ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ದೆಹಲಿಯಲ್ಲಿ ಚಳಿಗಾಲದಲ್ಲಿ ಉಂಟಾಗುವ ಮಾಲಿನ್ಯವನ್ನು ನಿಭಾಯಿಸಲು ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ಅಭಿಯಾನದ ಅಡಿಯಲ್ಲಿ ಎರಡು ತಿಂಗಳುಗಳಲ್ಲಿ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ಚಲನ್‌ಗಳನ್ನು ನೀಡಲಾಗಿದೆ. ಕಳೆದ ಎರಡು ತಿಂಗಳಲ್ಲಿ ಇದಕ್ಕೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ 1,08,004 ಚಲನ್‌ಗಳನ್ನು ನೀಡಲಾಗಿದೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ದೆಹಲಿ ಟ್ರಾಫಿಕ್ ಪೊಲೀಸರು ಹಂಚಿಕೊಂಡ ಮಾಹಿತಿಯ ಪ್ರಕಾರ, ಅಕ್ಟೋಬರ್ 1ರಿಂದ ನವೆಂಬರ್ 30 ರ ನಡುವೆ, ಮಾನ್ಯವಾದ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರ ಹೊಂದಿಲ್ಲದ ಒಟ್ಟು 32,343 ವಾಹನಗಳಿಗೆ ಚಲನ್ ನೀಡಲಾಗಿದೆ. ಈ ಸಂದರ್ಭದಲ್ಲಿ, ಪೊಲೀಸರು 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳ ವಿರುದ್ಧ 1,866 ಚಲನ್‌ಗಳನ್ನು ವಿಧಿಸಿದ್ದು, ನಿಗದಿತ ಅವಧಿ ಮೀರಿದ ಒಟ್ಟು 1,104 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ದೆಹಲಿ ಪೊಲೀಸರ ಪ್ರಕಾರ, ಮಾನ್ಯವಾದ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರವಿಲ್ಲದೆ ಚಾಲನೆ ಮಾಡುವ ವಾಹನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಿಗದಿತ ಅವಧಿ ಮೀರಿದ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಎರಡು ತಿಂಗಳಲ್ಲಿ ದೆಹಲಿ ಗಡಿಯ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಒಟ್ಟು 44,853 ಸರಕು ವಾಹನಗಳನ್ನು ಪರಿಶೀಲಿಸಲಾಗಿದೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ಈ ಪೈಕಿ 13,031 ಅನಗತ್ಯ ಸರಕುಗಳನ್ನು ಸಾಗಿಸುವ ವಾಹನಗಳಿಗೆ ದೆಹಲಿ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ. ಅಧಿಕೃತ ಮಾಹಿತಿಯ ಪ್ರಕಾರ, ಸರಿಯಾದ ಹೊದಿಕೆಯಿಲ್ಲದೆ ನಿರ್ಮಾಣ ಹಾಗೂ ಇತರ ಸಂಬಂಧಿತ ವಸ್ತುಗಳನ್ನು ಸಾಗಿಸುವ ಒಟ್ಟು ವಾಹನಗಳಿಗೆ 88 ಚಲನ್‌ಗಳನ್ನು ನೀಡಲಾಗಿದೆ. ಅಕ್ರಮ ನಿಲುಗಡೆಗೆ ಸಂಬಂಧಿಸಿದಂತೆ 61,153 ಚಲನ್‌ಗಳನ್ನು ನೀಡಲಾಗಿದೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ಇದಕ್ಕೆ ಸಂಬಂಧಿಸಿದಂತೆ 1,39,113 ನೋಟಿಸ್‌ಗಳನ್ನು ನೀಡಲಾಗಿದೆ. ಒಟ್ಟು 14,848 ವಾಹನಗಳನ್ನು ಕ್ರೇನ್ ಮೂಲಕ ಟೋಯಿಂಗ್ ಮಾಡಲಾಗಿದೆ. ಸರಿಯಾದ ಮಾರ್ಗದಲ್ಲಿ ಸಂಚರಿಸದ ಒಟ್ಟು 368 ವಾಹನಗಳಿಗೆ ದಂಡ ವಿಧಿಸಲಾಗಿದೆ. ಇದೇ ವೇಳೆ ಸಂಚಾರಕ್ಕೆ ಅಡ್ಡಿಪಡಿಸಿದ 4,774 ವಾಹನಗಳಿಗೆ ಚಲನ್‌ಗಳನ್ನು ನೀಡಲಾಗಿದ್ದರೆ, ನೋ ಎಂಟ್ರಿ ಉಲ್ಲಂಘಿಸಿದ 7,412 ವಾಹನಗಳಿಗೆ ಚಲನ್‌ಗಳನ್ನು ನೀಡಲಾಗಿದೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ದೆಹಲಿ ಪೊಲೀಸರ ಪ್ರಕಾರ ಈ ಎಲ್ಲಾ ಉಲ್ಲಂಘನೆಗಳು ವಾಯು ಮಾಲಿನ್ಯಕ್ಕೂ ಕಾರಣವಾಗಿವೆ. ಈ ಕಾರ್ಯಾಚರಣೆಯು ನಗರದಲ್ಲಿ ಮಾಲಿನ್ಯ ಬಿಕ್ಕಟ್ಟನ್ನು ನಿಭಾಯಿಸಲು ದೆಹಲಿ ಸರ್ಕಾರದ ತುರ್ತು ಕ್ರಮಗಳ ಒಂದು ಭಾಗವಾಗಿದೆ. ದೆಹಲಿ ಸಂಚಾರ ಪೊಲೀಸರು ನಗರದಾದ್ಯಂತ 170 ಸ್ಥಳಗಳಲ್ಲಿ ತಂಡಗಳನ್ನು ನಿಯೋಜಿಸುವ ಮೂಲಕ ಮಾಲಿನ್ಯ ಉಲ್ಲಂಘಿಸುವವರು ಹಾಗ್ಗೂ ಹಳೆಯ ವಾಹನಗಳ ಸಂಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ಚಳಿಗಾಲದ ಆಗಮನದೊಂದಿಗೆ ದೆಹಲಿಯಲ್ಲಿ ವಾಯು ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಚಳಿಗಾಲದ ಆಗಮನಕ್ಕೂ ಮುನ್ನ ಮಾಲಿನ್ಯವನ್ನು ನಿಭಾಯಿಸಲು ಹಾಗೂ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲಾ ವಾಹನ ಮಾಲೀಕರಿಗೆ ತಮ್ಮ ವಾಹನಗಳನ್ನು ಮಾನ್ಯವಾದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರದೊಂದಿಗೆ ಚಲಾಯಿಸುವಂತೆ ಸೂಚಿಸಲಾಗಿದೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ಕಾರ್ಬನ್ ಮಾನಾಕ್ಸೈಡ್ ಹಾಗೂ ಕಾರ್ಬನ್ ಡೈಆಕ್ಸೈಡ್‌ನಂತಹ ವಿವಿಧ ಮಾಲಿನ್ಯಕಾರಕ ಅಂಶಗಳ ಹೊರಸೂಸುವಿಕೆಯ ಮಾನದಂಡಗಳಿಗಾಗಿ ವಾಹನಗಳನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತದೆ. ನಂತರ ಆ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಪಿಯುಸಿ ಪ್ರಮಾಣಪತ್ರವನ್ನು ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1989 ರ ಅಡಿಯಲ್ಲಿ ನೀಡಲಾಗುತ್ತದೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ಪಿಯುಸಿಯನ್ನು ಪರೀಕ್ಷಿಸಲು ಪೆಟ್ರೋಲ್ ಬಂಕ್ ಗಳಲ್ಲಿ ಆಟೋಮ್ಯಾಟಿಕ್ ಪಿಯುಸಿ ಕೇಂದ್ರಗಳನ್ನು ತೆರೆಯಲಾಗಿದೆ. ಆ ಕೇಂದ್ರಗಳಲ್ಲಿ ವಾಹನಗಳನ್ನು ಪರಿಶೀಲಿಸಿದ ನಂತರ, ತಕ್ಷಣವೇ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಹೊರಸೂಸುವಿಕೆ ಮಿತಿಯನ್ನು ಮೀರಿದರೆ ನಿರಾಕರಣೆ ಸ್ಲಿಪ್ ನೀಡಲಾಗುತ್ತದೆ. 2020ರ ಫೆಬ್ರವರಿ ಹಾಗೂ 2021ರ ನವೆಂಬರ್ ನಡುವೆ ಮುಕ್ತಾಯವಾಗುವ ಕಲಿಕಾ ಪರವಾನಗಿಯ ಮಾನ್ಯತೆಯನ್ನು ದೆಹಲಿ ಸಾರಿಗೆ ಇಲಾಖೆಯು 2022ರ ಜನವರಿ 31 ರವರೆಗೆ ವಿಸ್ತರಿಸಿದೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ಕೋವಿಡ್ 19 ಸಾಂಕ್ರಾಮಿಕ ರೋಗ ಹಾಗೂ ಡ್ರೈವಿಂಗ್ ಪರೀಕ್ಷೆಗೆ ಸ್ಲಾಟ್‌ಗಳನ್ನು ಪಡೆಯಲು ಜನರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೆಹಲಿ ಸಾರಿಗೆ ಇಲಾಖೆಯು ತನ್ನ ಆದೇಶದಲ್ಲಿ ವಿವಿಧ ಆರ್‌ಟಿಒ ಕಚೇರಿಗಳು ಹಾಗೂ ಫಿಟ್‌ನೆಸ್ ಕೇಂದ್ರಗಳಲ್ಲಿ ಭಾರೀ ಜನದಟ್ಟಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ಈ ಕ್ರಮವನ್ನು ಅರ್ಜಿದಾರರು ಹಾಗೂ ಸಾರ್ವಜನಿಕ ಸೇವಾ ನೌಕರರ ಭದ್ರತೆಯ ಕಾಳಜಿ ಎಂದು ಕರೆದಿದೆ. ದೆಹಲಿಯಲ್ಲಿ ಕಲಿಕಾ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಈಗ ಆನ್‌ಲೈನ್ ಮಾಡಲಾಗಿದೆ. ದೆಹಲಿಯಲ್ಲಿ ಕಲಿಕಾ ಪರವಾನಗಿಗಾಗಿ ಆನ್‌ಲೈನ್ ಅರ್ಜಿಯ ಪ್ರಕ್ರಿಯೆಯನ್ನು ಆಗಸ್ಟ್ 11 ರಿಂದ ಆರಂಭಿಸಲಾಯಿತು. ಇದಾದ ನಂತರ ಅರ್ಜಿದಾರರು ಆನ್‌ಲೈನ್ ಮೂಲಕವೇ ಕಲಿಕಾ ಪರವಾನಗಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.

ವಿಶೇಷ ಕಾರ್ಯಾಚರಣೆಯಡಿ ಒಂದು ಲಕ್ಷಕ್ಕೂ ಹೆಚ್ಚು ಚಲನ್ ವಿಧಿಸಿದ ದೆಹಲಿ ಪೊಲೀಸರು

ಮಾಹಿತಿಯ ಪ್ರಕಾರ, ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವಾಗ, ಆನ್‌ಲೈನ್ ಪರೀಕ್ಷೆಯ ದಿನಾಂಕ ಹಾಗೂ ಸಮಯದ ಸ್ಲಾಟ್ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತದೆ. ಇದರ ನಂತರ ಅರ್ಜಿದಾರರು ನಿಗದಿತ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಸಾಫ್ಟ್‌ವೇರ್ ಮೂಲಕ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

Most Read Articles

Kannada
English summary
Delhi cops issues more than one lakh challans for traffic violators details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X