ಭಾರತದ ಅತ್ಯಂತ ಅಪಾಯಕಾರಿ 15 ರಸ್ತೆಗಳು

By Nagaraja

ಕೆಲವು ಸಮಯಗಳ ಹಿಂದೆಯಷ್ಟೇ ಬೊಲಿವಿಯಾದ ಸಾವಿನ ರಸ್ತೆಯ ಕುರಿತು ನಾವು ಚರ್ಚಿಸಿದ್ದೆವು. ಅಲ್ಲದೆ ಈ ಲೇಖನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದೆವು.

ಇವನ್ನೂ ಓದಿ: ಅತಿ ಭಯಾನಕ ಸಾವಿನ ರಸ್ತೆ

ಇಂದಿನ ಈ ಲೇಖನದಲ್ಲಿ ಭಾರತದ 15 ಅತ್ಯಂತ ಅಪಾಯಕಾರಿ ರಸ್ತೆಗಳ ಬಗ್ಗೆ ಚರ್ಚಿಸಲಿದ್ದೇವೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹಲವು ವಿಧದ ಭೂಪ್ರದೇಶಗಳನ್ನು ಹೊಂದಿರುವ ಅಖಂಡ ಭಾರತದ ದೇಶದಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ಇದೇ ಕಾರಣಕ್ಕಾಗಿ ಇಲ್ಲಿನ ರಸ್ತೆಗಳು ಸಾಹಸ ಚಾಲಕರನ್ನು ಕೈಬೀಸಿ ಕರೆಯುತ್ತಿದೆ.

1. ಲೇಹ್ ಮನಾಲಿ ಹೆದ್ದಾರಿ

1. ಲೇಹ್ ಮನಾಲಿ ಹೆದ್ದಾರಿ

ಹಿಮಾಚಲ ಪ್ರದೇಶದಲ್ಲಿ ಸ್ಥಿತಗೊಂಡಿರುವ ಲೇಹ್-ಮನಾಲಿ ದೇಶದ ಅತ್ಯಂತ ಎತ್ತರದ ಪರ್ವತ ಕಣಿವೆ ಮಾರ್ಗಗಳಲ್ಲಿ ಒಂದಾಗಿದ್ದು, 479 ಕೀ.ಮೀ. (298 ಮೈಲ್) ದೂರದ ವರೆಗೂ ಹರಡಿದೆ. ಬೇಸಿಗೆಯಲ್ಲಿ ವರ್ಷದಲ್ಲಿ ನಾಲ್ಕು ವರೆ ತಿಂಗಳು ಮಾತ್ರ (ಮೇ ಅಥವಾ ಜೂನ್) ತೆರೆದುಕೊಳ್ಳುವ ಈ ಮಾರ್ಗವು ಲಡಾಕ್‌ನ ಲೇಹ್‌ನಿಂದ ಹಿಮಾಚಲ ಪ್ರದೇಶದ ಮನಾಲಿ ಪ್ರದೇಶವನ್ನು ಸಂಪರ್ಕಿಸುತ್ತದೆ. ಅಕ್ಟೋಬರ್ ತಿಂಗಳಲ್ಲಿ ವಿಪರೀತ ಹಿಮಪಾತವು ಇಲ್ಲಿನ ರಸ್ತೆಗೆ ತಡೆಯನ್ನುಂಟು ಮಾಡುತ್ತದೆ.

2. ಶಿಪ್ಕಿ ಲಾ

2. ಶಿಪ್ಕಿ ಲಾ

ಭಾರತ-ಟಿಬೆಟ್ ಗಡಿ ಪ್ರದೇಶದ ಎತ್ತರದ ಪರ್ವತ ಶಿಖರದಲ್ಲಿ ಹಾದು ಹೋಗುತ್ತಿರುವ ಶಿಪ್ಕಿ ಲಾ ಹಾದಿಯು, ಸಮುದ್ರ ಮಟ್ಟಕ್ಕಿಂತಲೂ 5,669 ಮೀಟರ್ (18,599 ಅಡಿ) ಎತ್ತರದಲ್ಲಿ ಹಾದು ಹೋಗುತ್ತದೆ. ಇದೇ ಪ್ರದೇಶದಲ್ಲಿ ಸುಟ್ಲೆಜ್ ನದಿಯು ಭಾರತವನ್ನು ಪ್ರದೇಶಿಸುತ್ತಿದೆ. ಇದು ಪ್ರಾಚೀನ ಸಿಲ್ಕ್ ರೂಟ್‌ನ ಭಾಗ ಕೂಡಾ ಆಗಿರುತ್ತದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ (Kinnaur district ) ಸ್ಥಿತಗೊಂಡಿದೆ.

image courtesy: Nikhil Hirurkar via Flickr

3. ಗ್ರಾಂಡ್ ಟ್ರಂಕ್ ರೋಡ್

3. ಗ್ರಾಂಡ್ ಟ್ರಂಕ್ ರೋಡ್

ಏಷ್ಯಾದಲ್ಲೇ ಅತಿ ಪುರಾತನ ಹಾಗೂ ಅತಿ ಉದ್ದವಾದ ಪ್ರಮುಖ ರಸ್ತೆಗಳಲ್ಲಿ ಗ್ರಾಂಡ್ ಟ್ರಂಕ್ ರೋಡ್ ಒಂದಾಗಿದೆ. ಮಿಲಿಯನ್ ಗಟ್ಟಲೆ ವರ್ಷಗಳ ಹಿಂದಿನಿಂದಲೇ ಭಾರತ ಉಪಖಂಡದ ಪಶ್ಚಿಮ ಹಾಗೂ ಪೂರ್ವ ಪ್ರದೇಶಗಳು ನಿರ್ಭವಾಗಿದ್ದು ದಕ್ಷಿಣ ಏಷ್ಯಾ ಮತ್ತು ಪೂರ್ವ ಏಷಿಯಾವನ್ನು ಬಂಧಿಸಲ್ಫಟ್ಟಿದೆ. ಒಟ್ಟು 2,500 ಕೀ.ಮೀ. (1600 ಮೈಲ್) ದೂರವನ್ನು ಕ್ರಮಿಸಿರುವ ಈ ಹಾದಿಯು ಚಿತ್ತಗಾಂಗ್, ಬಾಂಗ್ಲಾದೇಶ, ಪಶ್ಚಿಮ ಬಂಗಾಳ (ಹೌರಾ) ಹಾದಿಯಾಗಿ ಉತ್ತರ ಭಾರತವನ್ನು ಬಳಿಕ ಪಾಕಿಸ್ತಾನದ ಲಾಹೋರ್‌ನತ್ತ ಮುಂದುವರಿಯುತ್ತದೆ. ಇಲ್ಲಿಂದ ಬಳಿಕ ಅಪಘಾನಿಸ್ತಾನದ ಕಾಬೂಲ್ ನಗರವನ್ನು ತಲುಪುತ್ತದೆ.

image courtesy: Sudip Banik via Flickr
4. ಜಾಲೋರಿ ಪಾಸ್

4. ಜಾಲೋರಿ ಪಾಸ್

ಮಗದೊಂದು ಪರ್ವತ ಕಣಿವೆ ಹಾದಿಯಾಗಿರುವ ಜಾಲೋರಿ ಪಾಸ್ ಸಮುದ್ರ ಮಟ್ಟಕ್ಕಿಂತಲೂ 10,800 ಅಡಿ (3120 ಮೀಟರ್) ಎತ್ತರದಲ್ಲಿ ಹಾದು ಹೋಗುತ್ತದೆ. ಇದು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸ್ಥಿತಗೊಂಡಿದೆ. ಇದು ರಾಷ್ಟ್ರ ರಾಜಧಾನಿ ನವದೆಹಲಿಯಿಂದ 600 ಕೀ.ಮೀ. ದೂರದಲ್ಲಿ ಹರಡಿದ್ದು, ಪ್ರತಿಯೊಬ್ಬ ಸಾಹಸ ಕ್ರೀಡಾಳುವನ್ನು ಕೈಬೀಸಿ ಕರೆಯುತ್ತಿದೆ.

image courtesy: kmohan
5. ಕೊಲ್ಲಿ ಹಿಲ್ಸ್ ರೋಡ್

5. ಕೊಲ್ಲಿ ಹಿಲ್ಸ್ ರೋಡ್

ಕೊಲ್ಲಿಮಲೈ ಘಾತ್ ರೋಡ್ ಎಂದು ಕರೆಯಲ್ಪಡುವ ಕೊಲ್ಲಿ ಹಿಲ್ಸ್ ರೋಡ್ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದ್ದು, ಒಟ್ಟು 46.7 ಕೀ.ಮೀ. ಉದ್ದವನ್ನು ಹೊಂದಿದೆ. ಇದು ತಮಿಳುನಾಡಿನ ನಮಕ್ಕಲ್ ಜಿಲ್ಲಿಯಲ್ಲಿ ಸ್ಥಿತಗೊಂಡಿದ್ದು, 70 ಅತ್ಯಂತ ಕಡಿದಾದ ಹೇರ್‌ಪಿನ್ ತಿರುವುಗಳನ್ನು ಹೊಂದಿದೆ.

image courtesy: Panoramio
6. ಜೋಝಿಲಾ ರಸ್ತೆ

6. ಜೋಝಿಲಾ ರಸ್ತೆ

ನೈಸರ್ಗಿಕ ಸುಂದರ ನಾಡು ಕಾಶ್ಮೀರದಲ್ಲಿ ಹಾದು ಹೋಗುತ್ತಿರುವ ಜೋಝಿಲಾ ರಸ್ತೆ ರಾಷ್ಟ್ರೀಯ ಹೆದ್ದಾರಿ 1ಡಿ ಶ್ರೀನಗರ ಹಾಗೂ ಲೆಹ್ ನಡುವೆ ಸ್ಥಿತಗೊಂಡಿದೆ. ಇಲ್ಲಿ ಪ್ರವಾಸಿಗರು ಪಶ್ಚಿಮ ಹಿಮಾಲಯ ಪ್ರದೇಶದ ರಸದೌತಣ ಸವಿಯಬಹುದಾಗಿದೆ. ಇದು ಸಮುದ್ರ ಮಟ್ಟಕ್ಕಿಂದ 11,575 ಅಡಿ (3,528 ಮೀಟರ್) ಎತ್ತರದಲ್ಲಿದೆ.

image courtesy: Yogeshgupta26 via Wiki Commons
7. ರೋಹ್ಟಕ್ ಪಾಸ್

7. ರೋಹ್ಟಕ್ ಪಾಸ್

ಸಮುದ್ರ ಮಟ್ಟಕ್ಕಿಂತಲೂ 3,979 ಮೀಟರ್ (13,054 ಅಡಿ) ಎತ್ತರದಲ್ಲಿ ಹಾದು ಹೋಗುತ್ತಿರುವ ರೋಹ್ಟಕ್ ಪಾಸ್ ಮಗದೊಂದು ಪರ್ವತ ಹಾದಿಯಾಗಿದ್ದು, ಮಾನಲಿಯಿಂದ 51 ಕೀ.ಮೀ. ದೂರದ ಹಿಮಾಲಯದ ಪೂರ್ವ ಪಿರ್ ಪಂಜಲ್ ರೇಂಜ್‌ನಲ್ಲಿ ಸ್ಥಿತಗೊಂಡಿದೆ. ಹಿಮಾಚಲ ಪ್ರದೇಶದ ಕುಲ್ಲು ವ್ಯಾಲಿ ಹಾಗೂ ಲಹೌಲ್ ಮತ್ತು ಸ್ಪಿಟಿ ವ್ಯಾಲಿ ಬಂಧಿಸುತ್ತಿರುವ ರೋಹ್ಟಕ್ ಪಾಸ್ ರಾಷ್ಟ್ರೀಯ ಹೆದ್ದಾರಿ 21ರ ಭಾಗವಾಗಿರುವ ಮನಾಲಿ-ಲೇಹ್ ಹೈವೇಯನ್ನು ಸಂಪರ್ಕಿಸುತ್ತದೆ.

image courtesy: MapsofIndia
8. ನೇರಾಳ್-ಮಥೇರನ್

8. ನೇರಾಳ್-ಮಥೇರನ್

ಕೇವಲ 8.9 ಕೀ.ಮೀ. ದೂರದ ಹಾದಿಯನ್ನಷ್ಟೇ ಹೊಂದಿರುವ ನೇರಾಳ್-ಮಥೇರನ್ ಪರ್ವತ ಕಣಿವೆ ಹಾದಿಯು ಅತ್ಯಂತ ಕಡಿದಾದ ರಸ್ತೆಯನ್ನು ಹೊಂದಿರುವ ಹಿನ್ನೆಲೆಯಲ್ಲೇ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ. ಇದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿ ಸ್ಥಿತಗೊಂಡಿದೆ.

image courtesy: Marwada via Wiki Commons
9. ಮಾರ್ಸಿಮಿಕ್ ಲಾ

9. ಮಾರ್ಸಿಮಿಕ್ ಲಾ

ಸಮುದ್ರ ಮಟ್ಟಕ್ಕಿಂತ 5,777 ಮೀಟರ್ (18,953 ಮೀಟರ್) ಎತ್ತರದಲ್ಲಿ ಹಾದು ಹೋಗುತ್ತಿರುವ ಮಾರ್ಸಿಮಿಕ್ ಲಾ ಉತ್ತರ ಭಾರತದ ಚಾಂಗ್-ಚೆಮ್ನೊ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸ್ಥಿತಗೊಂಡಿದೆ. ಇದು ವಿಶ್ವದಲ್ಲೇ ಮೋಟಾರು ವಾಹನಗಳು ಸಂಚರಿಸಬಹುದಾದ ಅತ್ಯಂತ ಎತ್ತರದ ಹಾದಿ ಕೀರ್ತಿಗೂ ಪಾತ್ರವಾಗಿದೆ.

image courtesy: Panoramio
10. ಚಾಂಗ್ ಲಾ

10. ಚಾಂಗ್ ಲಾ

ಲಡಾಕ್ ಕಣಿಮೆ ಪ್ರದೇಶದಲ್ಲಿ ಚಾಂಗ್ ಲಾ ಹಾದಿ ಸ್ಥಿತಗೊಂಡಿದ್ದು, ಸಮುದ್ರ ಮಟ್ಟಕ್ಕಿಂತಲೂ 5,360 ಮೀಟರ್ (17,590 ಅಡಿ) ಎತ್ತರದಲ್ಲಿದೆ. ಇದು ಜಗತ್ತಿನ ಮೂರನೇ ಅತಿದೊಡ್ಡ ವಾಹನ ಸಂಚರಿಸಬಹುದಾದ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವರ್ಷದುದ್ಧಕ್ಕೂ ಮಂಜಿನಿಂದ ಆವೃತ್ತವಾಗಿರುವ ಈ ರಸ್ತೆ ಭಾರತೀಯ ಸೇನೆಯ ರಕ್ಷಣೆ ಹಾಗೂ ನಿರ್ವಹಣೆಯಲ್ಲಿದೆ (ಚೀನಾ ಅಪಾಯದ ಹಿನ್ನೆಲೆಯಲ್ಲಿ).

image courtesy: Kirsten via Wiki Commons
11. ಪೆನ್ಸಿ ಲಾ

11. ಪೆನ್ಸಿ ಲಾ

ಸಮುದ್ರ ತಲ ಮಟ್ಟಕ್ಕಿಂತ 4,400 ಮೀಟರ್ (14,436 ಮೀಟರ್) ಎತ್ತರದಲ್ಲಿ ಜಮ್ಮು ಮತ್ತು ಕಾಶ್ಮೀರದ ಲಡಾಕ್ ಕಣಿವೆಯಲ್ಲಿ ಸ್ಥಿತಗೊಂಡಿರುವ ಪೆನ್ಸಿ ಲಾ ರಸ್ತೆ ಸುರು ವ್ಯಾಲಿ ಪ್ರದೇಶವನ್ನು ಸಂಪರ್ಕಿಸುತ್ತದೆ.

image courtesy: Prabhu B Doss via Flickr
12. ಮುನ್ನಾರ್ ರಸ್ತೆ

12. ಮುನ್ನಾರ್ ರಸ್ತೆ

ದಕ್ಷಿಣ ಭಾರತದ ಜನ ಪ್ರಿಸಿದ್ಧ ಮುನ್ನಾರ್ ರಸ್ತೆ ಸಾಹಸ ಯಾತ್ರಿಗಳನ್ನು ಕೈಬೀಸಿ ಕರೆಯುತ್ತದೆ. ಕೊಚ್ಚಿಯಿಂದ ಆರಂಭವಾಗುವ ಇಲ್ಲಿನ ಅತ್ಯಂತ ಕಡಿದಾದ ಹಾಗೂ ಕಿರಿದಾದ ಅಂಕು-ಡೊಂಕು ರಸ್ತೆಯಲ್ಲಿ ಸಂಚರಿಸುವಾಗ ತೀವ್ರತರಹದ ಗಾಳಿಯು ಬೀಳಸಲಿದೆ. ಇಲ್ಲಿ ನೈಸರ್ಗಿಕ ಅರಣ್ಯ ಸಂಪತ್ತು ಹಾಗೂ ಜಪಪಾತದ ಅನುಭವ ಕೂಡಾ ಪ್ರವಾಸಿಗರಿಗೆ ಸಿಗಲಿದೆ.

image courtesy: Kiran SRK via Wiki Commons
13. ಕುನ್ಝುಮ್ ಲಾ

13. ಕುನ್ಝುಮ್ ಲಾ

ಸಮುದ್ರ ಮಟ್ಟಕ್ಕಿಂತ 4,590 ಮೀಟರ್ (15,059 ಅಡಿ) ಎತ್ತರದಲ್ಲಿರುವ ಹಾದು ಹೋಗುತ್ತಿರುವ ಕುನ್ಝುಮ್ ಲಾ ಪಾಸ್, ಹಿಮಾಲಯ ಪರ್ವತ ಶ್ರೇಣಿಯ ಪೂರ್ವ ಕನ್ಝುಮ್ ಕಣಿವೆಯಲ್ಲಿ ಸ್ಥಿತಗೊಂಡಿದೆ. ಇದು ಹಿಮಾಚಲ ಪ್ರದೇಶದ ಮಗದೊಂದು ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ.

image courtesy: Lev Yakupov via Flickr
14. ಟ್ಯಾಂಗ್‌ಲ್ಯಾಂಗ್ ಲಾ

14. ಟ್ಯಾಂಗ್‌ಲ್ಯಾಂಗ್ ಲಾ

ಜಮ್ಮು ಮತ್ತು ಕಾಶ್ಮೀರದ ಲಡಾಕ್ ಪ್ರದೇಶದಲ್ಲಿರುವ ಟ್ಯಾಂಗ್‌ಲ್ಯಾಂಗ್ ಲಾ ಪರ್ವತ ಕಣಿವೆ ಹಾದಿಯು, ಸಮುದ್ರ ಮಟ್ಟಕ್ಕಿಂತ 5,328 ಮೀಟರ್ (17,480 ಅಡಿ) ಎತ್ತರದಲ್ಲಿ ಸ್ಥಿತಗೊಂಡಿದೆ. ಇದು ಜಗತ್ತಿನ ಎರಡನೇ ಅತ್ಯಂತ ಎತ್ತರದ ವಾಹನಗಳು ಸಂಚರಿಸಬಹುದಾದ ಹಾದಿಯೆಂಬ ಖ್ಯಾತಿಗೆ ಪಾತ್ರವಾಗಿದೆ.

image courtesy: McKay Savage via Flickr
15. ಮಾನಾ ಪಾಸ್

15. ಮಾನಾ ಪಾಸ್

ಭಾರತದ ಹಾಗೂ ಟಿಬೆಟ್‌ನೊಂದಿಗೆ (ಭಾರತ-ಚೀನಾ ಗಡಿ ಪ್ರದೇಶ) ಹಿಮಾಲಯ ಗಡಿ ಹಂಚಿಕೊಂಡಿರುವ ಮಾನಾ ಪಾಸ್, ಸಮುದ್ರ ತಲ ಮಟ್ಟಕ್ಕಿಂತಲೂ 5,545 ಮೀಟರ್ (18,192 ಅಡಿ) ಎತ್ತರದಲ್ಲಿ ಸ್ಥಿತಗೊಂಡಿದೆ. ಇದು ವಾಹನಗಳು ಸಂಚರಿಸಬಹುದಾದ ಜಗತ್ತಿನ ಅತ್ಯಂತ ಎತ್ತರದ ಹಾದಿಯೆಂಬ ಪ್ರಖ್ಯಾತಿಗೆ ಪಾತ್ರವಾಗಿದೆ.

image courtesy: lifeisjourney
ಭಾರತದ ಅತ್ಯಂತ ಅಪಾಯಕಾರಿ 15 ರಸ್ತೆಗಳು

ಈಗ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ. ನೀವು ಕೂಡಾ ಇಂತಹ ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸಿರುವೀರಾ? ಹಾಗೂ ನಿಮ್ಮ ಸಂಗ್ರಹದಲ್ಲಿರುವ ಅತ್ಯಂತ ಅಪಾಯಕರಾರಿ ರಸ್ತೆಗಳನ್ನು ಇಲ್ಲಿ ಉಲ್ಲೇಖಿಸಿರಿ.


Most Read Articles

Kannada
English summary
The 15 most dangerous roads of India is discussed here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X