ಭಾರತಕ್ಕೆ ಜಗತ್ತಿನ ಅತ್ಯಂತ ವೇಗದ ಬುಲೆಟ್ ಟ್ರೈನ್ ಪರಿಚಯಿಸಿದ ಮೋದಿ !

Written By:

ಅಹಮದಾಬಾದ್ - ಮುಂಬೈ ನಡುವಿನ 508 ಕಿ.ಮೀ ಉದ್ದದ ಭಾರತದ ಮೊದಲ ಬುಲೆಟ್ ಟ್ರೈನ್ ಮಾರ್ಗದ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆಯನ್ನು ಕೇಂದ್ರ ಸರ್ಕಾರ ನೆರವೇರಿಸಿದೆ.

ಕೊನೆಗೂ ಭಾರತಕ್ಕೆ ಜಗತ್ತಿನ ಅತ್ಯಂತ ವೇಗದ ಬುಲೆಟ್ ಟ್ರೈನ್ ಪರಿಚಯಿಸಿದ ಮೋದಿ !

ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಬಹು ನಿರೀಕ್ಷಿತ ಬುಲೆಟ್‌ ಟ್ರೈನ್‌ ಯೋಜನೆಗೆ ಜಂಟಿಯಾಗಿ ಶಿಲಾನ್ಯಾಸ ನೆರವೇರಿಸಿದ್ದಾರೆ ಹಾಗು ಮುಂಬರುವ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ನೆನಪಿಗಾಗಿ 2022ರ ಆಗಸ್ಟ್‌ 15ರಂದು ಬುಲೆಟ್‌ ಟ್ರೈನ್‌ ಸಂಚಾರ ಆಂಭಿಸುವ ವಿಶ್ವಾಸವನ್ನು ಮೋದಿ ಸರ್ಕಾರ ವ್ಯಕ್ತಪಡಿಸಿದೆ.

ಕೊನೆಗೂ ಭಾರತಕ್ಕೆ ಜಗತ್ತಿನ ಅತ್ಯಂತ ವೇಗದ ಬುಲೆಟ್ ಟ್ರೈನ್ ಪರಿಚಯಿಸಿದ ಮೋದಿ !

ಬುಲೆಟ್‌ ಟ್ರೈನ್‌ ಯೋಜನೆ ಪೂರ್ಣಗೊಳ್ಳಲು ಸರಿಸುಮಾರು 1,10,000 ಕೋಟಿ ರೂಪಾಯಿ ಅಂದಾಜು ವೆಚ್ಚ ತಗುಲಲಿದ್ದು, ಇದರಲ್ಲಿ 88,000 ಕೋಟಿ ರೂಪಾಯಿ ಸಾಲವನ್ನು ಜಪಾನ್ ಭಾರತಕ್ಕೆ ನೀಡುತ್ತಿದೆ.

ಕೊನೆಗೂ ಭಾರತಕ್ಕೆ ಜಗತ್ತಿನ ಅತ್ಯಂತ ವೇಗದ ಬುಲೆಟ್ ಟ್ರೈನ್ ಪರಿಚಯಿಸಿದ ಮೋದಿ !

"ಒಂದು ದೇಶದ ಅಭಿವೃದ್ಧಿಯಲ್ಲಿ ಸಾರಿಗೆ ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲಿದ್ದು, ಬುಲೆಟ್ ಟ್ರೈನ್ ಕಾಮಗಾರಿಯಿಂದ ಜನರಿಗೆ 16 ಸಾವಿರ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ" ಎಂದು ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೊನೆಗೂ ಭಾರತಕ್ಕೆ ಜಗತ್ತಿನ ಅತ್ಯಂತ ವೇಗದ ಬುಲೆಟ್ ಟ್ರೈನ್ ಪರಿಚಯಿಸಿದ ಮೋದಿ !

ಕಾರ್ಯಕ್ರಮದಲ್ಲಿ ಗುಜರಾತ್‌ ಸಿಎಂ ವಿಜಯ್‌ ರೂಪಾನಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್‌ ಹಾಗೂ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕೊನೆಗೂ ಭಾರತಕ್ಕೆ ಜಗತ್ತಿನ ಅತ್ಯಂತ ವೇಗದ ಬುಲೆಟ್ ಟ್ರೈನ್ ಪರಿಚಯಿಸಿದ ಮೋದಿ !

ಬುಲೆಟ್ ಟ್ರೈನ್‌ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚಾರ ಮಾಡಲಿದ್ದು, ಎರಡೂ ನಗರಗಳ ಮಧ್ಯೆ ಕೇವಲ 2 ಗಂಟೆಗಳಲ್ಲಿ ಸಂಚರಿಸಬಹುದು. ಮುಂಬೈ-ಅಹಮದಾಬಾದ್ ಮಾರ್ಗ ಮಧ್ಯೆ ಒಟ್ಟು 10 ನಿಲ್ದಾಣಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ ಮತ್ತು ರೂ. 3,000 ರಿಂದ ರೂ. 5,000ವರೆಗೂ ಟಿಕೆಟ್‌ ಬೆಲೆ ನಿಗದಿ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಕೊನೆಗೂ ಭಾರತಕ್ಕೆ ಜಗತ್ತಿನ ಅತ್ಯಂತ ವೇಗದ ಬುಲೆಟ್ ಟ್ರೈನ್ ಪರಿಚಯಿಸಿದ ಮೋದಿ !

ಮುಂಬೈ, ಅಹಮದಾಬಾದ್ ನಡುವೆ ಬುಲೆಟ್ ರೈಲು ಓಡಾಡಲಿದ್ದು, ಫಾಸ್ಟ್ ಟ್ರ್ಯಾಕ್ ನಲ್ಲಿ ಹೊಸ ಭಾರತ ನಿರ್ಮಾಣವಾಗುತ್ತಿದೆ. ಸದ್ಯ ಮುಂಬೈ-ಅಹಮದಾಬಾದ್ ನಡುವಿನ ಸಂಚಾರಕ್ಕೆ ಕನಿಷ್ಠ 7 ಗಂಟೆ ಅವಧಿ ಬೇಕೇ ಬೇಕು... ಇಂತಹ ಸನ್ನಿವೇಶದಲ್ಲಿ ಕೇವಲ 2 ಗಂಟೆಗಳಲ್ಲಿ ನಗರಗಳನ್ನು ತಲುಪುವ ಈ ಮಹತ್ತರ ಹೆಜ್ಜೆ ದೇಶದ ಹೆಮ್ಮೆ ಎನ್ನಬಹುದು.

Read more on ರೈಲು train
English summary
Prime Minister Narendra Modi and visiting Japanese PM Shinzo Abe launched work on India's first bullet train at Gujarat's Ahmedabad on Thursday this morning.
Story first published: Thursday, September 14, 2017, 12:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark