ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಕೆಲವು ತಿಂಗಳುಗಳ ಹಿಂದೆಯಷ್ಟೇ ಟೆರ್ರಾಫುಜಿಯಾ ಟ್ರಾನ್ಸಿಷನ್ (Terrafugia Transition) ಎಂಬ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಹಾರುವ ಕಾರಿನ ಬಗ್ಗೆ ನಮ್ಮ ಡ್ರೈವ್ ಸ್ಪಾರ್ಕ್‌ನಲ್ಲಿ ವಿಸೃತ ಲೇಖನ ಬರೆದಿದ್ದೆವು. ಇದಕ್ಕೊಂದು ಸೇರ್ಪಡೆಯೆಂಬಂತೆ ಸ್ಲೋವಾಕಿಯಾದಿಂದ ಇನ್ನೊಂದು ಏರೋಮೊಬೈಲ್ (Aeromobil) 2.5 ಹಾರುವ ಕಾರಿನ ಕುರಿತು ವರದಿಯಾಗಿದೆ.

ಭವಿಷ್ಯದ ಸಂಚಾರ ವಾಹಕಗಳನ್ನು ನಿರ್ಮಿಸುವುದರಲ್ಲಿ ಕಾರ್ಯ ನಿರತರಾಗಿರುವ ಸ್ಲೋವಾಕಿಯಾ ಎಂಜಿನಿಯರೊಬ್ಬರು ಏರೋಮೊಬೈಲ್ 2.5 ಫ್ಲೈಯಿಂಗ್ ಕಾರು ವಿನ್ಯಾಸಗೊಳಿಸಿದ್ದಾರೆ. ಟ್ರೆರ್ರಾಫುಜಿಯಾ ತರಹನೇ ಇದು ಸಹ ಫೈಟಿಂಗ್ ಜೆಟ್ ವಿನ್ಯಾಸವನ್ನು ಪಡೆದುಕೊಂಡಿದೆ.

ಹಾಗಿದ್ದರೆ ಬನ್ನಿ ಪ್ರಾಯೋಗಿಕವಾಗಿಯೂ ಏರೋಮೊಬೈಲ್ ಎಷ್ಟು ಸಕ್ಷಮವಾಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಪ್ರಸ್ತುತ ಏರೋಮೊಬೈಲ್ 2.5 ಫ್ಲೈಯಿಂಗ್ ಕಾರು ಅಭಿವೃದ್ಧಿ ಹಂತದಲ್ಲಿದೆ. ನೆನಪಿರಲಿ ಇನ್ನೊಂದೆಡೆ ಟೆರ್ರಾಫುಜಿಯಾ ಈಗಾಗಲೇ ಉತ್ಪಾದಕಾ ವರ್ಷನ್ ಪಡೆದುಕೊಂಡಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಇದೀಗ ಆಗಮನವಾಗಿರುವ ಏರೋಮೊಬೈಲ್ ಹಾರುವ ಕಾರಿನ ಮೂರನೇ ಕಾನ್ಸೆಪ್ಟ್ ಆಗಿದ್ದು, ಇದನ್ನು ಅಭಿವೃದ್ಧಿಪಡಿಸಲು ಸರಿ ಸುಮಾರು 20 ವರ್ಷಗಳೇ ತಗುಲಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಸಹ ಸಂಸ್ಥಾಪಕ ಹಾಗೂ ಮುಖ್ಯ ವಿನ್ಯಾಸಗಾರನಾಗಿರುವ ಸ್ಟೆಫನ್ ಕ್ಲೆನ್ ಮೊದಲ ಬಾರಿಗೆ 1990ನೇ ಇಸವಿಯಲ್ಲಿ ಏರೋಮೊಬೈಲ್ ವಿನ್ಯಾಸದ ಕೆಲಸವನ್ನು ಪ್ರಾರಂಭಿಸಿದ್ದರು. ಮುಂದುವರಿದ ಬೆಳವಣಿಗೆಯಲ್ಲಿ ಈ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿತ್ತು.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ನೀವು ಚಿತ್ರದಲ್ಲಿ ನೋಡುತ್ತಿರುವಂತೆಯೇ ಏರೋಮೊಬೈಲ್, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಫ್ಲೈಟಿಂಗ್ ಜೆಟ್ (ಯುದ್ಧ ವಿಮಾನ) ವಿನ್ಯಾಸವನ್ನು ಪಡೆದುಕೊಂಡಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಏರೋಮೊಬೈಲ್ ಫ್ರಂಟ್ ವೀಲ್ ಡ್ರೈವ್ ಸಿಸ್ಟಂ ಹೊಂದಿದ್ದು, ಹಿಂದುಗಡೆಯೂ ಎರಡು ಚಿಕ್ಕ ಚಕ್ರಗಳನ್ನು ಜೋಡಿಸಲಾಗಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಡ್ರೈವರ್ ಸೇರಿಂದತೆ ಮುಂದುಗಡೆ ಇಬ್ಬರಿಗೆ ಕುಳಿತುಕೊಳ್ಳಲು ಸುವ್ಯವಸ್ಥೆವಾದ ಆಸನ ವ್ಯವಸ್ಥೆ ಮಾಡಲಾಗಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಇದರಲ್ಲಿ ಎರಡು ವಿಧದ ಸ್ಟೀರಿಂಗ್ ಕಂಟ್ರೋಲ್ ಇದ್ದು, ಸಹಜವಾಗಿಯೇ ದೊಡ್ಡ ಸ್ಟೀರಿಂಗ್ ವೀಲ್ ರಸ್ತೆಯಲ್ಲೂ ಇನ್ನೊಂದು ಹಾರುವ ವೇಳೆ ನಿಯಂತ್ರಣ ಕಂಡುಕೊಳ್ಳಲಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಏರೋಮೊಬೈಲ್ 2.5 ಸ್ಟೀಲ್ ಫ್ರೇಮ್ ಹೋದಿಕೆಯ ಕಾರ್ಬನ್ ಫೈಬರ್ ದೇಹವನ್ನು ಹೊಂದಿದೆ. ಇದು ತೂಕ ಕಡಿಮೆ ಮಾಡುವಲ್ಲಿ (450ಕೆ.ಜಿ) ನೆರವಾಗಲಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಇದು ರೋಟೆಕ್ಸ್ 912 ಎಂಜಿನ್ ಪಡೆದುಕೊಂಡಿದ್ದು, 100 ಅಶ್ವಶಕ್ತಿ ಉತ್ಪಾದಿಸಲು ನೆರವಾಗಲಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಇನ್ನು ಏರೋಮೊಬೈಲ್ 2.5 ಹಾರುವ ಕಾರು ಗಂಟೆಗೆ ಗರಿಷ್ಠ 200 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಾಳಿಯಲ್ಲಿ ಗಂಟೆಗೆ 160 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಗಗನ ಚುಂಬಿಸಿದ 'ಏರೋಮೊಬೈಲ್' ಹಾರುವ ಕಾರು

ಅಂತೆಯೇ ಗಾಳಿಯಲ್ಲಿ 700 ಕೀ.ಮೀ. ಹಾಗೂ ರಸ್ತೆಯಲ್ಲಿ 500 ಕೀ.ಮೀ. ರೇಂಜ್ ವರೆಗೂ ಚಲಿಸಲಿದೆ. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ ಏರೋಮೊಬೈಲ್ ಪ್ರತಿ ಲೀಟರ್‌ಗೆ 13.3 ಕೀ.ಮೀ. ಇಂಧನ ಕ್ಷಮತೆ ನೀಡಲಿದೆ.

Most Read Articles

Kannada
English summary
Aeromobil 2.5 flying car is the creation of a Slovakian engineer who also happens to be an award winning designer. Aeromobil 2.5 has not reached the development stage the Terrafugia has achieved, but hopefully we'll have it on our roads in the future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X