ಮಾಡಿಫೈಗೊಂಡು ಮಿಂಚುತ್ತಿದೆ ಬಾಲಿವುಡ್ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಬಾಲಿವುಡ್ ಎಂಬ ಕಲರ್‍‍‍ಫುಲ್ ಸಿನಿಮಾ ರಂಗದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೂಪರ್ ಸ್ಟಾರ್‌‍ಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕೂಡ ಐಷಾರಾಮಿ ಕಾರುಗಳ ಕ್ರೇಜ್ ಅನ್ನು ಹೊಂದಿದ್ದಾರೆ. ಇವರ ಬಳಿ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಇಅವರ್ ಸಂಗ್ರಹದಲ್ಲಿ ಲ್ಯಾಂಬೋರ್ಗಿನಿ ಉರಸ್ ಎಸ್‌ಯುವಿಯಿಂದ ಆಸ್ಟನ್ ಮಾರ್ಟಿನ್ ಸ್ಪೋರ್ಟ್ಸ್ ಕಾರ್ ವರೆಗೆ ಇದೆ. ಇತ್ತೀಚೆಗೆ ರಣವೀರ್ ಸಿಂಗ್ ತಮ್ಮ ಆಸ್ಟನ್ ಮಾರ್ಟಿನ್ ಸ್ಪೋರ್ಟ್ಸ್ ಕಾರನ್ನು ಮಾಡಿಫೈಗೊಳಿಸಿದ್ದಾರೆ. ಈ ಕಾರಿಗೆ ಮ್ಯಾಟ್ ಆಕ್ವಾ ಬ್ಲೂ ಬಣ್ಣವನ್ನು ನೀಡಿದ್ದಾರೆ. ಈ ಸ್ಪೋರ್ಟ್ಸ್ ಕಾರು ಮೊದಲು ಬಿಳಿ ಬಣ್ಣದಲ್ಲಿತ್ತು. ಹೊಸ ಬಣ್ಣದಲ್ಲಿ ಆಸ್ಟನ್ ಮಾರ್ಟಿನ್ ಸ್ಪೋರ್ಟ್ಸ್ ಕಾರ್ ಮತ್ತಷ್ಟು ಆಕರ್ಷಕವಾಗಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಈ ಕಾರು ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಮತ್ತು ಈ ಕಾರು ಅವರ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಈ ಕಾರು ರಣವೀರ್ ಅವರ ಮೊದಲ ಪ್ಯಾಡಲ್ ಶಿಫ್ಟರ್ ಕಾರು ಎಂದು ತಿಳಿದುಬಂದಿದೆ. Aston Martin Rapide S GT 4 DOOR ರೂಪಾಂತರದ ಬೆಲೆ ರೂ.3.9 ಕೋಟಿ. ಈ ಕಾರಿನಲ್ಲಿ ದೊಡ್ಡ 6.0-ಲೀಟರ್ ವಿ12 ಎಂಜಿನ್ ಅನ್ನು ಸ್ಥಾಪಿಸಲಾಗಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ರಣವೀರ್ ಸಿಂಗ್ ಮಾಡಿಫೈಗೊಳಿಸಿದ ಕಾರು ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಆಗಿದೆ. ಈ ಕಾರು ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಇತ್ತೀಚೆಗೆ ನಟ ವಿಮಾನ ನಿಲ್ದಾಣಕ್ಕೆ ಈ ಕಾರಿನಲ್ಲಿ ಡ್ರೈ ಮಾಡಿ ತೆರಳುವಾಗ ಅಭಿಮಾನಿಗಳು ಮತ್ತು ಪಾಪರಾಜಿ ಚಿತ್ರಗಳನ್ನು ಸೆರೆಹಿಡಿದಿದ್ದರು.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ರಣವೀರ್ ಸಿಂಗ್ ಖರೀದಿಸಿದ ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿರುವ ಮೊದಲ ಕಾರು. ಆಸ್ಟನ್ ನಟನ ಮಾಲೀಕತ್ವದ ಮೊದಲ ಕಾರು, ಅದು ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿತ್ತು, ಅದನ್ನು ನಾನು ಸಂಪೂರ್ಣವಾಗಿ ನವೀಕರಿಸಲಾಗುತ್ತದೆ ಎಂದರು.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಈ ರಣವೀರ್ ಸಿಂಗ್ ಅವರ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ 4 ಡೋರ್ ಜಿಟಿ ಕಾರಿನ ಬೆಲೆ ಎಕ್ಸ್ ಶೋರೂಂ ಪ್ರಕಾರ ಸುಮಾರು 3.9 ಕೋಟಿ ರೂಪಾಯಿ ಆಗಿದೆ, ಈ ಕಾರಿನಲ್ಲಿ 6.0 ಲೀಟರ್ V12 ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 552 ಬಿಹೆಚ್‍ಪಿ ಪವರ್ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ ಮತ್ತು ಗಂಟೆಗೆ 327 ಕಿಮೀ ಟಾಪ್ ಸ್ಪೀಡ್ ನ್ನೌ ಹೊಂದಿದೆ. ಈ ಕಾರು ಕೇವಲ 4.2 ಸೆಕೆಂಡ್‌ಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಇನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಅನ್ನು ಹೊಂದಿದ್ದಾರೆ. ನಟ ರಣವೀರ್ ಸಿಂಗ್ ಅವರ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಹೊರಭಾಗವು ಅರಾನ್ಸಿಯೋ ಬೋರಿಯಾಲಿಸ್ ಶೇಡ್ ಪಿನಿಶಿಂಗ್ ನಿಂದ ಕೂಡಿದೆ. ಈ ಕಾರು 22 ಇಂಚಿನ ನಾಥ್ ವ್ಹೀಲ್ ಗಳನ್ನು ಪಡೆಯುತ್ತದೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಈ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ರಣವೀರ್ ಅವರ ಸೂಪರ್ ಎಸ್‌ಯುವಿ ಡ್ಯೂಯಲ್ ಟೋನ್ ಬಣ್ಣವನ್ನು ಹೊಂದಿದೆ. ಇದು ಆರೇಂಜ್ ಬಣ್ಣದೊಂದಿಗೆ ಬ್ಲ್ಯಾಕ್ ಬಣ್ಣದ ರೂಫ್ ಅನ್ನು ಹೊಂದಿದೆ. ಇದರ ಶೈನಿ ಬ್ಲ್ಯಾಕ್ ಥೀಮ್ ಬಂಪರ್, ರಾಕರ್ ಕವರ್‌ಗಳು, ಹಿಂಭಾಗದ ಡಿಫ್ಯೂಸರ್ ಮತ್ತು ಸ್ಪಾಯ್ಲರ್ ಲಿಪ್ ಮತ್ತು ಟೈಲ್‌ಗೇಟ್ ರಿಮ್‌ಗಳಿಗೆ ವಿಸ್ತರಿಸುತ್ತದೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಈ ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಎಸ್‍ಯುವಿಯಲ್ಲಿ 4.0 ಲೀಟರಿನ 8-ಸಿಲಿಂಡರ್ ಟ್ವಿನ್-ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 650 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉರುಸ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಪವರ್ ಫುಲ್ ಕಾರುಗಳಲ್ಲಿ ಒಂದಾಗಿದೆ. ಈ ಐಷಾರಾಮಿ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಉದ್ಯಮಿ ಮುಖೇಶ್ ಅಂಬಾನಿ, ನಟ ಕಾರ್ತಿಕ್ ಆರ್ಯನ್, ನಟ ಜೂನಿಯರ್ ಎನ್​ಟಿಆರ್ ಮತ್ತು ನಟ ರಣವೀರ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಈ ಐಷಾರಾಮಿ ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಎಸ್‍ಯುವಿಯನ್ನು ಹೊಂದಿದ್ದಾರೆ. ಈ ಎಸ್‍ಯುವಿಯಲ್ಲಿ 4.0-ಲೀಟರ್, ವಿ8 ಪೆಟ್ರೋಲ್ ಮೋಟಾರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 550 ಬಿಹೆಚ್‍ಪಿ ಪವರ್ ಮತ್ತು 730 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 48-ವೋಲ್ಟ್ ಆನ್‌ಬೋರ್ಡ್ ಎಲೆಕ್ಟ್ರಿಕಲ್ ಸಿಸ್ಟಮ್ ಅನ್ನು ಸಹ ನೀಡುತ್ತದೆ, ಇದು ಇಕ್ಯೂ ಬೂಸ್ಟ್ ಅನ್ನು ಒದಗಿಸುತ್ತದೆ. ಇದು 22 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಎಸ್‍ಯುವಿಯ ಬೆಲೆಯು ಭಾರತದಲ್ಲಿ ರೂ.2.80 ಕೋಟಿಯಾಗಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ನಟನ ಬಹುಕೋಟಿಯ ಐಷಾರಾಮಿ ಸ್ಪೋರ್ಟ್ಸ್ ಕಾರು

ಇನ್ನು ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿಯಾದ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.63 ಕೋಟಿಯಾಗಿದೆ.

Most Read Articles

Kannada
English summary
Bollywood actor ranveer singh modify his sports car new look details
Story first published: Thursday, October 13, 2022, 13:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X