ವಿಶ್ವದ 10 ಅತಿ ಅಪಾಯಕಾರಿ ಪ್ರಯಾಣಿಕ ವಿಮಾನಗಳು

By Nagaraja

ನೀವು ಪದೇ ಪದೇ ವಿದೇಶ ಪ್ರಯಾಣವನ್ನು ಕೈಗೊಳ್ಳುವೀರಾ? ಹಾಗಿದ್ದರೆ ಈ ಲೇಖನವನ್ನೊಮ್ಮೆ ಓದಿ ನೋಡಿ. ಒಂದು ಕಾಲದಲ್ಲಿ ಅತ್ಯಂತ ಸುರಕ್ಷಿತ ಪ್ರಯಾಣ ರೂಪವಾಗಿದ್ದ ವಿಮಾನಯಾನ ಸಹ ಪದೇ ಪದೇ ಅಪಾಯವನ್ನು ಆಹ್ವಾನಿಸುತ್ತದೆ.

ಇವನ್ನೂ ಓದಿ: ಅಮೆರಿಕದಲ್ಲಿ ವಿಮಾನಗಳಿಗೂ ಸ್ಮಶಾನ ?

ಕಳೆದ ಕೆಲವು ದಶಕಗಳಲ್ಲಿ ವಿಮಾನಯಾನಗಳ ಸಂಖ್ಯೆಯಲ್ಲಿ ಕಂಡುಬಂದಿರುವ ವರ್ಧನೆ ಹಾಗೂ ಸ್ಪರ್ಧಾತ್ಮಕ ಬೆಳವಣಿಗೆ ಇವೆಲ್ಲವೂ ಕಾರಣಗಳಾಗಿರಬಹುದು. ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಯ, ಆತಂಕ ನೆಲೆಗೊಂಡಿರುತ್ತದೆ ಎಂಬುದನ್ನು ಸಹ ಒಪ್ಪಿಕೊಳ್ಳಬೇಕಾಗುತ್ತದೆ.

ವಿಶ್ವದ 10 ಅತಿ ಅಪಾಯಕಾರಿ ಪ್ರಯಾಣಿಕ ವಿಮಾನಗಳು

ಏರ್‌ಲೈನ್ ರೇಟಿಂಗ್ ಡಾಟ್ ಕಾಮ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಜಗತ್ತಿನ 10 ಅತಿ ಅಪಾಯಕಾರಿ ಪ್ರಯಾಣಿಕ ವಿಮಾನಗಳ ಬಗ್ಗೆ ವಿವರಣೆ ಕೊಡಲಿದ್ದೇವೆ. ಕಳೆದೊಂದು ದಶಕಗಳಲ್ಲಿ ಅತಿ ಹೆಚ್ಚು ಬಾರಿ ಅವಘಡಕ್ಕೀಡಾಗಿರುವುದನ್ನು ಪರಿಗಣಿಸಿ ಇದನ್ನು ತಯಾರಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಅತಿ ಹೆಚ್ಚು ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿರುವ ವಿಮಾನಗಳ ಪಟ್ಟಿಯಲ್ಲ ಬದಲಾಗಿ ಅತಿ ಹೆಚ್ಚು ಬಾರಿ ಅಪಘಾತಕ್ಕೀಡಾಗಿರುವ ಪ್ರಯಾಣವನ್ನು ಪರಿಗಣಿಸಿ ಇದನ್ನು ತಯಾರಿಸಲಾಗಿದೆ. ವಿಶೇಷವೆಂದರೆ ಈ ಎಲ್ಲ ವಿಮಾನಗಳು ಈಗಲೂ ಸೇವೆಯಲ್ಲಿದೆ.

10 ಟ್ಯುಪೊಲೆವ್ 154 - 7 ಅಪಘಾತಗಳು

10 ಟ್ಯುಪೊಲೆವ್ 154 - 7 ಅಪಘಾತಗಳು

ಸೋವಿಯತ್ ರಷ್ಯಾ ಕಾಲಘಟ್ಟದ ಈ ವಿಮಾನವನ್ನು ಅತಿ ಕೆಟ್ಟ ಹವಮಾನ ಪರಿಸ್ಥಿತಿಯಲ್ಲೂ ಸೇವೆಗೆ ಬಳಕೆ ಮಾಡಲಾಗುತ್ತಿತ್ತು. ಆದರೆ ಸರಿಯಾದ ನಿರ್ವಹಣೆ ಕೊರತೆ ಎದುರಿಸುತ್ತಿತ್ತು. ಗಂಟೆಗೆ 850 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಟ್ಯುಪೊಲೆವ್ ಕಳೆದೊಂದು ದಶಕದಲ್ಲಿ ಏಳು ಬಾರಿ ಅಪಘಾತಕ್ಕೀಡಾಗಿದೆ. ಅತ್ಯಂತ ಬೇಸರದ ಸಂಗತಿಯೆಂದರೆ 2006 ಹಾಗೂ 2009ರ ಅಪಘಾತದ ವೇಳೆ ಅನುಕ್ರಮವಾಗಿ 170 ಹಾಗೂ 168ರಷ್ಟು ಮಂದಿ ಸಾವನ್ನಪ್ಪಿದ್ದರು.

9. ಆಂಟೊನೊವ್ 32 - 7 ಅಪಘಾತಗಳು

9. ಆಂಟೊನೊವ್ 32 - 7 ಅಪಘಾತಗಳು

ಮಗದೊಂದು ಸೋವಿಯತ್ ಕಾಲಘಟ್ಟದ ವಿಮಾನವಾಗಿರುವ ಆಂಟೊನೊವ್ 1976ನೇ ಇಸವಿಯಿಂದಲೇ ಸೇವೆಯಲ್ಲಿದೆ. ಕೆಟ್ಟ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುವ ರೀತಿಯಲ್ಲಿ ನಿರ್ಮಾಣ ಮಾಡಿರುವ ಈ ವಿಮಾನ ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿತ್ತು. ಇದು ಪರ್ವತ ಪ್ರದೇಶಗಳಲ್ಲಿ ಟೇಕ್ ಆಫ್ ಮಾಡುವುದರಲ್ಲಿ ಹೆಸರು ಗಿಟ್ಟಿಸಿಕೊಂಡಿತ್ತು. ಇವೆಲ್ಲದರ ಜೊತೆಗೆ 50 ಪ್ರಯಾಣಿಕರನ್ನು ಹೊತ್ಯೊಯ್ಯಬಲ್ಲ ಈ ವಿಮಾನ ಗಂಟೆಗೆ 470 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇದುವರೆಗೆ ಏಳು ಅಪಘಾತಗಳಲ್ಲಿ ಭಾಗಿಯಾಗಿದೆ.

8. ಆಂಟೊನೊವ್ 28 - 8 ಅಪಘಾತಗಳು

8. ಆಂಟೊನೊವ್ 28 - 8 ಅಪಘಾತಗಳು

ಈ ಕಡಿಮೆ ವ್ಯಾಪ್ತಿಯ ಟ್ವಿನ್ ಎಂಜಿನ್ ವಿಮಾನವು 1986ನೇ ಇಸವಿಯಿಂದಲೇ ಸೇವೆಯಲ್ಲಿದೆ. ಇದು ಅತಿ ಸಣ್ಣ 15 ಪ್ರಯಾಣಿಕರ ವಿಮಾನವಾಗಿದ್ದು, 500 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ ಸಣ್ಣ ರನ್ವೇಗಳಲ್ಲೂ ಇದು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯ ಹೊಂದಿದೆ.

7. ಬೋಯಿಂಗ್ 737 - 10 ಅಪಘಾತಗಳು

7. ಬೋಯಿಂಗ್ 737 - 10 ಅಪಘಾತಗಳು

1968ರಲ್ಲಿ ಸೇವೆಗೆ ಬಂದಿರುವ ಬೋಯಿಂಗ್ 737 ಸಹ ಕಡಿಮೆ ಮಧ್ಯಮ ವ್ಯಾಪ್ತಿಯನ್ನು ಹೊಂದಿದೆ. ಇದು 215 ಪ್ರಯಾಣಿಕರನ್ನು ಗಂಟೆಗೆ 800 ಕೀ.ಮೀ. ವೇಗದಲ್ಲಿ 10,000 ಕೀ.ಮೀ. ವ್ಯಾಪ್ತಿ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಎರಡು ವರ್ಷದ ಹಿಂದೆ ಪಾಕಿಸ್ತಾನ ಮೂಲದ ಈ ವಿಮಾನ ಅಪಘಾತ ಪ್ರಕರಣದಲ್ಲಿ 127ರಷ್ಟು ಮಂದಿ ಸಾವನ್ನಪ್ಪಿರುವುದು ದುರಂತ ಘಟನೆಯಾಗಿತ್ತು.

6. ಡಿಸಿ-9 / ಎಂಡಿ-80 - 10 ಅಪಘಾತಗಳು

6. ಡಿಸಿ-9 / ಎಂಡಿ-80 - 10 ಅಪಘಾತಗಳು

ಕಡಿಮೆ ವ್ಯಾಪ್ತಿಯನ್ನು ಸಂಚರಿಸುವುದಕ್ಕಾಗಿ ಮೆಕ್ ಡೋನೆಲ್ ಡಗ್ಲಾಸ್ ಡಿಸಿ-9 ಟ್ವಿನ್ ಎಂಜಿನ್ ಜೆಟ್ ಲೈನರ್ ವಿಮಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಇದನ್ನು 1965ರಲ್ಲಿ ಪರಿಚಯಿಸಲಾಗಿತ್ತು. ಅಲ್ಲದೆ ಗಂಟೆಗೆ 900 ಕೀ.ಮೀ. ವೇಗ ಹಾಗೂ 135 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವ್ಯಾಪ್ತಿ 3000 ಕೀ.ಮೀ. ಆಗಿದೆ.

5. ಕಾಸಾ ಸಿ-212 - 11 ಅಪಘಾತಗಳು

5. ಕಾಸಾ ಸಿ-212 - 11 ಅಪಘಾತಗಳು

ಸ್ಪೇನ್‌ನ ಕಾಸಾ ಸಿ-212 ಸಹ ಕಡಿಮೆ ವ್ಯಾಪ್ತಿಯ ವಿಮಾನವಾಗಿದೆ. ಇದು ಪ್ರತ್ಯೇಕ ವಾಯುನೆಲೆಗಳಲ್ಲೂ ಲ್ಯಾಂಡ್ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 26 ಪ್ರಯಾಣಿಕರನ್ನು 1800 ಕೀ.ಮೀ. ವ್ಯಾಪ್ತಿ ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ.

4. ಆಂಟೊನೊವ್ 12 - 17 ಅಪಘಾತಗಳು

4. ಆಂಟೊನೊವ್ 12 - 17 ಅಪಘಾತಗಳು

ಸೋವಿಯತ್ ಕಾಲಘಟ್ಟದ ವಿಮಾನವಾಗಿರುವ ಆಂಟೊನೊವ್ 12 ವಿಮಾನವನ್ನು 1959ರಲ್ಲಿ ಪ್ರಮುಖವಾಗಿಯೂ ನಾಗರಿಕ ಹಾಗೂ ಮಿಲಿಟರಿ ಅಗತ್ಯಗಳಿಗಾಗಿ ಬಳಕೆ ಮಾಡಲಾಗುತ್ತಿತ್ತು. ಇದು ಗಂಟೆಗೆ 670 ಕೀ.ಮೀ. ವೇಗದಲ್ಲಿ ಗರಿಷ್ಠ 3600 ಕೀ.ಮೀ. ವ್ಯಾಪ್ತಿ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದು 85 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

3. ಇಲ್ಯೂಶಿನ್ 76 - 17 ಅಪಘಾತಗಳು

3. ಇಲ್ಯೂಶಿನ್ 76 - 17 ಅಪಘಾತಗಳು

1974ರಲ್ಲಿ ಪರಿಚಯವಾಗಿದ್ದ ಜೆಟ್ ನಿಯಂತ್ರಿತ ಈ ವಿಮಾನ 4300 ಕೀ.ಮೀ. ವ್ಯಾಪ್ತಿ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ 2003ರಲ್ಲಿ ನಡೆದ ಇರಾನ್ ಮೂಲದ II-76 ವಿಮಾನ ಅಪಘಾತದಲ್ಲಿ 275 ಮಂದಿ ಸಾವಿಗೀಡಾಗಿದ್ದರು.

2. ಡೆಹ್ಯಾವಿಲ್ಯಾಂಡ್ ಟ್ವಿನ್ ಆಟರ್ - 19 ಅಪಘಾತಗಳು

2. ಡೆಹ್ಯಾವಿಲ್ಯಾಂಡ್ ಟ್ವಿನ್ ಆಟರ್ - 19 ಅಪಘಾತಗಳು

ಜಗತ್ತಿನ ಅತ್ಯಂತ ಅಪಾಯಕಾರಿ ಪ್ರಯಾಣಿಕ ವಿಮಾನಗಳಲ್ಲಿ ಸಾಲಿನಲ್ಲಿ ಇದು ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಈ ಕೆನಡಾ ನಿರ್ಮಿತ ವಿಮಾನವನ್ನು ಮೊದಲ ಬಾರಿಗೆ 1966ರಲ್ಲಿ ಪರಿಚಯಿಸಲಾಗಿತ್ತು. ಇದು ಗಂಟೆಗೆ 280 ಕೀ.ಮೀ. ವೇಗದಲ್ಲಿ 19 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

1. ಎಲ್‌ಇಡಿ ಎಲ್ - 410 - 20 ಅಪಘಾತಗಳು

1. ಎಲ್‌ಇಡಿ ಎಲ್ - 410 - 20 ಅಪಘಾತಗಳು

ವಿಶ್ವದ ಅತ್ಯಂತ ಕೆಟ್ಟ ಪ್ರಯಾಣಿಕ ವಿಮಾನವೆಂಬ ಅಪಖ್ಯಾತಿಗೆ ಎಲ್‌ಇಡಿ ಎಲ್ -410 ವಿಮಾನ ಪಾತ್ರವಾಗಿದೆ. ಇದು ಸಹ ಟ್ವಿನ್ ಎಂಜಿನ್ ನಿಯಂತ್ರಿತ ವಿಮಾನವಾಗಿದ್ದು 1970ರಲ್ಲಿ ಮೊದಲ ಹಾರಾಟ ನಡೆಸಿತ್ತು. ಅಲ್ಲದೆ ಗಂಟೆಗೆ 365 ಕೀ.ಮೀ. ವೇಗದಲ್ಲಿ 19 ಪ್ರಯಾಣಿಕರೊಂದಿಗೆ ಗರಿಷ್ಠ 1400 ಕೀ.ಮೀ. ವ್ಯಾಪ್ತಿ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ 20 ಅಪಘಾತ ಪ್ರಕರಣಗಳು ಈ ವಿಮಾನದ ಮೇಲೆ ಕಪ್ಪು ಮಸಿ ಬಳಿದಿತ್ತು.

Most Read Articles

Kannada
English summary
Here are given details of most dangerous civilian aircrafts in use today. The data is based on a research done by Airlinerating.com and Aviationsafety.net and assesses which aircraft had the most fatal crashes over the last decade.
Story first published: Friday, September 12, 2014, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X