ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

Written By:

ವಿಶ್ವದ ಶ್ರೀಮಂತ ರಕ್ಷಣಾ ಇಲಾಖೆ ಪಟ್ಟ ಯಾರಿಗೂ ಬಿಟ್ಟುಕೊಡಲಾರೆನು ಎಂದು ಪಣತೊಟ್ಟಿರುವಂತಿರುವ ದುಬೈ ಪೊಲೀಸ್ ಮಗದೊಂದು ಸೂಪರ್ ಹೈಬ್ರಿಡ್ ಕಾರನ್ನು ತನ್ನದಾಗಿಸಿಕೊಂಡಿದೆ.

ಸೂಪರ್ ಕಾರನ್ನು ಖರೀದಿಸುವುದು ದುಬೈ ಪೊಲೀಸ್ ಪಾಲಿಗೆ ಹವ್ಯಾಸವಾಗಿಬಿಟ್ಟಿದೆ. ಆದರೆ ಈ ಬಾರಿ ಸಾಮಾನ್ಯ ಸೂಪರ್ ಕಾರುಗಿಂತಲೂ ವಿಭಿನ್ನವಾಗಿ ಪರಿಸರ ಸ್ನೇಹಿ ಹೈಬ್ರಿಡ್ ಕಾರಿನತ್ತ ಮೊರೆ ಹೋಗಿದೆ.

ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರಿಗೆ ಜಗತ್ತಿನೆಲ್ಲೆಡೆ ಭಾರಿ ಬೇಡಿಕೆಯಿದೆ. ಪ್ರಸ್ತುತ ಕಾರು ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೂ ಪ್ರವೇಶಿಸಿತ್ತು.

ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು 1499 ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಎಲೆಕ್ಟ್ರಿಕ್ ಮೋಟಾರು ಕೂಡಾ ಹೊಂದಿರುತ್ತದೆ. ಇವೆರಡು ಜೊತೆ ಸೇರಿ ಗರಿಷ್ಠ 357 ಅಶ್ವಶಕ್ತಿ (570 ತಿರುಗುಬಲ) ಉತ್ಪಾದಿಸಲಿದೆ.

ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಅಷ್ಟೇ ಯಾಕೆ ಪ್ರತಿ ಲೀಟರ್‌ಗೆ 47.45 ಕೀ.ಮೀ. ಇಂಧನ ಕ್ಷಮತೆ ನೀಡಲು ಯಶಸ್ವಿಯಾಗಲಿದೆ. ಭಾರತದಲ್ಲಿ ಬಿಎಂಡಬ್ಲ್ಯು ಐ8 ಕಾರಿನ ಬೆಲೆ 2.29 ಕೋಟಿ ರು.ಗಳಾಗಿದೆ.

ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಬಿಎಂಡಬ್ಲ್ಯು ನಿರ್ವಹಣೆ ಹಾಗೂ ಎಂಜಿನ್ ಕಾರ್ಯಕ್ಷಮತೆ ವೃದ್ಧಿಸಿಕೊಳ್ಳಲು ಸಂಸ್ಥೆಯು ನಿರಂತರ ಕಾರ್ಯ ಮಗ್ನವಾಗಿದ್ದು, ಕಾರ್ಬರ್ ಫೈಬರ್‌ಗಳಂತಹ ಪರಿಕರಗಳನ್ನು ಬಳಕೆ ಮಾಡುವ ಮೂಲಕ ಭಾರವನ್ನು ಕಡಿಮೆ ಮಾಡಲಾಗಿದೆ.

ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಅಷ್ಟಕ್ಕೂ ಬಿಎಂಡಬ್ಲ್ಯು ಐ8 ದುಬಾರಿ ಕಾರು ದುಬೈ ನಗರಗಳಲ್ಲಿ ಗಸ್ತು ತಿರುಗಲಿದೆಯೇ ಎಂಬುದನ್ನು ಪ್ರಶ್ನಿಸದಿರಿ. ಯಾಕೆಂದರೆ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಹೈಬ್ರಿಡ್ ಸ್ಪೋರ್ಟ್ಸ್ ಕಾರು 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ವೇಗವರ್ಧಿಸಿಕೊಳ್ಳಬಹುದಾಗಿದೆ.

ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಒಟ್ಟಿನಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರಿನ ಆಗಮನದೊಂದಿಗೆ ದುಬೈ ಪೊಲೀಸ್‌ಗೆ ಆನೆ ಬಲ ಬಂದಂತಾಗಿದೆ. ಅಲ್ಲದೆ ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 37 ಕೀ.ಮೀ. ವರೆಗೆ ಚಲಿಸಲಿದ್ದು, ಗರಿಷ್ಠ 120 ಕೀ.ಮೀ. ವೇಗವನ್ನು ಪಡೆದುಕೊಳ್ಳಲಿದೆ.

ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ದುಬೈ ಜಗತ್ತಿನ ಶ್ರೀಮಂತ ಇಲಾಖೆ ಎಂದು ಕರೆಯಿಸಿಕೊಳ್ಳುತ್ತಿರುವುದು ಏಕೆ ಇಲ್ಲಿದೆ ಉತ್ತರ

ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಭಾರತದಲ್ಲಿ ಬಿಎಂಡಬ್ಲ್ಯು ಬ್ರಾಂಡ್ ಅಂಬಾಸಿಡರ್ ಆಗಿರುವ ಸಚಿನ್ ತೆಂಡೂಲ್ಕರ್ ಐ8 ಹೈಬ್ರಿಡ್ ಕ್ರೀಡಾ ಕಾರಿನ ಉದ್ಘಾಟನಾ ಸಂದರ್ಭದಲ್ಲಿ ಕಾಣಿಸಿಕೊಂಡಿರುವುದು ಹೀಗೆ...

English summary
The Dubai police force have fast supercars like Ferrari's, exclusive and limited edition cars like the Aston Martin One-77, superfast road legal car like the Bugatti Veyron, and the latest addition-the BMW i8.
Story first published: Thursday, March 12, 2015, 9:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark