ಕೆಎಸ್‌ಆರ್‌ಟಿಸಿ ಬಸ್‌ಗೆ ಐ20 ಕಾರು ಡಿಕ್ಕಿ- ಭೀಕರ ಅಪಘಾತದಲ್ಲಿ ಮೂವರು ದುರ್ಮರಣ

ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ ಒಂದು ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

By Praveen

ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ ಒಂದು ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

KSRTC ಬಸ್‌ಗೆ ಐ20 ಕಾರು ಡಿಕ್ಕಿ- ಭೀಕರ ಅಪಘಾತದಲ್ಲಿ ಮೂವರು ಸಾವು

ಕೋಲಾರ ತಾಲೂಕಿನಲ್ಲಿ ಹಾಯ್ದುಹೋಗುವ ರಾಷ್ಟ್ರೀಯ ಹೆದ್ದಾರಿ 75ರ ಮಡೇರಹಳ್ಳಿ ಗ್ರಾಮದ ಬಳಿ ನಿನ್ನೆ ತಡರಾತ್ರಿ ಈ ದುರಂತ ನಡೆದಿದ್ದು, ಅತಿವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿದ ಪರಿಣಾಮವೇ ಈ ಘಟನೆ ನಡೆದಿದೆ.

KSRTC ಬಸ್‌ಗೆ ಐ20 ಕಾರು ಡಿಕ್ಕಿ- ಭೀಕರ ಅಪಘಾತದಲ್ಲಿ ಮೂವರು ಸಾವು

ಬೆಂಗಳೂರು ಕಡೆಯಿಂದ ಕೋಲಾರಕ್ಕೆ ಬರುತ್ತಿದ್ದ ಹ್ಯುಂಡೈ ಐ20 ಕಾರ್ ನಿಯಂತ್ರಣ ತಪ್ಪಿದ ಪರಿಣಾಮ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಪಲ್ಟಿಯಾಗಿ ಎದುರಿನ ರಸ್ತೆಯಲ್ಲಿ ಬರುತ್ತಿದ್ದ ಕೆಎಸ್‌‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ.

KSRTC ಬಸ್‌ಗೆ ಐ20 ಕಾರು ಡಿಕ್ಕಿ- ಭೀಕರ ಅಪಘಾತದಲ್ಲಿ ಮೂವರು ಸಾವು

ಡಿಕ್ಕಿ ರಭಸಕ್ಕೆ ಕಾರ್‌ನಲ್ಲಿದ್ದ ಕೋಲಾರ ಮೂಲದ ಶ್ರೀಹರಿ(23), ರೋಹನ್(22), ಸುಭಾಷ್(21) ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರ್ತಿಕ್(24) ಹಾಗೂ ಬಿಶ್ವಾಸ್(25) ಸ್ಥಿತಿ ಚಿಂತಾಜನಕವಾಗಿದೆ.

KSRTC ಬಸ್‌ಗೆ ಐ20 ಕಾರು ಡಿಕ್ಕಿ- ಭೀಕರ ಅಪಘಾತದಲ್ಲಿ ಮೂವರು ಸಾವು

ಸದ್ಯ ಗಾಯಾಳುಗಳನ್ನು ಕೋಲಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಪಘಾತದಲ್ಲಿ ಹ್ಯುಂಡೈ ಐ20 ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅೃದಷ್ಟವಶಾತ್ ಬಸ್‍ನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲವೆಂದು ತಿಳಿದುಬಂದಿದೆ.

KSRTC ಬಸ್‌ಗೆ ಐ20 ಕಾರು ಡಿಕ್ಕಿ- ಭೀಕರ ಅಪಘಾತದಲ್ಲಿ ಮೂವರು ಸಾವು

ಇನ್ನು ಮೃತರೆಲ್ಲರೂ ಕೋಲಾರ ನಗರದ ಜ್ಯುವೆಲ್ಲರಿ ಶಾಪ್ ಮಾಲೀಕರ ಮಕ್ಕಳಾಗಿದ್ದು, ಕಳೆದ ರಾತ್ರಿ ಬರ್ತ್ ಡೇ ಪಾರ್ಟಿ ಮುಗಿಸಿಕೊಂಡು ವಾಪಸ್ ಬರುತ್ತಿದ್ದರು ಎನ್ನಲಾಗಿದೆ.

KSRTC ಬಸ್‌ಗೆ ಐ20 ಕಾರು ಡಿಕ್ಕಿ- ಭೀಕರ ಅಪಘಾತದಲ್ಲಿ ಮೂವರು ಸಾವು

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಬರ್ತ್ ಡೇ ಪಾರ್ಟಿ ವೇಳೆ ಮಧ್ಯಸೇವನೆ ಮಾಡಿದ್ದರ ಹಿನ್ನೆಲೆ ಕಾರು ನಿಯಂತ್ರಣ ತಪ್ಪಿರಬಹುದೆಂದು ಶಂಕಿಸಲಾಗಿದೆ.

ಚಿತ್ರ ಕೃಪೆ-ಪಬ್ಲಿಕ್ ಟಿವಿ

Most Read Articles

Kannada
Read more on ಅಪಘಾತ accident
English summary
Read in Kannada about A Tragic Accident in Kolar Dist.
Story first published: Friday, August 4, 2017, 13:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X