ಹೊಸ ಕಾರು ಖರೀದಿಗಾರರಿಗೆ ಕಾರು ವಿಮೆ ಮಾರ್ಗದರ್ಶಿ

By Nagaraja

ನಮ್ಮ ನಿಮ್ಮ ಜೀವಕ್ಕೆ ಯಾವ ಗ್ಯಾರಂಟಿಯೂ ಇಲ್ಲ! ಆದರೂ ಇರುವಷ್ಟು ಕಾಲ ಜೀವನ ಸುರಕ್ಷಿತವಾಗಿಸುವುದು ನಮ್ಮ ನಿಮ್ಮೆಲ್ಲರ ಧ್ಯೇಯವಾಗಿದೆ. ಇದಕ್ಕಾಗಿ ವಿಮೆ ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳುತ್ತೇವೆ. ಇದೇ ನೀತಿ ಹೊಸತಾಗಿ ಖರೀದಿ ಮಾಡುವ ಕಾರಿಗೂ ಅನ್ವಯವಾಗುತ್ತದೆ.

ಕಾರು ವಿಮೆಗಾಗಿ ಅತ್ಯುತ್ತಮ ವ್ಯವಹಾರಗಳು

Most Read Articles
<div class="cfmotor_container" style="width:100%;float:left;"></div> <script type="text/javascript"> (function loadScript(src, callback) { var s, r, t; r = false; s = document.createElement('script'); s.type = 'text/javascript'; s.src = src; s.onload = s.onreadystatechange = function() { console.log( this.readyState ); if ( !r && (!this.readyState || this.readyState == 'complete') ){ r = true;callback(); } }; t = document.getElementsByTagName('script')[0]; t.parentNode.insertBefore(s, t); })('https://www.coverfox.com/static/lp-marketing/tp_widget/cf_loader.js', function() { CF.init('oneindia'); }); </script>

ನೂತನ ಕಾರೊಂದನ್ನು ಖರೀದಿ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಕಾರು ನಿರ್ವಹಣೆ ಮಾಡುವುದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಈ ನಿಟ್ಟಿನಲ್ಲಿ ಸಮಗ್ರ ಕಾರು ವಿಮೆ ಯೋಜನೆ ನೆರವಾಗುತ್ತದೆ. ಆದರೆ ಇವೆಲ್ಲದರ ಜೊತೆಗೆ ಕೆಲವು ವಿಶೇಷ ವಿಮಾ ಸ್ಕೀಮ್ ಗಳು (Add on)ನಿಮ್ಮ ವೈಯಕ್ತಿಕ ಅವಶ್ಯಕತೆಗಳ ಜೊತೆಗೆ ಮೂಲ ಪ್ರೀಮಿಯಂಗೆ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ. ಹೀಗೆ ನಿಮ್ಮ ಕಾರಿಗೆ ಸಂಬಂಧಪಟ್ಟಂತೆ ಐದು ಅತ್ಯುತ್ತಮ ಹೆಚ್ಚುವರಿ ವಿಮಾ ಸ್ಕೀಮ್ ಗಳ ಬಗ್ಗೆ ನಾವಿಲ್ಲಿ ವಿವರವಾಗಿ ಚರ್ಚಿಸಲಿದ್ದೇವೆ.

1. ಎಂಜಿನ್ ರಕ್ಷಣೆ

1. ಎಂಜಿನ್ ರಕ್ಷಣೆ

ಸಾಮಾನ್ಯವಾಗಿ ಅಪಘಾತದ ಹೊರತಾಗಿ ಕಾರು ವಿಮೆ ಪಾಲಿಸಿಯು ಎಂಜಿನ್ ಹಾನಿಯನ್ನು ಒಳಗೊಂಡಿರುವುದಿಲ್ಲ. 15 ಲಕ್ಷ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ಐಷಾರಾಮಿ ಕಾರುಗಳು ಕಡಿಮೆ ಎಂಜಿನ್ ಖಾಳಜಿಯನ್ನು ಹೊಂದಿರುತ್ತಿದೆ. ಇದರಿಂದಾಗಿ ವಿಶೇಷವಾಗಿಯೂ ಭಾರತದಂತಹ ಪರಿಸ್ಥಿತಿಯಲ್ಲಿ ಮಾನ್ಸೂನ್ ಸಂದರ್ಭದಲ್ಲಿ ಎಂಜಿನ್‌ಗೆ ಹಾನಿಯಾಗುವ ಸಾಧ್ಯತೆಯು ಜಾಸ್ತಿಯಿರುತ್ತದೆ. ಹಾಗಾಗಿ ಎಂಜಿನ್ ದುರಸ್ತಿ ವೆಚ್ಚ ದುಬಾರಿಯಾಗಿರುವ ಇಂತಹ ಪ್ರೀಮಿಯಂ ಕಾರುಗಳಿಗೆ ಎಂಜಿನ್ ವಿಮೆ ಗಿಟ್ಟಿಸಿಕೊಳ್ಳುವುದು ಪ್ರಾಯೋಗಿಕವಾಗಿಯೂ ಪ್ರಯೋಜನಕಾರಿಯಾಗಿರಲಿದೆ. ಇದರ ವೆಚ್ಚ ಮೂಲ ಪ್ರೀಮಿಯಂಗಿಂತಲೂ ಶೇಕಡಾ 10ರಷ್ಟು ಕಡಿಮೆಯಾಗಿದೆ.

2. ಬಂಪರ್ ಟು ಬಂಪರ್

2. ಬಂಪರ್ ಟು ಬಂಪರ್

ಹೊಸ ಕಾರುಗಳಿಗೆ ಶೂನ್ಯ ಇಳಿತಾಯ ಅಥವಾ ಬಂಪರ್ ಟು ಬಂಪರ್ ವಿಮಾ ಪಾಲಿಸಿ ಅತಿ ಅಗತ್ಯವಾಗಿದೆ. ಸಾಮಾನ್ಯವಾಗಿ ಬೇಸ್ ಪಾಲಿಸಿ ಗಿಟ್ಟಿಸಿಕೊಳ್ಳುವಾಗ ಒಟ್ಟು ವೆಚ್ಚದ ಒಂದು ಭಾಗವನ್ನು ನೀವು ಪಾವತಿಸಬೇಕಾಗುತ್ತದೆ. ಇದರಲ್ಲಿ ಪ್ಲಾಸ್ಟಿಕ್ ಭಾಗ, ಚಕ್ರ, ಟ್ಯೂಬ್ ಇತ್ಯಾದಿ ಶೇಕಡಾ 50ರಷ್ಟು ವಿಮೆ ಹಾಗೂ ಫೈಬರ್ ಗ್ಲಾಸ್ ಇತ್ಯಾದಿಗಳು ಶೇಕಡಾ 70ರಷ್ಟು ವಿಮೆ ಕವರ್ ಮಾಡುತ್ತದೆ. ಆದರೆ ಶೂನ್ಯ ಇಳಿತಾಯ ಮುಖಾಂತರ ನೀವು ಕಾರು ಬಿಡಿಭಾಗ ಬದಲಾಯಿಸುವಾಗ ಸಂಪೂರ್ಣ ಮರು ಪಾವತಿ ಪಡೆಯಬಹುದಾಗಿದೆ. ಬಹುತೇಕ ವಿಮಾ ಸಂಸ್ಥೆಗಳು ಶೂನ್ಯ ಇಳಿತಾಯವನ್ನು ಮೂರು ವರ್ಷಗಳ ವರೆಗೆ ನೀಡುತ್ತದೆ. ಕೆಲವು ವಿಮಾ ಸಂಸ್ಥೆಗಳು ಇದನ್ನು ಐದು ವರ್ಷಗಳ ವರೆಗೆ ನೀಡುತ್ತದೆ. ಆದರೆ ಕಾರು ಹಳೆಯದಾದಂತೆ ವಿಮಾ ಪ್ರೀಮಿಯಂ ವೆಚ್ಚವೂ ಹೆಚ್ಚಾಗುತ್ತದೆ. ಇದು ಗಿಟ್ಟಿಸಿಕೊಳ್ಳಲು ಮೂಲ ಪ್ರೀಮಿಯಗಿಂತಲೂ ಶೇ.10ರಿಂದ ಶೇ.15ರಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ.

3. 24/7 ರೋಡ್ ಸೈಡ್ ಅಸಿಸ್ಟನ್ಸ್

3. 24/7 ರೋಡ್ ಸೈಡ್ ಅಸಿಸ್ಟನ್ಸ್

ಕಾರಿಗೆ ಯಾವಾಗ ಸಮಸ್ಯೆ ತಟ್ಟಲಿದೆ ಎಂಬುದನ್ನು ಊಹಿಸಲು ಯಾರಿಂದ ಸಾಧ್ಯ? ರೋಡ್ ಸೈಡ್ ಅಸಿಸ್ಟನ್ಸ್ ಮುಖಾಂತರ ಅಪಘಾತ ಅಥವಾ ಬ್ರೇಕ್ ಡೌನ್ ಆದ ಸಂದರ್ಭದಲ್ಲಿ ತ್ವರಿತ ನೆರವು ಹಾಗೂ ರಕ್ಷಣೆ ಪಡೆಯಲು ಸಾಧ್ಯ. ರೋಡ್ ಸೈಡ್ ಅಸಿಸ್ಟನ್ಸ್ ಮೂಲಕ ವರ್ಷದ 365 ದಿನವೂ 24 ಗಂಟೆಯೂ ನುರಿತ ತರಬೇತಿ ಪಡೆದವರು ನಿಮ್ಮ ನೆರವಾಗಲಿದ್ದಾರೆ. ಇದು ಕೇವಲ 500 ರು.ಗಳಷ್ಟು ಮಾತ್ರ ದುಬಾರಿಯೆನಿಸಲಿದೆ.

4. ಇನ್ ವಾಯ್ಸ್ ಕವರ್

4. ಇನ್ ವಾಯ್ಸ್ ಕವರ್

ಹಾಗೊಂದು ವೇಳೆ ಕಾರು ಕಳ್ಳತನವಾಗಿಬಿಟ್ಟರೆ ಈ ವಿಶೇಷ ವಿಮಾ ಸ್ಕೀಮ್ ಮುಖಾಂತರ ಕ್ಲೈಮ್ ಮಾಡಬಹುದಾಗಿದೆ. ಇಲ್ಲಿ ಆನ್ ರೋಡ್ ಆಧಾರದಲ್ಲಿ ವಿಮೆ ಮರು ಪಾವತಿಗಾಗಿ ಕ್ಲೈಮ್ ಮಾಡಬಹುದಾಗಿದ್ದರಿಂದ ಮಾಲಿಕರು ಗರಿಷ್ಠ ಪ್ರಯೋಜನ ಗಿಟ್ಟಿಸಬಹುದಾಗಿದೆ. ಇದಕ್ಕಾಗಿ ಬೇಸ್ ಪ್ರೀಮಿಯಂನ ಶೇಕಡಾ 10ರಷ್ಟು ವೆಚ್ಚ ತಗುಲಲಿದೆ.

5. ನಾನ್ ಕ್ಲೈಮ್ ಪ್ರೊಟೆಕ್ಷನ್

5. ನಾನ್ ಕ್ಲೈಮ್ ಪ್ರೊಟೆಕ್ಷನ್

ಇಡೀ ವರ್ಷ ನೀವು ವಿಮೆ ಕ್ಲೈಮ್ ಮಾಡದಿದ್ದಲ್ಲಿ, ವಿಮೆ ನವೀಕರಣದ ಸಮಯದಲ್ಲಿ ನಿಮ್ಮ ಪ್ರೀಮಿಯಂ ಮೇಲೆ ರಿಯಾಯಿತಿ ಸಿಗಲಿದೆ. ಪ್ರಸ್ತುತ ಡಿಸ್ಕೌಂಟ್ ನೊ ಕ್ಲೈಮ್ ಬೋನಸ್ ಅಥವಾ ಎನ್ ಸಿಬಿ ಎಂದು ಕರೆಯಲ್ಪಡುತ್ತದೆ. ಇದು ಕಾರು ಮಾಲಿಕರ ಪಾಲಿಗೆ ಅತಿ ಹೆಚ್ಚು ಉಳಿತಾಯವಾಗಿ ಪರಿಣಮಿಸಲಿದೆ. ಇದರ ಗಮನಾರ್ಹ ಅಂಶವೆಂದರೆ ಇದು ಚಾಲಕ ಅವಲಂಬಿತವಾಗಿರುವುದರಿಂದ ಕಾರು ಬದಲಾಯಿಸಿದರೂ ಹೊಸ ಕಾರಿಗೆ ವಿಮೆ ವರ್ಗಾಯಿಸಬಹುದಾಗಿದೆ. ಪ್ರಸ್ತುತ ವಿಮೆ ಬೇಸ್ ಪ್ರೀಮಿಯಂಗಿಂತಲೂ ಶೇಕಡಾ 15ರಷ್ಟು ವೆಚ್ಚ ತಗುಲಲಿದೆ.

Kannada
Read more on ವಿಮೆ insurance
English summary
Add ons on car insurance policies are basically optional additional coverage you pay for in addition to the basic policy per your individual requirements. Here's a list of 5 important add ons that we help you understand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X