ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ರೋಬೋಟ್ ಬಳಕೆ..!

Written By:

ಇನ್ನುಂದೆ ಸಿಗ್ನಲ್ ಜಂಪ್ ಮಾಡುವರು ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು. ಯಾಕೇಂದ್ರೆ ಇನ್ಮುಂದೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ಪೊಲೀಸರ ಬದಲು ರೋಬೋಟ್ ಬಳಕೆ ಮಾಡಲಾಗುತ್ತಿದೆ.

To Follow DriveSpark On Facebook, Click The Like Button
ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ರೋಬೋಟ್ ಬಳಕೆ..!

ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡಲು ರೋಬೋಟ್ ಬಳಕೆ ಮಾಡಲಾಗಿದ್ದು, ಇಂಧೋರ್‌ನಲ್ಲಿ ನಡೆಸಿದ ಪ್ರಾಯೋಗಿಕ ಯೋಜನೆಗೆ ಭಾರೀ ಸ್ಪಂದನೆ ಸಿಕ್ಕಿದೆ.

ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ರೋಬೋಟ್ ಬಳಕೆ..!

ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಹೊಂದಿರುವ ಈ ರೋಬೋಟ್, ರಸ್ತೆ ನಿಯಮಗಳನ್ನು ಸುಲಭವಾಗಿ ಗ್ರಹಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡುವರರ ಮೇಲೆ ಕಣ್ಗಾವಲು ಇರಿಸುತ್ತದೆ.

ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ರೋಬೋಟ್ ಬಳಕೆ..!

ಜೊತೆಗೆ ವೈ-ಫೈ ಸೌಲಭ್ಯದೊಂದಿಗೆ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂ ಎಲ್ಲ ಮಾಹಿತಿ ರವಾನಿಸುವ ಈ ರೋಬೋಟ್, ನಾಲ್ಕು ದಿಕ್ಕಿಗೂ ತಿರುಗಬಲ್ಲ ವಿಶೇಷ ರಚನೆ ಹೊಂದಿದೆ.

ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ರೋಬೋಟ್ ಬಳಕೆ..!

ಇಂಧೋರ್‌ನಲ್ಲಿ ಅಳವಡಿಸಲಾಗಿರುವ ರೋಬೋಟ್ ಪೊಲೀಸ್ 14 ಅಡಿ ಎತ್ತರವಾಗಿದ್ದು, ದೊಡ್ಡ ಗಾತ್ರ ಕೈಗಳನ್ನು ಹೊಂದಿದೆ. ಹೀಗಾಗಿ ಸಂಜ್ಞೆಗಳ ಮೂಲಕವೇ ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಣ ಮಾಡುತ್ತದೆ.

ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ರೋಬೋಟ್ ಬಳಕೆ..!

ರೋಬೋಟ್ ಕೈಗಳಲ್ಲಿ ಹೆಚ್‌ಡಿ ಕ್ಯಾಮೆರಾಗಳಿದ್ದು, ಅವುಗಳು ಟ್ರಾಫಿಕ್ ವ್ಯವಸ್ಥೆ ಮೇಲೆ ಸಂಪೂರ್ಣ ನಿಗಾ ಇಡಲಿವೆ. ಇದರಿಂದಾಗಿ ಅಪಘಾತಗಳ ಸಂಖ್ಯೆಯೂ ತಗ್ಗಲಿದೆ.

ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ರೋಬೋಟ್ ಬಳಕೆ..!

ಇನ್ನು ಇಂಧೋರ್‌ನಲ್ಲಿ ಅಳವಡಿಸಲಾಗಿರುವ ರೋಬೋಟ್ ಅನ್ನು ಸ್ಥಳೀಯ ಇಂಜನಿಯರಿಂಗ್ ಕಾಲೇಜುವೊಂದರ ವಿದ್ಯಾರ್ಥಿಗಳು ಪ್ರಾಯೋಗಿಕ ಕಾರ್ಯಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಟ್ರಾಫಿಕ್ ಸಮಸ್ಯೆಗೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕೆ ರೋಬೋಟ್ ಬಳಕೆ..!

ಒಂದು ವೇಳೆ ರೋಬೋಟ್ ತಂತ್ರಜ್ಞಾನದಿಂದ ಟ್ರಾಫಿಕ್ ಸಮಸ್ಯೆಗೆ ಸಂಪೂರ್ಣ ಕಡಿವಾಣ ಬಿದ್ದಲ್ಲಿ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ದೇಶಾದ್ಯಂತ ಕಾರ್ಯರೂಪಕ್ಕೆ ತರವು ಬಗ್ಗೆ ಚಿಂತನೆ ನಡೆದಿದೆ.

ಇಂಧೋರ್‌ನಲ್ಲಿ ರೋಬೋಟ್ ಪೊಲೀಸ್ ಕಾರ್ಯವೈಖರಿಯ ಕುರಿತಾದ ವಿಡಿಯೋ ಇಲ್ಲಿದೆ ವೀಕ್ಷಿಸಿ.

English summary
Read in Kannada about India's first traffic police robot.
Story first published: Thursday, June 29, 2017, 14:52 [IST]
Please Wait while comments are loading...

Latest Photos