ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

Written By:

ಚೀನಾದ ಪೂರ್ವ ಮಧ್ಯಭಾಗದ ಹೆನಾನ್ ಪ್ರಾಂತ್ಯದ ರಾಜಧಾನಿ ಝೆಹೆಂಗ್-ಝೋ ನಗರದಲ್ಲಿರುವ ಹಿರಿಯ ಜೀವವೊಂದು ತನ್ನ ಮೊಮ್ಮಗನಿಗೆ ತಾನು ತಯಾರು ಮಾಡಿದ ಲಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

To Follow DriveSpark On Facebook, Click The Like Button
ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

ಈ ಘಟನೆಯನ್ನು news.cgtn.com ಜಾಲತಾಣ ವರದಿ ಮಾಡಿದ್ದು, ತಾತ ಮೊಮ್ಮಗನ ಮೇಲಿನ ಪ್ರೀತಿಗೆ ಕಾರನ್ನೇ ನಿರ್ಮಿಸುವ ಹಂತಕ್ಕೆ ಹೋಗಿದ್ದು ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದೆ. ವೃತ್ತಿಯಲ್ಲಿ ವ್ಯವಸಾಯ ಮಾಡುತ್ತಿರುವ ಗುವೋ ಈ ಸಾಹಸಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ.

ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

ಹೌದು, ಗುವೋ ಮೂರು ವರ್ಷದ ಹಿಂದೆ ತನ್ನ ಮೊಮ್ಮಗನನ್ನು ಪ್ರತಿ ನಿತ್ಯ ಬೈಕ್ ಹಿಂದಗಡೆ ಕೂರಿಸಿಕೊಂಡು ಶಿಶುವಿಹಾರಕ್ಕೆ ಕರೆದೊಯ್ಯುತ್ತಿದ್ದರು.

ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

ಆದರೆ, ಸ್ವಲ್ಪವೂ ಸುರಕ್ಷತೆ ಇಲ್ಲದ ಬೈಕಿನಲ್ಲಿ ಮೊಮ್ಮಗ ಎಲ್ಲಿ ಬಿದ್ದುಬಿಡುತ್ತಾನೋ ಎನ್ನುವ ಭಯ ಗುವೋ ಅವರನ್ನು ಕಾಡುತ್ತಲೇ ಇತ್ತು.

ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

ಅವರೇ ಹೇಳುವಂತೆ ಈ ವಿಚಾರ ಅವರಿಗೆ ಬಹಳಷ್ಟು ನಿದ್ದೆಗೆಡಿಸಿತ್ತು, ಕೊನೆಗೊಂದು ನಿರ್ಧಾರಕ್ಕೆ ಬಂದ ಗುವೋ ಮಿನಿ ಲಂಬೋರ್ಗಿನಿ ಕಾರನ್ನು ತಯಾರು ಮಾಡಲು ಶುರು ಮಾಡಿಯೇ ಬಿಟ್ಟರು.

ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

ತಾವು ಹೇಳಿದಂತೆ ಮೂರು ಲಂಬೋರ್ಗಿನಿ ಕಾರುಗಳನ್ನು ತಯಾರು ಮಾಡಿ ತಂದು ಮನೆ ಮುಂದೆ ನಿಲ್ಲಿಸಿಯೇ ಬಿಟ್ಟರು. ನಿಮಗೆ ಆಶ್ಚರ್ಯ ಆಗಬಹುದು ನಿಜವಾದ ಲಂಬೋರ್ಗಿನಿ ಕಾರಿನಲ್ಲಿ ಇರುವಂತೆ ಗಾಳಿ ನಿಯಂತ್ರಕ, ಹೆಡ್ ಲೈಟುಗಳು, ಹಾರನ್ ಮತ್ತು ಬ್ರೇಕ್ ಎಲ್ಲವೂ ಈ ಕಾರಿನಲ್ಲಿ ಇದೆ !!

ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

ಈ ಕಾರನ್ನು ತಯಾರಿಸಲು ಗುವೋ ಕೇವಲ 15,000 ಯುವಾನ್‌ (1.45 ಲಕ್ಷ) ಖರ್ಚು ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು.

ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

ಈಗ ಗುವೋ ಮತ್ತು ಆತನ ಕುಟುಂಬ ಮಿನಿ ಲಂಬೋರ್ಗಿನಿ ಕಾರುಗಳಲ್ಲಿ ಬೇಕೆಂದ ಕಡೆ ತಿರುಗಾಡುತ್ತಾ ಏಂಜಾಯ್ ಮಾಡುತ್ತಿದ್ದಾರೆ.

ಮೊಮ್ಮಗನ ಮೇಲಿನ ಪ್ರೀತಿಗೆ ತಾತ ಏನ್ ಮಾಡಿದ್ರು ಗೊತ್ತಾ...!?

ಮನುಷ್ಯನೇ ಹೀಗೆ ಪ್ರಯತ್ನ ಮಾಡಿದ್ರೆ ಎಲ್ಲವೂ ಸಾಧ್ಯವಾಗುತ್ತೆ. ಆದ್ರೆ ಅದೇ ಸೋಮಾರಿತನ, ಜೀವನದ ಮೇಲಿರುವ ಪ್ರೀತಿ ಕಳೆದುಕೊಂಡು ಜಿಗುಪ್ಸೆ ಹೊಂದುತ್ತಾನೆಯೇ ಹೊರತು ಬೇರೇನನ್ನೂ ಸಾಧಿಸಲು ಸಾಧ್ಯವಾಗುದಿಲ್ಲ.

ನಿಜವಾದ ಲಂಬೋರ್ಗಿನಿ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

English summary
Farmer builds three Lamborghinis to keep his grandson safe. Wish we had a grandpa like this.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark