲ್ಲಿ ವಾಹನಗಳನ್ನು ಬಳಸಿದರೆ ಕೆಲವರಿಗೆ ವ್ಹೀಲ್ ಅಲೈನ್ ಮೆಂಟ್ ಶೀಘ್ರದಲ್ಲೇ ಬದಲಾಗುತ್ತದೆ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಅದಕ್ಕಾಗಿಯೇ ತಯಾರಕರು ಆಫ್ರೋಡ್ ವಾಹನಗಳಿಗೆ ವೀಲ್‌ ಅಲೈನ್‌ಮೆಂಟ್‌ ಅನ್ನು ಬಲವಾಗಿ ನೀಡುತ್ತಾರೆ. ಹಾಗಾಗಿಯೇ ಈ ವಾಹನಗಳು ಅಷ್ಟು ಸುಲಭವಾಗಿ ವೀಲ್ ಅಲೈನ್‌ಮೆಂಟ್ ಕಳೆದುಕೊಳ್ಳುವುದಿಲ್ಲ. ಇವುಗಳ ತಯಾರಿ ಸಮಯದಲ್ಲೇ ಟೈಯರ್ ಸಂಬಂದಿತ ಕಾರ್ಯಗಳಲ್ಲಿ ಬಲವಾದ ಇನ್ಸ್ಟ್ರೂಮೆಂಟ್‌ಗಳನ್ನು ಅಳವಡಿಸಲಾಗುತ್ತದೆ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಸಮಾನ್ಯ ಕಾರುಗಳು ವೇಗದಲ್ಲಿ ಹೋಗುವುದು ಮತ್ತು ಕಾರನ್ನು ತಿರುವುಗಳಲ್ಲಿ ತಿರುಗಿಸುವುದು, ಅಪಘಾತದ ನಂತರ ವಾಹನವನ್ನು ಪರೀಕ್ಷಿಸದೇ ಹಾಗೆಯೇ ಬಳಸುವುದು ಇತ್ಯಾದಿಗಳಿಂದ ಕೆಲವೊಮ್ಮೆ ಅಲೈನ್‌ಮೆಂಟ್ ಬಹಳ ವ್ಯತ್ಯಾಸಗೊಳ್ಳಬಹುದು. ಈ ರೀತಿಯ ಅಲೈನ್‌ಮೆಂಟ್‌ ವ್ಯತ್ಯಾಸವನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನು ನೋಡೋಣ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಸಾಮಾನ್ಯವಾಗಿ ವೀಲ್ ಅಲೈನ್‌ಮೆಂಟ್ ಬದಲಾಗಿದೆ ಎಂಬುದಕ್ಕೆ ಮೊದಲ ಚಿಹ್ನೆಯೆಂದರೆ ಕಾರು ಹೆಚ್ಚಾಗಿ ವೈಬ್ರೇಟ್ ಆಗುತ್ತದೆ. ಚಾಲನೆ ಮಾಡುವಾಗ ಕಂಪನಗಳು ಅಧಿಕವಾಗಿದ್ದರೆ ವೀಲ್ ಅಲೈನ್ಮೆಂಟ್ ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ಮುಂದೆ ರಸ್ತೆಗಳಲ್ಲಿ ಕಾರನ್ನು ಓಡಿಸುವಾಗ ಒಂದು ಬದಿಗೆ ಎಳೆದಂತಾಗುತ್ತದೆ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಕಾರು ರಸ್ತೆಯಲ್ಲಿ ಚಲಿಸುತ್ತಿರುವಾಗ ನೀವು ಸ್ಟೀರಿಂಗ್ ವೀಲ್ ಅನ್ನು ನೇರವಾಗಿ ಹಿಡಿದರೂ ಕಾರ್ ನೇರವಾಗಿ ಹೋಗದೆ ಸ್ವಲ್ಪ ಬಾಗುತ್ತದೆ. ಇದನ್ನು ಸ್ಪಷ್ಟವಾಗಿ ತಿಳಿಯಲು ನಿಮ್ಮ ಕಾರನ್ನು ಬೇರೊಬ್ಬರಿಂದ ರೈಡ್ ಮಾಡಿಸಿ ನೀವು ಇನ್ನೊಂದು ವಾಹನದಲ್ಲಿ ಚಲಿಸುತ್ತಾ ನಿಮ್ಮ ಕಾರಿನ ಚಕ್ರವನ್ನು ನೋಡಿದರೆ, ಅದು ನೇರವಾಗಿರದೆ ಬಾಗಿದಂತೆ ತಿರುಗುವುದನ್ನು ಕಾಣಬಹುದು.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ನಿಮ್ಮ ವಾಹನದ ವೀಲ್‌ ಅಲೈನ್‌ಮೆಂಟ್ ಈ ರೀತಿ ಬದಲಾಗಿದ್ದರೆ, ನೀವು ತಕ್ಷಣ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಚಕ್ರ ಜೋಡಣೆಯನ್ನು ಸರಿಪಡಿಸಬೇಕು. ಇಲ್ಲಿದಿದ್ದರೆ ಅನಾಹುತಗಳು ಸಂಭವಿಸಬಹುದು. ಹಾಗಾಗಿ ಅಲೈನ್‌ಮೆಂಟ್ ಮಾಡಿಸಿದಲ್ಲಿ ರಸ್ತೆಗಳಲ್ಲಿ ದೃಢವಾಗಿ ಮತ್ತು ಮನಬಂದಂತೆ ಕಾರುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ಒಂದು ವೇಳೆ ಕಾರಿನ ವೀಲ್ ಅಲೈನ್ ಮೆಂಟ್ ಸರಿಯಿಲ್ಲದಿದ್ದರೆ ಕಾರಿನ ಮೈಲೇಜ್ ಶೇ.7ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಹಾಗಿದ್ದಲ್ಲಿ, ಚಕ್ರದ ಜೋಡಣೆಯನ್ನು ಸರಿಯಾಗಿ ಇಟ್ಟುಕೊಳ್ಳುವುದರಿಂದ ಕಾರಿನ ಮೈಲೇಜ್ ಶೇಕಡಾ 7 ರಷ್ಟು ಹೆಚ್ಚಾಗುತ್ತದೆ ಮತ್ತು ಪೆಟ್ರೋಲ್ ವೆಚ್ಚವನ್ನು ಕಡಿಮೆ ಮಾಡುತ್ತದೆ.

 ಕಾರಿಗೆ ವೀಲ್ ಅಲೈನ್‌ಮೆಂಟ್ ಯಾವಾಗ ಮಾಡಬೇಕು: ಇದರಿಂದಾಗುವ ಪ್ರಯೋಜನಗಳೇನು?

ನೀವು ಕಾರನ್ನು ಖರೀದಿಸಿದಾಗಿನಿಂದ ಗುಣಮಟ್ಟದ ರಸ್ತೆಗಳಲ್ಲಿ ಕಾರನ್ನು ಬಳಸುತ್ತಿದ್ದರೂ, ಉತ್ತಮವಾಗಿ ಚಾಲನೆ ಮತ್ತು ನಿರ್ವಹಿಸುತ್ತಿದ್ದರೂ ಸಹ ಕನಿಷ್ಟ 2-3 ವರ್ಷಗಳಿಗೊಮ್ಮೆ ಕಾರಿನ ವೀಲ್‌ ಅಲೈನ್‌ಮೆಂಟ್‌ ಮಾಡಿಸಬೇಕು. ಏಕೆಂದರೆ ನಿಮಗೆ ತಿಳಿಯದೇ ಹಲವು ಗುಂಡಿಗಳಲ್ಲಿ ಇಳಿಸಿರುತ್ತೀರಿ ಹಾಗಾಗಿ ಅಲೈನ್‌ಮೆಂಟ್ ಮಾಡಿಸಿದರೆ ಉತ್ತಮ.

Most Read Articles

Kannada
English summary
When to check wheel alignment for you car know full details
Story first published: Sunday, June 5, 2022, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X