ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಗಮ್ಯ ಸ್ಥಳಗಳಿಗೆ ಕೊಂಡೊಯ್ಯುವಲ್ಲಿ ಜನಪ್ರಿಯತೆ ಗಳಿಸಿರುವ ಆಟೋಗಳು ಮಧ್ಯಮ ಹಾಗೂ ಬಡ ವರ್ಗದ ಜನರ ಅಗ್ಗದ ಸಾರಿಗೆಯಾಗಿದೆ. ಬೆಂಗಳೂರು ಒಂದರಲ್ಲೇ ಲಕ್ಷಾಂತರ ಜನರು ಆಟೋಗಳನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಆಟೋಗಳಲ್ಲಿ ಒಂದು ಬಾರಿಗೆ ಇಂತಿಷ್ಟೇ ಪ್ರಯಾಣಿಕರು ಪ್ರಯಾಣಿಸಬೇಕೆಂಬ ಕಾನೂನು ಇದೆ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಆದರೆ ಹಲವೆಡೆ ಹೆಚ್ಚಿನ ಹಣ ಗಳಿಸುವ ಸಲುವಾಗಿ ಆಟೋ ಚಾಲಕರು ಹೆಚ್ಚಿನ ಮಂದಿಯನ್ನು ಏರಿಸಿಕೊಂಡು ಸಂಚರಿಸುತ್ತಿದ್ದಾರೆ. ಇದು ಬೆಂಗಳೂರು ನಗರಕ್ಕೊಂದೆ ಸೀಮಿತವಾಗಿಲ್ಲ, ಭಾರತದಲ್ಲಿನ ಹಲವು ನಗರ, ಗ್ರಾಮಾಂತರ ಪ್ರದೇಶಗಳಲ್ಲೂ ನಡಿಯುತ್ತಿದೆ. ಈ ಬಗ್ಗೆ ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡರು ಆಟೋ ಚಾಲಕರು ಮಾತ್ರ ತಮ್ಮ ಚಾಳಿಯನ್ನು ಮುಂದುವರಿಸುತ್ತಿದ್ದಾರೆ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಇದೀಗ ನಾವು ಹೇಳಲು ಹೊರಟಿರುವ ಸುದ್ದಿಯನ್ನು ಕೇಳಿದರೆ ನೀವು ಹುಬ್ಬೇರಿಸುವುದಂತೂ ಖಚಿತ. ಆಟೋ ರಿಕ್ಷಾದಲ್ಲಿ ಅಬ್ಬಬ್ಬಾ ಅಂದ್ರೆ ಎಷ್ಟು ಜನ ಕುಳಿತುಕೊಳ್ಳಬಹುದು? ಮೂರು ಅಥವಾ ನಾಲ್ಕು, ಏಕೆಂದರೆ ಆಟೋದಲ್ಲಿ ಚಾಲಕನನ್ನು ಹೊರತುಪಡಿಸಿ ಮೂರು ಜನರಿಗೆ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಆದರೆ ಇಲ್ಲೊಬ್ಬ ಭೂಪ 27 ಮಂದಿಯನ್ನು ಕೂರಿಸಿಕೊಂಡಿದ್ದಾನೆ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಒಬ್ಬರ ಹಿಂದೆ ಒಬ್ಬರಂತೆ ಆಟೋದಿಂದ ಹೊರಬಂದಾಗ ಪೊಲೀಸರೇ ದಂಗಾಗಿಬಿಟ್ಟಿದ್ದಾರೆ. ಉತ್ತರ ಪ್ರದೇಶದ ಫತೇಪುರ್‌ನ ಬಿಂಡ್ಕಿ ಕೊಟ್ವಾಲಿಯಲ್ಲಿ, ಲಾಲೌಲಿ ಮೂಲಕ ವೇಗವಾಗಿ ಆಟೋ ಹಾದು ಹೋಗುತ್ತಿರುವುದನ್ನು ಕಂಡ ಪೊಲೀಸರು, ಆಟೋ ನಿಲ್ಲಿಸುವಂತೆ ಸೂಚಿಸಿದರೂ ಆಟೋ ನಿಲ್ಲಲಿಲ್ಲ. ಇದರಿಂದ ಪೊಲೀಸರೇ ಓಡಿ ಬಂದು ಆಟೋ ಚಾಲಕನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ.

ಆಗ ಆಟೋ ಚಾಲಕ ನಿಯಮಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರು ಪ್ರಯಾಣಿಕರನ್ನು ಕೆಳಗಿಳಿಸಲು ಹೇಳಿದಾಗ ಒಂದು ಕ್ಷಣ ಪೊಲೀಸರೇ ದಂಗಾಗಿದ್ದಾರೆ. ಆಟೋದಲ್ಲಿ ಮಕ್ಕಳು, ದೊಡ್ಡವರು ಸೇರಿ ಒಟ್ಟು 27 ಮಂದಿಯಿದ್ದು, ಕೆಲವರು ಸೀಟಿನ ಮೇಲೆ ಕುಳಿತಿದ್ದರೆ ಇನ್ನು ಕೆಲವರು ಒಬ್ಬರ ಮೇಲೊಬ್ಬರು ಕುಳಿತಿದ್ದರು.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಆಟೊ ಸವಾರ ಹಾಗೂ ಆತನ ಸಂಬಂಧಿಕರು ಬಿಂಡ್ಕಿಯಲ್ಲಿ ಬಕ್ರೀದ್ ಪ್ರಾರ್ಥನೆ ಸಲ್ಲಿಸಿ ಮನೆಗೆ ತೆರಳುತ್ತಿರುವುದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ. ಕ್ರಮ ಕೈಗೊಂಡ ಪೊಲೀಸರು ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ಠಾಣೆಗೆ ಕಳುಹಿಸಿದ್ದಾರೆ. ಸದ್ಯ ಆಟೋದಲ್ಲಿ 27 ಮಂದಿ ಕುಳಿತಿದ್ದಾದರೂ ಹೇಗೆ ಎಂದು ಆ ಭಾಗದ ಜನರು ಚರ್ಚಿಸುತ್ತಿದ್ದಾರೆ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಫತೇಪುರ್ ಪೊಲೀಸರ ಪ್ರಕಾರ, ಆಟೋ ಚಾಲಕನ ಮೇಲೆ ಕ್ರಮ ಕೈಗೊಳ್ಳುವಾಗ 11,500 ರೂ.ಗಳ ಚಲನ್ ನೀಡಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಕೂಡ ಹಂಚಿಕೊಂಡಿದ್ದಾರೆ, ಇದುವರೆಗೆ 2.5 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಜನರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದು, ಈ ವೀಡಿಯೊಗೆ ಪ್ರತಿಕ್ರಿಯಿಸಿದ ಬಳಕೆದಾರರು, ಆಟೋ ಚಾಲಕನ ಈ ಸಾಹಸಕ್ಕೆ, ಅವರ ಹೆಸರನ್ನು ಗಿನ್ನಿಸ್ ಪುಸ್ತಕದಲ್ಲಿ ದಾಖಲಿಸಬೇಕು ಎಂದು ಬರೆದಿದ್ದಾರೆ. ಇದೇ ವೇಳೆ ಈಗ ಸರ್ಕಾರ ಆಟೊವನ್ನು ಬಸ್ ಎಂದು ಘೋಷಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಈ ಆಟೋ ಡ್ರೈವರ್‌ನಿಂದ ಬಾಹ್ಯಾಕಾಶ ನಿರ್ವಹಣೆಯ ಕೌಶಲ್ಯವನ್ನು ಕಲಿಯಬೇಕು ಎಂದು ಮತ್ತೊಬ್ಬ ಟ್ವಿಟ್ ಮಾಡಿದ್ದಾನೆ. "ಈ ಘಟನೆಯು ಆಶ್ಚರ್ಯಕರ ಮತ್ತು ಗೊಂದಲದ ಸಂಗತಿಯಾಗಿದೆ. ನಾವು ಶೀಘ್ರದಲ್ಲೇ ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಇನ್ನೊಬ್ಬ ತಮಾಷೆ ಮಾಡಿದ್ದಾನೆ."

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಸ್ಕೂಟರ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಕೆ

ವ್ಯಕ್ತಿಯೊಬ್ಬ ಸ್ಕೂಟರ್‌ನ ಹಿಂಬದಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಈ ನಟನೆ ನಡೆದಿದ್ದು, ಫೋಟೋವನ್ನು ಲಿಂಕ್ಡ್‌ಇನ್ ಬಳಕೆದಾರ ಹರ್ಷಮೀತ್ ಸಿಂಗ್ ಎಂಬಾತ ಪೋಸ್ಟ್ ಮಾಡಿದ್ದಾರೆ. ಈ ದೃಷ್ಯಕ್ಕೆ ನೆಟ್ಟಿಗರಿಂದ ಭಾರೀ ಸಂಖ್ಯೆಯಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಇಂದಿನ ಬ್ಯುಸಿ ಬದುಕಿನಲ್ಲಿ ಕೆಲಸದ ಒತ್ತಡ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎನ್ನುವುದನ್ನು ರಸ್ತೆಯಲ್ಲಿ ವಾಹನ ಚಲಾಯಿಸುವಾಗಲೂ ಕಚೇರಿ ಕೆಲಸಗಳನ್ನು ಮಾಡುತ್ತಿರುವ ಈ ವ್ಯಕ್ತಿಯನ್ನು ನೋಡಿದರೆ ತಿಳಿಯುತ್ತದೆ. ಈ ಚಿತ್ರವು ಬೆಂಗಳೂರಿನದ್ದಾಗಿದ್ದು, ಯಾವ ಫ್ಲೈ ಓವರ್‌ ಎಂಬುದು ತಿಳಿದುಬಂದಿಲ್ಲ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಇದನ್ನು ಹರ್ಷಮೀತ್ ಸಿಂಗ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಹರ್ಷದೀಪ್ ಕೂಡ ಒಂದು ಪೋಸ್ಟ್ ಅನ್ನು ಬರೆದಿದ್ದು, ಈ ದೃಷ್ಯವು ಬೆಂಗಳೂರಿನ ಬ್ಯುಸಿ ಫ್ಲೈಓವರ್‌ನಲ್ಲಿ ಕಂಡುಬಂದಿದೆ, ಸ್ಕೂಟರ್‌ ಹಿಂದೆ ಕುಳಿತ ವ್ಯಕ್ತಿಯೊಬ್ಬರು ತಮ್ಮ ಕಚೇರಿ ಕೆಲಸವನ್ನು ಚಾಲನೆ ವೇಳೆಯು ಬಿಡುವಿಲ್ಲದೇ ಮಾಡುತ್ತಿದ್ದಾರೆ.

ಒಂದೆರಡಲ್ಲ ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಪೊಲೀಸರಗೆ ಸಿಕ್ಕಿಬಿದ್ದ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಫೋಟೋ 40,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಜೊತೆಗೆ 1,000 ಕ್ಕೂ ಹೆಚ್ಚು ಬಾರಿ ಷೇರ್ ಮಾಡಲಾಗಿದೆ. ಆದರೆ, ಸಾಮಾಜಿಕ ಜಾಲತಾಣ ಬಳಕೆದಾರರು ಈ ಚಿತ್ರದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Most Read Articles

Kannada
English summary
Auto rickshaw caught with 27 passengers in uttar pradesh video details
Story first published: Thursday, July 14, 2022, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X