ವಿಮಾನಯಾನದಲ್ಲಿ ಬಾಂಬರ್ಡಿಯರ್ ನವಯುಗ 'ಸಿಎಸ್100' ಎಂಟ್ರಿ

Written By:

ಪ್ರಯಾಣಿಕ ವಾಣಿಜ್ಯ ವಿಮಾನಗಳನ್ನು ಪರಿಗಣಿಸಿದಾಗ ಅಮೆರಿಕದ ಬೋಯಿಂಗ್ ಮತ್ತು ಕೆನಡಾದ ಏರ್ ಬಸ್ ಬೃಹತ್ ಸಂಸ್ಥೆಗಳಾಗಿ ಹೊರಹೊಮ್ಮಿದ್ದು, ವಿಶಾಲವಾದ ಮಾರಾಟ ವಲಯವನ್ನು ವಶಪಡಿಸಿಕೊಂಡಿದೆ. ಇವೆಲ್ಲದರ ನಡುವೆ ಮೂರನೇ ಸ್ಥಾನಕ್ಕಾಗಿ ಬ್ರೆಜಿಲ್ ನ ಎಂಬ್ರೇಯರ್ ಮತ್ತು ಕೆನಡಾದ ಬಾಂಬರ್ಡಿಯರ್ ಏರೋಸ್ಪೇಸ್ ನಡುವೆ ನಿಕಟ ಪೈಪೋಟಿಯು ಏರ್ಪಟ್ಟಿದೆ.

ಅತ್ಯಾಧುನಿಕ ಜೊತೆಗೆ ಗರಿಷ್ಠ ತಂತ್ರಜ್ಞಾನಕ್ಕೆ ಮೊರೆ ಹೋಗಿರುವ ಬಾಂಬರ್ಡಿಯರ್ ಅತಿ ನೂತನ 'ಸಿಎಸ್100' ವಿಮಾನವನ್ನು ಸ್ವಿಸ್ ಅಂತರಾಷ್ಟ್ರೀಯ ಏರ್ ಲೈನ್ಸ್ ಗೆ ಹಸ್ತಾಂತರಿಸಿದ್ದು, ಜಾಗತಿಕ ವಿಮಾನಯಾನದಲ್ಲಿ ನವಯುಗ ಸೃಷ್ಟಿ ಮಾಡುವ ಭರವಸೆ ಹೊಂದಿದೆ.

To Follow DriveSpark On Facebook, Click The Like Button
ವಿಮಾನಯಾನದಲ್ಲಿ ಬಾಂಬರ್ಡಿಯರ್ ನವಯುಗ 'ಸಿಎಸ್100' ಎಂಟ್ರಿ

ಬಾಂಬರ್ಡಿಯರ್ 'ಸಿ' ಶ್ರೇಣಿಯ ಕುಂಟುಬಕ್ಕೆ ಸೇರಿದ ಟ್ವಿನ್ ಎಂಜಿನ್ ನಿಯಂತ್ರಿತ, ಮಧ್ಯಮ ವ್ಯಾಪ್ತಿಯ ಜೆಟ್ ವಿಮಾನವಾಗಿರುವ ಸಿಎಸ್100, ಎಂಬ್ರೇಯರ್ ಇ195-ಇ2 ವಿಮಾನಕ್ಕೆ ನೇರ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ವಿಮಾನಯಾನದಲ್ಲಿ ಬಾಂಬರ್ಡಿಯರ್ ನವಯುಗ 'ಸಿಎಸ್100' ಎಂಟ್ರಿ

100ರಿಂದ 150 ಯಾತ್ರಿಕರನ್ನು ಹೊತ್ತೊಯ್ಯುವ ಸಾಮರ್ಥ್ಯದ ಬಾಂಬರ್ಡಿಯರ್ ಸಿಎಸ್100, ಹೆಚ್ಚು ಅಗಲವಾದ ಸೀಟು ಹಾಗೂ ದೊಡ್ಡದಾದ ವಿಂಡೋಗಳನ್ನು ಪಡೆದಿದೆ.

ವಿಮಾನಯಾನದಲ್ಲಿ ಬಾಂಬರ್ಡಿಯರ್ ನವಯುಗ 'ಸಿಎಸ್100' ಎಂಟ್ರಿ

ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ಬಾಂಬರ್ಡಿಯರ್ ನೂತನ ಸಿಎಸ್100 ಹೆಚ್ಚು ಅಗಲವಾದ 48.3 ಸೆಂಟಿಮೀಟರ್ ಸೀಟು ವ್ಯವಸ್ಥೆಯನ್ನು ಪಡೆಯಲಿದೆ. ಇಲ್ಲಿ ಬೋಯಿಂಗ್ 737 (43.9 ಸೆಂಟಿಮೀಟರ್), ಏರ್ ಬಸ್ ಎ319 (45.7 ಸೆಂಟಿಮೀಟರ್) ಮತ್ತು ಎಂಬ್ರೇಯರ್ ಇ195-ಇ2 (46.5 ಸೆಂಟಿಮೀಟರ್) ವಿಮಾನಗಳನ್ನೇ ಬಾಂಬರ್ಡಿಯರ್ ಹಿಂದಿಕ್ಕಿದೆ.

ವಿಮಾನಯಾನದಲ್ಲಿ ಬಾಂಬರ್ಡಿಯರ್ ನವಯುಗ 'ಸಿಎಸ್100' ಎಂಟ್ರಿ

ಪ್ರಾಂಟ್ ಮತ್ತು ವಿಟ್ನಿ ಪ್ಯೂರ್ ಪವರ್ ಪಿಡಬ್ಲ್ಯು1599ಜಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಾಂಬರ್ಡಿಯರ್ ವಿಮಾನವು 6112 ಕೀ.ಮೀ. ವ್ಯಾಪ್ತಿಯ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

ವಿಮಾನಯಾನದಲ್ಲಿ ಬಾಂಬರ್ಡಿಯರ್ ನವಯುಗ 'ಸಿಎಸ್100' ಎಂಟ್ರಿ

ವಿಮಾನದ ಆಕಾರಕ್ಕೆ ತಕ್ಕಂತೆ ಎಂಜಿನ್ ಜೋಡಣೆ ಮಾಡಲಾಗಿರುವುದರಿಂದ ಹೆಚ್ಚು ಇಂಧನ ಕ್ಷಮತೆ, ಕಡಿಮೆ ಎಮಿಷನ್ ಹಾಗೂ ಪ್ರಯಾಣಿಕರಿಗೆ ಆರಾಮದಾಯಕ ಹಾರಾಟವನ್ನು ಖಾತ್ರಿಪಡಿಸಲಿದೆ.

ವಿಮಾನಯಾನದಲ್ಲಿ ಬಾಂಬರ್ಡಿಯರ್ ನವಯುಗ 'ಸಿಎಸ್100' ಎಂಟ್ರಿ

ನೂತನ ಬಾಂಬರ್ಡಿಯನ್ ಸಿಎಸ್100 ಸೇವೆ ಗಿಟ್ಟಿಸಿಕೊಳ್ಳಲಿರುವ ಮೊದಲ ವಿಮಾನಯಾನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಸ್ವಿಸ್ ಅಂತರಾಷ್ಟ್ರೀಯ ಏರ್ ಲೈನ್ಸ್ ಪಾತ್ರವಾಗಿದೆ. ಅಲ್ಲದೆ ಜುಲೈ 15ರಂದು ಸ್ವಿಜರ್ಲೆಂಡ್ ನ ಜ್ಯೂರಿಕ್ ನಿಂದ ಫ್ರಾನ್ಸ್ ನ ಪ್ಯಾರಿಸ್ ಗೆ ಮೊದಲ ಯಾನವನ್ನು ಹಮ್ಮಿಕೊಂಡಿದೆ.

ವಿಮಾನಯಾನದಲ್ಲಿ ಬಾಂಬರ್ಡಿಯರ್ ನವಯುಗ 'ಸಿಎಸ್100' ಎಂಟ್ರಿ

ಬಾಂಬರ್ಡಿಯರ್ ಸಿ ಶ್ರೇಣಿಯ ವಿಮಾನಗಳ ಅಭಿವೃದ್ಧಿಯು ಕಳೆದ ಮೂರು ದಶಕಗಳಿಂದಲೇ ನಡೆಯುತ್ತಿದ್ದು, ನಿರಂತರ ವಿನ್ಯಾಸ ಹಾಗೂ ತಂತ್ರಗಾರಿಕೆಯ ಫಲವಾಗಿ ಅತಿ ನೂತನ ಸಿಎಸ್100 ರನ್ವೇಗೆ ಇಳಿದಿದೆ.

Read more on ವಿಮಾನ plane
English summary
Bombardier Delivers First C Series Aircraft to Launch Operator SWISS
Story first published: Monday, July 25, 2016, 12:43 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark