ಅಮೆರಿಕದಲ್ಲಿ ವಿಮಾನಗಳಿಗೂ ಸ್ಮಶಾನ..?

By Nagaraja

ಸ್ಮಶಾನ ಎಂಬ ಪದ ಕೇಳಿದಾಕ್ಷಣ ನಿಮ್ಮಲ್ಲಿ ಭಯಭೀತಿ ಮೂಡಬಹುದು. ಇದೇನಾಪ್ಪಾ ವಿಮಾನಗಳಿಗೂ ಸ್ಮಶಾನ ಇರುತ್ತಾ? ಹೌದು, ನೀವಿದನ್ನು ನಂಬಲೇಬೇಕು. ವಿಶ್ವದ ದೊಡ್ಡಣ್ಣ ಎಂದೇ ಬಣ್ಣಿಸಲ್ಪಟ್ಟಿರುವ ಅಮೆರಿಕದಲ್ಲಿ ವಿಮಾನಗಳ ನಿರ್ವಹಣೆ ಹಾಗೂ ಪುನಶ್ಚೇತನ ಕಾರ್ಯಕ್ಕಾಗಿ ಕೇಂದ್ರವೊಂದನ್ನು ಬಹಳ ಹಿಂದೆಯೇ ತೆರೆಯಲಾಗಿದೆ. ಇದು ವಿಮಾನಗಳ ಸ್ಮಶಾನ ( boneyard) ಎಂದೇ ಜನಪ್ರಿಯವಾಗಿದೆ.

ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು

ಈ ಕೇಂದ್ರವನ್ನು ಸಂಕ್ಷಿಪ್ತವಾಗಿ ಅಮಾರ್ಮ್ (AMARG) ಎಂದು ಗುರುತಿಸಬಹುದು. ಇದರ ಪೂರ್ಣ ರೂಪ 309ನೇ ಏರೋಸ್ಪೇಸ್ ನಿರ್ವಹಣೆ ಮತ್ತು ಪುನಶ್ಚೇತನ ಗ್ರೂಪ್ (ಅಮಾರ್ಗ್) ಎಂದಾಗಿದೆ. ಅಮೆರಿಕದ ಟಸ್ಕನ್ ನಗರದ ಅರಿಜೋನಾದಲ್ಲಿ ವಿಶಾಲವಾಗಿ ಹರಡಿರುವ ಈ ಕೇಂದ್ರವು ಅಮೆರಿಕ ವಾಯು ಸೇನೆ ಮೆಟಿರಿಯಲ್ ಕಮಾಂಡ್ ಭಾಗವಾಗಿದೆ.

ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಈ ಚಿತ್ರಗಳನ್ನು ನೋಡಿದಾಗಲೇ ಅಮೆರಿಕ ಯಾಕೆ ಯುದ್ಧ ವಿಮಾನಗಳ ಶಕ್ತಿಯಲ್ಲಿ ಇಡೀ ವಿಶ್ವದಲ್ಲೇ ಬಲಿಷ್ಠವಾಗಿದೆ ಎಂಬುದನ್ನು ನೀವು ಮನಗಾಣಬಹುದು. ಡೇವಿಸ್ ಮೋಂಥಾನ್ (Davis-Monthan) ವಾಯು ನೆಲೆಯಲ್ಲಿ ಸ್ಥಿತಗೊಂಡಿರುವ ಈ ಕೇಂದ್ರದಲ್ಲಿ ಅಮೆರಿಕ ಸೇನೆಯ ಯುದ್ಧ ವಿಮಾನಗಳ ನಿರ್ವಹಣೆ ನಡೆಯುತ್ತದೆ.

ಚಿತ್ರ ಕೃಪೆ: untoldvalor blogspot
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅಮೆರಿಕ ಸೇನೆಗೆ ಸೇರಿರುವ ವಾಯುಪಡೆ, ನೌಕಾದಳ, ಮರೈನ್, ಕೋಸ್ಟ್ ಗಾರ್ಡ್, ಭೂಸೇನೆ ಮತ್ತು ಇತರ ರಾಷ್ಟ್ರೀಯ ಏಜೆನ್ಸಿಗೆ ಸೇರಿದ ನಿವೃತ್ತಿ ಹೊಂದಿದ ವಿಮಾನಗಳು ಇಲ್ಲಿ ಚಿರಕಾಲ ವಿಶ್ರಾಂತಿ ಪಡೆಯುತ್ತದೆ.

ಚಿತ್ರ ಕೃಪೆ: untoldvalor blogspot
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅನೇಕ ವರ್ಷಗಳ ನಿರಂತರ ಸೇವೆಯ ಬಳಿಕ ಯುದ್ಧ ವಿಮಾನಗಳು ಹಳೆಯದಾಗುವುದು ಅಥವಾ ಕೇಡು ಸಂಭವಿಸುವುದು ಸಾಮಾನ್ಯವಾಗಿದೆ. ಇಂತಹ ವಿಮಾನಗಳ ನಿರ್ವಹಣೆಗಾಗಿ ಅಮೆರಿಕ ಪೂರ್ವ ಯೋಜಿತ ಕೇಂದ್ರ ಸ್ಥಾಪಿಸಿರುವುದು ನಿಜಕ್ಕೂ ಶ್ಲಾಘನೀಯವೆನಿಸಿದೆ.

ಚಿತ್ರ ಕೃಪೆ: untoldvalor blogspot
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ನಿಮ್ಮ ಮಾಹಿತಿಗಾಗಿ ಅಮಾರ್ಗ್ ನಿರ್ವಹಣೆ ಹಾಗೂ ಪುನಶ್ಚೇತನ ಕೇಂದ್ರದಲ್ಲಿ 4,200ರಷ್ಟು ಯುದ್ಧ ವಿಮಾನಗಳ ಆರೈಕೆ ಮಾಡುತ್ತಿದೆ. ಈ ಮೂಲಕ ಜಗತ್ತಿನಲ್ಲೇ ಅತಿ ದೊಡ್ಡ ವಿಮಾನ ಸಂಗ್ರಹ ಹಾಗೂ ಸಂರಕ್ಷಣಾ ಕೇಂದ್ರವೆನಿಸಿಕೊಂಡಿದೆ.

ಚಿತ್ರ ಕೃಪೆ: untoldvalor blogspot
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ವಿಶೇಷವೆಂದರೆ ಈ ಮಿಲಿಟರಿ ಯುದ್ಧ ವಿಮಾನ ಶೇಖರಣಾ ಹಾಗೂ ವಿಲೇವಾರಿ ಕೇಂದ್ರದಲ್ಲಿ ಸೇನಾ ಉಪಕರಣಗಳ ನಿರ್ವಹಣೆ ಸಹ ನಡೆಯುತ್ತದೆ. ಈ ಮೂಲಕ ತೆರಿಗೆ ಉಳಿತಾಯ ಮಾಡುವ ಪ್ರಕ್ರಿಯೆಯನ್ನು ಅತ್ಯಂತ ಪ್ರಭಾವತ್ಮಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಚಿತ್ರ ಕೃಪೆ: untoldvalor blogspot
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

1946ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಈ ಕೇಂದ್ರದಲ್ಲಿ ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ವ್ಯವಸ್ಥಿತವಾಗಿ ನಿರ್ವಹಣೆ ಕಾರ್ಯ ಜರಗುತ್ತಿದೆ.

ಚಿತ್ರ ಕೃಪೆ: untoldvalor blogspot
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅಮಾರ್ಗ್‌ನಲ್ಲಿ ವಿಮಾನಗಳ ಶೇಖರಣೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇವುಗಳು ದೀರ್ಘಾವದಿ, ಬಿಡಿಭಾಗ ಪುನರ್ವಶ, ಫ್ಲೈಯಿಂಗ್ ಹೋಲ್ಡ್ ಮತ್ತು ಅಮೆರಿಕ ರಕ್ಷಣಾ ವಿಭಾಗದ ಹೆಚ್ಚುವರಿ ಬಳಕೆಗಳೆಂದು ವಿಂಗಡಿಸಲಾಗಿದೆ.

ಚಿತ್ರ ಕೃಪೆ: untoldvalor blogspot
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅಮಾರ್ಗ್ ಕೇಂದ್ರದಲ್ಲಿ ಗರಿಷ್ಠ ಭದ್ರತೆಯನ್ನು ಒದಗಿಸಲಾಗಿದೆ. ಆಧುನಿಕ ದಿನಗಳಲ್ಲಿ ಬಾಲಿವುಡ್ ಚಿತ್ರಗಳ ಕೇಂದ್ರ ಬಿಂದು ಕೂಡಾ ಆಗಿದೆ. ಇಲ್ಲಿ ಈಗಾಗಲೇ ಅನೇಕ ಬಾಲಿವುಡ್ ಚಿತ್ರಗಳ ಚಿತ್ರಿಕರಣ ನಡೆದಿದೆ. ಇವುಗಳಲ್ಲಿ ಇತ್ತೀಚೆಗೆ ತೆಗೆದ 'ಟ್ರಾನ್ಸ್‌ಫಾರ್ಮರ್ಸ್: ರಿವೆಂಜ್ ಆಫ್ ದಿ ಫಾಲೆನ್' ಸೇರಿದೆ.

ಚಿತ್ರ ಕೃಪೆ: untoldvalor blogspot
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

309ನೇ ಏರೋಸ್ಪೇಸ್ ನಿರ್ವಹಣೆ ಮತ್ತು ಪುನಶ್ಚೇತನ ಗ್ರೂಪ್

ಚಿತ್ರ ಕೃಪೆ: ವಿಕಿಪೀಡಿಯಾ

ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅಮಾರ್ಗ್ ಕೇಂದ್ರದ ಮೇಲೊಂದು ಮೈಮಾನಿಕ ನೋಟ (1992ನೇ ಇಸವಿ)

ಚಿತ್ರ ಕೃಪೆ: ವಿಕಿಪೀಡಿಯಾ
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅಮಾರ್ಗ್ ಕೇಂದ್ರದಲ್ಲಿ ಬೋಯಿಂಗ್ 707 ವಿಶ್ರಾಂತಿಯಲ್ಲಿ

ಚಿತ್ರ ಕೃಪೆ: ವಿಕಿಪೀಡಿಯಾ

ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅಮಾರ್ಗ್ ಕೇಂದ್ರದಲ್ಲಿ ಯುಎಚ್-1 ಇರೊಕ್ಯೂಸ್ ಹೆಲಿಕಾಪ್ಟರ್ ಮತ್ತು ಎಫ್ 4 ಫಾಟಂ ಫೈಟರ್ಸ್

ಚಿತ್ರ ಕೃಪೆ: ವಿಕಿಪೀಡಿಯಾ
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅಮಾರ್ಗ್ ಸ್ಟೋರೆಜ್‌ನಲ್ಲಿ ಬಿ1 ಬಾಂಬರ್ ಯುದ್ಧ ವಿಮಾನ

ಚಿತ್ರ ಕೃಪೆ: ವಿಕಿಪೀಡಿಯಾ
ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ಮತ್ತು ಪುನಶ್ಚೇತನ ಕೇಂದ್ರ

ಅಮಾರ್ಗ್ ಸ್ಟೋರೇಜ್‌ನಲ್ಲಿ ನೌಕಾದಳ ಹಾಗೂ ಮರೈನ್ ಪಡೆಯ ಮೆಕ್‌ಡೋನಾಲ್ಡ್ ಡಗ್ಲಾಸ್ ಎಫ್4 ಫಾಟಂ II ಫೈಟರ್

ಚಿತ್ರ ಕೃಪೆ: ವಿಕಿಪೀಡಿಯಾ

AMARG - ವೀಡಿಯೋ ವೀಕ್ಷಿಸಿ

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X