ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ'; ಉದ್ದೇಶವೇನು?

Written By:

ಜಾಗತಿಕ ಮಟ್ಟದಲ್ಲಿ ಎಲ್ಲ ಕ್ಷೇತ್ರದಲ್ಲೂ ಶಿಪ್ರ ಗತಿಯಲ್ಲಿ ಮುಂದುವರಿಯುತ್ತಿರುವ ಚೀನಾ, ವಿಶ್ವದ ಅತಿ ದೊಡ್ಡ ಜಲವಿಮಾನವನ್ನು ಲೋಕಾರ್ಪಣೆ ಮಾಡಿದೆ. ಇದನ್ನು ಪ್ರಮುಖವಾಗಿಯೂ ಕಾಡ್ಗಿಚ್ಚು ಹಾಗೂ ಸಮುದ್ರ ರಕ್ಷಣಾ ಕಾರ್ಯಾಚರಣೆಗಾಗಿ ಬಳಕೆ ಮಾಡಲಾಗುವುದು.

ಜಗತ್ತಿನ ಅತಿದೊಡ್ಡ ಪ್ರಯಾಣಿಕ ವಿಮಾನ ಬೋಯಿಂಗ್ 737 ಗಾತ್ರಕ್ಕಿಂತಲೂ ದೊಡ್ಡದಾಗಿರುವ ನೂತನ 'ಎಜಿ600' ಜಲವಿಮಾನವು ನೀರಿನಿಂದಲೇ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ' ನಿರ್ಮಾಣ

ಎಜಿ600 ಜಲವಿಮಾನದ ಪ್ರಮುಖ ವೈಶಿಷ್ಟ್ಯವೆಂದರೆ 4506 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ 20 ಸೆಕೆಂಡುಗಳಲ್ಲೇ 12 ಟನ್ ನೀರನ್ನು ಸಂಗ್ರಹಿಸುವ ಶಕ್ತಿ ಹೊಂದಿದೆ.

ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ' ನಿರ್ಮಾಣ

ಚೀನಾ ವಿಮಾನಯಾನ ಉದ್ಯಮ ಕಾರ್ಪೋರೇಷನ್ ಎಜಿ600 ವಿಮಾನವನ್ನು ಅನಾವರಣಗೊಳಿಸಿದ್ದು, ಗರಿಷ್ಠ 53.5 ಟನ್ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ' ನಿರ್ಮಾಣ

ವಿದೇಶಿ ಜಲವಿಮಾನಗಳನ್ನು ಅವಲಂಬಿಸದೇ ತನ್ನದೇ ಆದ ಸ್ವಾವಲಂಬನೆ ಹೊಂದುವುದು ಚೀನಾ ಗುರಿಯಾಗಿತ್ತು. ಪ್ರಸ್ತುತ ವಿಮಾನವೀಗ ಎಚ್-4 ಹರ್ಕ್ಯುಲಸ್ ಜಲವಿಮಾನವನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ.

ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ' ನಿರ್ಮಾಣ

1940ರ ದಶಕದಲ್ಲಿ ನಿರ್ಮಾಣವಾಗಿರುವ ಹರ್ಕ್ಯುಲಸ್ ಜಲವಿಮಾನದ ಏಕ ಮಾತ್ರ ಯುನಿಟ್ ನಿರ್ಮಾಣವಾಗಿತ್ತು. ಆದರೂ ಈಗಲೂ ಎಜಿ600 ವಿಮಾನದ ರೆಕ್ಕೆಗಿಂತಲೂ ಹೆಚ್ಚು ಅಗಲವಾದ ರೆಕ್ಕೆಯನ್ನು ಕಾಪಾಡಿಕೊಂಡಿದೆ.

ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ' ನಿರ್ಮಾಣ

ಪರಿಸರ ಪರಿವೀಕ್ಷಣೆ, ಸಂಪನ್ಮೂಲ ಪತ್ತೆ ಹಚ್ಚುವಿಕೆ, ಸಾಗಣೆ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗಾಗಿ ನೂತನ ಜಲವಿಮಾನವನ್ನು ಬಳಕೆ ಮಾಡಲಾಗುವುದು.

ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ' ನಿರ್ಮಾಣ

ಸಮುಂದ್ರ ನೀರಿನ ಸಂಪನ್ಮೂಲ ಬಳಕೆಗೆ ಸಂಬಂಧಪಟ್ಟಂತೆ ಜಪಾನ್, ವಿಯೆಟ್ನಾಂ, ಪಿಲಿಪೈನ್ಸ್ ಜೊತೆ ಭಿನ್ನಮತವನ್ನು ಹೊಂದಿರುವ ಚೀನಾಗೆ ನೂತನ ಜಲವಿಮಾನ ಆಗಮನವು ಆನೆ ಬಲ ತುಂಬಿದಂತಾಗಿದೆ.

ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ' ನಿರ್ಮಾಣ

ದಕ್ಷಿಣ ಚೀನಾದ ಸಮುದ್ರ ಪರಿಧಿಯಲ್ಲಿ ಅನೇಕ ರೀತಿಯ ಕಾರ್ಯಾಚರಣೆಗಳಿಗಾಗಿ ಜಲವಿಮಾನದ ನೆರವನ್ನು ಪಡೆಯುವ ಇರಾದೆಯನ್ನು ಚೀನಾ ಹೊಂದಿದೆ.

ಬಲಿಷ್ಠ ಚೀನಾದಿಂದ ಜಗತ್ತಿನ ಅತಿ ದೊಡ್ಡ 'ಜಲವಿಮಾನ' ನಿರ್ಮಾಣ

ಎಜಿ600 ನಾಗರಿಕ ಜೊತೆಗೆ ಮಿಲಿಟರಿ ಬಳಕೆಗೂ ಉಪಯೋಗಿಸಬಹುದು ಎಂಬುದಿಲ್ಲಿ ಗಮನಾರ್ಹವೆನಿಸುತ್ತದೆ. ತನ್ಮೂಲಕ ಏಷ್ಯಾದ ನಂ.1 ಚೀನಾ ಮತ್ತಷ್ಟು ಬಲಿಷ್ಠಗೊಂಡಿದೆ.

Read more on ಚೀನಾ china
English summary
China unveils world's largest amphibious aircraft 'AG600'
Story first published: Saturday, July 30, 2016, 11:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark