ಮಂಗಳೂರಿನ ತಾತನ ವಯಸ್ಸು 100; ಈಗಲೂ ಹೊಟ್ಟೆಪಾಡಿಗಾಗಿ ಡ್ರೈವಿಂಗ್!

By Nagaraja

ಇದು ನಮ್ಮ ನಿಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಕರಾವಳಿ ನಗರ ಮಂಗಳೂರಿನ ನಿವಾಸಿಯಾಗಿರುವ ಚಾರ್ಲ್ಸ್ ಮೈಕಲ್ ಡಿಸೋಜ ಅವರಿಗಿಂದು (ಅಕ್ಟೋಬರ್ 16) 100ನೇ ಜನ್ಮದಿನದ ಸಂಭ್ರಮ.

ಜಗತ್ತಿನ ಅತ್ಯಂತ ಹಿರಿಯ ಚಾಲಕರಲ್ಲಿ ಓರ್ವರಾಗಿ ಗುರುತಿಸಿಕೊಂಡಿರುವ ಚಾರ್ಲ್ಸ್ ಇಂದಿಗೂ ತಮ್ಮ ಜೀವನೋಪಾಯಕ್ಕಾಗಿ ಡ್ರೈವಿಂಗ್ ಮಾಡುತ್ತಾರೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು, ಇಂದಿಗೂ ಪ್ರಾತ:ಕಾಲ ಸರಿಯಾಗಿ 4.00 ಗಂಟೆಗೆ ಎದ್ದೇಳುವ ಅವರು ಮಂಗಳೂರಿನ ಇಬ್ಬರು ಬ್ಯಾಂಕ್ ನೌಕರರನ್ನು ಕಚೇರಿಗೆ ತಲುಪಿಸುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಮೊದಲ ಮಹಾಯುದ್ಧ ನಡೆದ ಅದೇ ಇಸವಿಯಲ್ಲಿ (1914) ತಮಿಳುನಾಡಿನ ಊಟಿಯಲ್ಲಿ ಜನ್ಮ ತಾಳಿರುವ ಚಾರ್ಲ್ಸ್, ಬಳಿಕ ನಡೆದ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಪರ ದುಡಿದಿದ್ದರು. ಅವರ ತಂದೆ ಚಾರ್ಲ್ಸನ್ ಮತ್ತು ತಾಯಿ ಮೇರಿ ಆಗಿದ್ದಾರೆ.

charles Michael D Souza

ಚಾರ್ಲ್ಸನ್ ಮತ್ತು ಮೇರಿ ದಂಪತಿಯ 13 ಮಕ್ಕಳಲ್ಲಿ 10ನೇಯವರಾಗಿರುವ ಚಾರ್ಲ್ಸ್, ಈ ಕುಟುಬಂದಲ್ಲಿ ಬದುಕುಳಿದಿರುವ ಏಕಮಾತ್ರ ವ್ಯಕ್ತಿ ಆಗಿದ್ದಾರೆ. ಚಾರ್ಲ್ಸ್ ತಮ್ಮ ಮಾತುಗಳಲ್ಲೇ ಹೇಳುವ ಪ್ರಕಾರ ಅವರ ಪೂರ್ವಜರು ಗ್ರೀಕ್ ವಂಶಜದವರಾಗಿದ್ದು, ಬೆತ್ಲೇಹೇಂನಿಂದ ಭಾರತಕ್ಕೆ ಬಂದವರಾಗಿದ್ದಾರೆ.

1932ನೇ ಇಸವಿಯಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಸೇರ್ಪಡೆಗೊಂಡಿದ್ದ ಚಾರ್ಲ್ಸ್ ಆಂಧ್ರಪ್ರದೇಶ, ಅಸ್ಸಾಂ ಹಾಗೂ ಕಾಶ್ಮೀರದಲ್ಲೂ ಸೇವೆ ಸಲ್ಲಿಸಿದ್ದಾರೆ. ಬಳಿಕ 1942ರಲ್ಲಿ ಬ್ರಿಟಿಷ್ ಆರ್ಮಿ ತ್ಯಜಿಸಿದ್ದ ಅವರು ಪೂರ್ಣಾವಧಿ ಚಾಲಕರಾಗಿ ವೃತ್ತಿ ಆರಂಭಿಸಿದ್ದರು. ಅವರು 1952ರಲ್ಲಿ ಅಂದಿನ ಮದ್ರಾಸ್ ರಾಜ್ಯ ಸರಕಾರದ ಮಂಗಳೂರು ಡೀಸೆಲ್ ಕಾಂಕ್ರೀಟ್ ಮಿಕ್ಸೆರ್ ಮೆಷಿನ್ ಚಾಲಕರಾಗಿ ದುಡಿದಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ 1956ನೇ ಇಸವಿಯಲ್ಲಿ ಭಾಷವಾರು ಪ್ರಾಂತ್ಯ ವಿಂಗಡನೆಯಂತೆ ನೂತನ ಕರ್ನಾಟಕ ರಾಜ್ಯದಲ್ಲಿ ಮಂಗಳೂರು ಸೇರ್ಪಡೆಗೊಂಡಿತ್ತು. ಅಲ್ಲದೆ ಚಾರ್ಲ್ಸ್ ಲೋಕೋಪಯೋಗಿ ಇಲಾಖೆಯ ಚಾಲಕರಾಗಿ ಸೇವೆ ಸಲ್ಲಿಸಿದ್ದರು. 1982ನೇ ಇಸವಿಯಲ್ಲಿ ನಿವೃತ್ತಿಯ ವರೆಗೂ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಚಾರ್ಲ್ಸ್, ನಿವೃತ್ತಿಯ ಬಳಿಕ ಮಂಗಳೂರಿನಲ್ಲಿ ಖಾಸಗಿ ಚಾಲಕರಾಗಿ ತಮ್ಮ ಮ್ಯಾರಾಥನ್ ಸೇವೆಯನ್ನು ಮುಂದುವರಿಸಿದ್ದರು.

2019ರ ವರೆಗೂ ಚಾಲನಾ ಪರವಾನಗಿ...
ಇಲ್ಲಿ ವಿಶೇಷ ಸಂಗತಿಯೆಂದರೆ ಚಾರ್ಲ್ಸ್ ಡಿಸೋಜ ಅವರ ಚಾಲನಾ ಪರವಾನಗಿ 2019ನೇ ಇಸವಿಯ ವರೆಗೂ ಚಾಲ್ತಿಯಲ್ಲಿರಲಿದೆ. ಅವರ ಬಳಿ ಈಗಲೂ ಊಟಿಯ ಸೈಂಟ್ ಮೇರಿ ಚರ್ಚ್ ನೀಡಿರುವ ಜನನ ಪ್ರಮಾಣದ ಪ್ರತಿ ಇದೆ. ಅಲ್ಲದೆ ಶಾಲಾ ಪ್ರಮಾಣ ಪತ್ರ, ಮಿಲಿಟರಿ ದಾಖಲೆ, ಗುರುತು ಚೀಟಿ, ಹಿರಿಯ ನಾಗರಿಕರಿಗುವ ಪ್ರಮಾಣ ಪತ್ರ, ವಯಸ್ಸಿನ ಪ್ರಮಾಣ ಪತ್ರ, ಅನೇಕ ಡ್ರೈವಿಂಗ್ ಲೈಸನ್ಸ್, ಸರಕಾರಿ ದಾಖಲೆ ಜೊತೆಗೆ ಇನ್ನಿತರ ಮಹತ್ವಪೂರ್ಣ ಪ್ರಮಾಣ ಪತ್ರಗಳನ್ನು ಭದ್ರವಾಗಿಟ್ಟುಕೊಂಡಿದ್ದಾರೆ.

ಚಾರ್ಲ್ಸ್ ಪತ್ನಿಯವರಾಗಿರುವ ಎಲಿಜಾ ಡಿಸೋಜ ಎರಡು ವರ್ಷಗಳ ಹಿಂದೆಯಷ್ಟೇ ಇಹಲೋಕ ತ್ಯಜಿಸಿದ್ದರು. ಈ ದಂಪತಿಗೆ ಯಾವುದೇ ಮಕ್ಕಳಿಲ್ಲ. ಅವರ ಸೋದರ ಪುತ್ರಿ ಮತ್ತು ಮೊಮ್ಮಕ್ಕಳು ಆಗಾಗ ತಾತನನ್ನು ಭೇಟಿಯಾಗಲು ಬರುತ್ತಿರುತ್ತಾರೆ. ಪ್ರಸ್ತುತ ಕರ್ನಾಟಕ ಸರಕಾರದಿಂದ ಮಾಸಿಕ 8,000 ರು. ಪಿಂಚಣಿ ಪಡೆಯುತ್ತಿರುವ ಚಾರ್ಲ್ಸ್ ಅವರನ್ನು ಇಂದು (ಅಕ್ಟೋಬರ್ 16) ಮಂಗಳೂರಿನ ಕ್ಯಾನೆರಾ ಕಾಲೇಜ್ ಸಭಾಂಗಣದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ.

ನಿಮ್ಮ ಮಾಹಿತಿಗಾಗಿ, ವಿಶ್ವದಲ್ಲಿ ನೂರು ವರ್ಷ ಮೀರಿದ ಚಾಲಕರ ಪಟ್ಟಿಯಲ್ಲಿ ಇನ್ನಿತರ ಎರಡು ಉದಾಹರಣೆಗಳಿವೆ. ಇವರಲ್ಲಿ ಮೊದಲನೆಯವರು ನ್ಯೂಜಿಲೆಂಡ್‌ನ ಎಡ್ವರ್ಡ್ಸ್ (106) ಈಗಲೂ ಚಾಲಕರಾಗಿದ್ದಾರೆ. ಹಾಗೆಯೇ ಅಮೆರಿಕದ ಫ್ರೆಂಡ್ ಹೇಲ್ ಸೀನಿಯರ್ (108), 1998ನೇ ಇಸವಿಯಲ್ಲಿ ತಮ್ಮ ಮರಣದ ವರೆಗೂ ಕಾರು ಚಾಲನೆ ಮಾಡಿದ್ದರು.

ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ಚಾರ್ಲ್ಸ್ ತಾತನ ವಿಶೇಷತೆಯೆಂದೆರೆ 100ನೇ ವರ್ಷಕ್ಕೆ ಕಾಲಿಟ್ಟಿರುವ ಹೊರತಾಗಿಯೂ ಈಗಲೂ ಹೊಟ್ಟೆಪಾಡಿಗಾಗಿ ಕಾರು ಚಾಲನೆ ಮಾಡುತ್ತಿದ್ದಾರೆ. ಇದೀಗ ನೀವು ಈ ಸದಾವಕಾಶವನ್ನು ಚಾರ್ಲ್ಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವುದರೊಂದಿಗೆ ತಾತನಿಗೊಂದು ಹಾಟ್ಸಫ್ ಹೇಳಲು ಮರೆಯದಿರಿ!

Source: IBN Live

Most Read Articles

Kannada
English summary
Most probably, he is the oldest driver and of course one of the oldest persons in the entire world. Charles Michael D'Souza, who will be competing 100 years on this October 16, still drives a car for a living.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X