ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಕಾನ್ಪುರದಲ್ಲಿ ಹೆಲ್ಮೆಟ್ ಧರಿಸದೆ ರಾಯಲ್ ಎನ್‌ಫೀಲ್ಡ್ ಬೈಕ್ ಚಲಾಯಿಸಿದ್ದಕ್ಕೆ ನಟ ವರುಣ್ ಧವನ್‌ಗೆ ಕಾನ್ಪುರ ಪೊಲೀಸರು ಚಲನ್ ನೀಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ವರುಣ್ ಧವನ್ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ವೀಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಮುಂಬರುವ ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ನಟ ಕಾನ್ಪುರಕ್ಕೆ ಬಂದಿದ್ದಾರೆ. ಈ ವೇಳೆ ನಗರದಲ್ಲಿ ನಟ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಕ್ಕೆ ಪೊಲೀಸರು ಕಾನೂನು ಪ್ರಕಾರ ಚಲನ್ ಜಾರಿ ಮಾಡಿದ್ದಾರೆ ಎಂದು ಕಾನ್ಪುರದ ಟ್ರಾಫಿಕ ವಿಭಾಗದ ಡಿಸಿಪಿ ಹೇಳಿದ್ದಾರೆ. ನಟ ವರುಣ್ ಧವನ್ ಚಲಾಯಿಸುತ್ತಿದ್ದ ಬೈಕ್ ನಂಬರ್ ಪ್ಲೇಟ್ ದೋಷಪೂರಿತವಾಗಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ವರದಿಯಾಗಿದೆ. ಪೊಲೀಸರು ಪ್ರಸ್ತುತ ನಂಬರ್ ಪ್ಲೇಟ್ ಅನ್ನು ಪರಿಶೀಲಿಸುತ್ತಿದ್ದಾರೆ ಮತ್ತು ದೋಷ ಕಂಡುಬಂದರೆ, ಪೊಲೀಸರು ಮತ್ತೊಂದು ಚಲನ್ ನೀಡುತ್ತಾರೆ.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಈ ಹಿಂದೆಯೂ ಈ ನಟ ಹಲವಾರು ಬಾರಿ ಸುದ್ದಿಯಲ್ಲಿದ್ದರು. ಹಲವು ವರ್ಷಗಳ ಹಿಂದೆ ಸಂಚಾರಿ ನಿಯಮ ಉಲ್ಲಂಘಿಸಿ ನಡು ನಡುರಸ್ತೆಯಲ್ಲೇ ಅಭಿಮಾನಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಬಾಲಿವುಡ್ ನಟ ವರುಣ್ ಧವನ್‌ ಅವರಿಗೆ ಮುಂಬೈ ಪೊಲೀಸರು ಇ-ಚಲನ್ ನೀಡಿದ್ದರು.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಅಂದು ಪ್ರಮುಖ ದಿನಪತ್ರಿಕೆಯೊಂದು ವರುಣ್ ಧವನ್ ಅವರು ನಡು ರಸ್ತೆಯಲ್ಲೇ ಅಭಿಮಾನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರ ಪ್ರಕಟಿಸಿದ್ದನ್ನು ಆಧರಿಸಿ ಮುಂಬೈ ಪೊಲೀಸರು ಬಾಲಿವುಡ್ ನಟನಿಗೆ ಇ-ಚಲನ್ ನೀಡಿದ್ದರು. ಅಲ್ಲದೆ ಈ ಬಗ್ಗೆ ವರುಣ್ ಧವನ್ ಅವರಿಗೆ ಇಂತಹ ಘಟನೆ ಮರು ಕಳುಹಿಸದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದರು.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಆಟೋರಿಕ್ಷಾದಲ್ಲಿ ಕುಳಿತಿದ್ದ ಮಹಿಳಾ ಅಭಿಮಾನಿಯೊಬ್ಬರು ನಟ ವರುಣ್ ಕಾಣಿಸಿದ ಕೂಡಲೆ ಆಟೋದಿಂದ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ರೀತಿ ಮಾಡಿದ್ದು ತಪ್ಪಾಯಿತು ಎಂದು ವರುಣ್ ಧವನ್ ಪೊಲೀಸರ ಕ್ಷಮೆಯಾಚಿಸಿದ್ದಾರೆ. ಕಾರು ಚಲಿಸುತ್ತಿರಲಿಲ್ಲ. ನಾವು ಟ್ರಾಫಿಕ್‌ನಲ್ಲಿದ್ದೆವು. ಹಾಗಾಗಿ ಸೆಲ್ಫಿ ತಗೆದುಕೊಂಡಿದೆ. ಅಭಿಮಾನಿಯನ್ನು ನಿರಾಸೆಪಡಿಸಬಾರದು ಎಂಬ ಉದ್ದೇಶದಿಂದ ಸೆಲ್ಫಿ ತಗೆದುಕೊಂಡೆ ಹೊರತು ಇನ್ನೇನು ಇಲ್ಲ ಎಂದು ವರುಣ್ ಸ್ಪಷ್ಟೀಕರಣ ನೀಡಿದ್ದರು.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಹೆಚ್ಚಿನ ಮೆಟ್ರೋಪಾಲಿಟನ್ ನಗರಗಳು ಈಗ ಸಿಸಿಟಿವಿ ನೆಟ್‌ವರ್ಕ್ ಅನ್ನು ಹೊಂದಿದ್ದು, ಅದನ್ನು ಪೊಲೀಸ್ ಸಿಬ್ಬಂದಿಯ ತಂಡವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ. ನೋಂದಣಿ ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಮೂಲಕ ಟ್ರಾಫಿಕ್ ನಿಯಮ ಉಲ್ಲಂಘನೆಯ ಆಧಾರದ ಮೇಲೆ ಪೊಲೀಸರು ಚಲನ್ ನೀಡುತ್ತಾರೆ.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಅನೇಕ ಆನ್‌ಲೈನ್ ಚಲನ್‌ಗಳು ದೋಷಯುಕ್ತ ನಂಬರ್ ಪ್ಲೇಟ್‌ಗಳಿಂದ ತಪ್ಪಾಗುತ್ತದೆ. ಇದು ಪೊಲೀಸರಿಗೆ ನಂಬರ್ ಪ್ಲೇಟ್‌ ಪತ್ತೆ ಹಚ್ಚುವುದು ಸವಾಲು ಆಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಚಲನ್ ಮೊತ್ತವನ್ನು ಹೆಚ್ಚಿಸಿದ್ದಾರೆ. ಉಲ್ಲಂಘನೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರಸ್ತೆಗಳನ್ನು ಸುರಕ್ಷಿತಗೊಳಿಸಲು ದಂಡವನ್ನು ಹೆಚ್ಚಿಸಲಾಗಿದೆ.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಕಾನ್ಪುರದಲ್ಲಿ ಹೆಲ್ಮೆಟ್ ಧರಿಸದೆ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ ಬೈಕ್ ಅನ್ನು ಚಲಾಯಿಸುತ್ತಿದ್ದರು. ಈ ಬೈಕಿನ ಬಗ್ಗೆ ಹೇಳುವುದಾದರೆ, ಹಿಂದಿನ ಥಂಡರ್‌ಬರ್ಡ್ ಎಕ್ಸ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಬೈಕಿಗಿಂತಲೂ ಸಾಕಷ್ಟು ವಿಭಿನ್ನವಾಗಿ ಮತ್ತು ಆಕರ್ಷಕವಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ 349 ಸಿಸಿ, ಏರ್/ಆಯಿಲ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಇದರಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಕೂಡ ಪಡೆಯುತ್ತದೆ. ಈ ಎಂಜಿನ್ 20.2 ಬಿಹೆಚ್‍ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕನ್ನು ಹೊಸ ಜೆ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಈ ಹೊಸ ಬೈಕ್ ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ. ಈ ರೆಟ್ರೊ ಕ್ರೂಸರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ಅನ್ನು ಹೊಂದಿದೆ..

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಮುಂಭಾಗ 19-ಇಂಚಿನ ಮತ್ತು ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಜೋಡಿಸಲಾಗಿದೆ. ಇದು ಕ್ರಮವಾಗಿ 100 / 90-19 57 ಪಿ ಮತ್ತು 140 / 70-17 66 ಪಿ ಸಿಯೆಟ್ ಟ್ಯೂಬ್‌ಲೆಸ್ ಟೈರ್ ಅನ್ನು ಹೊಂದಿದೆ. ಇದರೊಂದಿಗೆ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಾಲಿವುಡ್ ನಟನಿಗೆ ದಂಡ ವಿಧಿಸಿದ ಪೊಲೀಸರು

ಇನ್ನು ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಲಿವೆ. ಶೀಘ್ರದಲ್ಲೇ ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಿಡುಗಡೆಯಗಲಿವೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Actor varun dhawan gets challan for riding bike without helmet details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X