ಪ್ರಪಂಚದ ಅದೃಷ್ಟವಂತ ಮಗುವಿನ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ನೋಡಿ !!
ನಗರದ ಮಧ್ಯಭಾಗದಲ್ಲಿರುವ ರಸ್ತೆಯ ಮೇಲೆ ಚಲಿಸುತ್ತಿದ್ದ ಕಾರೊಂದಕ್ಕೆ ಮಗುವೊಂದು ಸಿಕ್ಕರೂ ಸಹ ಯಾವುದೇ ರೀತಿಯ ಪ್ರಾಣಾಪಾಯವಿಲ್ಲದೆ ಪಾರಾಗಿರುವ ವಿಡಿಯೋ ನೋಡಿದರೆ, ಎಂತವರಿಗೂ ಒಮ್ಮೆ ಭಯವನ್ನುಂಟು ಮಾಡದೇ ಇರಲಾರದು.
ದೇವರ ಆಟವೇ ಹಾಗೆ... ಎಷ್ಟೋ ಮಂದಿಯ ಅದೃಷ್ಟ ಕೈಕೊಟ್ಟಾಗ, ತಮ್ಮದಲ್ಲದ ತಪ್ಪಿಗೆ ಸಾವಿಗೆ ಶರಣಾಗಬೇಕಾದ ಪರಿಸ್ಥಿತಿ ಬಂದೊದಗಿಬಿಡುತ್ತದೆ. ಅದೇ ರೀತಿ, ಅದೃಷ್ಟ ಕೈ ಹಿಡಿದರೆ, ಯಾವುದೇ ಗಂಡಾಂತರ ಬರಲಿ, ಮನುಷ್ಯ ಜಯಿಸಿಯೇ ತೀರುತ್ತಾನೆ.

ಹೌದು, ನಾವಿಂದು ಹೇಳಲು ಹೊರಟಿರುವ ಘಟನೆಯಲ್ಲಿರುವ ಮುಖ್ಯ ತಿರುಳು ಇದೇ ಆಗಿದೆ. ಅದರಲ್ಲಿಯೂ ಘಟನೆಯ ಮುಖ್ಯ ಭಾಗವಾಗಿರುವ ಒಂದು ಮಗುವಿನ ವಿಚಾರದಲ್ಲಿ ಈ ಮಾತು ಅಕ್ಷರಃ ನಿಜವಾಗಿದೆ !! ಎಂದರೆ ತಪ್ಪಾಗುವುದಿಲ್ಲ... ಏನಪ್ಪಾ ಎದು ಘಟನೆ ಅಂತ ಕೇಳ್ತಾ ಇದ್ದೀರಾ ? ಮುಂದೆ ಓದಿ..

ಯಾಕಪ್ಪ ಈ ರೀತಿ ಪೀಠಿಕೆ ಹಾಕ್ತಾ ಇದ್ದಾರೆ ಅನ್ಕೊಂಡ್ರಾ ? ಖಂಡಿತ ವಿಚಾರವಿದೆ. ಪೂರ್ವ ಚೀನದ ಫುಜಿಯನ್ ಪ್ರಾಂತ್ಯದ ಕ್ವಾನ್‌ಝೋ ನಗರದಲ್ಲಿ ಈ ಘಟನೆ ನೆಡೆದಿದ್ದು, ಈ ಘಟನೆಯ ಸಿಸಿ ಕ್ಯಾಮೆರಾ ವಿಡಿಯೋ ಸದ್ಯ ವೈರಲ್ ಆಗಿದೆ.
Recommended Video


ನಗರದ ಮಧ್ಯಭಾಗದಲ್ಲಿರುವ ರಸ್ತೆಯ ಮೇಲೆ ಚಲಿಸುತ್ತಿದ್ದ ಕಾರೊಂದಕ್ಕೆ ಮಗುವೊಂದು ಸಿಕ್ಕರೂ ಸಹ ಯಾವುದೇ ರೀತಿಯ ಪ್ರಾಣಾಪಾಯವಿಲ್ಲದೆ ಪಾರಾಗಿರುವ ವಿಡಿಯೋ ನೋಡಿದರೆ, ಎಂತವರಿಗೂ ಒಮ್ಮೆ ಭಯವನ್ನುಂಟು ಮಾಡದೇ ಇರಲಾರದು.

ಘಟನೆಯ ವಿವರ :
ವಿಡಿಯೋ ಗಮನಿಸಿದಂತೆ, ಒಂದು ಮನೆಯ ಮುಂದೆ ಕಾರೊಂದು ಬಂದು ನಿಂತಿದ್ದು, ಕಾರಿನಲ್ಲಿರುವ ವ್ಯಕ್ತಿಯೊಬ್ಬರು ನೀಡಿದ ಪೊಟ್ಟಣವನ್ನು ಸ್ವೀಕರಿಸಲು ಮಹಿಳೆಯೊಬ್ಬರು ರಸ್ತೆಯ ಮದ್ಯೆ ಧಾವಿಸಿದ್ದಾರೆ.

ಆದರೆ, ಇದನ್ನು ಗಮನಿಸಿದ ಏನು ಅರಿಯದ ಮಗುವೊಂದು ತನ್ನ ತಾಯಿ ಹೋದಳು ಎಂಬ ಕಾರಣಕ್ಕೆ ಆಕೆ ಹೋದಂತಹ ಹಾದಿ ಅನುಸರಿಸಿ, ಕಾರಿನ ಮುಂಭಾಗದಿಂದ ಹಾದು ಹೋಗಲು ಯತ್ನಿಸಿದೆ.
ಇದೇ ಸಮಯದಲ್ಲಿ, ಮಗು ಕಾರಿನ ಮುಂಭಾಗದಲ್ಲಿ ಹಾದು ಹೋಗುತ್ತಿದೆ ಎಂಬ ವಿಚಾರವನ್ನೆಲ್ಲಾ ಅರಿಯದ ಮುಗ್ದ ಚಾಲಕ, ಕಾರನ್ನು ಮುಂದಕ್ಕೆ ಚಲಾಯಿಸಿದ್ದಾನೆ.

ಅಚ್ಚರಿಯೆನೆಂಬಂತೆ, ಮಗುವು ಕಾರಿನ ಕೆಳ ಭಾಗದ ಖಾಲಿ ಸ್ಥಳದಲ್ಲಿ ಬೋರಲಾಗಿ ಬಿದಿದ್ದು, ಮಗುವು ಕಾರಿನ ಕೆಳಭಾಗದಿಂದ ಹೊರಬಂದ ನಂತರವೇ ಮಗುವಿನ ತಾಯಿ ಮತ್ತು ಇತರ ಜನರಿಗೆ ಘಟನೆಯ ಬಗ್ಗೆ ತಿಳಿದು ಬಂದಿದೆ.

ಅದೃಷ್ಟವಶಾತ್ ಕಾರಿನ ಯಾವುದೇ ಚಕ್ರವೂ ಸಹ ಮಗುವಿನ ಮೇಲೆ ಹರಿದಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಕುಟುಂಬದ ಕಣ್ಣು ಮುಂದೆಯೇ ಈ ರೀತಿಯ ಘಟನೆ ನೆಡೆದಿರುವುದು ಎಲ್ಲರಿಗೂ ಭಯವನುಂಟು ಮಾಡಿರದೆ ಇರಲಾರದು.
Trendiing stories in DriveSpark Kannada :
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!
ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!
ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ
ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಮಗುವಿನ ದೇಹದ ಯಾವುದೇ ಭಾಗದ ಮೇಲೆ ಒಂದು ಗೀರು ಸಹ ಆಗಿಲ್ಲದಿರುವುದು ಮಗುವಿನ ಅದೃಷ್ಟವೇ ಸರಿ. ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮಗುವಿನ ಅದೃಷ್ಟದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.


Click it and Unblock the Notifications








