ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ದೇಶದ ಮೊದಲ ಸೆಮಿ-ಹೈ ಸ್ಪೀಡ್ ರೈಲ್ವೆ ಯೋಜನೆಯ ಪ್ರಗತಿಯು ಅಂತಿಮ ಹಂತಕ್ಕೆ ತಲುಪುತ್ತಿದ್ದು, ಹೊಸ ಯೋಜನೆಯು ಶೀಘ್ರದಲ್ಲಿಯೇ ಕಾರ್ಯಾರಂಭ ನಡೆಸಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ದೆಹಲಿ-ಗಾಜಿಯಾಬಾದ್-ಮೀರತ್ ನಡುವಿನ ಭಾರತದ ಮೊದಲ ಆರ್‌ಆರ್‌ಟಿಎಸ್ ಕಾರಿಡಾರ್‌ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಯೋಜನೆಯ ಮೊದಲ ಭಾಗವಾಗಿ ಪರೀಕ್ಷಾರ್ಥ ಕಾರ್ಯಗಳಿಗಾಗಿ ಹೊಸ ರೈಲು ಮಾದರಿಯನ್ನು ಗುಜರಾತಿನಿಂದ ಉತ್ತರ ಪ್ರದೇಶದ ದುಹೈ ಡಿಪೋಗೆ ತಲುಪಿಸಲಾಗಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆಯು(ಎನ್‌ಸಿಆರ್‌ಟಿಸಿ) ದೆಹಲಿಯಿಂದ ಮೀರತ್ ನಡುವಿನ ಸಂಚಾರ ಸಮಯವನ್ನು ತಗ್ಗಿಸಲು ಹೊಸ ಯೋಜನೆ ಆರಂಭಿಸಿದ್ದು, ಸೆಮಿ-ಹೈ ಸ್ಪೀಡ್ ರೈಲು ರಾಜಧಾನಿಯ ಪ್ರಮುಖ ಮೆಟ್ರೋ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸಲಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ಹೊಸ ಸೆಮಿ-ಹೈ ಸ್ಪೀಡ್ ರೈಲು ಗುಜರಾತಿನ ಸಾವ್ಲಿಯಲ್ಲಿರುವ ಅಲ್‌ಸ್ಟೋಮ್‌ನ ಉತ್ಪಾದನಾ ಘಟಕದಲ್ಲಿ ನಿರ್ಮಾಣಗೊಂಡಿದ್ದು, ಆರ್‌ಆರ್‌ಟಿಎಸ್ ರೈಲಿನ ಮೊದಲ 6 ಕೋಚ್‌ಗಳ ಸೆಟ್ ಅನ್ನು ಇದೀಗ ದುಹೈ ಡಿಪೋಗೆ ಟ್ರೇಲರ್‌‌ಗಳ ಮೂಲಕ ತಲುಪಿಸಲಾಗಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ದುಹೈ ಡಿಪೋ ತಲುಪಿದ ನಂತರ ಆರ್‌ಆರ್‌ಟಿಎಸ್ ರೈಲಿನ ಕೋಚ್‌ಗಳನ್ನು ಕ್ರೇನ್‌ಗಳ ಸಹಾಯದಿಂದ ಕೆಳಗೆ ಇಳಿಸಲಾಗಿದ್ದು, ಹೊಸ ರೈಲಿನ ಪರೀಕ್ಷಾರ್ಥ ಕಾರ್ಯಗಳಿಗೆ ಈಗಾಗಲೇ ಆದ್ಯತಾ ಟ್ರ್ಯಾಕ್ ಕೂಡಾ ನಿರ್ಮಾಣಗೊಂಡಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ಕೋಚ್‌ಗಳ ಜೋಡಣೆ ನಂತರ ಶೀಘ್ರದಲ್ಲಿಯೇ ಪರೀಕ್ಷಾರ್ಥಾ ಸೇವೆಗೆ ಚಾಲನೆ ನೀಡಲಿದ್ದು, ಹೊಸ ಸಾರಿಗೆ ಸೇವೆಯ ಕಾರಿಡಾರ್ ಮೂಲಕ ಕಾರ್ಬನ್-ಡೈ-ಆಕ್ಸೈಡ್ ಹೊರಸೂಸುವಿಕೆಯನ್ನು ವರ್ಷಕ್ಕೆ ಸುಮಾರು 2,50,000 ಟನ್‌ಗಳಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ಆರ್‌ಆರ್‌ಟಿಎಸ್ ಯೋಜನೆಯು ಅತ್ಯಂತ ಇಂಧನ ದಕ್ಷ ಭವಿಷ್ಯದ ಸಾರಿಗೆ ವ್ಯವಸ್ಥೆ ಎಂದು ಸಾಬೀತುಪಡಿಸಲಿದೆ ಎಂದು ಹೇಳಿಕೊಂಡಿರುವ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆಯು 2025 ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಹೊಸ ಕಾರಿಡಾರ್‌ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಅಲ್‌ಸ್ಟೋಮ್ ಕಂಪನಿಯು ಆರ್‌ಆರ್‌ಟಿಎಸ್ ರೈಲುಗಳನ್ನು ತಯಾರಿಸುವ ಗುತ್ತಿಗೆ ಪಡೆದುಕೊಂಡಿದ್ದು, ಒಟ್ಟು ಮೂರು ಕಾರ್ ಟ್ರೈನ್‌ಸೆಟ್‌ಗಳು ಸೇರಿದಂತೆ 40 ಆರ್‌ಆರ್‌ಟಿಎಸ್ ರೈಲುಸೆಟ್‌ಗಳನ್ನು ನಿರ್ಮಾಣ ಮಾಡಲಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ದುಹೈ ಡಿಪೋದಲ್ಲಿಯೇ ಅಲ್‌ಸ್ಟೋಮ್ ಕಂಪನಿಯು ಆರ್‌ಆರ್‌ಟಿಎಸ್ ರೈಲು ಸೆಟ್‌ಗಳನ್ನು ಜೋಡಿಸಲಿದ್ದು, ಆರ್‌ಆರ್‌ಟಿಎಸ್ ರೈಲುಗಳ ಕಾರ್ಯಾಚರಣೆಗಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆಯು ದುಹೈ ಡಿಪೋದಲ್ಲಿಯೇ ಈಗಾಗಲೇ ಆಡಳಿತಾತ್ಮಕ ಕಟ್ಟಡವನ್ನು ಸಹ ಸ್ಥಾಪಿಸಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ಆರ್‌ಆರ್‌ಟಿಎಸ್ ರೈಲುಗಳು ಪ್ರತಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸಂಪೂರ್ಣ ಹವಾನಿಯಂತ್ರಿತ ರೈಲು ಮಾದರಿಗಳಾಗಿದ್ದು, ಆಧುನಿಕ ರೈಲು ಮಾದರಿಗಳಲ್ಲಿನ ಸೌಕರ್ಯವನ್ನು ಹೊಂದಿರಲಿವೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ಹೊಸ ರೈಲಿನಲ್ಲಿರುವ ಮೆತ್ತನೆಯ ಆಸನಗಳು ಆರಾಮದಾಯಕ ಪ್ರಮಾಣವನ್ನು ಒದಗಿಸಲಿದ್ದು, ಪ್ರಯಾಣಿಕರಿಗೆ ಲ್ಯಾಪ್‌ಟಾಪ್, ಮೊಬೈಲ್ ಚಾರ್ಜಿಂಗ್, ಲಗೇಜ್ ರಾಕ್ಸ್ ಮತ್ತು ಡೈನಾಮಿಕ್ ಮಾರ್ಗ ನಕ್ಷೆ, ಸ್ವಯಂ ನಿಯಂತ್ರಿತವಾಗಿ ಸುತ್ತುವರಿದ ಬೆಳಕಿನ ವ್ಯವಸ್ಥೆ, ಹವಾನಿಯಂತ್ರಿತ ಸೇರಿದಂತೆ ಹಲವಾರು ಆಧುನಿಕ ಪ್ರಯಾಣಿಕರ ಕೇಂದ್ರಿತ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ಸೇವೆಗೆ ಸಿದ್ದವಾಗುತ್ತಿದೆ ದೇಶದ ಮೊದಲ ಆರ್‌ಆರ್‌ಟಿಎಸ್ ಸೆಮಿ-ಹೈ ಸ್ಪೀಡ್ ರೈಲು

ಪ್ರತಿ ಗಂಟೆ 180 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಗಂಟೆ 160 ಕಿ.ಮೀ ಕಾರ್ಯಾಚರಣೆಯ ವೇಗ ಮತ್ತು ಪ್ರತಿ ಗಂಟೆಗೆ 100 ಕಿ.ಮೀ ಸರಾಸರಿ ವೇಗದ ವೈಶಿಷ್ಟ್ಯಗಳನ್ನು ಹೊಂದಿರುವ ಆರ್‌ಆರ್‌ಟಿಎಸ್ ಅತ್ಯಂತ ವೇಗದ ರೈಲುಗಳಾಗಿದ್ದು, ಕಾರ್ಯಾಚಾರಣೆ ನಂತರ ದೆಹಲಿ ಮತ್ತು ಮೀರತ್ ನಡುವಿನ ಪ್ರಯಾಣವು ಮೂರು ಗಂಟೆಗಳ ಪ್ರಯಾಣವು 75 ರಿಂದ 90 ನಿಮಿಷಗಳಿಗೆ ತಗ್ಗಲಿದೆ.

Most Read Articles

Kannada
Read more on ರೈಲು train
English summary
Delhi meerut rrts scheme has arrived at the duhai depot details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X