ಅಲ್ಟಿಮೇಟ್ ರೈಡಿಂಗ್ ವಂಡರ್ - ಕೂರ್ಗ್‌

Posted By:

ಕೆಲವು ದಿನಗಳ ಹಿಂದೆಯಷ್ಟೇ ಪ್ರಪಂಚದ ಏಳು ಅದ್ಭುತಗಳನ್ನೇ ಮೀರಿಸಿದ ರಸ್ತೆಗಳನ್ನು ಪರಿಚಯಿಸಿದ್ದೆವು. ನಿಮ್ಮ ಮಾಹಿತಿಗಾಗಿ, ಈ ಪೈಕಿ ಭಾರತೀಯ ರಸ್ತೆಗಳನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿತ್ತು. ಯಾಕೆಂದರೆ ನಮ್ಮ ಭವ್ಯ ಭಾರತದ ಅತ್ಯಾಕರ್ಷಕ ರಸ್ತೆಗಳನ್ನು ವೈವಿಧ್ಯಮಯ ಲೇಖನದಲ್ಲಿ ಪರಿಚಯಿಸುವುದು ನಮ್ಮ ಇರಾದೆಯಾಗಿತ್ತು.

ಇದರಂತೆ ಮಾತು ಪಾಲಿಸಿಲಿರುವ ಡ್ರೈವ್ ಸ್ಪಾರ್ಕ್ ತಂಡವು ದೇಶದ ಅತಿ ಶ್ರೇಷ್ಠ ಹಾದಿಗಳನ್ನು ನಿಮಗಾಗಿ ಪರಿಚಯಸುತ್ತಿದ್ದೇವೆ. ದೇಶದಲ್ಲೇ ಇದ್ದುಕೊಂಡು ಇಂತಹ ಮನಮೋಹಕ ದೃಶ್ಯಗಳ ಬಗ್ಗೆ ತಿಳಿಯದವರು ಎಷ್ಟೋ ಮಂದಿ ಇದ್ದಾರೆ.

ಅಂತರವರಿಗೆ ದೇಶದ ಅತಿ ಶ್ರೇಷ್ಠ ರೋಡ್‌ಗಳ ಬಗ್ಗೆ ತಿಳಿಯುವ ಉತ್ತಮ ಅವಕಾಶವೆನಿಸಲಿದೆ. ಈ ಪೈಕಿ ಕೂರ್ಗ್‌ನಿಂದ (ಕೊಡಗು) ಕೇರಳಕ್ಕೆ ಹಾದು ಹೋಗುವ ಹಾದಿಯು ವಿಶ್ವಶ್ರೇಷ್ಠ ರಸ್ತೆಯೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಇದಕ್ಕೂ ಸಂಶೋಧಕರು ಕಾರಣವನ್ನು ಕೊಡುತ್ತಾರೆ.

ಯಾಕೆಂದರೆ ಕೂರ್ಗ್ ಹಾದಿಯಾಗಿ ಕೇರಳದ ಮುನ್ನಾರ್ ದಾಟಿದ ಈ ರೋಡ್ ತಮಿಳುನಾಡಿನ ಊಟಿ ಸೇರಿಕೊಳ್ಳುತ್ತದೆ. ಈ ಪ್ರದೇಶದಲ್ಲಿ ಬೈಕ್ ಪ್ರಿಯರನ್ನು ಸೆಳೆಯುವ ಅತ್ಯಾಕರ್ಷಕ ಪ್ರಕೃತಿ ವೈಭವ ಅಡಗಿದೆ. ಆಕರ್ಷಕ ಕಾಫಿ ತೋಟ, ಮಲೆನಾಡು ಪ್ರದೇಶ ಹಾಗೂ ಹಚ್ಚಹಸಿರಿನ ನಾಡು ಎಂತವರನ್ನು ಕೈಬೀಸಿ ಕರೆಯುತ್ತಿದೆ. ಇವೆಲ್ಲದರ ನಡುವೆ ಇಲ್ಲಿನ ತಂಪಾದ ಹಮಾಮಾನವು ಮೆಚ್ಚುಗೆಗೆ ಪಾತ್ರವಾಗಿದೆ.

ಹಾಗಿರುವಾಗ ದೇಶದ ಕಾರು ಹಾಗೂ ಬೈಕ್ ಪ್ರೇಮಿಗಳಿಗೆ ದೇಶದ ಶ್ರೇಷ್ಠ ಹಾದಿಗಳನ್ನು ಡ್ರೈವ್ ಸ್ಪಾರ್ಕ್ ಪರಿಚಯಿಸಲಿದ್ದೇವೆ. ಖಂಡಿತವಾಗಿಯೂ ಈ ಲೇಖನವನ್ನು ವೀಕ್ಷಿಸಿದಾಗ ಪ್ರಪಂಚದ ಪ್ರಕೃತಿ ರಮನೀಯ ರಸ್ತೆಗಳು ನಮ್ಮ ದೇಶದಲ್ಲೇ ಇದೆ ಎಂಬುದನ್ನು ಮನಗಾನಲಿದ್ದೀರಿ.

Amazing Indian Roads

ದೇಶದ ಅತಿಶ್ರೇಷ್ಠ ರಸ್ತೆಗಳು ವಿವಿಧ ಭೂಪ್ರದೇಶ, ಹಮಾಮಾನ ವೈಪರೀತದಿಂದ ಕೂಡಿದ್ದು, ಸಾಹಸಿ ಪ್ರಿಯರನ್ನು ಸೆಳೆಯುತ್ತಿದೆ. ಫೋಟೊ ಫೀಚರ್ ಕ್ಕಿಕ್ಕಿಸುತ್ತಾ ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿರಿ...

Manali To Leh

Manali To Leh

ಭಾರತದಲ್ಲಿ ಕಾಣಿಸಿಗುವ ರಸ್ತೆಗಳ ಪೈಕಿ ದೇಶದ ಹೆಮ್ಮೆಯ ಪ್ರತೀಕವಾಗಿರುವ ಹಿಮಾಲಯದಲ್ಲಿ ಅತಿ ವರ್ಣೀಯ ಅದೇ ಹೊತ್ತಿಗೆ ಅಷ್ಟೇ ಅಪಾಯಕಾರಿ ರಸ್ತೆ ಹಾದು ಹೋಗುತ್ತಿದೆ. ಹಿಮಪಾತದ ನಡುವೆ ಮನಾಲಿಯಿಂದ ಲೇಹ್ ವರೆಗಿನ ರೈಡಿಂಗ್ ಸಾಹಸಿಗರ ಫೇವರಿಟ್ ತಾಣವಾಗಿದೆ.

Great Rann of Kutch

Great Rann of Kutch

ಇನ್ನು ಹಿಮಾಲಯದಿಂದ ನೇರವಾಗಿ ಪಶ್ಚಿಮಕ್ಕೆ ಹಾದಿ ಹಿಡಿದಾಗ ನಮಗೆ 'ಗ್ರೇಟ್ ರಣ್ ಆಫ್ ಕಚ್' ಕಾಣಸಿಗುತ್ತದೆ. ರಣ್ ಆಫ್ ಕಚ್‌ನ ತೆರೆದಿಟ್ಟ ಈ ಶ್ವೇತ ಮರುಭೂಮಿಯು ಎಂತವರ ಉಸಿರಾಟವನ್ನು ಬಿಗಿಯಾಗಿರಿಸಲಿದೆ. ನೇರವಾದ ಡ್ರೈವಿಂಗ್‌ಗೆ ಕಾರಣವಾಗಿರುವ ರಣ್ ಆಫ್ ಕಚ್‌ನಲ್ಲಿ ಜೀವನದಲ್ಲಿ ಒಮ್ಮೆಯಾದರೂ ಡ್ರೈವಿಂಗ್ ಮಾಡಬೇಕೆಂಬ ಹಂಬಲ ಹುಟ್ಟತ್ತದೆ. ಇಲ್ಲಿನ ಬಿರುಕು ಬಿಟ್ಟ ಭೂಮಿ ಸಾಹಸಿ ಚಾಲಕರಿಗೆ ಅತ್ಯಮೋಘ ಅನುಭವ ನೀಡುತ್ತದೆ.

Pamban Bridge - Rameshwaram

Pamban Bridge - Rameshwaram

ಇದು ದಕ್ಷಿಣ ಭಾರತದಲ್ಲಿ ಕಾಣಿಸಿಗುವ ಅತಿ ಮನೋಹರ ಪಂಬನ್ ಸೇತುವೆಯಾಗಿದೆ. 100 ವರ್ಷಗಳ ಹಿಂದೆ ಅಂದರೆ 1914ನೇ ಇಸವಿಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಇಲ್ಲೇ ಪಕ್ಕದಲ್ಲಿ ರೈಲ್ವೇ ಹಳಿ ಹಾದು ಹೋಗುತ್ತಿದೆ. ಎರಡೂ ಕಿಲೋಮೀಟರಿಗೂ ಹೆಚ್ಚಿನ ಉದ್ದದ ಸೇತುವೆ ಸಮುದ್ರದಲ್ಲಿ ಸಾಗಿ ರಾಮೇಶ್ವರಕ್ಕೆ ಸಂಪರ್ಕ ಕಲ್ಪಿಸುತ್ತದೆ.

Sela Pass – Arunachal Pradesh

Sela Pass – Arunachal Pradesh

ಇನ್ನು ದೇಶದ ಈಶಾನ್ಯ ಭಾಗದಲ್ಲಿರುವ ಅರುಣಾಚಲ ಪ್ರದೇಶದ ಸೇಲಾ ಪಾಸ್ ಕಣಿವೆ ಹಾದಿ ತುಂಬಾನೇ ಸವಾಲಿನಿಂದ ಕೂಡಿದ್ದಾಗಿದೆ. ಹಿಮಪಾತದ ನಡುವೆ ಇಲ್ಲಿ ಅತಿಯಾದ ಯೂ ಟರ್ನ್‌ಗಳು ಅಪಾಯವನ್ನು ಆಹ್ವಾನಿಸುತ್ತದೆ. ಸಮುದ್ರ ಮಟ್ಟಕ್ಕಿಂತ 4,170 ಮೀಟರ್ ಎತ್ತರದಲ್ಲಿರುವ ಭೂಪ್ರದೇಶದ ಚಳಿಗಾಲದ ತಾಪಮಾನವು 10 ಡಿಗ್ರಿಗೂ ಕಡಿಮೆಯಾಗಿರುತ್ತದೆ.

Coorg To Munnar Via Ooty

Coorg To Munnar Via Ooty

ಇನ್ನು ಮತ್ತೆ ದಕ್ಷಿಣಕ್ಕೆ ಬಂದಾಗ ನಮ್ಮ ಕರ್ನಾಟಕದ ಕೂರ್ಗ್‌ನಿಂದ ಹಿಡಿದು ಕೇರಳದ ವಯನಾಡ್ ಸಾಗಿ ತಮಿಳುನಾಡಿನ ಊಟಿ ಹಾದಿಯು ಅತ್ಯಂತ ಮನಮೋಹಕವಾಗಿದೆ. 2011ನೇ ಸಾಲಿನ ವಿಶ್ವದ 'ಅಲ್ಟಿಮೇಟ್ ರೈಡಿಂಗ್ ವಂಡರ್' ಆಗಿ ಈ ರಸ್ತೆಗೆ ಮಾನ್ಯತೆ ಲಭಿಸಿತ್ತು. ಇಲ್ಲಿನ ಆಕರ್ಷಕ ಕಾಫಿ ತೋಟ, ಮಲೆನಾಡು ಪ್ರದೇಶ ಹಾಗೂ ಹಸಿರು ತೋರಣವು ಸಾಹಸಿ ಚಾಲಕರ ಫೇವರಿಟ್ ಎನಿಸಿಕೊಂಡಿದೆ.

Which One Have You Seen?

Which One Have You Seen?

ಇದೀಗ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿರಿ. ಹಾಗೆಯೇ ನಿಮಗೆ ತಿಳಿದ ಶ್ರೇಷ್ಠ ಡ್ರೈವಿಂಗ್ ರೂಟ್‌ಗಳ ಬಗ್ಗೆ ಮಾಹಿತಿಯನ್ನು ಪಸರಿಸಿರಿ...

ಇವನ್ನೂ ಓದಿ: ಪ್ರಪಂಚದ 7 ಅದ್ಭುತಗಳನ್ನು ಮೀರಿಸಿದ ರಸ್ತೆಗಳಿವುಇವನ್ನೂ ಓದಿ: ಪ್ರಪಂಚದ 7 ಅಧ್ಬುತಗಳನ್ನು ಮೀರಿಸಿದ ರಸ್ತೆಗಳಿವು

English summary
India is the seventh largest country in the world and is wide network of roads. With a geography that is by for the most diverse in a single country Indian roads pass through a variety of terrain, weather and landscapes. Here are some of the most amazing and beautiful roads from India.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more