ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

Written By:

ದಕ್ಷಿಣ ಭಾರತದ ಜನಪ್ರಿಯ ಹಾಗೂ ತಮಿಳು ಚಿತ್ರರಂಗದಲ್ಲೇ 'ತಲ' ಎಂಬ ಅಕ್ಕರೆಯ ಹೆಸರಿನಿಂದಲೇ ಖ್ಯಾತಿ ಪಡೆದಿರುವ ಸೂಪರ್ ಸ್ಟಾರ್ ಅಜಿತ್ ಕುಮಾರ್ ಪರಿಸರ ಸ್ನೇಹಿ ವಾಹನಗಳಿಗೆ ಜೈಕಾರ ಹಾಡಿದ್ದಾರೆ.

ಇವನ್ನೂ ಓದಿ: ದರ್ಶನ್ ಮೀರಿಸಿದ ಅಜಿತ್

ಹೌದು, ತಮ್ಮ ಆಕ್ಷನ್ ಚಿತ್ರದಿಂದಲೇ ಜನಮನ ಗೆದ್ದಿರುವ ಅಜಿತ್ ಈಗ ಅತಿ ದುಬಾರಿ ಕೋಟಿಗಟ್ಟಲೆ ಬೆಲೆಬಾಳುವ ಪರಿಸರ ಸ್ನೇಹಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ಬಿಡುವಿಲ್ಲದ ಚಲನಚಿತ್ರ ವೃತ್ತಿ ಜೀವನದ ನಡುವೆಯೂ ಸಮಯ ಕಂಡುಕೊಳ್ಳುವ ಅಜಿತ್ ಸ್ವಚ್ಛಂದವಾಗಿ ತಮ್ಮ ನೆಚ್ಚಿನ ಕಾರು, ಬೈಕ್ ಗಳಲ್ಲಿ ಪಯಣಿಸಲು ಬಯಸುತ್ತಾರೆ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ಈ ಹಿಂದೆ ಹಲವು ಬಾರಿ ಚಿತ್ರಗಳಿಗೆ ಡೇಟ್ ನೀಡಿ ಬಳಿಕ ತಮ್ಮ ಡ್ರೈವಿಂಗ್ ಅಭ್ಯಾಸದಿಂದಾಗಿ ಚಿತ್ರ ನಿರ್ದೇಶಕರ ಕೋಪಕ್ಕೆ ಗುರಿಯಾಗಿರುವಂತಹ ವಿವಾದತ್ಮಾಕ ಪ್ರಸಂಗಗಳನ್ನು ಎದುರಿಸಿರುವ ಅಜಿತ್ ಎಂದೂ ತಮ್ಮ ಡ್ರೈವಿಂಗ್ ಹವ್ಯಾಸವನ್ನು ಬಿಟ್ಟುಕೊಟ್ಟವರಲ್ಲ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ಫಾರ್ಮುಲಾ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿರುವ ಭಾರತದ ಏಕಮಾತ್ರ ನಟ ಎಂಬ ಗೌರವಕ್ಕೂ ಪಾತ್ರವಾಗಿರುವ ಅಜಿತ್ ಹಲವಾರು ದೇಶಿಯ ಜೊತೆಗೆ ಅಂತರಾಷ್ಟ್ರೀಯ ಕಾರು ರೇಸ್ ನಲ್ಲಿ ಭಾಗವಹಿಸಿದ್ದಾರೆ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ತಮ್ಮ ಗ್ಯಾರೇಜ್ ಗಳಲ್ಲಿ ದುಬಾರಿ ಕಾರು ಬೈಕ್ ಗಳನ್ನು ಹೊಂದಿರುವ ಅಜಿತ್ ಪಾಲಿಗೆ ಬಿಎಂಡಬ್ಲ್ಯು ಐ9 ಹೊಸ ಸೇರ್ಪಡೆಯಾಗಿದೆ. ಈಗಾಗಲೇ ನಾವು ತಿಳಿಸಿರುವಂತೆಯೇ ಬಿಎಂಡಬ್ಲ್ಯು ಐ8 ಭಾರತಕ್ಕೆ ಇತ್ತೀಚೆಗಷ್ಟೇ ಭರ್ಜರಿ ಪ್ರವೇಶ ಪಡೆದಿತ್ತು.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

2015 ನ್ಯೂಯಾರ್ಕ್ ಆಟೋ ಶೋದಲ್ಲಿ 'ವಿಶ್ವ ಹಸಿರು ಕಾರು' ಪ್ರಶಸ್ತಿಯಿಂದಲೂ ಭಾಜನವಾಗಿರುವ ಬಿಎಂಡಬ್ಲ್ಯು ಐ8 ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಆಳವಡಿಸಲಾಗಿದೆ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ಭಾರತದಲ್ಲಿ ಬಿಎಂಡಬ್ಲ್ಯು ಐ8 ದೆಹಲಿ ಎಕ್ಸ್ ಶೋ ರೂಂ ಬೆಲೆ 2.29 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ದಿವ್ಯ ಹಸ್ತಗಳಿಂದ ಭಾರತ ಪ್ರವೇಶ ಪಡೆದಿರುವ ಬಿಎಂಡಬ್ಲ್ಯು ಐ8 ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರದಲ್ಲಿ ಸೀಮಿತ ಆವೃತ್ತಿಯಲ್ಲಿ ಮಾತ್ರ ದೇಶದಲ್ಲಿ ಮಾರಾಟವಾಗುತ್ತಿದೆ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ಫೆರಾರಿ, ಲಂಬೋರ್ಗಿನಿಗಳಂತಹ ಸೂಪರ್ ಕಾರುಗಳನ್ನೇ ಮೀರಿಸುವಂತಹ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಬಿಎಂಡಬ್ಲ್ಯು ಐ8 ಪ್ಲಗಿನ್ ಹೈಬ್ರಡ್ ಮಾದರಿಲ್ಲಿ 1.5 ಲೀಟರ್ ಟರ್ಬೊ ತ್ರಿ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ. ಇವೆರಡು ಸೇರಿ ಗರಿಷ್ಠ 370 ಅಶ್ವಶಕ್ತಿ ಉತ್ಪಾದಿಸಲಿದ್ದು, 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಅಂತೆಯೇ ಗರಿಷ್ಠ ಗಂಟೆಗೆ 250 ಕೀ.ಮೀ. ವೇಗವನ್ನು ಪಡೆಯಲಿದೆ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ಬಿಎಂಡಬ್ಲ್ಯು ಐ8 ಪ್ಲಗ್ ಇನ್ ಹೈಬ್ರಿಡ್ ಮಾದರಿಯು ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 37 ಕೀ.ಮೀ. ವೆರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದರ ಗರಿಷ್ಠ ವೇಗ ಗಂಟೆಗೆ 120 ಕೀ.ಮೀ. ಆಗಿರಲಿದೆ.

ಪರಿಸರ ಸ್ನೇಹಕ್ಕೆ ಜೈಕಾರ ಹಾಡಿದ 'ತಲ' ಅಜಿತ್

ಜಾಗತಿಕ ಮಾರುಕಟ್ಟೆಯಲ್ಲಿ ಪೋರ್ಷೆ 911, ಆಡಿ ಆರ್8 ಹಾಗೂ ಜಾಗ್ವಾರ್ ಎಫ್-ಟೈಪ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಭಾರತದಲ್ಲೂ ಮೋಡಿ ಮಾಡಿದ್ದು, ಈಗ ಅಜಿತ್ ನೆಚ್ಚಿನ ಕಾರೆನಿಸಿಕೊಂಡಿದೆ.

English summary
Actor Ajith Kumar who loves fast bikes and cars. Now, He bought a new BMW i8 sports car model.
Story first published: Tuesday, April 28, 2015, 11:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark