ಮತ್ತೆ ಬಯಲಾಯ್ತು ಧೋನಿ ಬೈಕ್ ಪ್ರೇಮ
ಭಾರತೀಯ ಕ್ರಿಕೆಟ್ ರಂಗದಲ್ಲಿ ಉತ್ತುಂಗಕ್ಕೇರಿರುವ ತಾಳ್ಮೆಯುತ ಆಟಗಾರ ಮಹೀಂದ್ರ ಸಿಂಗ್ ಧೋನಿ, ಸ್ಪೋರ್ಟ್ಸ್ ಬೈಕ್ ಬಗ್ಗೆಯೂ ಅತಿ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಬೈಕ್‌ಗಳಲ್ಲಿ ತಿರುಗಾಟವನ್ನು ಇಷ್ಟಪಡುತ್ತಾರೆ.
ಇತರ ಕ್ರಿಕೆಟರುಗಳಿಂದ ಸ್ವಲ್ಪ ಭಿನ್ನವಾಗಿರುವ ನಾಯಕ ಧೋನಿ ತಮ್ಮ ನಡತೆಗೆ ತಕ್ಕಂತೆ ಹತ್ತು ಹಲವಾರು ಕಾರು ಹಾಗೂ ಬೈಕ್‌ಗಳ ಸಂಗ್ರಹವನ್ನು ಹೊಂದಿದ್ದಾರೆ. ಈ ಪೈಕಿ ಎಕ್ಸ್132 ಹೆಲ್ ಕ್ಯಾಟ್ ಸೂಪರ್ ಬೈಕ್ ಪ್ರಮುಖವಾಗಿರುವುದು.
ಯಾಕೆಂದರೆ ಅತಿ ವಿರಳ ತಾರೆಗಳ ಬಳಿ ಮಾತ್ರ ದುಬಾರಿ ಹೆಲ್ ಕ್ಯಾಟ್ ಬೈಕ್ ಇದೆ. ಪ್ರಸ್ತುತ ಬೈಕನ್ನು ಗ್ರೇಟರ್ ನೋಯ್ಡಾ ಬಳಿಯಿರುವ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ರೈಡಿಂಗ್ ನಡೆಸಿದ್ದ ಧೋನಿ ಮತ್ತೆ ಸುದ್ದಿ ಗಿಟ್ಟಿಸಿಕೊಂಡಿದ್ದರು. ಅಂದ ಹಾಗೆ ಹೆಲ್‌ಕ್ಯಾಟ್ ಬೈಕ್ ಹೇಗೆ ಭಿನ್ನವಾಗಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ನೋಡೋಣ...

ಹೆಲ್‌ಕ್ಯಾಟ್ ಬೈಕನ್ನು ಕಾನ್ಫೆಡರೇಟ್ ಕಂಪನಿಯು ಬರ್ಮಿಂಗ್‌ಹ್ಯಾಮ್, ಅಲಬಾಮ ಹಾಗೂ ಅಮೆರಿಕದಲ್ಲಿ ಉತ್ಪಾದಿಸುತ್ತಿದ್ದು, ಎರಡನೇ ಮಹಾಯುದ್ಧದ ಲೆಜೆಂಡರಿ ಎಫ್5ಎಫ್ ಹೆಲ್‌ಕ್ಯಾಟ್ ಯುದ್ಧ ವಿಮಾನದ ಹೆಸರನ್ನು ಇದಕ್ಕೆ ಇಡಲಾಗಿದೆ.

ನಾಯಕ ಧೋನಿ ಪಾಲಿಗೆ ಹೆಲ್ ಕ್ಯಾಟ್ ನೆಚ್ಚಿನ ಸೂಪರ್ ಬೈಕಾಗಿದೆ. ಇದೇ ಕಾರಣಕ್ಕಾಗಿ ಫಾಸ್ಟ್ ಟ್ರ್ಯಾಕ್ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲೂ (ಬಿಐಸಿ) ತಮ್ಮ ಬೈಕ್ ಪ್ರೇಮ ತೋರಿಸಿದ್ದರು.

ಕಸ್ಟಮೈಸ್ಡ್ ಬೈಕ್ ಆಗಿರುವ ಹೆಲ್ ಕ್ಯಾಟ್ ತನ್ನದೇ ಆದ ಆಕರ್ಷಕ ವಿನ್ಯಾಸ ಹೊಂದಿದೆ. ಹಾಗೆಯೇ ಶಕ್ತಿಶಾಲಿ ಎಂಜಿನ್ ಕೂಡಾ ಲಗತ್ತಿಸಲಾಗಿದೆ.

ನೂತನ ಹೆಲ್ ಕ್ಯಾಟ್ ಬೈಕ್ 2,163 ಸಿಸಿಯ ವಿಟ್ವಿನ್ ಶಕ್ತಿಶಾಲಿ ಎಂಜಿನ್ ಹೊಂದಿದೆ. ಇದು 150 ಎನ್ಎಂ ಟಾರ್ಕ್ ಪವರ್ ಮತ್ತು 132 ಹಾರ್ಸ್ ಪವರ್ ನೀಡುತ್ತದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿದೆ.

ಇನ್ನು ಹೆಲ್‌ಕ್ಯಾಟ್ ದರದ ಬಗ್ಗೆ ಮಾತನಾಡುವುದಾದರೆ 30 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಹಾಗಾಗಿ ಜನ ಸಾಮಾನ್ಯರ ಕೈಗೆಟಕುವುದು ಅಷ್ಟು ಸುಲಭದ ಮಾತಲ್ಲ.

ಇನ್ನು ವಿಶೇಷವೆಂದರೆ ಏಷ್ಯಾ ಖಂಡದಲ್ಲಿ ಹೆಲ್‌ಕ್ಯಾಟ್ ಬೈಕ್ ಖರೀದಿಸಿದವರ ಪೈಕಿ ಧೋನಿ ಮೊದಲಿಗರೆಂಬ ಮಾಹಿತಿ ಕೂಡಾ ಇದೆ. ಇಂಗ್ಲೆಂಡ್ ಮಾಜಿ ಫುಟ್ಬಾಲ್ ಡೇವಿಕ್ ಬೆಕಾಂ ಬಳಿ ಎಫ್131 ಹೆಲ್‌ಕ್ಯಾಟ್ ಕೊಂಬ್ಯಾಟ್ ಮೋಟಾರ್‌ಸೈಕಲ್ ಇದೆ.

ಹೆಲ್‌ಕ್ಯಾಟ್ ಎಕ್ಸ್132
ಎಂಜಿನ್

ಹೆಲ್‌ಕ್ಯಾಟ್ ಎಕ್ಸ್132
ಎಂಜಿನ್

ಹೆಲ್‌ಕ್ಯಾಟ್ ಎಕ್ಸ್132
ಎಂಜಿನ್

ಹೆಲ್‌ಕ್ಯಾಟ್ ಎಕ್ಸ್132
ಫ್ರಂಟ್ ವ್ಯೂ

ಹೆಲ್‌ಕ್ಯಾಟ್ ಎಕ್ಸ್132
ಸೈಡ್ ವ್ಯೂ

ಹೆಲ್‌ಕ್ಯಾಟ್ ಎಕ್ಸ್132
ಹೆಡ್ ಲ್ಯಾಂಪ್

ಹೆಲ್‌ಕ್ಯಾಟ್ ಎಕ್ಸ್132
ರಿಯರ್ ಬ್ರೇಕ್ ಲೈಟ್

ಹೆಲ್‌ಕ್ಯಾಟ್ ಎಕ್ಸ್132
ರಿಯರ್ ವ್ಯೂ

ಹೆಲ್‌ಕ್ಯಾಟ್ ಎಕ್ಸ್132
ಸೈಡ್ ವ್ಯೂ

ಹೆಲ್‌ಕ್ಯಾಟ್ ಎಕ್ಸ್132
ಸ್ಪೀಡೊ ಮೀಟ್

ಹೆಲ್‌ಕ್ಯಾಟ್ ಎಕ್ಸ್132
ಸಸ್ಷೆಷನ್


Click it and Unblock the Notifications








