ಇದು ಹೈಟೆಕ್ ಕಳ್ಳತನದ ಕರಾಮತ್ತು- ಕೇವಲ 50 ಸೆಕೆಂಡ್‍ಗಳಲ್ಲಿ ನಡೆಯಿತು ಕಾರು ಕಳ್ಳತನ

Written By:

ಅವರೆಲ್ಲಾ ಹೈಕೆಟ್ ಕಳ್ಳರು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ನಕಲಿ ಕೀ ಬಳಸದೇ, ಕಾರಿನ ಬಾಗಿಲು ಒಡೆಯದೇ ಕೇವಲ 50 ಸೇಕೆಂಡುಗಳಲ್ಲಿ ಕಾರು ಕಳ್ಳತನ ಮಾಡ್ತಾರೆ ಅಂದ್ರೆ ನಾವು ನಂಬಲೇಬೇಕು.

ಕೇವಲ 50 ಸೆಕೆಂಡ್‍ಗಳಲ್ಲಿ ನಡೆಯಿತು ಕಾರು ಕಳ್ಳತನ

ಇತ್ತೀಚೆಗೆ ಕಾರು ಕಳ್ಳತನವಾಗದಿರಲು ಹತ್ತಾರು ತಂತ್ರಜ್ಞಾನಗಳು ಚಾಲ್ತಿದಲ್ಲಿದ್ದರೂ ಕಳ್ಳರ ಮಾತ್ರ ರಂಗೋಲಿ ಕೆಳಗೆ ನುಗ್ಗುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇದಕ್ಕೆ ಉತ್ತಮ ನಿದರ್ಶನ ಅಂದ್ರೆ ಕಳ್ಳರು ತಮ್ಮ ಕೈಚಳಕ ತೋರಿಸಿ ಮಸಿರ್ಡಿಸ್ ಕಾರನ್ನ ಕೇವಲ ಒಂದೇ ನಿಮಿಷದಲ್ಲಿ ಕದ್ದು ಪರಾರಿಯಾಗಿರೋ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.

ಕೇವಲ 50 ಸೆಕೆಂಡ್‍ಗಳಲ್ಲಿ ನಡೆಯಿತು ಕಾರು ಕಳ್ಳತನ

ಕಾರು ಕಳ್ಳತನಕ್ಕೆ ಸಂಬಂಧಿಸಿದಂತೆ ವೆಸ್ಟ್ ಮಿಡ್‍ಲ್ಯಾಂಡ್ಸ್ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯವನ್ನ ಬಿಡುಗಡೆ ಮಾಡಿದ್ದು, ಕಳ್ಳರ ಕೃತ್ಯ ನೋಡಿ ಜನ ದಂಗಾಗಿದ್ದಾರೆ.

ಕೇವಲ 50 ಸೆಕೆಂಡ್‍ಗಳಲ್ಲಿ ನಡೆಯಿತು ಕಾರು ಕಳ್ಳತನ

ಬಿಳಿ ಬಣ್ಣದ ಕಾರ್ ವೊಂದರಲ್ಲಿ ಬಂದಿದ್ದ ಇಬ್ಬರು ಮುಸುಕುಧಾರಿಗಳು, ಅತ್ಯಂತ ಚಾಣಾಕ್ಷತನದಿಂದ ಕಾರು ಕಳ್ಳತನ ಮಾಡಿದ್ದಾರೆ. ಒಬ್ಬ ಮನೆ ಮುಂದೆ ನಿಲ್ಲಿಸಿದ್ದ ಮಸಿರ್ಡಿಸ್ ಕಾರಿನ ಮುಂದಿನ ಡೋರ್ ಬಳಿ ನಿಲ್ಲುತ್ತಾನೆ. ಮತ್ತೊಬ್ಬ ಮನೆಯ ಬಾಗಿಲ ಬಳಿ ಹೋಗೋದನ್ನ ವಿಡಿಯೋದಲ್ಲಿ ಕಾಣಬಹುದು.

ಕೇವಲ 50 ಸೆಕೆಂಡ್‍ಗಳಲ್ಲಿ ನಡೆಯಿತು ಕಾರು ಕಳ್ಳತನ

ಇಬ್ಬರೂ ಮುಸುಕುಧಾರಿಗಳು ರಿಲೇ ಬಾಕ್ಸ್ ಗಳನ್ನ ಹೊಂದಿದ್ದರು. ಈ ಸಾಧನ ಮೆಟಲ್ ಹೊರತುಪಡಿಸಿ ಗೋಡೆ, ಬಾಗಿಲು ಹಾಗೂ ಕಿಟಕಿ ಮೂಲಕವೂ ಸಿಗ್ನಲ್‍ಗಳನ್ನ ಸ್ವೀಕರಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಕೇವಲ 50 ಸೆಕೆಂಡ್‍ಗಳಲ್ಲಿ ನಡೆಯಿತು ಕಾರು ಕಳ್ಳತನ

ಒಬ್ಬ ಕಳ್ಳ ಮನೆಯೊಳಗಿದ್ದ ಕಾರ್ ಕೀ ಯಿಂದ ಸಿಗ್ನಲ್ ಪಡೆದಿದ್ದಾನೆ. ನಂತರ ಕಾರ್ ಡೋರ್ ಬಳಿ ಇದ್ದ ರಿಲೇ ಬಾಕ್ಸ್ ಗೆ ಆ ಸಿಗ್ನಲ್ ವರ್ಗಾವಣೆಯಾಗಿದೆ. ನಂತರ ಕೆಲವೇ ಸೆಕೆಂಡ್‍ಗಳಲ್ಲಿ ಕಾರ್ ಡೋರ್ ತೆರೆದಿದ್ದಾರೆ.

ಕೇವಲ 50 ಸೆಕೆಂಡ್‍ಗಳಲ್ಲಿ ನಡೆಯಿತು ಕಾರು ಕಳ್ಳತನ

ಬಳಿಕ ಇಬ್ಬರೂ ಒಂದೊಂದು ಕಾರ್ ಏರಿ ಹೊರಟಿದ್ದಾರೆ. 60 ಸೆಕೆಂಡ್‍ಗೂ ಕಡಿಮೆ ಅವಧಿಯಲ್ಲಿ ಕಳ್ಳರು ತಮ್ಮ ಕೆಲಸ ಮುಗಿಸಿ ಸ್ಥಳದಿಂದ ಕಾರ್ ಸಮೇತ ಪರಾರಿಯಾಗಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲೇ ಈ ಕೃತ್ಯ ನಡೆದಿದ್ದರೂ ನವೆಂಬರ್ 26ರಂದು ಸಿಸಿಟಿವಿ ದೃಶ್ಯ ಬಿಡುಗಡೆಯಾಗಿದೆ.

ಇನ್ನು ಕಳ್ಳತನವಾಗಿರೋ ಮರ್ಸಿಡಿಸ್ ಬೆಂಝ್ ಕಾರು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ತಪ್ಪದೇ ಓದಿ-ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

English summary
Read in Kannada: Thieves Steals Mercedes Car in 50 Seconds. Click for Details...
Story first published: Wednesday, November 29, 2017, 18:31 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark