ಹೆಲ್ಮೆಟ್ ಇಲ್ಲದೇ ಬೈಕ್ ರೈಡ್- ಇಕ್ಕಟ್ಟಿಗೆ ಸಿಲುಕಿದ ನಟ ಕುನಾಲ್ ಖೆಮು

Written By:

ಸೆಲೆಬ್ರಿಟಿಗಳು ಅಂದ್ರೆ ಅವರನ್ನು ಸಾವಿರಾರು ಅಭಿಮಾನಿಗಳು ಫಾಲೋ ಮಾಡುವವರು ಇದ್ದೆ ಇರ್ತಾರೆ. ಆದ್ರೆ ಅದೇ ಸೆಲೆಬ್ರಿಟಿಗಳೇ ಸಾರ್ವಜನಿಕವಾಗಿ ಕಾನೂನು ಉಲ್ಲಂಘನೆ ಮಾಡಿದಾಗ ಅದು ಇತರರಿಗೂ ತಪ್ಪು ಸಂದೇಶವನ್ನು ರವಾನಿಸುತ್ತೆ.

ಹೆಲ್ಮೆಟ್ ಇಲ್ಲದೇ ಬೈಕ್ ರೈಡ್- ಇಕ್ಕಟ್ಟಿಗೆ ಸಿಲುಕಿದ ನಟ ಕುನಾಲ್ ಖೆಮು

ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಬಾಲಿವುಡ್ ಕುನಾಲ್ ಖೆಮುಗೆ ಇದೀಗ ಮುಂಬೈ ಪೊಲೀಸರು ಶಾಕ್ ನೀಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಇ ಚಲನ್ ಮೂಲಕ ದಂಡ ವಿಧಿಸಲಾಗಿದ್ದು, ಘಟನೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕುನಾಲ್ ಖೆಮು ಕ್ಷಮೆ ಕೋರಿದ ಪ್ರಸಂಗ ನಡೆದಿದೆ.

ಹೆಲ್ಮೆಟ್ ಇಲ್ಲದೇ ಬೈಕ್ ರೈಡ್- ಇಕ್ಕಟ್ಟಿಗೆ ಸಿಲುಕಿದ ನಟ ಕುನಾಲ್ ಖೆಮು

ಇತ್ತೀಚೆಗೆ ಬಾಲಿವುಡ್ ನಟರು ತಮ್ಮ ಸೂಪರ್ ಬೈಕ್‌ಗಳಲ್ಲಿ ಹೆಲ್ಮೆಟ್ ಇಲ್ಲದೇ ಸಾರ್ವಜನಿಕವಾಗಿ ರೈಡಿಂಗ್ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ನಟ ಕುನಾಲ್ ಖೆಮು ಕೂಡಾ ನಿನ್ನೆಯಷ್ಟೇ ದುಬಾರಿ ಬೆಲೆಯ ಎಂವಿ ಅಗಸ್ಟಾ ಬ್ರುಟಾಲೆ ಬೈಕ್‌ನಲ್ಲಿ ಜಾಲಿ ರೈಡ್ ಮಾಡುತ್ತಿದ್ದರು.

ಹೆಲ್ಮೆಟ್ ಇಲ್ಲದೇ ಬೈಕ್ ರೈಡ್- ಇಕ್ಕಟ್ಟಿಗೆ ಸಿಲುಕಿದ ನಟ ಕುನಾಲ್ ಖೆಮು

ಅಸಲಿಗೆ ಕುನಾಲ್ ಖೆಮು ರೈಡ್ ಮಾಡುತ್ತಿದ್ದ ಎಂವಿ ಅಗಸ್ಟಾ ನಟ ಸೈಫ್ ಅಲಿಖಾನ್‌ ಅವರಿಗೆ ಸೇರಿದ ಸೂಪರ್ ಬೈಕ್ ಎನ್ನಲಾಗಿದ್ದು, ಹೊಸ ಬೈಕ್ ಖರೀದಿ ಹಿನ್ನೆಲೆ ಕುನಾಲ್ ಖೆಮು ಕೂಡಾ ಒಂದು ರೌಂಡ್ ಹೊರಗೆ ಬಂದಿದ್ದರು.

ಹೆಲ್ಮೆಟ್ ಇಲ್ಲದೇ ಬೈಕ್ ರೈಡ್- ಇಕ್ಕಟ್ಟಿಗೆ ಸಿಲುಕಿದ ನಟ ಕುನಾಲ್ ಖೆಮು

ಈ ವೇಳೆ ಸಾರ್ವಜನಿಕರು ಯಾವುದೇ ಸುರಕ್ಷಾ ಸೌಲಭ್ಯಗಳನ್ನು ಧರಿಸದೇ ಸೂಪರ್ ಬೈಕ್ ರೈಡ್ ಮಾಡುತ್ತಿದ್ದ ಕುನಾಲ್ ಖೆಮು ಅವರು ಚಿತ್ರಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಹೆಲ್ಮೆಟ್ ಇಲ್ಲದೇ ಬೈಕ್ ರೈಡ್- ಇಕ್ಕಟ್ಟಿಗೆ ಸಿಲುಕಿದ ನಟ ಕುನಾಲ್ ಖೆಮು

ಇದು ಪರ ವಿರೋಧಕ್ಕೆ ಕಾರಣವಾಗಿ ಕೆಲವರು ಮುಂಬೈ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಆಗ ಎಚ್ಚೆತ್ತುಕೊಂಡ ಪೊಲೀಸರು ಆದ ಪ್ರಮಾದಕ್ಕೆ ದಂಡ ಪಾವತಿಸುವಂತೆ ಇ ಚಲನ್ ಜಾರಿಗೊಳಿಸಿದ್ದಾರೆ.

ಹೆಲ್ಮೆಟ್ ಇಲ್ಲದೇ ಬೈಕ್ ರೈಡ್- ಇಕ್ಕಟ್ಟಿಗೆ ಸಿಲುಕಿದ ನಟ ಕುನಾಲ್ ಖೆಮು

ಇ ಚಲನ್ ಮೂಲಕ ನಟ ಕುನಾಲ್ ಖೆಮುಗೆ ರೂ. 500 ದಂಡ ಹಾಕಲಾಗಿದ್ದು, ಇದಕ್ಕೆ ಟ್ವಿಟರ್ ಮೂಲಕವೇ ಉತ್ತರಿಸಿರುವ ಕುನಾಲ್ ಖೆಮು 'ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡಿದ್ದು ಕಾನೂನು ಪ್ರಕಾರ ತಪ್ಪು, ನೀವು ತೆಗೆದುಕೊಂಡಿರುವ ಕ್ರಮಕ್ಕೆ ನಾನು ಬದ್ಧ ಎಂದಿದ್ದಾರೆ.

ಹೆಲ್ಮೆಟ್ ಇಲ್ಲದೇ ಬೈಕ್ ರೈಡ್- ಇಕ್ಕಟ್ಟಿಗೆ ಸಿಲುಕಿದ ನಟ ಕುನಾಲ್ ಖೆಮು

ಜೊತೆಗೆ ಸೂಪರ್ ಬೈಕ್ ಚಾಲನೆ ವೇಳೆ ಅಗತ್ಯ ಸುರಕ್ಷಾ ಸೌಲಭ್ಯಗಳನ್ನೇ ಧರಿಸಿ ಬೈಕ್ ಚಾಲನೆ ಮಾಡುವುದು ಒಳಿತು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕುನಾಲ್ ಖೆಮು, ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

01. ಸೀಟ್ ಬೆಲ್ಟ್ ಹಾಕಿಲ್ಲವೆಂದು ಬೈಕ್ ಸವಾರನಿಗೆ ದಂಡ ಹಾಕಿದ ಪೊಲೀಸರು..!!

02. ಮಾರುತಿ ಕಂಪನಿ ಬಗ್ಗೆ ಈ 28 ವಿಚಾರ ಅಚ್ಚರಿ ಉಂಟು ಮಾಡ್ತವೆ,ಆದ್ರೆ 7ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

03. ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

04. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

Read more on traffic rules helmet
English summary
Actor Kunal Khemu Fined For Riding Without Helmet.
Story first published: Thursday, March 22, 2018, 17:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark