ಲಗ್ಷುರಿ ಕಾರುಗಳ ಸರದಾರ ಶತಕೋಟ್ಯಾಧಿಪತಿ ಅನಿಲ್ ಅಂಬಾನಿ..!

Written By:

ನಾವು ಅಂಬಾನಿ ಸಹೋದರರ ಬಗೆಗೆ ಮಾತನಾಡುತ್ತಿದ್ರೆ ಥಟ್ ಅಂತಾ ನೆನಪಾಗುವುದು ದೇಶದ ದೈತ್ಯಾಕಾರದ ಕಂಪನಿ ರಿಲಾಯನ್ಸ್ ಗ್ರೂಪ್. ಅದರಲ್ಲೂ ಕಿರಿಯ ಸಹೋದರ ಅನಿಲ್ ಅಂಬಾನಿ ಬಗೆಗೆ ಹೇಳುವುದಾರರೇ ಅವರೊಬ್ಬ ಯಶಸ್ವಿ ಉದ್ಯಮಿ, ಜೊತೆಗೆ ಐಷಾರಾಮಿ ಕಾರುಗಳ ಒಡೆಯ.

ಜನಪ್ರಿಯ ಐಪಿಎಲ್ ತಂಡದ ಮಾಲೀಕರು ಆಗಿರುವ ಅನಿಲ್ ಅಂಬಾನಿ, ಮುಂಬೈನಲ್ಲಿ ಅತ್ಯಂತ ದುಬಾರಿ ಮನೆಯಲ್ಲಿ ವಾಸಿಸುತ್ತಿದ್ದು, ಅವರ ಲಗ್ಷುರಿ ಕಲೆಕ್ಷನ್‌ನಲ್ಲಿ ದುಬಾರಿ ಕಾರುಗಳ ದೊಡ್ಡ ಪಟ್ಟಿಯೇ ಇದೆ. ಅದರಲ್ಲೂ ಲ್ಯಾಂರ್ಬೋಗಿನಿ ಅವರಿಗೆ ಅಚ್ಚುಮೆಚ್ಚು.

ಒತ್ತಡ ಬದುಕಿನಿಂದ ಹೊರಗುಳಿಯಲು ಬಯಸುವ ಉದ್ಯಮಿ ಅನಿಲ್ ಅಂಬಾನಿ ಹೆಚ್ಚಿನ ಸಮಯವನ್ನು ಪತ್ನಿ ಟೀನಾ ಜೊತೆ ಕಳೆಯಲು ಇಷ್ಟ ಪಡ್ತಾರೆ. ಪತ್ನಿ ಜೊತೆ ಸುತ್ತಲು ವೆರೈಟಿ ವೆರೈಟಿ ಕಾರುಗಳನ್ನ ಬಳಸುವ ಅನಿಲ್ ಅಂಬಾನಿಗೆ ಮರ್ಸಿಡಿಸ್ ಬೆಂಝ್ ಮೇಲೆ ಅಪಾರ ಪ್ರೀತಿ.

ಚಿತ್ರ ಕೃಪೆ- ಇಂಡಿಯಾ ಟೈಮ್ಸ್

ಇನ್ನೊಂದು ಇಂಟ್ರಸ್ಟಿಂಗ್ ಸ್ಟೋರಿ ಏನೆಂದ್ರೆ ದುಬಾರಿ ಕಾರುಗಳನ್ನು ಇಷ್ಟ ಪಡುವ ಅನಿಲ್ ಅಂಬಾನಿಗೆ ಯಾವಗಲೂ ಕಾರು ಚಾಲಕರನ್ನು ನೆಚ್ಚಿಕೊಳ್ಳುವುದಿಲ್ಲವಂತೆ. ಮನಸ್ಸಿಗೆ ಬಂದರೆ ಸಾಕು ತಾವೇ ಕಾರು ಚಲಾಯಿಸಿ ಖುಷಿ ಪಡ್ತಾರೆ. ಜೊತೆಗೆ ಮನೆಯಲ್ಲಿ ದೊಡ್ಡದಾದ ಗ್ಯಾರೇಜ್ ಹೊಂದಿದ್ದು, ದುಬಾರಿ ಕಾರುಗಳ ಅರಮನೆಯಾಗಿದೆ.

ಅನಿಲ್ ಅಂಬಾನಿ ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಇನ್ನೊಂದು ಪ್ರಮುಖ ಕಾರು ಎಂದರೆ ಅದು ರೇಂಜ್ ರೋವರ್ ವೋಗ್. ಕೆಲವೇ ಭಾರತೀಯ ಉದ್ಯಮಿಗಳ ಬಳಿ ಇರುವ ಈ ಐಷಾರಾಮಿ ಕಾರು, ಅನಿಲ್ ಅಂಬಾನಿಯ ಮುಂಗಾರು ಋುತುವಿನ ನೆಚ್ಚಿನ ಫ್ರೆಂಡ್..

ಚಿತ್ರ ಕೃಪೆ- ಅಸೋಸಿಯೆಟ್ ಪ್ರೆಸ್

ಅಂಬಾನಿ ಗ್ಯಾರೇಜ್‌ನಲ್ಲಿ ಇನ್ನೊಂದು ಪ್ರಮುಖ ಕಾರಿದೆ ಅದು ಭಾರತದ ಕೆಲವೇ ಕೆಲವು ಉದ್ಯಮಗಳ ಬಳಿಯಿದೆ. ಅದು ಅಂಬಾನಿಗೆ ಅಚ್ಚಮೆಚ್ಚು, ಅದುವೇ ರೋಲ್ಸ್ ರಾಯ್ ಫ್ಯಾಂಟಮ್ ಬೆಸ್ಟೋಕ್.

ಚಿತ್ರ ಕೃಪೆ- ದಿ ಹಿಂದೂ ಬ್ಯುಜಿನೆಸ್ ಲೈನ್

ಶತಕೋಟ್ಯಾಧಿಪತಿಯಾಗಿರುವ ಅನಿಲ್ ಅಂಬಾನಿ ಒಬ್ಬ ಸಾಮಾನ್ಯನಂತೆ ಬದುಕುವ ರೂಢಿ ಮಾಡಿಕೊಂಡಿದ್ದಾರೆ. ಯಾವಾಗದರೂ ತಮ್ಮ ಕಾರುಗಳು ರಿಪೇರಿಗೆ ಬಂದರೆ ತಾವೇ ಗ್ರೌಂಡ್ ವರ್ಕ್ ಮಾಡಲು ಹಿಂಜರಿಯುವುದಿಲ್ಲ.

ವಿಶ್ವದ ದುಬಾರಿ ಕಾರುಗಳನ್ನು ಹೊಂದಿರುವ ಅನಿಲ್ ಅಂಬಾನಿ ಲಗ್ಷುರಿ ಕಲೆಕ್ಷನ್‌ನಲ್ಲಿ ಹತ್ತಾರು ದೇಶಿಯ ಕಾರುಗಳಿವೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುವ ಅನಿಲ್ ಅಂಬಾನಿ, ತಮ್ಮ ಪುತ್ರನಿಗೂ ದುಬಾರಿ ಕಾರುಗಳನ್ನು ನೀಡಿದ್ದಾರೆ.

ಉದ್ದಮದಷ್ಟೇ ಖಾಸಗಿ ಜೀವನಕ್ಕೆ ಹೆಚ್ಚು ಒತ್ತು ಕೋಡುವ ಉದ್ಯಮಿಗಳ ಸಂಖ್ಯೆ ತುಂಬಾ ವಿರಳ. ಆದ್ರೆ ಅನಿಲ್ ಅಂಬಾನಿ ಇದಕ್ಕೆ ಅನ್ವರ್ಥ...

ಚಿತ್ರ ಕೃಪೆ- ಇಂಡಿಯಾ ಟೈಮ್ಸ್

ಒಟ್ಟಿನಲ್ಲಿ ಉದ್ಯಮದ ಜೊತೆ ಜೊತೆಗೆ ಖಾಸಗಿ ಬದುಕಿಗೂ ಒತ್ತು ನೀಡುವ ಅನಿಲ್ ಅಂಬಾನಿ, ಇತರೆ ಉದ್ಯಮಿಗಳಿಂತ ವಿಭಿನ್ನ ಕಾಣಿಸುತ್ತಾರೆ. ಇದಕ್ಕೆ ಕಾರಣ ಅವರ ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಒತ್ತಡ ಜೀವನಕ್ಕೆ ಗುಡ್ ಬೈ ಹೇಳಿ ಏಂಜಾಯ್ ಮಾಡುತ್ತಾರೆ.

ವಿಶ್ವದ ದುಬಾರಿ ಕಾರು ರೋಲ್ಸ್ ರಾಯ್ ಗೋಸ್ಟ್ ಚಿತ್ರಗಳಿಗಾಗಿ ಕೆಳಗಿನ ಗ್ಯಾರಿಯನ್ನು ಕ್ಲಿಕ್ ಮಾಡಿ.

English summary
List of luxury cars owned by Anil Ambani.
Please Wait while comments are loading...

Latest Photos