ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇವನೆ- ಪ್ರಶ್ನಿಸಿದ ಯುವಕನ ಮೇಲೆ ಕಾರು ಹರಿಸಿ ಕೊಲೆ.!!

Written By:

ಮಧ್ಯಸೇವನೆ ಮಾಡಿ ಆಸ್ಪತ್ರೆಯ ಆವರಣದಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ 21 ವರ್ಷದ ಯುವಕನನ್ನು ಕಾರು ಹರಿಸಿ ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಘಟನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸಿಗರೇಟ್ ಸೇವನೆ- ಪ್ರಶ್ನಿಸಿದ ಯುವಕನ ಮೇಲೆ ಕಾರು ಹರಿಸಿ ಕೊಲೆ.!!

ಆತನಿಗೆ ಇನ್ನು 21 ವರ್ಷ. ಹೆಸರು ಗುರ್‌ಪ್ರೀತ್ ಸಿಂಗ್. ಮೂಲತಃ ಪಂಜಾಬ್ ರಾಜ್ಯದಿಂದ ಬಂದಿದ್ದ ಆ ಯುವಕ ಓದಿನ ಜೊತೆ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಅರೆಕಾಲಿಕ ಉದ್ಯೋಗಿ ಕಾರ್ಯನಿರ್ವಹಿಸುತ್ತಿದ್ದು. ಆದ್ರೆ ಆತ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಆವರಣದಲ್ಲಿ ಸಿಗರೇಟು ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದೇ ತಪ್ಪಾಗಿ ಹೊಯ್ತು.

ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇವನೆ- ಪ್ರಶ್ಸಿಸಿದ ಬೈಕ್ ಚಾಲಕ ಮೇಲೆ ಕಾರು ಹರಿಸಿ ಕೊಲೆ.!!

ಇದು ಆಸ್ಪತ್ರೆ ಆವರಣ. ಇಲ್ಲಿ ಸಿಗರೇಟು ಸೇವೆನೆ ಮಾಡುವುದು ಅಪರಾಧ. ಹೀಗಂತಾ ಸಿಗರೇಟು ಸೇದುತ್ತಿದ್ದ ವ್ಯಕ್ತಿಗೆ ಗುಪ್ರೀರ್ತ್ ಸಿಂಗ್ ಬುದ್ಧಿವಾದ ಹೇಳಿದ್ದ. ಆದ್ರೆ ವೃತ್ತಿಯಲ್ಲಿ ವಕೀಲನಾಗಿದ್ದ ಆ ವ್ಯಕ್ತಿ ಗುರ್‌ಪ್ರೀತ್ ಸಿಂಗ್ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ.

Recommended Video - Watch Now!
Tata Nexon Price And Features Variant-wise - DriveSpark
ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇವನೆ- ಪ್ರಶ್ಸಿಸಿದ ಬೈಕ್ ಚಾಲಕ ಮೇಲೆ ಕಾರು ಹರಿಸಿ ಕೊಲೆ.!!

ಈ ಘಟನೆಗೂ ಮುನ್ನ ಸಿಗರೇಟು ಸೇವನೆ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದ್ದು, ಗುರ್‌ಪ್ರೀತ್ ಸಿಂಗ್ ಮಾತಿಗೆ ವಕೀಲ ಕುಪಿತಗೊಂಡಿದ್ದಾನೆ. ಈ ವೇಳೆ ವಕೀಲನ ವಿರುದ್ಧ ದೂರು ದಾಖಲಿಸಲು ಮುಂದಾಗುತ್ತಿದ್ದಂತೆ ರಾಯಲ್ ಎನ್‌ಫೀಲ್ಡ್‌ನಲ್ಲಿ ಚಲಿಸುತ್ತಿದ್ದ ಗುರ್‌ಪ್ರೀತ್ ಸಿಂಗ್ ಹಿಂಬದಿಯಿಂದ ಬಂದ ವಕೀಲ ವೇಗವಾಗಿ ಕಾರು ಗುದ್ದಿಸಿದ್ದಾನೆ.

ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇವನೆ- ಪ್ರಶ್ಸಿಸಿದ ಬೈಕ್ ಚಾಲಕ ಮೇಲೆ ಕಾರು ಹರಿಸಿ ಕೊಲೆ.!!

ಕಾರು ಗುದ್ದಿದ ರಭಸಕ್ಕೆ ತೀವ್ರ ಗಾಯಗೊಂಡಿದ್ದ ಗುರ್‌ಪ್ರೀತ್ ಸಿಂಗ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಕಾರು ಗುದ್ಧಿಸಿ ಹತ್ಯೆ ಮಾಡಿದ ಆರೋಪಿ ರೋಹಿತ್ ಕೃಷ್ಣ ಮಹಾಂತ್ ಜೈಲು ಸೇರಿದ್ದಾನೆ.

ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇವನೆ- ಪ್ರಶ್ಸಿಸಿದ ಬೈಕ್ ಚಾಲಕ ಮೇಲೆ ಕಾರು ಹರಿಸಿ ಕೊಲೆ.!!

ಇನ್ನು ಆರೋಪಿ ರೋಹಿತ್ ಕೃಷ್ಣ ಮಹಾಂತ್ ದೆಹಲಿಯ ಡಿಫೆನ್ಸ್ ಕಾಲೋನಿ ನಿವಾಸಿಯಾಗಿದ್ದು, ಅಸ್ಸಾಂ ಸರ್ಕಾರದ ಸ್ಥಾಯಿ ಕೌನ್ಸಿಲ್‌ನೊಂದಿಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದ್ರೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದಲ್ಲದೇ ಅಮಾಯಕ ವಿದ್ಯಾರ್ಥಿಯ ಜೀವವನ್ನೇ ಬಲಿತೆಗೆದುಕೊಂಡಿದ್ದಾನೆ.

ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇವನೆ- ಪ್ರಶ್ಸಿಸಿದ ಬೈಕ್ ಚಾಲಕ ಮೇಲೆ ಕಾರು ಹರಿಸಿ ಕೊಲೆ.!!

ಸದ್ಯ ಐಪಿಸಿ ಸೆಕ್ಷನ್ 304, 279 ಮತ್ತು 277 ಅಡಿ ರೋಹಿತ್ ಕೃಷ್ಣ ಮಹಾಂತ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ದೆಹಲಿ ಪೊಲೀಸರು, ಪ್ರಾಥಮಿಕ ತನಿಖೆ ವೇಳೆ ಆರೋಪಿ ವಕೀಲ ರೋಹಿತ್ ಕೃಷ್ಣ ಮಹಾಂತ್ ಅತಿಯಾದ ಡ್ರಗ್ಸ್ ಸೇವನೆ ಮಾಡಿದ್ದ ಎನ್ನಲಾಗಿದೆ.

Read more on ಅಪರಾಧ crime
English summary
Read in Kannada about Drunk Lawyer Runs Over 21 Years Old Motorcyclist In Delhi.
Story first published: Friday, September 22, 2017, 17:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark