ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಕ್ರಿಶ್ಚಿಯಾನೊ ರೊನಾಲ್ಡೊ ಜನಪ್ರಿಯ ಫುಟ್‍‍ಬಾಲ್‍ ಆಟಗಾರ ಮಾತ್ರವಲ್ಲದೇ ವಿಶ್ವದ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಕ್ರಿಶ್ಚಿಯಾನೊ ರೊನಾಲ್ಡೊ ಕಾರುಗಳೆಡೆಗೆ ಇರುವ ತಮ್ಮ ಪ್ರೀತಿಯಿಂದಾಗಿಯೂ ಹೆಸರಾಗಿದ್ದಾರೆ.

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಕ್ರಿಶ್ಚಿಯಾನೊ ರೊನಾಲ್ಡೊರವರ ಬಳಿಯಿರುವ ಕಾರುಗಳ ಸಂಗ್ರಹವನ್ನು ನೋಡಿದರೆ ಯಾರಿಗಾದರೂ ಹೊಟ್ಟೆ ಕಿಚ್ಚು ಬರದೇ ಇರದು. ಅವರ ಕಾರುಗಳ ಸಂಗ್ರಹದಲ್ಲಿ ಬುಗಾಟಿ, ಫೆರಾರಿ, ಲ್ಯಾಂಬೊರ್ಗಿನಿ, ಬಿ‍ಎಂ‍‍ಡಬ್ಲ್ಯು, ಮರ್ಸಿಡಿಸ್ ಬೆಂಝ್, ಆಸ್ಟನ್ ಮಾರ್ಟಿನ್ ಮೊದಲಾದ ಕಾರುಗಳಿವೆ. ಇಷ್ಟು ಬಗೆಯ ಕಾರುಗಳಿದ್ದರೂ ಕ್ರಿಶ್ಚಿಯಾನೊ ರೊನಾಲ್ಡೊರವರಿಗೆ ಕಾರುಗಳೆಡೆಗೆ ಇರುವ ವ್ಯಾಮೋಹ ಇನ್ನೂ ಕಡಿಮೆಯಾಗಿಲ್ಲ.

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಇತರೆ ಕಾರು ಪ್ರೇಮಿಗಳಂತೆ ಕ್ರಿಶ್ಚಿಯಾನೊ ರೊನಾಲ್ಡೊರವರೂ ಸಹ ಇನ್ನೂ ಅನೇಕ ಕಾರುಗಳನ್ನು ತಮ್ಮ ಗ್ಯಾರೇಜಿನಲ್ಲಿ ಹೊಂದಲು ಬಯಸಿದ್ದಾರೆ. ಇದಕ್ಕಾಗಿಯೇ ಅವರು ಈಗ ಮೆಕ್‍‍‍ಲಾರೆನ್ ಸೆನಾ ಕಾರನ್ನು ಖರೀದಿಸಿದ್ದಾರೆ.

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಇತ್ತೀಚಿಗೆ ಬಿಡುಗಡೆಯಾಗಿರುವ ವೀಡಿಯೊದಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊರವರು ಫುಟ್‍‍ಬಾಲ್ ತರಬೇತಿಯಲ್ಲಿ ಪಾಲ್ಗೊಳ್ಳಲು ತಮ್ಮ ಮೆಕ್‍‍ಲಾರೆನ್ ಸೆನಾ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಮೆಕ್‍‍ಲಾರೆನ್ ಸೆನಾ ಕಾರನ್ನು ಸೀಮಿತ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಮೆಕ್‍‍ಲಾರೆನ್ ಸೆನಾ ಮಿಡ್ ಎಂಜಿನ್‍‍ನ ಸೂಪರ್ ಕಾರ್ ಆಗಿದ್ದು, ಅದ್ಭುತವೆನಿಸುವ ಪರ್ಫಾಮೆನ್ಸ್ ನೀಡುತ್ತದೆ. ಈ ಕಾರಿಗೆ ಸಾರ್ವಕಾಲಿಕ ಫಾರ್ಮುಲಾ ಒನ್ ಚಾಂಪಿಯನ್‍‍ಗಳಲ್ಲಿ ಒಬ್ಬರಾದ ಆಯರ್ಟನ್ ಸೆನಾರವರ ಹೆಸರಿಡಲಾಗಿದೆ. ಆಯರ್ಟನ್ ಸೆನಾರವರು ತಮ್ಮ ಚಾಲನೆಗೆ ಹೆಸರಾಗಿದ್ದರು. ಅದರಲ್ಲೂ ತಿರುವುಗಳಲ್ಲಿ ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಈ ರೀತಿಯ ಚಾಲನೆಯನ್ನು ತೇವವಿರುವ ಹವಾಮಾನದಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ಮಾಡುತ್ತಿದ್ದರು.

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಮೆಕ್‍‍ಲಾರೆನ್ ಸೆನಾ ಕಾರನ್ನು ಸಹ ಇದೇ ರೀತಿಯಲ್ಲಿ ತಯಾರಿಸಲಾಗಿದೆ. ಸೆನಾ ಕಾರ್ ಅನ್ನು ತಿರುವುಗಳಲ್ಲಿ ಹೆಚ್ಚಿನ ವೇಗದಲ್ಲಿ ಚಲಾಯಿಸಬಹುದು. ಮೆಕ್‍‍ಲಾರೆನ್ ಕಂಪನಿಯು ಆಯರ್ಟನ್ ಸೆನಾ ರವರ ಜೊತೆಯಲ್ಲಿ ಹೆಚ್ಚಿನ ಬಾಂಧವ್ಯವನ್ನು ಹೊಂದಿದೆ. ಆಯರ್ಟನ್‍‍ರವರು 1988 ರಿಂದ 1993ರ ನಡುವೆ ಮೆಕ್‍‍ಲಾರೆನ್ ಫಾರ್ಮುಲಾ ಒನ್ ಟೀಂನ ಭಾಗವಾಗಿದ್ದರು.

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಆಯರ್ಟನ್ ಸೆನಾರವರು ಮೆಕ್‍‍ಲಾರೆನ್ ಕಾರನ್ನು ಚಲಾಯಿಸಿ ಮೂರು ಬಾರಿ ಫಾರ್ಮುಲಾ ಒನ್ ವರ್ಲ್ಡ್ ಚಾಂಪಿಯನ್‍‍ಶಿಪ್ ಪ್ರಶಸ್ತಿಯನ್ನು ಹಾಗೂ 35 ಫಾರ್ಮುಲಾ ಒನ್ ರೇಸ್‍‍ಗಳನ್ನು ಜಯಿಸಿದ್ದರು. ಆದ ಕಾರಣ ಇಂಗ್ಲೀಷ್ ಕಾರು ತಯಾರಕ ಕಂಪನಿಯು ತನ್ನ ಅತಿ ವೇಗದ ಕಾರಿಗೆ ಆಯರ್ಟನ್ ಸೆನಾರವರ ಹೆಸರನ್ನು ಇಟ್ಟಿದೆ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಮೆಕ್‍‍ಲಾರೆನ್ ಸೆನಾ ಕಾರಿನ ಟೆಕ್ನಾಲಜಿಯು ಮೆಕ್‍‍ಲಾರೆನ್ 720ಎಸ್ ಕಾರಿನ ಮೇಲೆ ಆಧಾರಿತವಾಗಿದ್ದು, ಅದರಲ್ಲಿರುವಂತಹ ಎಂಜಿನ್ ಅನ್ನು ಬಳಸುತ್ತದೆ. ಎಂಜಿನ್ ಅನ್ನು ಸೆನಾ ಕಾರಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರ್ಪಾಡು ಮಾಡಲಾಗಿದೆ. 4.0 ಲೀಟರ್‍‍ನ, ಟ್ವಿನ್ ಟರ್ಬೊ ವಿ8 ಎಂಜಿನ್, 789 ಬಿಹೆಚ್‍‍ಪಿ ಹಾಗೂ 800 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ 7 ಸ್ಪೀಡಿನ ಡ್ಯೂಯಲ್ ಕ್ಲಚ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದ್ದು, ಹಿಂಬದಿಯ ವ್ಹೀಲ್‍‍‍ಗಳನ್ನು ಚಾಲನೆ ಮಾಡುತ್ತದೆ.

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಸೆನಾ ಕಾರಿನ ತೂಕವು 1,198 ಕೆ.ಜಿಯಾಗಿದ್ದು, ಪವರ್ ಹಾಗೂ ತೂಕದ ಪ್ರಮಾಣವು ಪ್ರತಿ ಟನ್‍‍ಗೆ 658 ಬಿ‍‍ಹೆಚ್‍‍ಪಿಯಾಗಿದೆ. 0 - 100 ವರೆಗಿನ ವೇಗವನ್ನು ಕೇವಲ 2.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. 0 - 200 ಕಿ.ಮೀ ವೇಗವನ್ನು 6.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಕಾರಿನ ಗರಿಷ್ಟ ವೇಗವು ಪ್ರತಿ ಗಂಟೆಗೆ 340 ಕಿ.ಮೀ ಆಗಿದೆ.

MOST READ: ಮುಖೇಶ್ ಅಂಬಾನಿ ಬಳಿಯಿರುವ ದುಬಾರಿ ಕಾರುಗಳಿವು

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಕ್ರಿಶ್ಚಿಯಾನೊ ರೊನಾಲ್ಡೊ ರವರ ಸೂಪರ್ ಕಾರುಗಳ ಸಂಗ್ರಹಕ್ಕೆ ಬಂದು ಸೇರಿರುವ ಹೊಸ ಕಾರು ಸಿಲ್ವರ್ ಬಣ್ಣವನ್ನು ಹೊಂದಿದ್ದು, ಹೊರ ಭಾಗದಲ್ಲಿ ಅನೇಕ ಕಾರ್ಬನ್ ಫೈಬರ್ ಬಿಟ್ಸ್ ಹಾಗೂ ಪೀಸ್‍‍ಗಳನ್ನು ಹೊಂದಿರುವುದರಿಂದ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲದೇ , ಕಡಿಮೆ ಪ್ರಮಾಣದ ತೂಕವನ್ನು ಹೊಂದಿರುವುದರಿಂದ ವೇಗವಾಗಿಯೂ ಚಲಿಸುತ್ತದೆ.

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಈ ಜನಪ್ರಿಯ ಫುಟ್‍‍ಬಾಲ್ ಆಟಗಾರನ ಸಂಗ್ರಹದಲ್ಲಿ ಮೆಕ್‍‍ಲಾರೆನ್ ಸೆನಾ ಕಾರ್ ಅನ್ನು ಹೊರತು ಪಡಿಸಿ ಬುಗಾಟಿ ಚಿರೊನ್, ಲ್ಯಾಂಬೊರ್ಗಿನಿ ಅವೆಂಟಾಡೊರ್, ಬೆಂಟ್ಲಿ ಜಿಟಿ ಸ್ಪೀಡ್, ಆಸ್ಟನ್ ಮಾರ್ಟಿನ್ ಡಿ‍‍ಬಿ9, ಆಡಿ ಆರ್8, ಫೆರಾರಿ ಎಫ್ 430, ಫೆರಾರಿ 599 ಜಿಟಿಬಿ ಫಿಯಾರಾನೊ, ರೋಲ್ಸ್ ರಾಯ್ಸ್ ಫಾಂಟಮ್ ಮೊದಲಾದ ಕಾರುಗಳಿವೆ.

MOST READ: ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮೆಕ್‍‍ಲಾರೆನ್ ಸೆನಾ ಕಾರನ್ನು ನೋಡುತ್ತಿದ್ದರೆ ಇಡೀ ದಿನವೆಲ್ಲಾ ನೋಡುತ್ತಿರ ಬೇಕು ಎನಿಸುವಂತಹ ವಿನ್ಯಾಸವನ್ನು ಹೊಂದಿದೆ. ಇನ್ನೊಂದು ದುಬಾರಿ ಐಷಾರಾಮಿ ಕಾರು ಕ್ರಿಶ್ಚಿಯಾನೊ ರೊನಾಲ್ಡೊರವರ ಕಾರು ಸಂಗ್ರಹ ಸೇರಿದೆ. ಭಾರತಕ್ಕೆ ಈ ಕಾರು ಯಾವಾಗ ಕಾಲಿಡಲಿದೆ ಎಂದು ಕಾತರದಿಂದ ಕಾಯಲಾಗುತ್ತಿದೆ. ಅವೆಂಟಾಡೊರ್ ಎಸ್‍‍ವಿ‍‍ಜೆ ಕಾರು ಈಗಾಗಲೇ ಭಾರತದಲ್ಲಿರುವುದರಿಂದ ಮೆಕ್‍‍ಲಾರೆನ್ ಸೆನಾ ಕಾರು ಸಹ ಭಾರತಕ್ಕೆ ಕಾಲಿಡುವ ದಿನಗಳು ದೂರವಿಲ್ಲ.

More from DriveSpark

Article Published On: Monday, June 3, 2019, 15:44 [IST]
English summary
Cristiano Ronaldo Adds McLaren Senna To His Supercar Collection - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+