ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

Written By:

ವಿಶ್ವ ಅತಿ ದೊಡ್ಡ ವಿಮಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏರ್ ಲ್ಯಾಂಡರ್ ತನ್ನ ಚೊಚ್ಚಲ ಹಾರಾಟಕ್ಕೆ ಸಜ್ಜಾಗಿ ನಿಂತಿದೆ. 'ಫ್ಲೈಯಿಂಗ್ ಬಮ್' ಎಂಬ ಅಕ್ಕರೆಯ ಹೆಸರಿನಿಂದಲೂ ಅರಿಯಲ್ಪಡುವ ಏರ್ ಲ್ಯಾಂಡರ್ 10, ಗರಿಷ್ಠ 48 ಪ್ರಯಾಣಿಕರನ್ನು ಹೊತ್ತೊಯ್ಯಲಿದೆ.

ಮೂರು ವಾರಗಳಷ್ಟು ಕಾಲ ಏರ್ ಲ್ಯಾಂಡರ್ ನೂತನ ವಿಮಾನದ ಪ್ರಾಯೋಗಿಕ ಪರೀಕ್ಷೆಯು ನೆರವೇರಲಿದೆ. ಇದು ವೈಮಾನಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

302 ಅಡಿ ಉದ್ದದ ಏರ್ ಲ್ಯಾಂಡರ್ ವಿಮಾನವನ್ನು ಮೂಲತ: ಅಮೆರಿಕ ಸೈನಿಕರ ಯೋಜನೆಗಳಿಗಾಗಿ ಅಭಿವೃದ್ಧಿಗೊಳಿಸಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ 2012ರಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು.

ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

ಬಲೂನ್ ಮಾದರಿಯ ಈ ಹೈಬ್ರಿಡ್ ವಿಮಾನವು 91 ಮೀಟರ್ ಉದ್ದ, 34 ಮೀಟರ್ ಅಗಲ ಹಾಗೂ 26 ಮೀಟರ್ ಎತ್ತರವನ್ನು ಪಡೆದಿದೆ. ಅಲ್ಲದೆ ಒಟ್ಟು 50 ಟನ್ ಭಾರ ಹೊಂದಿದೆ.

ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

ಬ್ರಿಟನ್ ನ ಹೈಬ್ರಿಡ್ ಏರ್ ವೆಹಿಕಲ್ಸ್ ಸಂಸ್ಥೆ ನಿರ್ಮಿಸಿರುವ ಏರ್ ಲ್ಯಾಂಡರ್ ವಿಮಾನವು ಗಂಟೆಗೆ 140 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

ಹೀಲಿಯಂ ಬಳಕೆಯಿಂದ ಮೂರು ದಿನಗಳಷ್ಟು ಕಾಲ ಆಕಾಶದಲ್ಲೇ ಇರಬಹುದು. ಅಲ್ಲದೆ ನೀರು, ಮಂಜು ಸೇರಿದಂತೆ ಎಲ್ಲ ಹವಾಮಾನ ಪರಿಸ್ಥಿತಿಯಲ್ಲಿ ಸುಗಮವಾಗಿ ಹಾರಾಡಲಿದೆ.

ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

ಅರ್ಧದಷ್ಟು ವಿಮಾನ, ಅರ್ಧದಷ್ಟು ವಾಯು ನೌಕೆಯಂತಿರುವ ಏರ್ ಲ್ಯಾಂಡರ್ ಗೆ ಹೀಲಿಯಂ ಪಂಪ್ ಮಾಡಲಾಗುವುದು. ಅಲ್ಲದೆ ನೀರಿನ ಮೇಲೂ ಲ್ಯಾಂಡ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

ಏರ್ ಲ್ಯಾಂಡರ್ ಪ್ರಾಯೋಗಿಕ ಸಂಚಾರ ಪರೀಕ್ಷೆಗೆ ಯುರೋಪಿಯನ್ ಎವಿಯೇಷನ್ ಸೇಫ್ಟಿ ಏಜೆನ್ಸಿ ಹಾಗೂ ಬ್ರಿಟನ್ ಸಿವಿಲಿ ಎವಿವೇಷನ್ ಅಥಾರಟಿ ಗ್ರೀನ್ ಸಿಗ್ನಲನ್ನು ನೀಡಿದೆ.

ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

ಏರ್ ಲ್ಯಾಂಡರ್ 10 ನಿರ್ಮಾಣ ಹಾಗೂ ಅಭಿವೃದ್ಧಿಗಾಗಿ ಬರೋಬ್ಬರಿ 200ಗಿಂತಲೂ ಹೆಚ್ಚು ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗಿದೆ. ಅಲ್ಲದೆ ಕಳೆದ 10 ವರ್ಷಗಳಿಂದ ವಿಜ್ಞಾನಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ.

ಚೊಚ್ಚಲ ಹಾರಾಟಕ್ಕೆ ವಿಶ್ವದ ಅತಿ ದೊಡ್ಡ ವಿಮಾನ ಸಜ್ಜು

ಅಂದ ಹಾಗೆ ಏರ್ ಲ್ಯಾಂಡರ್ 10, ಅತ್ಯಂತ ಶಕ್ತಿಶಾಲಿ 4.0 ಲೀಟರ್ ಸೂಪರ್ ಚಾರ್ಜ್ಡ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 1380 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

Read more on ವಿಮಾನ plane
English summary
World's Largest Aircraft Leaves Hangar For 1st Time

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark