ವೈಟ್ ಹೌಸ್ ಬಾಸ್ ಡೋನಾಲ್ಡ್ ಟ್ರಂಪ್ ಕಾರು ಪ್ರೇಮ ಪುರಾಣ!

Written By:

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಜಯಭೇರಿ ಮೊಳಗಿಸುವ ಮೂಲಕ ಸಂಯುಕ್ತ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್, ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಲೈಂಗಿಕ ದೌರ್ಜನ್ಯ ಸೇರಿದಂತೆ ಅನೇಕ ವಿವಾದತ್ಮಾಕ ಹೇಳಿಕೆಗಳಿಂದಲೇ ಪರ-ವಿರೋಧ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿರುವ ಟ್ರಂಪ್, ಎಲ್ಲ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳನ್ನು ತಲೆಕೆಳಗಾಗಿಸುವ ಮೂಲಕ ವೈಟ್ ಹೌಸ್ ಬಾಸ್ ಆಗಿ ಹೊರಹೊಮ್ಮಿದ್ದರು. ಎಪ್ಪತ್ತರ ಹರೆಯದಲ್ಲಿ ಅಮೆರಿಕ ಅಧ್ಯಕ್ಷ ಹುದ್ದೆಗೇರುತ್ತಿರುವ ಅತಿ ಹಿರಿಯ ವ್ಯಕ್ತಿ ಎಂಬ ಗೌರವಕ್ಕೂ ಪಾತ್ರವಾಗುತ್ತಿರುವ ಡೋನಾಲ್ಡ್ ಟ್ರಂಪ್, ತಮ್ಮ ಶೋಕಿ ಜೀವನಕ್ಕೆ ಕಿಂಚಿತ್ತೂ ಕಮ್ಮಿ ಮಾಡಲಿಲ್ಲ. ನೂತನ ಅಧ್ಯಕ್ಷರು ತಮ್ಮ ಜೊತೆ ಶ್ವೇತ ಭವನಕ್ಕೆ ಸಾಗಿಸಲಿರುವ ಕೆಲವು ಅತ್ಯಾಕರ್ಷಕ ಕಾರು ಹಾಗೂ ಅವುಗಳ ಪ್ರೇಮ ಪುರಾಣವನ್ನು ಇಲ್ಲಿ ಬಹಿರಂಗಪಡಿಸಲಿದ್ದೇವೆ.

ಮರ್ಸಿಡಿಸ್ ಎಸ್ ಎಲ್ ಆರ್

ಮರ್ಸಿಡಿಸ್ ಎಸ್ ಎಲ್ ಆರ್

ಮರ್ಸಿಡಿಸ್ ಬೆಂಝ್ ಸಂಸ್ಥೆಗೆ ಹೊಸ ತಿರುವು ನೀಡಿರುವ ಎಸ್ ಎಲ್ ಆರ್ ಕಾರನ್ನು 2003ನೇ ಇಸವಿಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದನ್ನು ಮೆಕ್ ಲ್ಯಾರೆನ್ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಲಾಗಿತ್ತು.

ವೈಟ್ ಹೌಸ್ ಬಾಸ್ ಡೋನಾಲ್ಡ್ ಟ್ರಂಪ್ ಕಾರು ಪ್ರೇಮ ಪುರಾಣ!

ಇದಕ್ಕೆ 300 ಎಸ್ ಎಲ್ ನಿಂದ ಸ್ಪೂರ್ತಿ ಪಡೆದ ಗುಲ್ ವಿಂಗ್ ಡೋರ್ ಗಳನ್ನು ಜೋಡಣೆ ಮಾಡಲಾಗಿದೆ. ಕಾರಿನಡಿಯಲ್ಲಿರುವ ಶಕ್ತಿಶಾಲಿ 5.4 ಲೀಟರ್ ವಿ8 ಎಂಜಿನ್ 780 ಎನ್ ಎಂ ತಿರುಗುಬಲದಲ್ಲಿ 617 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ ರೇಸ್ ಕಾರು ಟ್ರಂಪ್ ಪಾಲಿಗೆ ಅತಿ ಹೆಚ್ಚು ಪ್ರಿಯವೆನಿಸಿದೆ.

ರೋಲ್ಸ್ ರಾಯ್ಸ್ ಫಾಟಂ

ರೋಲ್ಸ್ ರಾಯ್ಸ್ ಫಾಟಂ

ರೋಲ್ಸ್ ರಾಯ್ಸ್ ಕಾರು ಇಲ್ಲದೆ ಯಾವುದೇ ಶ್ರೀಮಂತ ವ್ಯಕ್ತಿಯ ಕಾರು ಕ್ಯಾರೇಜ್ ಪರಿಪೂರ್ಣವಾಗಲಾರದು. ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೋನಾಲ್ಡ್ ಟ್ರಂಪ್ ಸಹ ಬ್ರಿಟನ್ ನ ಈ ಐಕಾನಿಕ್ ಕ್ಲಾಸಿಕ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ವೈಟ್ ಹೌಸ್ ಬಾಸ್ ಡೋನಾಲ್ಡ್ ಟ್ರಂಪ್ ಕಾರು ಪ್ರೇಮ ಪುರಾಣ!

ಐಷಾರಾಮಿ ಸೌಲಭ್ಯಗಳ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗದ ರೋಲ್ಸ್ ರಾಯ್ಸ್ ಫಾಟಂ ನಲ್ಲಿರುವ 6.75 ಲೀಟರ್ ವಿ12 ಎಂಜಿನ್ 720 ಎನ್ ಎಂ ತಿರುಗುಬಲದಲ್ಲಿ 453 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಕೇವಲ ಆರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಗಳಷ್ಟು ವೇಗವರ್ಧಿಸಲು ಸಮರ್ಥವೆನಿಸಿಕೊಂಡಿದೆ.

ಲಂಬೋರ್ಗಿನಿ ಡಯಾಬ್ಲೊ ವಿಟಿ

ಲಂಬೋರ್ಗಿನಿ ಡಯಾಬ್ಲೊ ವಿಟಿ

2000ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಲಂಬೋರ್ಗಿನಿ ಡಯಾಬ್ಲೊ ವಿಟಿ ವಿಶೇಷ ಆವೃತ್ತಿಯನ್ನು ಟ್ರಂಪ್ ತಮ್ಮದಾಗಿಸಿಕೊಂಡಿದ್ದರು. ಇದು ಕೌಂಟಕ್ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡಿತ್ತು.

ವೈಟ್ ಹೌಸ್ ಬಾಸ್ ಡೋನಾಲ್ಡ್ ಟ್ರಂಪ್ ಕಾರು ಪ್ರೇಮ ಪುರಾಣ!

ಆಧುನಿಕ ಲಂಬೋ ಕಾರುಗಳಿಗಿಂತಲೂ ವಿಭಿನ್ನವಾಗಿರುವ ಡಯಾಬ್ಲೊ ಓಡಿಸಲು ಹೆಚ್ಚು ಕೌಶಲ್ಯದ ಅಗತ್ಯವಿದೆ. ಅದೇ ಕಾರಣಕ್ಕಾಗಿ ವಿಶಿಷ್ಟ ಸ್ವಾಭಾವದ ಟ್ರಂಪ್ ಪಾಲಿಗೆ ಫೇವರಿಟ್ ಎನಿಸಿಕೊಂಡಿದೆ. ಇದರಲ್ಲಿರುವ 6,0 ಲೀಟರ್ ವಿ12 ಲೀಟರ್ ಎಂಜಿನ್ 620 ಎನ್ ಎಂ ತಿರುಗುಬಲದಲ್ಲಿ 543 ಅಶ್ವಶಕ್ತಿ ಉತ್ಪಾದಿಸಲಿದೆ.

ರೋಲ್ಸ್ ರಾಯ್ಸ್ ಸಿಲ್ವರ್ ಕ್ಲೌಡ್

ರೋಲ್ಸ್ ರಾಯ್ಸ್ ಸಿಲ್ವರ್ ಕ್ಲೌಡ್

ಅತಿ ವಿರಳ ಹಾಗೂ ಅತಿ ಹಳೆಯದಾದ ರೋಲ್ಸ್ ರಾಯ್ಸ್ ಸಿಲ್ವರ್ ಕ್ಲೌಡ್ ಕಾರನ್ನು ತಮ್ಮ ಬಳಿ ಇಟ್ಟುಕೊಳ್ಳುವ ಮೂಲಕ ಟ್ರಂಪ್ ತಾವು ಓರ್ವ ವಿಂಟೇಜ್ ಕಾರು ಪ್ರೇಮಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮೂರು ತಲೆಮಾರಿನಲ್ಲಾಗಿ ಆಗಮಿಸಿರುವ ರೋಲ್ಸ್ ರಾಯ್ಸ್ ಸಿಲ್ವರ್ ಕ್ಲೌಡ್ ಕಾರು 1955ನೇ ಇಸವಿಯಿಂದ 1966ರ ಅವಧಿಯಲ್ಲಿ ನಿರ್ಮಾಣಗೊಂಡಿತ್ತು.

ಹಳೆಯ ಕ್ಲಾಸಿಕ್ ಶೈಲಿಯ ರೋಲ್ಸ್ ರಾಯ್ಸ್ ಸಿಲ್ವರ್ ಕ್ಲೌಡ್ ಮೊದಲನೇ ಹಾಗೂ ಎರಡನೇ ತಲೆಮಾರಿನ ಕಾರುಗಳು ಅನುಕ್ರಮವಾಗಿ 4.9 ಲೀಟರ್ ವಿ8 ಮತ್ತು 6.2 ಲೀಟರ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತದೆ. ಅಷ್ಟೇ ಯಾಕೆ ಗಂಟೆಗೆ ಗರಿಷ್ಠ 183 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ಷೆವರ್ಲೆ ಕ್ಯಾಮರೊ

ಷೆವರ್ಲೆ ಕ್ಯಾಮರೊ

2011ನೇ ಇಸವಿಯಲ್ಲಿ ಷೆವರ್ಲೆ ಕ್ಯಾಮರೊ ಸೀಮಿತ ಆವೃತ್ತಿಯ ಕಾರನ್ನು ಅನಾವರಣಗೊಳಿಸಲಾಗಿತ್ತು. 1969ರ ಐಕಾನಿಕ್ ಕ್ಯಾಮರೊ ಪೇಸ್ ಕಾರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕ್ಯಾಮರೊ ಕನ್ವರ್ಟಿಬಲ್ ಇಂಡಿ ಪೇಸ್ ಕಾರನ್ನು ಬಿಡುಗಡೆಗೊಳಿಸಲಾಗಿತ್ತು.

ವೈಟ್ ಹೌಸ್ ಬಾಸ್ ಡೋನಾಲ್ಡ್ ಟ್ರಂಪ್ ಕಾರು ಪ್ರೇಮ ಪುರಾಣ!

ತವರೂರಿನ ಷೆವರ್ಲೆ ಕಾರು ಸಂಸ್ಥೆಯಿಂದ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಟ್ರಂಪ್ ಅವರು ಕ್ಯಾಮರೊ ಕಾರಿನ ಮೇಲೆ ಹೆಚ್ಚಿನ ಒಲವನ್ನು ತೋರಿದ್ದಾರೆ. ಇದರಲ್ಲಿರುವ ವಿ8 ಎಂಜಿನ್ 400 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, ಆರು ಸ್ಪೀಡ್ ಆಟೋ ಗೇರ್ ಬಾಕ್ಸ್ ಇದರಲ್ಲಿದೆ.

ಷೆವರ್ಲೆ ಸಬರ್ಬನ್

ಷೆವರ್ಲೆ ಸಬರ್ಬನ್

ಕೋಟ್ಯಧಿಪತಿಗಳ ಸಾಲಿನಲ್ಲಿ ಸೇರಿಕೊಂಡಿರುವ ಡೋನಾಲ್ಡ್ ಟ್ರಂಪ್ ಕಾರು ಸಂಗ್ರಹಕ್ಕೆ ಯಾವುದೇ ಬರವಿರಲಿಲ್ಲ. ತಮ್ಮ ವಿದಾದತ್ಮಾಕ ಜೀವನದಲ್ಲಿ ಮಿತ್ರರಿಗಿಂತಲೂ ಹೆಚ್ಚು ಶತ್ರುಗಳನ್ನು ಕಟ್ಟಿಕೊಂಡಿರುವ ಟ್ರಂಪ್, ಸುರಕ್ಷಿತ ಪ್ರಯಾಣಕ್ಕಾಗಿ ಕಪ್ಪು ಸುಂದರಿ ಷೆವರ್ಲೆ ಸಬರ್ಬನ್ ವಾಹನವನ್ನು ಆಯ್ಕೆ ಮಾಡಿಕೊಂಡಿದ್ದರು.

ವೈಟ್ ಹೌಸ್ ಬಾಸ್ ಡೋನಾಲ್ಡ್ ಟ್ರಂಪ್ ಕಾರು ಪ್ರೇಮ ಪುರಾಣ!

5.3 ಲೀಟರ್ ವಿ8ನಿಂದ ಆರಂಭಿಸಿ 6.2 ಲೀಟರ್ ವಿ8 ಎಂಜಿನ್ ಆಯ್ಕೆಗಳಲ್ಲೂ ಲಭ್ಯವಿರುವ ಷೆವರ್ಲೆ ಸಬರ್ಬನ್ ಕಾರಿನಲ್ಲಿ ಗರಿಷ್ಠ ಭದ್ರತೆಗೆ ಮನೆ ಹಾಕಲಾಗಿತ್ತು. ಇದು ಒಂದು ರೀತಿಯಿಲ್ಲಿ ಡೋನಾಲ್ಡ್ ಪಾಲಿಗೆ ಟ್ರಂಪ್ ಕಾರ್ಡ್ ಆಗಿ ಹೊರಹೊಮ್ಮಿತ್ತು.

ಕ್ಯಾಡಿಲಾಕ್ ಎಸ್ಕಲೇಡ್

ಕ್ಯಾಡಿಲಾಕ್ ಎಸ್ಕಲೇಡ್

ಟ್ರಂಪ್ ಕಾರು ಸಂಗ್ರಹಾಲಯಕ್ಕೆ ಸೇರಿಕೊಂಡಿರು ತಾಜಾ ಕಾರುಗಳಲ್ಲಿ ಕ್ಯಾಡಿಲಾಕ್ ಎಸ್ಕಲೇಡ್ ಒಂದಾಗಿದೆ. 2014ನೇ ಇಸವಿಯಿಂದ ಮಾರಾಟದಲ್ಲಿರುವ ಈ ಸ್ಟೈಲಿಷ್ ಕಾರನ್ನು ಟ್ರಂಪ್ ತಮ್ಮ ವೈಯಕ್ತಿಕ ಬಯಕೆಗಳಿಗೆ ಅನುಸಾರವಾಗಿ ಖರೀದಿ ಮಾಡಿದ್ದರು.

ವೈಟ್ ಹೌಸ್ ಬಾಸ್ ಡೋನಾಲ್ಡ್ ಟ್ರಂಪ್ ಕಾರು ಪ್ರೇಮ ಪುರಾಣ!

ಇದರಲ್ಲಿರುವ ಅತ್ಯಂತ ಶಕ್ತಿಶಾಲಿ 6.2 ಲೀಟರ್ ವಿ8 ಎಂಜಿನ್ 624 ಎನ್ ಎಂ ತಿರುಗುಬಲದಲ್ಲಿ 420 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಡ್ರೈವರ್ ಸೀಟಿನಲ್ಲಿ ಕುಳಿತು ಟ್ರಂಪ್ ಫೋಸ್ ಕೊಡುತ್ತಿರುವುದು ಹೆಚ್ಚಿನ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಕ್ಯಾಡಿಲಾಕ್ ಲಿಮೊ

ಕ್ಯಾಡಿಲಾಕ್ ಲಿಮೊ

ಅಮೆರಿಕ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದವರಿಗೆ ಶ್ವೇತ ಭವನದಲ್ಲಿ ಅಧಿಕೃತ ಲಿಮೊಸಿನ್ ಕಾರು ಕಾದು ಕುಳಿತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ದುಡ್ಡಿನ ವಿಚಾರದಲ್ಲಿ ಆಗಲೇ ಶ್ರೀಮಂತರಾಗಿರುವ ಟ್ರಂಪ್, ವೈಯಕ್ತಿಕ ಬಳಕೆಗಾಗಿ ಆಗಲೇ ಲಿಮೊ ಕಾರನ್ನು ಇಟ್ಟುಕೊಂಡಿದ್ದಾರೆ.

ವೈಟ್ ಹೌಸ್ ಬಾಸ್ ಡೋನಾಲ್ಡ್ ಟ್ರಂಪ್ ಕಾರು ಪ್ರೇಮ ಪುರಾಣ!

1980ರ ದಶಕದ ಅಂತ್ಯದಲ್ಲೇ ಕ್ಯಾಡಿಲಾಕ್ ಲಿಮೊ ಕಾರನ್ನು ಖರೀದಿಸುವ ಮೂಲಕ ಟ್ರಂಪ್ ಎಚ್ಚರಿ ಮೂಡಿಸಿದ್ದರು. ಇದರ ನಿರ್ಮಾಣದಲ್ಲಿ ಗರಿಷ್ಠ ಗುಣಮಟ್ಟದ ಉಪಕರಣಗಳನ್ನು ಬಳಕೆ ಮಾಡಲಾಗಿದೆ.

English summary
American New President Donald Trump's Car Collection
Story first published: Friday, November 11, 2016, 12:41 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more