ಮಹಿಳಾ ಪ್ರಯಾಣಿಕರಿಗಾಗಿ ಬಿಐಎಎಲ್‍‍ನಿಂದ ಹೊಸ ಸೇವೆ. ಏನದು.?

ಈಗಾಗಲೇ ಹಲವರಿಗೆ ತಿಳಿದಿರುವ ಹಾಗೆ ದೇಶದಲ್ಲಿರುವ ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಅನುಸಾರ ವೆಹಿಕಲ ಲೊಕೆಶನ್ ಟ್ರಾಕಿಂಗ್ ಸಿಸ್ಟಂ ಮತ್ತು ಪ್ಯಾನಿಕ್ ಬಟನ್ ಅನ್ನು ಅಳವಡಿಸಬೇಕಾಗಿದ್ದು, ಈ ನಿಯಮವನ್ನು ಜನವರಿ 1ರಿಂದ ಪ್ರಾರಂಭಿಸಲಾಗಿದೆ.

ಮಹಿಳಾ ಪ್ರಯಾಣಿಕರಿಗಾಗಿ ಬಿಐಎಎಲ್‍‍ನಿಂದ ಹೊಸ ಸೇವೆ. ಏನದು.?

ಆದರೆ ರಾಜ್ಯದಲ್ಲಿರುವ ವಿಮಾನ ನಿಲ್ದಾಣದಿಂದ ನಗರಕ್ಕೆ ಸಂಚರಿಸುವ ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಸುರಕ್ಷತೆಯನ್ನು ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಬೆಂಗಳೂರು ಇಂಟರ್‍‍ನ್ಯಾಶನಲ್ ಏರ್‍‍ಪೋರ್ಟ್ ಲಿಮಿಟೆಡ್ ಸೇರಿ ವಿಶೇಷವಾದ ಕ್ಯಾಬ್ ಸೇವೆಯನ್ನು ಇದೇ ಸೋಮವಾರ (ಜನವರಿ 7) ಪ್ರಾರಂಭಿಸಲಾಗಿದ್ದು, ಇವುಗಳನ್ನು ಚಲಾಯಿಸುವುದು ಕೂಡಾ ಮಹಿಳಾ ಚಾಲಕರೇ ಆಗಿರುತ್ತಾರೆ.

ಮಹಿಳಾ ಪ್ರಯಾಣಿಕರಿಗಾಗಿ ಬಿಐಎಎಲ್‍‍ನಿಂದ ಹೊಸ ಸೇವೆ. ಏನದು.?

ಈ ಮಹಿಳಾ ಚಾಲಕರು ಹಲವಾರು ಭಾಷೆಗಳಲ್ಲಿ ಸ್ಪಂದಿಸಬಲ್ಲ ಚಾತುರ್ಯವನ್ನು ಹೊಂದಿರುವವರಾಗಿರುತ್ತಾರೆ. ಇದಲ್ಲದೇ ಈ ಮಹಿಳಾ ಚಾಲಕರು ಸ್ಥಳೀಯ ಪ್ರದೇಶಗಳ ಬಗ್ಗೆ ಮತ್ತು ಸ್ವರಕ್ಷಣೆ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.

ಮಹಿಳಾ ಪ್ರಯಾಣಿಕರಿಗಾಗಿ ಬಿಐಎಎಲ್‍‍ನಿಂದ ಹೊಸ ಸೇವೆ. ಏನದು.?

ಜಿಪಿಆರ್‍ಎಸ್ ಟ್ರಾಕಿಂಗ್ ಮತ್ತು ಎಸ್ಒಎಸ್ ಸ್ವಿಚ್ (ಪ್ಯಾನಿಕ್ ಬಟನ್) ಸೇರಿದಂತೆ ಅನೇಕ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡ ಈ ಪರಿಕಲ್ಪನೆಯು ಕೆಎಸ್‍ಟಿಡಿಸಿ ಮತ್ತು ಬಿಐಎಎಲ್ ಇಬ್ಬರಿಗೂ ಮಹಿಳಾ ಪ್ರವಾಸಿಗರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿಗಳನ್ನು ಬಲಪಡಿಸುತ್ತದೆ.

ಮಹಿಳಾ ಪ್ರಯಾಣಿಕರಿಗಾಗಿ ಬಿಐಎಎಲ್‍‍ನಿಂದ ಹೊಸ ಸೇವೆ. ಏನದು.?

ಪ್ರಸ್ಥುತ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಿದ - 10 ಕಾರುಗಳ ಫ್ಲೀಟ್‍ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಬೇಡಿಕೆ ಮತ್ತು ಪ್ರಯಾಣಿಕ ಪ್ರತಿಕ್ರಿಯೆಯ ಆಧಾರದ ಮೇಲೆ ಕ್ರಮೇಣ ಹೆಚ್ಚಾಗುತ್ತದೆ. ಏಕವ್ಯಕ್ತಿ ಮಹಿಳಾ ಪ್ರಯಾಣಿಕರನ್ನು ಹೊರತುಪಡಿಸಿ, ಮಹಿಳೆಯರ ಗುಂಪೊಂದು ಸೌಲಭ್ಯವನ್ನು ಸಹ ಪಡೆಯಬಹುದು.

ಮಹಿಳಾ ಪ್ರಯಾಣಿಕರಿಗಾಗಿ ಬಿಐಎಎಲ್‍‍ನಿಂದ ಹೊಸ ಸೇವೆ. ಏನದು.?

ದಿನದ ವೇಳೆಯಲ್ಲಿ ಅಂದರೆ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 11.59ರವರೆಗು ಪ್ರತೀ ಕಿಲೋಮೀಟರ್‍‍ಗೆ ರೂ. 21.50 ಹಾಗು ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ಗಂಟೆಯ ವರೆಗು ಪ್ರತೀ ಕಿಲೋಮೀಟರ್‍‍ಗೆ ರೂ.23.50 ವೆಚ್ಚದಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ.

ಮಹಿಳಾ ಪ್ರಯಾಣಿಕರಿಗಾಗಿ ಬಿಐಎಎಲ್‍‍ನಿಂದ ಹೊಸ ಸೇವೆ. ಏನದು.?

ಈ ಪರಿಕಲ್ಪನೆಯನ್ನು ವಿಮಾನನಿಲ್ದಾಣದಿಂದ ಮಹಿಳಾ ಪ್ರವಾಸಿಗರಿಗೆ ಸುರಕ್ಷಿತ ಮತ್ತು ಸುರಕ್ಷಿತವಾದ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದ್ದೇಶದಿಂದ ಅಳವಡಿಸಲಾಗಿದೆ, ಅದೇ ಸಮಯದಲ್ಲಿ ಮಹಿಳಾ ಚಾಲಕರು ಸ್ವಯಂ ಉದ್ಯೋಗಿ ಮತ್ತು ಅಧಿಕಾರವನ್ನು ಪಡೆಯುವ ಅವಕಾಶಗಳನ್ನು ರಚಿಸಿರುತ್ತಾರೆ. ಎಂದು ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ತಿಳಿಸಿದ್ದಾರೆ.

MOST READ: ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಮಹಿಳಾ ಪ್ರಯಾಣಿಕರಿಗಾಗಿ ಬಿಐಎಎಲ್‍‍ನಿಂದ ಹೊಸ ಸೇವೆ. ಏನದು.?

ಈ ನಿಟ್ಟಿನಲ್ಲಿ ಈ ವಿಶೇಷ ಉಪಕ್ರಮವು ಪತ್ರಿಕಾ ಪ್ರಕಟಣೆಯ ಪ್ರಕಾರ, ಮಹಿಳಾ ಚಾಲಕರನ್ನು ಸುತ್ತಮುತ್ತಲಿನಿಂದ ಸಕ್ರಿಯವಾಗಿ ನೇಮಕ ಮಾಡುವ ಮೂಲಕ ವಿಮಾನ ನಿಲ್ದಾಣದ ಸುತ್ತಲಿನ ಹಳ್ಳಿಗಳ ಮಹಿಳೆಯರ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಸಹಕರಿಸುತ್ತದೆ.

Source: ET Auto

Most Read Articles

Kannada
English summary
Bangalore Airport Launches Women-Only Taxi Service — More Safety For Women Travellers. Read In Kannada

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more