ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ಬಂದ್ರೆ ವರ್ಕೌಟ್ ಆಗುತ್ತಾ..?

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಚಾಲನೆ ಸಾಮಾನ್ಯವಾಗಿ ತುಸು ಹೆಚ್ಚಿಗೆ ಇದ್ದೆ ಇರುತ್ತೆ. ಆದ್ರೆ ಮೀತಿ ಮೀರಿದ ವೇಗದ ಚಾಲನೆ ತಡೆಯಲು ದುಬೈ ಪೊಲೀಸರು ಮಾಡಿದ ಹೊಸ ಪ್ಲ್ಯಾನ್ ಕೇಳಿದ್ರೆ ನಿಮಗೆ ಶಾಕ್ ಆಗದೆ ಇರಲಾರದು.

By Praveen

ಗಲ್ಫ್ ರಾಷ್ಟ್ರಗಳಲ್ಲಿ ಇತ್ತೀಚಿಗೆ ಸೂಪರ್ ಕಾರುಗಳು ಮತ್ತು ಸೂಪರ್ ಬೈಕ್‌ಗಳ ಖರೀದಿ ಭರಾಟೆ ಹೆಚ್ಚಾಗುತ್ತಿದ್ದು, ಅಪಘಾತಗಳ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ದುಬೈ ಪೊಲೀಸರು, ಹೊಸ ಪ್ಲ್ಯಾನ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ವೇಗದ ಚಾಲನೆಗೆ ಕಡಿವಾಣ ಹಾಕಲು ಹೆದ್ದಾರಿಗಳಲ್ಲಿ ಎಷ್ಟೇ ಸೂಕ್ತ ಕ್ರಮ ಕೈಗೊಂಡರು ಪದೇ ಪದೇ ಅಪಘಾತ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಇದನ್ನು ಮನಗಂಡಿರುವ ದುಬೈ ಪೊಲೀಸರು, ಹೆದ್ದಾರಿಗಳಲ್ಲಿ ನಕಲಿ ಗಸ್ತು ವಾಹನಗಳನ್ನು ನಿಯೋಜನೆ ಮಾಡಿ ಅತಿವೇಗವಾಗಿ ಸವಾರಿ ಮಾಡುವರಿಗೆ ಶಾಕ್ ನೀಡಿದ್ದಾರೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಅಲ್ಲಲ್ಲಿ ಮಿನುಗುವ ದೀಪಗಳಿಂದ ಕೂಡಿರುವ ನಕಲಿ ಗಸ್ತು ವಾಹನಗಳ ಕಟೌಟ್ ಇರಿಸಿಲಾಗಿದ್ದು, ಎಷ್ಟೋ ಜನ ಈ ಗಸ್ತು ವಾಹನ ನೋಡಿ ವೇಗದ ಚಾಲನೆಯನ್ನೇ ಕಡಿಮೆ ಮಾಡಿದ್ದಾರೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ದುಬೈನ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿರುವ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ರಸ್ತೆಯಲ್ಲಿ ಪ್ರತಿ ಗಂಟೆಗೆ 120 ಕಿ.ಲೋ ವೇಗದ ಪ್ರಯಾಣಕ್ಕೆ ಅವಕಾಶವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೂಪರ್ ಕಾರುಗಳ ಹಾವಳಿ ಹೆಚ್ಚಾಗುತ್ತಿದ್ದು, ಪ್ರತಿ ಗಂಟೆಗೆ 150ಕಿ.ಮಿ ಗಿಂತಲೂ ಹೆಚ್ಚು ವೇಗದಲ್ಲಿ ವಾಹನ ಚಾಲನೆ ಮಾಡುವುದು ಸಾಮಾನ್ಯವಾಗುತ್ತಿದೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ವೇಗದ ಪ್ರಯಾಣಕ್ಕೆ ಬ್ರೇಕ್ ಹಾಕಲು ದುಬೈ ಪೊಲೀಸರು ಮಾಡಿರುವ ಕೆಲವು ಕಠಿಣ ಕ್ರಮಗಳಿಗೂ ಅಲ್ಲಿನ ಜನ ಕ್ಯಾರೆ ಅನ್ನದೇ ವೇಗದ ಚಾಲನೆ ಮಾಡುತ್ತಿರುವುದು ಪೊಲೀಸರಿಗೂ ಸವಾಲ್ ಆಗಿದೆ. ಹೀಗಾಗಿ ಹೊಸದೊಂದು ಪ್ಲ್ಯಾನ್ ಮಾಡಿ ಅಲ್ಲಲ್ಲಿ ನಕಲಿ ಕಟೌಟ್ ಹಾಕಿದ್ದಾರೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ದುಬೈ ಪೊಲೀಸರು ಮಾಡಿರುವ ಈ ಪ್ಲ್ಯಾನ್‌ ಕೆಲವರಿಗೆ ನಿದ್ದೆಗೆಡಿಸಿದ್ದು ಮಾತ್ರ ಸುಳ್ಳಲ್ಲ. ಯೂರೋಪಿನ್ ರಾಷ್ಟ್ರಗಳಗೆ ಸಂಪರ್ಕ ಕಲ್ಪಿಸುವ ಕೆಲವು ಪ್ರಮುಖ ಹೆದ್ದಾರಿಗಳಲ್ಲಿ ಈ ರೀತಿಯ ನಕಲಿ ಕಟೌಟ್‌ಗಳನ್ನು ಹಾಕಲಾಗಿದ್ದು, ವೇಗ ಪ್ರಯಾಣಕ್ಕೆ ಬ್ರೇಕ್ ಬಿದ್ದಿದೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ವೇಗದ ಪ್ರಯಾಣದ ಸಂದರ್ಭದಲ್ಲಿ ಎಷ್ಟೋ ಜನ ಈ ಕೆಂಪು ಗೂಟದ ಕಾರು ನೋಡಿ ವೇಗದ ಪ್ರಯಾಣಕ್ಕೆ ಬ್ರೇಕ್ ಹಾಕಿದ್ದಾರೆ. ಅಲ್ಲದೇ ಪೊಲೀಸರ ಕೈಗೆ ಸಿಕ್ಕಿಬಿಳ್ಳುವ ಭಯದಿಂದ ಪ್ರಯಾಣದ ಮಾರ್ಗವನ್ನೇ ಬದಲಿಸಿರುವ ಘಟನೆಗಳು ನಡೆದಿದೆ.

ಭಾರತೀಯ ಮೂಲದ ಉದ್ಯಮಿಯೊಬ್ಬರಿಗೆ ಇದೇ ರೀತಿಯ ಅನುಭವಾಗಿದ್ದು, ಕೆಂಪು ಗೂಟದ ಕಾರು ಕಂಡು ವೇಗದ ಪ್ರಯಾಣಕ್ಕೆ ಬ್ರೇಕ್ ಹಾಕಿದ್ದಾರೆ. ಆದ್ರೆ ಕಾರಿನ ಹೊರ ವಿನ್ಯಾಸ ಕಂಡು ಸಂಶಯ ಬಂದಿದೆ. ಕಾರಿನಿಂದ ಇಳಿದು ನೋಡಿದರೆ ಅದು ನಕಲಿ ಕಟೌಟ್ ಎಂದು ತಿಳಿದು ಶಾಕ್ ಆಗಿದ್ದಾರೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗ ನಿಯಂತ್ರಣಕ್ಕೆ ಪೊಲೀಸರ ಕಟೌಟ್‌ಗಳನ್ನು ಹಾಕುತ್ತಿರುವುದು ಸಾಮಾನ್ಯವಾಗುತ್ತಿದೆ. ಆದ್ರೆ ದುಬೈ ಪೊಲೀಸರು ಮಾಡಿರುವ ಈ ಪ್ಲ್ಯಾನ್ ಮಾತ್ರ ಭಾರೀ ಚರ್ಚೆಗೆ ಕಾರಣವಾಗಿದ್ದು, ವೇಗದ ಪ್ರಯಾಣಕ್ಕೂ ಬ್ರೇಕ್ ಬಿದ್ದಿದೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ಇನ್ನು ಹೊಸ ಪ್ಲ್ಯಾನ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿರುವ ಹಿನ್ನೆಲೆ ದುಬೈ ಪೊಲೀಸರ ಹೊಸ ಯೋಜನೆಗೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಆದರೂ ಈ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿರುವ ಪೊಲೀಸರು, ಮತ್ತಷ್ಟು ನಕಲಿ ಕಟೌಟ್ ಹಾಕುವ ಯೋಜನೆಯಲ್ಲಿದ್ದಾರೆ.

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ಒಂದು ವೇಳೆ ನಮ್ಮಲ್ಲೂ ವೇಗದ ನಿಯಂತ್ರಣಕ್ಕೆ ನಕಲಿ ಗಸ್ತು ವಾಹನಗಳ ಕಟೌಟ್ ಹಾಕಿದ್ರೆ ಹೇಗಿರುತ್ತೆ? ಹೀಗಂತ ಯೋಚನೆ ಮಾಡಿದ್ರೆ ಅದು ಖಂಡಿತವಾಗಿಯೂ ಸಕ್ಸಸ್ ಆಗಲಾರದು. ಯಾಕೇಂದ್ರೆ ನಮ್ಮ ಜನ ಇಂತಹ ಪ್ಲ್ಯಾನ್‌ಗಳಿಗೆ ಮೂರ್ಖರಾಗೋದಿಲ್ಲ ಬಿಡಿ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ....

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

F1 ರೇಸ್ ಕಾರ್ ಇದೀಗ ಪಿಂಕ್ ಮಯ- ಟ್ರೋಲ್ ಹೈಕ್ಳಿಗೆ ಆಹಾರವಾದ ವಿಜಯ್ ಮಲ್ಯ..!!

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ದುಬಾರಿ ಬೈಕ್ ಖರೀದಿ ಇನ್ನು ಅಷ್ಟು ಸುಲಭವಲ್ಲ- ಬೃಹತ್ ಆದಾಯಕ್ಕೆ ಕೈ ಹಾಕಿದ ಸಿಎಂ ಸಿದ್ದರಾಮಯ್ಯ..!!

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಫೋಟೋ ಗ್ಯಾಲರಿಯನ್ನು ವೀಕ್ಷಿಸಿ

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

ಇದೇ ವರ್ಷ ಬಿಡುಗಡೆಗೊಳ್ಳಲಿರುವ ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ 2017 ಕಾರಿನ ಚಿತ್ರಗಳನ್ನು ವೀಕ್ಷಿಸಿ.

Most Read Articles

Kannada
Read more on ಪೊಲೀಸ್ police
English summary
[Read in kannada] Screengrab taken from a Facebook video showing full size cardboard cutouts of a police cars in dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X