ಒಂದೂವರೆ ಕೋಟಿ ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಅಚ್ಚರಿ..

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ನಿಮಿಷಾಂಬ ದೇಗುಲದ ಬಳಿ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರ್ ಅರ್ಧ ಮುಳುಗಿ, ಅರ್ಧ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

ದೇಗುಲಕ್ಕೆ ಬಂದ ಜನರು, ಅಕ್ಕ ಪಕ್ಕದ ನಿವಾಸಿಗಳು ಆ ಕಾರನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಅಕ್ಕ ಪಕ್ಕದಲ್ಲಿ ಯಾರೂ ಇರಲಿಲ್ಲ, ಕಾರಿನ ಒಳಗೂ ಯಾರೂ ಕಾಣಿಸಲಿಲ್ಲ. ಹೀಗಾಗಿ ಇದು ಅಪಘಾತವೇ ಅಥವಾ ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ? ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

ಮುಳುಗಿದ್ದ ಕಾರನ್ನು ನೋಡಿ ಬೆಚ್ಚಿಬಿದ್ದ ಜನ

ನದಿಯಲ್ಲಿ ಕಾರು ತೇಲುತ್ತಿರುವುದನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಅನುಮಾನಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಡೈವರ್‌ಗಳನ್ನು ಕರೆಸಿ ತನಿಖೆ ನಡೆಸಲಾಯಿತು. ತನಿಖೆ ವೇಳೆ ಕಾರಿನೊಳಗೆ ಯಾರೂ ಪತ್ತೆಯಾಗದಿದ್ದರೂ, ಕಾರು ನೀರಿಗೆ ಹೋಗಿದ್ದರ ಹಿಂದಿನ ಕಾರಣವನ್ನು ಪೊಲೀಸರು ಪತ್ತೆ ಹಚ್ಚಿದಾಗ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

ಕಾರನ್ನು ನೀರಿನಿಂದ ಹೊರತೆಗೆದು ದಾಖಲಾಗಳನ್ನು ಪರಿಶೀಲಿಸಿದಾಗ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ರೂಪೇಶ್ ಎಂಬುವರಿಗೆ ಸೇರಿದ ಬಿಎಂಡಬ್ಲ್ಯು ಎಕ್ಸ್6 ಕಾರು ಎಂದು ತಿಳಿದುಬಂದಿದೆ. ಮಾಲೀಕನ ಸ್ಥಳವನ್ನು ಪತ್ತೆಹಚ್ಚಿದ ನಂತರ, ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

ನಿಮಿಷಕ್ಕೊಂದು ಹೇಳಿಕೆ ನೀಡ್ತಿದ್ದ ಆತ. ಮೊದಲು, ನನ್ನ ಯಾರೋ‌ ಕೊಲ್ಲಲು ಬಂದರು ತಪ್ಪಿಸಿಕೊಳ್ಳಲು ನದಿಗೆ ಕಾರು ಇಳಿಸಿದೆ ಎಂದು ಹೇಳಿದ್ದ. ಆದರೆ ಕೆಲ ನಿಮಿಷಗಳ ಬಳಿಕ ಹೇಳಿಕೆ ಬದಲಾಯಿಸಿದ್ದ ಆತ, ನನಗ ಕಣ್ಣೆಲ್ಲಾ ಮಂಜು ಮಂಜಾಗಿ ಕಾಣುತ್ತಿತ್ತು ಹಾಗಾಗಿ ತಿಳಿಯದೆ ನದಿಗೆ ಕಾರು ಇಳಿಸಿದೆ ಎಂದಿದ್ದ. ಹೀಗೆ ನಿಮಿಷಕ್ಕೊಂದು ಹೇಳಿಕೆ ನೀಡ್ತಿದ್ದ ರೂಪೇಶ್ ಪೊಲೀಸರಿಗೆ ಕೆಲಕಾಲ ಗೊಂದಲ ಮೂಡಿಸಿದ್ದ.‌

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

ಬಳಿಕ ತನ್ನ ತಾಯಿಯ ಅಕಾಲಿಕ ಮರಣದಿಂದ ಖಿನ್ನತೆಗೆ ಒಳಗಾಗಿದ್ದರು, ಇದರಿಂದಾಗಿ ಅವರು ತಮ್ಮ ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿರಬಹುದು ಎಂದು ಕುಟುಂಬಸ್ಥರಿಂದ ತಿಳಿದುಬಂದಿದೆ. ಇನ್ನುಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಸ್ಥಿತಿಯಲ್ಲಿ ಮಾಲೀಕ ಇರಲಿಲ್ಲ. ಗೊಂದಲ ಮತ್ತು ಅಸಮಾಧಾನ ತೋರುತ್ತಿದ್ದಾರೆ ಎಂದು ಶ್ರೀರಂಗಪಟ್ಟಣದ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿದ ನಂತರ ವ್ಯಕ್ತಿಯನ್ನು ತಮ್ಮ ಮನೆಗೆ ಹಿಂತಿರುಗಲು ಅನುಮತಿಸಲಾಯಿತು. ಬಳಿಕ ಕಾರನ್ನು ಕುಟುಂಬಸ್ಥರು ಬೆಂಗಳೂರಿಗೆ ವಾಪಸ್ ಕೊಂಡೊಯ್ದಿದ್ದಾರೆ. ಈ ಬಿಎಂಡಬ್ಲ್ಯು ಎಕ್ಸ್6 ಕಾರು 1.30 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

BMW X6 ಕೂಪ್ ಶೈಲಿಯ ಎಸ್‌ಯುವಿ ಮಾದರಿಯಾಗಿದ್ದು, ಈ ಕಾರು ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಎಕ್ಸ್6 ಮಾದರಿಯು 3.0-ಲೀಟರ್ ಇನ್‌ಲೈನ್-6 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಇದು 340 Bhp ಪವರ್ ಮತ್ತು 450 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಅದು ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ರವಾನಿಸುತ್ತದೆ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

ಇದರ ಗರಿಷ್ಠ ವೇಗ ಗಂಟೆಗೆ 250 ಕಿಮೀ ಆಗಿದ್ದು, 5.5 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುಪುತ್ತದೆ. ಇದು BMW ಲೈವ್ ಕಾಕ್‌ಪಿಟ್ ಪ್ರೊಫೆಷನಲ್, 205 ವ್ಯಾಟ್ 10-ಸ್ಪೀಕರ್ ಸೌಂಡ್ ಸಿಸ್ಟಮ್, 2.5 ವಲಯದ ಹವಾಮಾನ ನಿಯಂತ್ರಣ ವ್ಯವಸ್ಥೆ, ಮುಂಭಾಗದ ಸಾಲಿನಲ್ಲಿ ಬಿಸಿಯಾದ ಮತ್ತು ತಂಪಾಗುವ ಕಪ್ ಹೋಲ್ಡರ್‌ಗಳು, ಎರಡನೇ ಸಾಲಿನಲ್ಲಿ UBS C-ಟೈಪ್ ಸಂಪರ್ಕ ಮತ್ತು ಗೆಸ್ಚರ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

ಸುರಕ್ಷತಾ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, 8 ಏರ್‌ಬ್ಯಾಗ್‌ಗಳು, ಬ್ರೇಕ್ ಅಸಿಸ್ಟ್‌ನೊಂದಿಗೆ ಎಬಿಎಸ್, ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್‌ನೊಂದಿಗೆ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ.

 ಕೋಟಿ ರೂ. ಮೌಲ್ಯದ ಕಾರನ್ನು ನದಿಗೆ ಬಿಟ್ಟು ಮಾಲೀಕ ಪರಾರಿ: ಕಾರಣ ತಿಳಿದ ಪೊಲೀಸರಿಗೆ ಆಘಾತ!

BMW X6 ಬೆಲೆ 90.00 ಲಕ್ಷದಿಂದ ಪ್ರಾರಂಭವಾಗಿ 1.30 ಕೋಟಿ ರೂ.ವರೆಗೆ ಇದೆ. BMW X6 3 ರೂಪಾಂತರಗಳಲ್ಲಿ ಲಭ್ಯವಿದೆ. - X6 ಬೇಸ್ ಮಾಡೆಲ್ xDrive30d ಮತ್ತು ಟಾಪ್ ವೇರಿಯಂಟ್ BMW X6 xDrive40i M ಸ್ಪೋರ್ಟ್ ಬೆಲೆ 1.30 ಕೋಟಿ ರೂ. ಇದೆ.

Most Read Articles

Kannada
English summary
Bmw owner dumped car in cauvery river karnataka details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X