ನಟರಿಂದ ಅಸಾಧ್ಯವಾದುದ್ಧನ್ನು ಸಾಧಿಸಿ ತೋರಿಸಿರುವ ಅಜಿತ್

By Nagaraja

ಇಡೀ ದೇಶದ ಚನಲಚಿತ್ರರಂಗವನ್ನು ತೆರೆದು ನೋಡಿದರೆ ಕಾರು, ಬೈಕ್ ಬಗ್ಗೆ ಅನೇಕ ನಟ ನಟಿಯರು ಅತ್ಯಂತ ಹೆಚ್ಚು ಕ್ರೇಜ್ ಹೊಂದಿದ್ದರೂ ನೈಜ ಪರಿಸ್ಥಿತಿಯಲ್ಲಿ ಸಾಹಸ ಪ್ರದರ್ಶನಕ್ಕಿಳಿಯಲು ಹಿಂಜರಿಯುತ್ತಾರೆ. ಚಿತ್ರಗಳಲ್ಲಿ ಡ್ಯೂಪ್‌ಗಳನ್ನು ಬಳಸುವ ಅಂತಹ ನಾಯಕ ನಟರು ಪರದೆ ಮುಂದೆ ದೊಡ್ಡ ಸ್ಟಾರ್‌ಗಳಾಗಿ ಹೊರಹೊಮ್ಮುತ್ತಾರೆ.

ಆದರೆ ಇವೆಲ್ಲದರಿಂದ ವಿಭಿನ್ನವಾಗಿರುವ ದಕ್ಷಿಣ ಭಾರತದ ಹೆಸರಾಂತ ನಟ ತಮಿಳಿನ ಅಜಿತ್, ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದು, ಬಿಡುವಿನ ಸಂದರ್ಭದಲ್ಲಿ ಸಾಹಸ ಬೈಕ್ ಯಾತ್ರೆಯನ್ನು ಇಷ್ಟಪಡುತ್ತಾರೆ. ಸದ್ಯ ಮುಂಬೈನಲ್ಲಿ ಹೊಸ ಸಿನೆಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಅಜಿತ್, ಪುಣೆಯಿಂದ ಚೆನ್ನೈ ವರೆಗೆ ಬೈಕ್ ರೈಡಿಂಗ್ ನಡೆಸಿದ್ದರು.

ಸುರಕ್ಷಿತ ರಸ್ತೆ ಚಾಲನೆ ಸೇರಿದಂತೆ ರಸ್ತೆ ನಿಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂತಹದೊಂದು Rally ಹಮ್ಮಿಕೊಳ್ಳಲಾಗಿತ್ತು. ಅಂತಿಮವಾಗಿ ಇದನ್ನು ಯಶಸ್ವಿಯಾಗಿ ಪೂರೈಸುವಲ್ಲಿ 'ತಲ' ಖ್ಯಾತಿಯ ಅಜಿತ್ ಯಶಸ್ವಿಯಾಗಿದ್ದಾರೆ.

ಸದ್ಯ ಕನ್ನಡ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದಲೂ ಇಂತಹದೊಂದು ಸಾಧನೆಯನ್ನು ನಿರೀಕ್ಷಿಸುತ್ತಿದ್ದಾರೆ. ನಿಮಗೆಲ್ಲರಿಗೂ ತಿಳಿರುವ ಹಾಗೆಯೇ ದರ್ಶನ್ ಸಹ ಸಾಹಸ ಬೈಕ್ ಪ್ರಿಯರಾಗಿದ್ದಾರೆ.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಅಜಿತ್ ತಮ್ಮ ಈ ಸಾಹಸ ಯಾತ್ರೆಗೆ ಬಿಎಂಡಬ್ಲ್ಯು ಕೆ1300ಎಸ್ ದುಬಾರಿ ಬೈಕ್ ಬಳಕೆ ಮಾಡಿದ್ದರು. ಇದರ ಬೆಂಗಳೂರು ಆನ್ ರೋಡ್ ದರ ಬರೋಬ್ಬರಿ 25 ಲಕ್ಷ ರು.ಗಳ ಅಸುಪಾಸಿನಲ್ಲಿದೆ.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಪುಣೆಯಿಂದ ಆರಂಭಿಸಿದ್ದ ಅಜಿತ್ ಬೈಕ್ ರಾಲಿಯು ಬೆಂಗಳೂರು ಹಾದಿಯಾಗಿ ಚೆನ್ನೈ ತಲುಪಿತ್ತು. ಈ ನಡುವೆ ಬೆಂಗಳೂರಿನಲ್ಲಿ ಮೂರು ತಾಸುಗಳಷ್ಟು ಹೊತ್ತುವಿಶ್ರಾಂತಿಯನ್ನು ಪಡೆದುಕೊಂಡಿದ್ದರು.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಕೇವಲ 16 ಗಂಟೆಯೊಳಗೆ ತಮ್ಮ ಈ ಜಾಗೃತಿ ಪಯಣವನ್ನು ಅಜಿತ್ ಪೂರ್ಣಗೊಳಿಸಿದ್ದರು. ಈ ಮೂಲಕ ಒಟ್ಟು 1300 ಕೀ.ಮೀ. ಕ್ರಮಿಕರಿಸಿದ್ದರು.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ನಟ ಅಜಿತ್‌ಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದ್ದಲ್ಲಿ ತುರ್ತು ನೆರವು ನೀಡಲು ವೈದ್ಯಕೀಯ ತಂಡವೊಂದು ಹಿಂಬಾಲಿಸಿತ್ತು.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಈ ಸಾಹಸಿಕ ಪ್ರದರ್ಶನದ ಇನ್ನೊಂದು ಪ್ರಮುಖ ಅಂಶವೆಂದರೆ ನಟ ಅಜಿತ್ ಎಲ್ಲ ರಸ್ತೆ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ಬಂದಿರುವುದು. ಇದು ಅಭಿಮಾನಿಗಳಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಹಾಗೆಯೇ ರಸ್ತೆ ಬದಿಗಳಲ್ಲಿರುವ ದಾಬಾಗಳಲ್ಲಿ ಸಿಗುವ ರೋಟಿ ಮೂಲಕವೇ ತಮ್ಮ ಹಸಿವನ್ನು ನೀಗಿಸಿಕೊಂಡಿದ್ದರು.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಯಶಸ್ವಿ ಪಯಣದ ಬಳಿಕ ಪ್ರತಿಕ್ರಿಯಿಸಿರುವ ಅಜಿತ್, ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಬೈಕ್ ಪಯಣ ನೆರವಾಗುತ್ತಿದ್ದು, ಇದು ಒಂಥರ ಧ್ಯಾನ ಮಾಡಿದ್ದಂತೆ ಎಂದಿದ್ದಾರೆ.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಅಜಿತ್ ಅವರ ಈ ದುಬಾರಿ ಕೆ1300ಎಸ್ ಬೈಕ್‌ನಲ್ಲಿ ಬ್ಲೂಟೂತ್, ಕ್ಯಾಮೆರಾಗಳಂತಹ ಸೇವೆ ಲಭ್ಯವಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಜಿತ್ ಬೆಂಗಳೂರಿನಿಂದ ಚೆನ್ನೈ ವರೆಗೆ ಬೈಕ್ ರೈಡಿಂಗ್ ಹಮ್ಮಿಕೊಂಡಿದ್ದರು. ಸದ್ಯ ಅವರಿಗಂತೂ ಬೈಕ್ ರೈಡಿಂಗ್ ಹವ್ಯಾಸವಾಗಿಬಿಟ್ಟಿದೆ.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಅತ್ಯುತ್ತಮ ಸ್ಪೋರ್ಟ್ಸ್ ಬೈಕ್‌ಗಳ ಪೈಕಿ ಒಂದಾಗಿರುವ ಬಿಎಂಡಬ್ಲ್ಯು ಕೆ ಸಿರೀಸ್, ಇನ್‌ಲೈನ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಜಾಗತಿಕವಾಗಿ ಹೆಚ್ಚು ಖ್ಯಾತಿ ಪಡೆದಿರುವ ಇದು ಫೇರ್ಡ್ ಬೈಕ್ ವಿಭಾಗದಲ್ಲಿ ಗುರುತಿಸಿಕೊಂಡಿದೆ. ಇದು ನಿರ್ವಹಣೆ, ಹ್ಯಾಂಡ್ಲಿಂಗ್ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.

ಪುಣೆ ಟು ಬೆಂಗಳೂರು ಟು ಚೆನ್ನೈ ಅಜಿತ್ ರೈಡಿಂಗ್

ಅಂದ ಹಾಗೆ ತಿಂಗಳುಗಳ ಹಿಂದೆಯಷ್ಟೇ 25 ಲಕ್ಷ ರು. ಬೆಲೆಬಾಳುವ ದುಬಾರಿ ಎಪ್ರಿಲಿಯಾ ಬೈಕನ್ನು ಅಜಿತ್ ಖರೀದಿಸಿದ್ದರು.

Most Read Articles

Kannada
English summary
Ajith was on a road trip again and this time, he rode his bike from Pune to Chennai.
Story first published: Thursday, October 17, 2013, 14:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X