ಅಯ್ಯೋ ರಾಮ...ಕಾರಿಗೂ ಸಮಾಧಿ

Written By:

ನಿಮ್ಮಗೆಲ್ಲರಿಗೂ ಈಜಿಪ್ಟಿನ ಮಮ್ಮಿಗಳ ಬಗ್ಗೆ ತಿಳಿದಿದೆ. ಯಾವುದೇ ಮನುಷ್ಯ ಅಥವಾ ಪ್ರಾಣಿಯು ಸಾವನ್ನಪ್ಪಿದ ನಂತರ ಅದರ ದೇಹವು ಕೊಳೆಯಲಾರಂಭಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ದೇಹವು ಸಂಪೂರ್ಣವಾಗಿ ಮಣ್ಣಿಗೆ ಸೇರಲ್ಪಡುತ್ತದೆ. ಆದರೆ, ಮೃತ ದೇಹಗಳನ್ನು ಈ ರೀತಿಯಾಗಿ ನಶಿಸಿಹೋಗಲು ಬಿಡದೆ, ಹಲವು ವರ್ಷಗಳ ಕಾಲ ಅವು ಕ್ಷಯಿಸಿ ಹೋಗದಂತೆ ಸಂರಕ್ಷಿಸಿಡುವ ವಿಶಿಷ್ಟ ಪದ್ಧತಿಯನ್ನು ಪ್ರಾಚೀನ ಈಜಿಪ್ಟ್‌ನಲ್ಲಿ ಅನುಸರಿಸಿಕೊಂಡು ಬರಲಾಗಿತ್ತು. ಹೀಗೆ ಹಲವಾರು ವರ್ಷಗಳ ಕಾಲ ಕ್ಷಯಿಸದಂತೆ ಸಂರಕ್ಷಿಸಿಡಲ್ಪಟ್ಟ ಮನುಷ್ಯ ಅಥವಾ ಪ್ರಾಣಿಯ ದೇಹಗಳನ್ನು ಮಮ್ಮಿಗಳೆಂದು ಕರೆಯಲ್ಪಡುತ್ತದೆ.

ಬಹುಪಾಲು ಮಮ್ಮಿಗಳು ಈಜಿಫ್ಟ್ ದೇಶದ ಪಿರಮಿಡ್ಡುಗಳಲ್ಲಿ ಕಂಡುಬಂದಿವೆ. ಹಾಗೆಂದ ಮಾತ್ರಕ್ಕೆ ಈಜಿಪ್ಟಿನ ಜನತೆ ಸಾವಿನ ನಂತರವೂ ಒಂದು ಜೀವನವಿರುತ್ತದೆ (Life After Death) ಎಂಬುದಾಗಿ ನಂಬಿದ್ದರು. ಹೀಗಾಗಿ ಮೃತ ವ್ಯಕ್ತಿಯನ್ನು ಆತನ ಮರಣಾ ನಂತರದ ಜಗತ್ತಿಗೆ ಸುರಕ್ಷಿತವಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ಮೃತ ದೇಹಗಳನ್ನು ಮಮ್ಮಿಗಳ ರೂಪದಲ್ಲಿ ಸಂರಕ್ಷಿಸಿಡುತ್ತಿದ್ದರು.

ಇಂದಿನ ಆಧುನಿಕ ಯುಗದಲ್ಲೂ ಇದನ್ನು ನಂಬಿಕೊಂಡು ಬಂದಿರುವ ಬ್ರೆಜಿಲ್ ಉದ್ಯಮಿಯೊಬ್ಬ ಮರಣದ ಬಳಿಕ ತನ್ನ ಬಳಿರುವ ದುಬಾರಿ ಬೆಂಟ್ಲಿ ಕಾರನ್ನು ಸಹ ಸಮಾಧಿ ಮಾಡಲು ಬಯಸಿದ್ದಾರೆ. ಈ ರೋಚಕ ಸುದ್ದಿಯ ಸಂಪೂರ್ಣ ಮಾಹಿತಿ ಪಡೆಯಲು ಸ್ಲೈಡರ್‌ನತ್ತ ಮುಂದುವರಿಯಿರಿ...

ಅಯ್ಯೋ ರಾಮ...ಕಾರಿಗೂ ಸಮಾಧಿ

ಬ್ರೆಜಿಲ್ ಉದ್ಯಮಿ Chiquinho Scarpa ಎಂಬವರು 3 ಕೋಟಿಗಳಷ್ಟು ಬೆಳೆಬಾಳುವ ದುಬಾರಿ ಬೆಂಟ್ಲಿ ಕಾಂಟಿನೆಂಟ್ ಫ್ಲೈಯಿಂಗ್ ಸ್ಪರ್ ಸಮಾಧಿ ಮಾಡಲು ನಿರ್ಧರಿಸಿದ್ದಾರೆ. ಇದರಂತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಬೆಂಟ್ಲಿ ಕಾರಿಗಾಗಿ ಹೊಂಡ ಕೂಡಾ ಹೂತಿದ್ದಾನೆ.

ಅಯ್ಯೋ ರಾಮ...ಕಾರಿಗೂ ಸಮಾಧಿ

ತನ್ನ ಮರಣದ ಬಳಿಕವೂ ಐಷಾರಾಮಿ ಸೌಲಭ್ಯವನ್ನು ಅನುಭವಿಸುವುದು ಈತನ ಇರಾದೆಯಾಗಿದೆ. ಈ ನಿಟ್ಟಿನಲ್ಲಿ ಕಾರನ್ನು ಸಮಾಧಿ ಮಾಡಲು ನಿರ್ಧರಿಸಿದ್ದಾರೆ.

ಅಯ್ಯೋ ರಾಮ...ಕಾರಿಗೂ ಸಮಾಧಿ

ಆದರೆ ಬ್ರೆಜಿಲ್ ಉದ್ಯಮಿಯ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಟೀಕೆ ವ್ಯಕ್ತವಾಗಿದೆ. ಕೆಲವು ಪ್ರಜ್ಞಾವಂತರಂತೂ ಹೀಗೆಲ್ಲ ಸಮಾಧಿ ಮಾಡುವ ಬದಲು ಹರಾಜು ಮಾಡಿ ಹಣ ಸಂಪಾದಿಸಬಾರದಿತ್ತೇ ಎಂಬ ಪ್ರಶ್ನೆ ಕೂಡಾ ಹಾಕಿದ್ದಾರೆ.

ಅಯ್ಯೋ ರಾಮ...ಕಾರಿಗೂ ಸಮಾಧಿ

ಹಾಗಿದ್ದರೂ ಮರುದಿನವೇ ಫೇಸ್‌ಬುಕ್‌ನಲ್ಲಿ ಮತ್ತೊಂದು ಅಚ್ಚರಿಯ ಪ್ರತಿಕ್ರಿಯೆ ನೀಡಿರುವ 62ರ ಹರೆಯದ ಉದ್ಯಮಿಯು, ಇವೆಲ್ಲವೂ ಬ್ರೆಜಿಲ್ ರಾಷ್ಟ್ರೀಯ ವಾರ ಅವಯವ ಸಹಯಾರ್ಥ ಸಂಸ್ಥೆಯ ಪ್ರಚಾರಾರ್ಥವಾಗಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಅಯ್ಯೋ ರಾಮ...ಕಾರಿಗೂ ಸಮಾಧಿ

ಕಾರನ್ನು ಸಮಾಧಿ ಮಾಡತ್ತೇನೆಂದು ಅಂದಾಗ ಎಲ್ಲರೂ ಗೊಂದಲಕ್ಕೊಳಗಾಗಿದ್ದರು. ಆದರೆ ಇದು ಅವಯವ ದಾನ ಮಾಡುವ ಸಂಸ್ಥೆಯ ಪ್ರಚಾರಕ್ಕಾಗಿ ಮಾಡಲಾಗಿತ್ತು. ಇದೀಗ ನಿಮ್ಮ ದೇಹವನ್ನು ಸಮಾಧಿ ಮಾಡುವ ಮೊದಲು ದೇಹದ ಅವಯವಗಳನ್ನು ದಾನ ಮಾಡಿದ್ದಲ್ಲಿ ಅನೇಕ ಜೀವಗಳನ್ನು ರಕ್ಷಿಸಬಹುದಾಗಿದೆ ಎಂದು ಹೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ.

ವೀಡಿಯೊ ವೀಕ್ಷಿಸಿ

English summary
A Brazilian businessman caused a stir recently on social networking site Facebook when he posted a photo of himself standing with a shovel, apparently digging a grave to bury his beloved Bentley Continental Flying Spur. The luxury sedan is also seen in the background.
Story first published: Wednesday, September 25, 2013, 11:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark