ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

By Nagaraja

ಯಾಕೋ ಭಾರತೀಯ ರಸ್ತೆಗಳೆಂದರೆ ಯಮರಾಜನಿಗೆ ಬಲುಪ್ರಿಯ ಎಂಬಂತಿದೆ. ಇದೀಗ ಬಂದಿರುವ ಬೆಚ್ಚಿ ಬೀಳಿಸುವ ಅಧ್ಯಯನ ವರದಿಯೊಂದರಲ್ಲಿ 2014ರಲ್ಲಿ ದೇಶದಲ್ಲಿ ಸಂಭವಿಸಿರುವ ಅಪಘಾತದಲ್ಲಿ ಪ್ರತಿ ತಾಸಿಗೆ ಸರಾಸರಿ 16 ಮಂದಿಯಷ್ಟು ಬಲಿಯಾಗಿದ್ದಾರೆ.

Also Read : ಬೈಕ್ ಅಪಘಾತಕ್ಕಿರುವ 10 ಅತಿ ಸಾಮಾನ್ಯ ಕಾರಣಗಳು

ಹೌದು, ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬೆಚ್ಚಿ ಬೀಳಿಸುವ ವರದಿ ದಾಖಲಾಗಿದೆ. ವರದಿಯ ಪ್ರಕಾರ ಕರ್ನಾಟಕಕ್ಕೆ ಸಂಬಂಧಿಸಿದ ಮತ್ತಷ್ಟು ಆಘಾತಕಾರಿ ಸುದ್ದಿಗಾಗಿ ಫೋಟೊ ಸ್ಲೈಡ್ ನತ್ತ ಭೇಟಿ ಕೊಡಿರಿ...

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಬಿಡುಗಡೆ ಮಾಡಿರುವ ವರ ಪ್ರಕಾರ 2014ನೇ ಸಾಲಿನಲ್ಲಿ ಒಟ್ಟು 1.41 ಲಕ್ಷ ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ಅಲ್ಲದೆ 2013ನೇ ಸಾಲಿಗೆ ಹೋಲಿಸಿದಾಗ ಅಪಘಾತಗಳಲ್ಲಿ ಸಾವಿಗೀಡಾದ ಪ್ರಮಾಣ ಶೇಕಡಾ 3ರಷ್ಟು ಹೆಚ್ಚಾಗಿದೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ಅಪಘಾತಗಳು ಹಾಗೂ ಪ್ರಯಾಣಿಕರು ಗಾಯಗೀಡಾಗಿರುವ ಸಂಖ್ಯೆಯಲ್ಲೂ ಗಣನೀಯವಾಗಿ ವರ್ಧನೆಯುಂಟಾಗಿದ್ದು, ಇವೆರಡು ಅನುಕ್ರಮವಾಗಿ 4.5 ಹಾಗೂ 4.8 ಲಕ್ಷಗಳಷ್ಟು ದಾಖಲಾಗಿವೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ಅಮಿತ ವೇಗ ಹಾಗೂ ಅಪಾಯಕಾರಿ ಚಾಲನೆಯೇ ಅತ್ಯಧಿಕ ರಸ್ತೆ ಅಪಘಾತ ಪ್ರಕರಣಕ್ಕೆ ಕಾರಣವಾಗಿದೆ ಎಂಬುದನ್ನು ಎನ್ ಸಿಆರ್ ಬಿ ಉಲ್ಲೇಖಿಸಿದೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ಮೇಲೆ ತಿಳಿಸಿರುವ ಸಾವಿನ ಸಂಖ್ಯೆಯ ಪ್ರಮಾಣದ ಅರ್ಧದಷ್ಟು ಮಂದಿ ರಸ್ತೆಗಳಲ್ಲಿ ಸಂಭವಿಸಿರುವ ದ್ವಿಚಕ್ರ, ಟ್ರಕ್ ಹಾಗೂ ಲಾರಿ ಅಪಘಾತಗಳಲ್ಲೇ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

13,787 ದ್ವಿಚಕ್ರ ವಾಹನ ಚಾಲಕರು ಸಾವನ್ನಪ್ಪಿದ್ದರೆ ಇದೇ ವಾಹನಗಳಿಂದಾಗಿ ಸಂಭವಿಸಿರುವ ಅಪಘಾತದಲ್ಲಿ ಹೆಚ್ಚುವರಿ 23,529 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 1.4 ಲಕ್ಷದಷ್ಟು ಮಂದಿ ಗಾಯಗೊಂಡಿದ್ದಾರೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ಇನ್ನು ಅಮಿತ ವೇಗದಿಂದಾಗಿ ಸಂಭವಿಸಿರುವ 1.7 ಲಕ್ಷದಷ್ಟು ಅಪಘಾತ ಪ್ರಕರಣಗಳಲ್ಲಿ 49,000ದಷ್ಟು ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ಹಾಗೆಯೇ ಅಪಾಯಕಾರಿ, ಅಜಾಗರೂಕ ಚಾಲನೆ ಹಾಗೂ ಓವರ್ ಟೇಕಿಂಗ್ ನಿಂದಾಗಿ ಸಂಭವಿಸಿರುವ 1.4 ಲಕ್ಷದಷ್ಟು ಅಪಘಾತಗಳಲ್ಲಿ 42,000ಗಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ದೇಶದಲ್ಲೇ ಅಪಘಾತಗಳಲ್ಲಾಗಿ ಮರಣ ಸಂಭವಿಸಿರುವ ಟಾಪ್ 5 ರಾಷ್ಟ್ರಗಳಲ್ಲಿ ಕರ್ನಾಟಕವೂ ಕಾಣಿಸಿಕೊಂಡಿದ್ದು, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ ಮತ್ತು ರಾಜಸ್ತಾನ ಇದೇ ಸಾಲಿನಲ್ಲಿ ಸೇರಿಕೊಂಡಿದೆ. ಈ ಎಲ್ಲ ಐದು ರಾಜ್ಯಗಳು ಸೇರಿ ದೇಶದ ಒಟ್ಟು ಸಾವಿನ ಪ್ರಮಾಣದ ಶೇಕಡಾ 40ರಷ್ಟನ್ನು ಆಕ್ರಮಿಸಿಕೊಂಡಿದೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ಈ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 16,284 ಮಂದಿ ಮೃತಪಟ್ಟಿದ್ದರೆ, ತಮಿಳುನಾಡಿನಲ್ಲಿ 15,000 ಸಾವಿನ ಸಂಖ್ಯೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ತಾಸಿಗೆ 16 ಬಲಿ!

ಮೆಗಾ ನಗರಗಳ ಪೈಕಿ ದೆಹಲಿ ಅಗ್ರಸ್ಥಾನದಲ್ಲಿ (2199 ಸಾವು), ಚೆನ್ನೈ ಎರಡು (1046 ಸಾವು), ಭೋಪಾಲ ಮೂರು (1,015) ಹಾಗೂ ಜೈಪುರ (844 ಸಾವು) ನಾಲ್ಕನೇ ಸ್ಥಾನದಲ್ಲಿದೆ.

ಇವನ್ನೂ ಓದಿ

ಕಾರು ಅಪಘಾತಕ್ಕೆ 25 ಕಾರಣ ಹಾಗೂ ಅವುಗಳನ್ನು ತಡೆಗಟ್ಟುವ ವಿಧಾನ

Most Read Articles

Kannada
Read more on ಅಪಘಾತ accident
English summary
2014 Recorded 16 Deaths Every Hour On Indian Roads
Story first published: Tuesday, July 21, 2015, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X