ಧೋನಿ ಮೊದಲ ಬೈಕ್‌ನ ಬೆಲೆ ಎಷ್ಟು ಗೊತ್ತೇ?

Posted By:

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಬೈಕ್ ಪ್ರೇಮಿ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ ಪ್ರವಾಹಕ್ಕೆ ಸಿಲುಕಿದ್ದ ಶ್ವಾನವೊಂದನ್ನು ದತ್ತು ಸ್ವೀಕರಿಸಿದ್ದ ಧೋನಿ ತಾವೊಬ್ಬ ಪ್ರಾಣಿ ಪ್ರಿಯ ಎಂಬುದನ್ನು ಕೂಡಾ ಸಾಬೀತುಪಡಿಸಿದ್ದರು. (ಇದಕ್ಕೂ ಮೊದಲು ಹುಲಿ ದತ್ತು ಸ್ವೀಕರಿಸಿದ್ದರು.)

ಅಂದ ಹಾಗೆ ಟೀಮ್ ಇಂಡಿಯಾ ನಾಯಕ, ತಮ್ಮ ಮೊದಲ ಬೈಕ್ ದುರಸ್ತಿ ಮಾಡಲು ಹೊರಟಿದ್ದಾರೆ. ಇದನ್ನು ಸ್ವತ: ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಹಿ ತಮ್ಮ ಮೊದಲ ಬೈಕ್ ದುರಸ್ತಿಗೊಳಿಸುವುದಾಗಿ ತಿಳಿಸಿದ್ದಾರೆ.

ಜಗತ್ತಿನ ಅತ್ಯಂತ ದುಬಾರಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಧೋನಿ ಇದೀಗ ಕೋಟಿಧೀಶ್ವರ ಆಗಿರಬಹುದು. ಆದರೆ ತಮ್ಮ ಮೊದಲ ಬೈಕನ್ನು ಎಷ್ಟು ರುಪಾಯಿ ತೆತ್ತು ಖರೀದಿಸಿದ್ದರು ಎಂಬುದು ನಿಮಗೆ ಗೊತ್ತೇ? ಉತ್ತರಕ್ಕಾಗಿ ಸ್ಲೈಡರ್‌ನತ್ತ ಸಾಗಿರಿ.

ಧೋನಿ ಮೊದಲ ಬೈಕ್

ಧೋನಿ ಮೊದಲ ಬೈಕ್

ಮೂಲಗಳ ಪ್ರಕಾರ ಧೋನಿ ಮೊದಲ ಬೈಕನ್ನು ರು. 4,500 ನೀಡಿ ಖರೀದಿಸಿದ್ದರಂತೆ!

ಹೆಲ್ ಕ್ಯಾಟ್

ಹೆಲ್ ಕ್ಯಾಟ್

ಭಾರತೀಯ ಕ್ರಿಕೆಟ್ ರಂಗದಲ್ಲಿ ಉತ್ತುಂಗಕ್ಕೇರಿರುವ ಕೂಲ್ ಕ್ಯಾಪ್ಟನ್ ಮಹೀಂದ್ರ ಸಿಂಗ್ ಧೋನಿ, ಸ್ಪೋರ್ಟ್ಸ್ ಬೈಕ್‌ ಬಗ್ಗೆಯೂ ಅತೀವ ಕ್ರೇಜ್ ಹೊಂದಿದ್ದಾರೆ. ಅವರ ಬಳಿ ಹೆಲ್ ಕ್ಯಾಟ್ ಎಕ್ಸ್132 ಬೈಕ್ ಕೂಡಾ ಇದೆ.

ಧೋನಿ ಬೈಕ್ ಪ್ರೇಮ

ಧೋನಿ ಬೈಕ್ ಪ್ರೇಮ

ಸೆಲೆಬ್ರಿಟಿಗಳಿಗೆ ಖಾಸಗಿ ಸ್ವಾತಂತ್ರ್ಯ ಕಡಿಮೆ. ಅವರು ಜನ ಸಾಮಾನ್ಯರಂತೆ ಸಾರ್ವಜನಿಕ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವಂತಿಲ್ಲ. ಯಾಕೆಂದರೆ ಅಭಿಮಾನಿಗಳು ತಕ್ಷಣ ಗುರುತಿಸಿಕೊಳ್ಳುತ್ತಾರೆ. ಹಾಗೊಂದು ದಿನ ರಾತ್ರಿ ವೇಳೆಯಲ್ಲಿ ಸಾರ್ವಜನಿಕರ ಕಣ್ಣು ತಪ್ಪಿಸಿ ಧೋನಿ ಬೈಕ್ ಪಯಣ

ಧೋನಿ ಬೈಕ್ ಪ್ರೇಮ

ಧೋನಿ ಬೈಕ್ ಪ್ರೇಮ

ರೇಸ್ ಟ್ರ್ಯಾಕಲ್ಲಿ ಧೋನಿ ಬಾಯ್ಸ್ ವೈಟ್‌ವಾಶ್ ಸಂಭ್ರಮ

ಮಹಿ ರೇಸಿಂಗ್ ಟೀಮ್

ಮಹಿ ರೇಸಿಂಗ್ ಟೀಮ್

ಅಂದ ಹಾಗೆ ಭಾರತೀಯ ಕ್ರಿಕೆಟ್ ತಂಡದ ನಾಯಕನೂ ಆಗಿರುವ ಮಹೇಂದ್ರ ಸಿಂಗ್ ಧೋನಿ, ರೇಸಿಂಗ್ ತಂಡವನ್ನು ಹೊಂದಿದ್ದಾರೆ.

ಲಂಬೋರ್ಗಿನಿ

ಲಂಬೋರ್ಗಿನಿ

ಸುರೇಶ್ ರೈನಾ ಅವರ ಷೋರ್ಷೆ ಸೂಪರ್ ಕಾರಲ್ಲಿ ಧೋನಿ ಶೋ

ಸೈಕಲ್ ರೈಡಿಂಗ್

ಸೈಕಲ್ ರೈಡಿಂಗ್

ಕ್ರಿಕೆಟೇತರ ಚಟುವಣಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿರುವ ಧೋನಿ, ಸೈಕಲ್ ರೈಡಿಂಗ್ ಕೂಡಾ ಇಷ್ಟಪಡುತ್ತಾರೆ.

ಸೈಕಲ್ ರೈಡಿಂಗ್

ಸೈಕಲ್ ರೈಡಿಂಗ್

ಇಲ್ಲಿದೆ ನೋಡಿ ಧೋನಿ ಸೈಕಲ್ ರೈಡಿಂಗ್ ಜಲಕ್

ವಿಜಯೋತ್ಸವ

ವಿಜಯೋತ್ಸವ

ಫೈಲ್ ಚಿತ್ರ: ಕ್ರಿಕೆಟ್ ಮೈದಾನದಲ್ಲಿ ಹೀರೊ ಹೋಂಡಾ ಕರಿಷ್ಮಾ ಜತೆ ಟೀಮ್ ಇಂಡಿಯಾ ವಿಜಯೋತ್ಸವ ಆಚರಿಸುತ್ತಿರುವ ಧೋನಿ. (ಜತೆಗೆ ಪ್ರವೀಣ್ ಕುಮಾರ್, ಸುರೇಶ್ ರೈನಾ)

English summary
Indian cricket team captain Mahendra Singh Dhoni Says, He plans to his 1st bike that he was bought for rs4500.
Please Wait while comments are loading...

Latest Photos