ಜಲಾವೃತ ಚೆನ್ನೈನಲ್ಲಿ ಓಲಾ ಉಚಿತ ಬೋಟ್ ಸೇವೆ

By Nagaraja

ಟ್ಯಾಕ್ಸಿ ಸೇವೆಯಿಂದಲೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜನಪ್ರಿಯವೆನಿಸಿರುವ ಓಲಾ ಕ್ಯಾಬ್ಸ್ ಈಗ ಪ್ರವಾಹದಿಂದ ತುಂಬಿ ಹರಿಯುತ್ತಿರುವ ಚೆನ್ನೈನಲ್ಲಿ ಅತಿ ವಿಶಿಷ್ಟ ಬೋಟ್ ಸೇವೆಯನ್ನು ಆರಂಭಿಸುವ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಚುರುಕು ಮುಟ್ಟಿಸಿದೆ.

ಕಳೆದ ಕೆಲವು ದಿನಗಳಲ್ಲಿ ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹದ ಸ್ಥಿತಿಯುಂಟಾಗಿದ್ದು, ಈ ನಿಟ್ಟಿನಲ್ಲಿ ಸಂತ್ರಸ್ತ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತಲುಪಲು ಓಲಾ ಉಚಿತ ಬೋಟ್ ಸರ್ವೀಸ್ ನೀಡುತ್ತಿದೆ. ಪ್ರಸ್ತುತ ಓಲಾ ಮಾಡಿರುವ ಪ್ರಯತ್ನವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಜಲಾವೃತ ಚೆನ್ನೈನಲ್ಲಿ ಓಲಾ ಉಚಿತ ಬೋಟ್ ಸೇವೆ

ಚೆನ್ನೈ ಹಾಗೂ ಸಮೀಪದ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಜಲಾವೃತ ಚೆನ್ನೈನಲ್ಲಿ ಓಲಾ ಉಚಿತ ಬೋಟ್ ಸೇವೆ

ಪ್ರಸ್ತುತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಓಲಾ ಕ್ಯಾಬ್ಸ್, ಜಲಾವೃತ ಪ್ರದೇಶಗಳಿಗೆ ಬೋಟ್ ರವಾನಿಸಿದೆ. ಆರಂಭದಲ್ಲಿ ಜನರಲ್ಲಿ ಹಾಸ್ಯ ಮೂಡಿಸಿದರೂ ಬಳಿಕ ಓಲಾ ಮಹತ್ವದ ಬಗ್ಗೆ ಅರಿವಿಗೆ ಬಂದಿದೆ.

ಜಲಾವೃತ ಚೆನ್ನೈನಲ್ಲಿ ಓಲಾ ಉಚಿತ ಬೋಟ್ ಸೇವೆ

ಓಲಾ ರವಾನಿಸುತ್ತಿರುವ ಪ್ರತಿ ಬೋಟ್ ನಲ್ಲೂ ಇಬ್ಬರು ನುರಿತ ನಾವಿಕರನ್ನು ನೇಮಕ ಮಾಡಲಾಗಿದೆ. ಅಲ್ಲದೆ ಇದರಲ್ಲಿ ಐದರಿಂದ ಒಂಬತ್ತು ಮಂದಿಯನ್ನು ಏಕಕಾಲಕ್ಕೆ ರಕ್ಷಣೆ ಮಾಡಲಾಗುತ್ತಿದೆ.

ಜಲಾವೃತ ಚೆನ್ನೈನಲ್ಲಿ ಓಲಾ ಉಚಿತ ಬೋಟ್ ಸೇವೆ

ಜನರನ್ನು ಸುರಕ್ಷಿತ ಪ್ರದೇಶಕ್ಕೆ ತಲುಪಿಸುವುದು ಮಾತ್ರವಲ್ಲದೆ ಪ್ರವಾಹಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಆಹಾರವನ್ನು ತಲುಪಿಸುವ ಪ್ರಯತ್ನವನ್ನು ಓಲಾ ಮಾಡುತ್ತಿದೆ.

ಜಲಾವೃತ ಚೆನ್ನೈನಲ್ಲಿ ಓಲಾ ಉಚಿತ ಬೋಟ್ ಸೇವೆ

ಅಷ್ಟಕ್ಕೂ ಇವೆಲ್ಲ ಬೋಟ್ ಗಳು ಓಲಾಗೆ ಎಲ್ಲಿಂದ ಲಭಿಸಿತ್ತು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಚೆನ್ನೈನ ಸ್ಪೋರ್ಟ್ ಫಿಶಿಂಗ್ ಸಂಸ್ಥೆಯು ಬೋಟ್ ಗಳನ್ನು ಒದಗಿಸಿದೆ.

Most Read Articles

Kannada
English summary
Chennai Flood: Ola sends boats to help people
Story first published: Wednesday, November 18, 2015, 9:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X