ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

Written By:

ವಿಮಾನ ಪ್ರಯಾಣಿಕರ ಸುರಕ್ಷತೆಯಲ್ಲಿ ಮಗದೊಂದು ಮೈಲುಗಲ್ಲು ಎಂದೇ ವ್ಯಾಖ್ಯಾನಿಸಬೇಕಾದ ತಂತ್ರಜ್ಞಾನದ ಅವಿಷ್ಕಾರವೊಂದರಲ್ಲಿ ಉಕ್ರೇನ್ ಎಂಜಿನಿಯರ್‌ರೊಬ್ಬರು, ವಿಮಾನ ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಬಾಗವಾಗುವ ವಿನೂತನ ತಂತ್ರಜ್ಞಾನವೊಂದನ್ನು ಅವಿಷ್ಕರಿಸಿದ್ದಾರೆ.

Also Read: ಜಗತ್ತಿನ 20 ಸುರಕ್ಷಿತ ವಿಮಾನಯಾನ ಸಂಸ್ಥೆಗಳು

ಏನಿದು ತಂತ್ರಜ್ಞಾನ?

ಸಾಮಾನ್ಯವಾಗಿ ಗಗನದಲ್ಲಿ ಹಾರುವ ವಿಮಾನಕ್ಕೆ ಬೆಂಕಿ ತಗುಲಿದಾಗ ಪ್ರಯಾಣಿಕರು ಪಾರಾಗುವ ಸಾಧ್ಯತೆ ತುಂಬಾನೇ ಕಡಿಮೆಯಾಗಿರುತ್ತದೆ. ಜೀವ ರಕ್ಷಕ ಪ್ಯಾರಾಚೂಟ್‌ಗಳು ಇಲ್ಲಿ ನಿರ್ಣಾಯಕ ಘಟಕವೆನಿಸುತ್ತದೆ.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

ಆದರೆ ಉಕ್ರೇನ್ ಎಂಜಿನಿಯರ್ ಅವಿಷ್ಕರಿಸಿರುವ ಹೊಸ ತಂತ್ರಜ್ಞಾನ ಪ್ರಕಾರ ತುರ್ತು ಪರಿಸ್ಥಿತಿಯಲ್ಲಿ ಬೆಂಕಿ ತಗುಲಿದಾಗ ವಿಮಾನ ವಿಬ್ಬಾಗವಾಗಲಿದೆ. ಅಲ್ಲದೆ ಪ್ರಯಾಣಿಕರು ಸಂಚರಿಸುವ ಕ್ಯಾಬಿನ್ ವಿಭಾಗವು ಪ್ಯಾರಚೂಟ್ ತಂತ್ರಗಾರಿಕೆಯ ನೆರವಿನಿಂದ ಸುರಕ್ಷಿತವಾಗಿ ಭೂಮಿಯನ್ನು ತಲುಪಬಹುದಾಗಿದೆ.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

ನೂತನ ವಿಮಾನ ಭದ್ರತಾ ತಂತ್ರಜ್ಞಾನವು ವಿಶ್ಲೇಷಕರಲ್ಲಿ ಅತಿ ಹೆಚ್ಚು ಕುತೂಹಲವನ್ನುಂಟು ಮಾಡಿದೆ. ತುರ್ತು ಪರಿಸ್ಥಿತಿಯಲ್ಲಿ ಇದರ ನೆರವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

ಟೇಕ್ ಆಫ್, ಲ್ಯಾಂಡಿಂಗ್ ಅಥವಾ ಹಾರಾಟ ನಡೆಸುವಾಗ ತುರ್ತು ಪರಿಸ್ಥಿತಿ ಎದುರಾದ್ದಲ್ಲಿ ಬೇರ್ಪಟ್ಟ ಭಾಗವನ್ನು ನೆಲ ಹಾಗೂ ನೀರಿನ ಮೇಲೂ ಸುರಕ್ಷಿತವಾಗಿ ಇಳಿಸಬಹುದಾಗಿದೆ.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

ವಿಮಾನ ಅಪಘಾತ ಸಂಭವಿಸಿದಾಗ ಇದರ ಕ್ಯಾಬಿನ್ ಬೇರ್ಪಡಲಿದೆ. ತದಾ ವೇಳೆ ಮೇಲ್ಗಡೆಯಿಂದ ಸ್ವಯಂಚಾಲಿತವಾಗಿ ಪ್ಯಾರಚೂಟ್ ತೆರೆದುಕೊಳ್ಳಲಿದ್ದು, ಸುರಕ್ಷಿತವಾಗಿ ನೆಲವನ್ನು ತಲುಪುವಂತೆ ನೆರವು ಮಾಡಲಿದೆ.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

ಇನ್ನು ನೆಲ ಅಥವಾ ನೀರಿನ ಮೇಲೆ ಬೀಳುವಾಗ ಆಘಾತದ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ವಿಮಾನದ ಅಡಿಯಲ್ಲಿ ರಬ್ಬರ್ ಟ್ಯೂಬ್ ಗಳನ್ನು ಲಗ್ಗತ್ತಿಸಲಾಗುವುದು.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

ತಾಜಾ ಅಧ್ಯಯನಗಳ ಪ್ರಕಾರ ವಿಮಾನಗಳ ಅಪಘಾತ ಪ್ರಸಂಗ ಹೆಚ್ಚಾಗುತ್ತಿದ್ದು, ಪಾರಾಗುವ ಪ್ರಯಾಣಿಕರ ಪ್ರಮಾಣ ಕೇವಲ 24% ಮಾತ್ರವಾಗಿದೆ.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

2014ರಲ್ಲಿ ಮಾತ್ರವಾಗಿ 111 ವಿಮಾನ ಅವಘಡಗಳು ಘಟಿಸಿ ಹೋಗಿದ್ದವು. 2013ರಲ್ಲಿ ಇದು 138ರಷ್ಟಾಗಿತ್ತು.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

ಅಲ್ಲದೆ ಪ್ರಯಾಣಿಕ ಕ್ಯಾಬಿನ್ ಅಡಿಯಲ್ಲಿ ಲಗ್ಗೇಜ್ ಜಾಗವನ್ನು ಕೊಡಲಾಗಿದ್ದು, ಇದರಿಂದ ದುರಂತ ಎದುರಾದ್ದಲ್ಲಿ ಯಾವುದೇ ಲಗ್ಗೇಜ್ ಮಿಸ್ ಆಗುವುದಿಲ್ಲ.

ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ

ಅಂದ ಹಾಗೆ ಪ್ರಸ್ತುತ ಯೋಜನೆಗೆ ವಿಮರ್ಶಕರಿಂದ ಭಾರಿ ಟೀಕೆ ವ್ಯಕ್ತವಾಗುತ್ತಿದ್ದು, ಇದು ವಿಮಾನವನ್ನು ಬಲಪಡಿಸುವ ಬದಲು ಜೋಡಣೆ ಇರುವುದರಿಂದ ಒಟ್ಟಾರೆ ಮೈಕಟ್ಟನ್ನು ದುರ್ಬಲಪಡಿಸಲಿದೆ ಎಂದಿದ್ದಾರೆ.

ಇವನ್ನೂ ಓದಿ

ಭಾರತದ ಮಿಲಿಟರಿ ಬಲಕ್ಕೆ ಎಷ್ಟನೇ ಸ್ಥಾನ ಗೊತ್ತಾ ?

Read more on ವಿಮಾನ plane
English summary
Aircraft with a detachable cabin ejected during in-flight emergency situations
Story first published: Monday, January 18, 2016, 16:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark