ಶೋಲೆ ಚಿತ್ರದಿಂದ ಪ್ರೇರಿತವಾಗಿ ನಿರ್ಮಾಣವಾದ ಬೈಕ್ ಆಂಬ್ಯುಲೆನ್ಸ್
ಕರೋನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಆರ್ಭಟಿಸುತ್ತಿದೆ. ಪ್ರತಿ ದಿನ ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸೋಂಕಿತರು ಆಕ್ಸಿಜನ್, ಔಷಧಿ ಹಾಗೂ ಆಂಬುಲೆನ್ಸ್‌ಗಳು ಸಕಾಲಕ್ಕೆ ಸಿಗದೇ ಪರದಾಡುವಂತಾಗಿದೆ.

ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾ, ಟ್ಯಾಕ್ಸಿ ಹಾಗೂ ಕಾರುಗಳನ್ನು ಆಂಬ್ಯುಲೆನ್ಸ್ ಆಗಿ ಬದಲಿಸಲಾಗಿದೆ. ಈ ವಾಹನಗಳಲ್ಲಿ ಆಕ್ಸಿಜನ್ ಸಿಲಿಂಡರ್ ಸಹ ಅಳವಡಿಸಲಾಗಿದೆ. ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಶೋಲೆ ಚಿತ್ರದಿಂದ ಪ್ರೇರಿತರಾಗಿ ಬೈಕ್ ಆಂಬ್ಯುಲೆನ್ಸ್ ನಿರ್ಮಿಸಲಾಗಿದೆ.

ಈ ಆಂಬ್ಯುಲೆನ್ಸ್'ನಲ್ಲಿ ರೋಗಿಗಳಿಗೆ ಅಗತ್ಯವಾದ ಸ್ಟ್ರೆಚರ್, ಆಕ್ಸಿಜನ್ ಕಿಟ್, ಫ್ಯಾನ್ ಹಾಗೂ ಲೈಟ್'ಗಳನ್ನು ಅಳವಡಿಸಲಾಗಿದೆ. ಈ ಬೈಕ್ ಆಂಬ್ಯುಲೆನ್ಸ್ ಫೋಟೋವನ್ನು ಐಪಿಎಸ್ ಅಧಿಕಾರಿ ದೀಪನ್ಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಬೈಕ್ ಆಂಬ್ಯುಲೆನ್ಸ್'ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮಹಾರಾಷ್ಟ್ರದಲ್ಲಿ ಕರೋನಾ ವೈರಸ್ ಎರಡನೇ ಅಲೆ ಹೆಚ್ಚು ಹಾನಿಯನ್ನುಂಟು ಮಾಡಿದೆ. ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತರು ಹಾಗೂ ಇತರ ಸಂಸ್ಥೆಗಳು ಮುಂದೆ ಬಂದಿವೆ.

ಈ ಪರಿಸ್ಥಿತಿಯಲ್ಲಿ ಪಾಲ್ಘರ್'ನಲ್ಲಿರುವ ಅಲರ್ಟ್ ಫೋರಂ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೋಲೆ ಚಿತ್ರದ ಪಾತ್ರಧಾರಿಗಳಾದ ಜೈ-ವಿರುರವರು ಸಾಗುವ ಬೈಕ್ ರೀತಿಯಲ್ಲಿ ಬೈಕ್ ಆಂಬ್ಯುಲೆನ್ಸ್ ಆರಂಭಿಸಿವೆ.
MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಈ ಬೈಕ್ ಆಂಬ್ಯುಲೆನ್ಸ್ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಬೈಕ್ ಆಂಬ್ಯುಲೆನ್ಸ್ ರೋಗಿಗಳನ್ನು ಸಾಗಿಸುವ ವ್ಯವಸ್ಥೆಯನ್ನು ಹೊಂದಿದೆ. ಈ ಬೈಕ್ ಆಂಬ್ಯುಲೆನ್ಸ್ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಕಿಟ್, ಫ್ಯಾನ್ ಹಾಗೂ ಬೆಳಕಿನಂತಹ ಅಗತ್ಯ ಉಪಕರಣಗಳನ್ನು ಹೊಂದಿದೆ.

ಈ ಆಂಬ್ಯುಲೆನ್ಸ್ ಅನ್ನು ಬೈಕ್'ನೊಂದಿಗೆ ಜೋಡಿಸಲಾಗಿರುವುದರಿಂದ ಈ ಬೈಕ್ ಆಂಬ್ಯುಲೆನ್ಸ್'ನಲ್ಲಿ ಅಗತ್ಯಕ್ಕೆ ಅನುಗುಣವಾಗಿ ಎಲ್ಲಿಗೆ ಬೇಕಾದರೂ ಸುಲಭವಾಗಿ ತಲುಪಬಹುದು.
MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ದೀಪನ್ಶು ಕಬ್ರಾ ಅವರ ಈ ಟ್ವೀಟ್ ಹಲವಾರು ಲೈಕ್‌ಗಳನ್ನು ಪಡೆದಿದ್ದು, ಇದುವರೆಗೂ 78 ಬಾರಿ ರಿಟ್ವೀಟ್ ಮಾಡಲಾಗಿದೆ. ಈ ಲೇಖನವನ್ನು ಬರೆಯುವ ವೇಳೆಗೆ ಈ ಟ್ವೀಟ್ 528 ಲೈಕ್‌ಗಳನ್ನು ಪಡೆದಿತ್ತು.
ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications








