ಒಂದೇ ದಿನ ಕುಡಿದು ಸಿಕ್ಕಿ ಬಿದ್ದ 600ಕ್ಕೂ ಹೆಚ್ಚು ಜನ

ಹೋಳಿ ಹಬ್ಬವನ್ನು ಭಾರತದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಎಲ್ಲರೂ ಬಣ್ಣದೋಕುಳಿಯಲ್ಲಿ ಭಾಗಿಯಾಗುತ್ತಾರೆ.

ಒಂದೇ ದಿನ ಕುಡಿದು ಸಿಕ್ಕಿ ಬಿದ್ದ 600ಕ್ಕೂ ಹೆಚ್ಚು ಜನ

ಉತ್ತರ ಭಾರತ ಮೂಲದವರು ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ನೆಲೆಸಿರುವ ಕಾರಣಕ್ಕೆ ಹೋಳಿ ಹಬ್ಬವನ್ನು ಎಲ್ಲಾ ರಾಜ್ಯಗಳಲ್ಲಿಯೂ ಆಚರಿಸಲಾಗುತ್ತದೆ. ಎಲ್ಲಾ ಜಾತಿ, ಧರ್ಮದವರು ಈ ಹಬ್ಬದಲ್ಲಿ ಭಾಗಿಯಾಗುವುದು ವಿಶೇಷ. ಇದರ ಜೊತೆಗೆ ಈ ಹಬ್ಬದಲ್ಲಿ ಭಾಗಿಯಾಗುವ ಯುವಕರು ಕುಡಿದು ಮಜಾ ಮಾಡುವುದು ಸಾಮಾನ್ಯವಾಗಿದೆ.

ಒಂದೇ ದಿನ ಕುಡಿದು ಸಿಕ್ಕಿ ಬಿದ್ದ 600ಕ್ಕೂ ಹೆಚ್ಚು ಜನ

ಜೊತೆಗೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳಾಗುತ್ತಿವೆ. ಆದರೂ ಕುಡಿದು ವಾಹನ ಚಾಲನೆ ಮಾಡುವುದನ್ನು ಯುವಕರು ಬಿಟ್ಟಿಲ್ಲ. ಯುವಕರ ಈ ವರ್ತನೆಯಿಂದಾಗಿ ಹೋಳಿ ಹಬ್ಬವು ಅನೇಕರಿಗೆ ಕರಾಳ ದಿನವಾಗಿ ಬದಲಾಗುತ್ತಿದೆ.

ಒಂದೇ ದಿನ ಕುಡಿದು ಸಿಕ್ಕಿ ಬಿದ್ದ 600ಕ್ಕೂ ಹೆಚ್ಚು ಜನ

ಈ ಹಿನ್ನೆಲೆಯಲ್ಲಿ ಹೋಳಿ ಹಬ್ಬದಂದು ದೆಹಲಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದರು. ಕುಡಿದು ವಾಹನ ಚಾಲನೆ ಮಾಡುವವರನ್ನು ತಪಾಸಣೆ ಮಾಡುವ ಕಾರಣಕ್ಕೆ ವಿಶೇಷ ಪಡೆಗಳನ್ನು ರಚಿಸಲಾಗಿತ್ತು.

ಒಂದೇ ದಿನ ಕುಡಿದು ಸಿಕ್ಕಿ ಬಿದ್ದ 600ಕ್ಕೂ ಹೆಚ್ಚು ಜನ

ವಾಹನಗಳ ತಪಾಸಣೆ ನಡೆಸುವ ವೇಳೆಯಲ್ಲಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ 647 ಮಂದಿಗೆ ದಂಡ ವಿಧಿಸಲಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಜೊತೆಗೆ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದ 181 ಜನರಿಗೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 1,192 ಜನರು ಸೇರಿದಂತೆ ಒಟ್ಟಾರೆಯಾಗಿ 2,176 ಜನರಿಗೆ ದಂಡ ವಿಧಿಸಲಾಗಿದೆ.

ಒಂದೇ ದಿನ ಕುಡಿದು ಸಿಕ್ಕಿ ಬಿದ್ದ 600ಕ್ಕೂ ಹೆಚ್ಚು ಜನ

ದೆಹಲಿಯ ಸಂಚಾರಿ ಪೊಲೀಸರು ಹೋಳಿ ಹಬ್ಬದಂದು ಜನರು ಕುಡಿದು ವಾಹನ ಚಾಲನೆ ಮಾಡದಂತೆ ಹಾಗೂ ಜನರ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದರು.

ಒಂದೇ ದಿನ ಕುಡಿದು ಸಿಕ್ಕಿ ಬಿದ್ದ 600ಕ್ಕೂ ಹೆಚ್ಚು ಜನ

ಕಳೆದ ವರ್ಷದ ಹೋಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚು ಅಪಘಾತಗಳಾಗಿದ್ದ ಕಾರಣಕ್ಕೆ ಈ ವರ್ಷ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಕಾರಣಕ್ಕೆ 170 ಪ್ರಮುಖ ಸ್ಥಳಗಳಲ್ಲಿ 1,600 ಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸೂಚನೆ: ಇಲ್ಲಿರುವ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi cops issued more than 600 challans for drink and drive on holi. Read in Kannada.
Story first published: Friday, March 13, 2020, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X