ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಇಂಧನ ಆಧರಿತ ವಾಹನಗಳ ಬಳಕೆಯ ನಡುವೆಯೂ ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದ್ದು, ಪರಿಸರ ಸ್ನೇಹಿ ವಾಹನಗಳತ್ತ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ. ಇಂಧನ ಆಧರಿತ ವಾಹನಗಳಿಂತಲೂ ಹೆಚ್ಚು ಪ್ರಯೋಜನಕಾರಿ ಅಂಶಗಳನ್ನು ಹೊಂದಿರುವ ಇವಿ ವಾಹನಗಳು ಹಲವಾರು ವಿಶೇಷತೆಗಳನ್ನು ಪಡೆದುಕೊಂಡಿದ್ದು, ಇವಿ ವಾಹನಗಳಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅದು ಸಾಮಾನ್ಯ ವಾಹನಗಳಿಂತಲೂ ಹೆಚ್ಚು ವೇಗವರ್ಧನೆಯು ಗಮನಸೆಳೆಯುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಹೌದು, ಎಲೆಕ್ಟ್ರಿಕ್ ವಾಹನಗಳ ವೇಗವರ್ಧನೆಯು ಸಾಮಾನ್ಯ ಇಂಧನ ಆಧರಿತ ವಾಹನಗಳಿಂತಲೂ ಹೆಚ್ಚಿನ ವೇಗವರ್ಧನೆಯನ್ನು ಪಡೆದುಕೊಂಡಿದ್ದು, ಅದರಲ್ಲೂ ಇವಿ ಕಾರುಗಳ ವೇಗವರ್ಧನೆ ಪರ್ಫಾಮೆನ್ಸ್ ಕಾರು ಪ್ರಿಯರಿಗೆ ಹೊಸ ಅನುಭವ ನೀಡಲಿವೆ. ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆಯು ಆಂತರಿಕ ದಹನಕಾರಿ ಎಂಜಿನ್ ಹೊಂದಿರುವ ಕಾರ್‌ಗಿಂತಲೂ ಹೆಚ್ಚಿರಲಿದ್ದು, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗಪಡೆದುಕೊಳ್ಳತ್ತವೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಇಂಧನ ಆಧರಿತ ಕಾರುಗಳ ವೇಗವರ್ಧನೆಯು ಎಲೆಕ್ಟ್ರಿಕ್ ಕಾರುಗಳಿಗಿಂತಲೂ ಕಡಿಮೆಯಾಗಿರಲಿದ್ದು, ಇಂಧನ ಆಧರಿತ ಕಾರುಗಳ ವೇಗವರ್ಧಕವು ಕ್ರಮೇಣವಾಗಿ ಹೆಚ್ಚಾಗುತ್ತದೆ. ಆದರೆ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಆರಂಭದಲ್ಲೇ ಏಕೆ ಉತ್ತಮವಾಗಿದೆ ಎಂಬುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಇಂಧನ ಆಧರಿತ ಎಂಜಿನ್ ಕಾರುಗಳು 7000-8000 ಆರ್‌ಪಿಎಂನಲ್ಲಿ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತವೆ. ಆದಾಗ್ಯೂ ಈ ಸಮಯದಲ್ಲಿ ಕಾರುಗಳು ಹೆಚ್ಚು ಶಕ್ತಿಯನ್ನು ಪಡೆದರೂ ಟಾರ್ಕ್ ಔಟ್‌ಪುಟ್ ಒಂದು ಮಟ್ಟಕ್ಕೆ ಏರಿಳಿಕೆಯಾಗುತ್ತದೆ. ಹೀಗಾಗಿ ಹೆಚ್ಚಿನ ಆರ್‌ಪಿಎಮ್‌ನಲ್ಲಿ ಕಾರಿನ ಎಂಜಿನ್‌ ಹೆಚ್ಚಿನ ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯವು ಕಡಿಮೆಯಾಗುವುದರಿಂದ ಇದು ಸಾಮಾನ್ಯವಾಗಿರುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಆದರೆ ಎಲೆಕ್ಟ್ರಿಕ್ ಕಾರ್ ಎಂಜಿನ್ ಹೊಂದಿಲ್ಲವಾಗಿರುವುದರಿಂದ ವಿದ್ಯುತ್ ಉತ್ಪಾದಿಸಲು ಇಂಧನ ಮತ್ತು ಗಾಳಿಯ ಮಿಶ್ರಣವನ್ನು ದಹಿಸಬೇಕಾಗಿಲ್ಲ. ಎಲೆಕ್ಟ್ರಿಕ್ ಕಾರಿನ ಮೋಟಾರ್‌ಗೆ ಹೋಗುವ ವಿದ್ಯುತ್ ಪ್ರಮಾಣವು ಅಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಎಲೆಕ್ಟ್ರಿಕ್ ಕಾರ್‌ನಲ್ಲಿ ಮೋಟಾರು ಚಕ್ರಗಳ ಆಕ್ಸಲ್‌ಗಳ ಮೇಲೆ ಜೋಡಿಸಲ್ಪಟ್ಟಿರಲಿದ್ದು, ಇದರಿಂದಾಗಿ ಮೋಟಾರಿನ ಶಕ್ತಿಯನ್ನು ಚಕ್ರಗಳಿಗೆ ರವಾನಿಸುವಲ್ಲಿನ ಶಕ್ತಿಯ ನಷ್ಟವು ತುಂಬಾ ಕಡಿಮೆಯಾಗಿರುವುದರಿಂದ ಉತ್ತಮ ಟಾರ್ಕ್ ಅನ್ನು ಒದಗಿಸುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಹೀಗಾಗಿ ಎಲೆಕ್ಟ್ರಿಕ್ ಮೋಟಾರು ಶೂನ್ಯ ಆರ್‌ಪಿಎಂನಲ್ಲೂ ಉತ್ತಮ ಟಾರ್ಕ್ ಅನ್ನು ಉತ್ಪಾದಿಸಬಹುದು. ಈ ಕಾರಣದಿಂದಾಗಿ ಎಲೆಕ್ಟ್ರಿಕ್ ಕಾರುಗಳ ಕ್ಲೈಂಬಿಂಗ್ ಸಾಮರ್ಥ್ಯವು ಇಂಧನ ಆಧರಿತ ಎಂಜಿನ್ ಕಾರುಗಳಿಗಿಂತಲೂ ಉತ್ತಮವಾಗಿರಲಿದ್ದು, ಒಂದು ನಿರ್ದಿಷ್ಟ ಆರ್‌ಪಿಎಂ ತಲುಪಿದಾಗ ಮಾತ್ರ ಇಂಧನ ಆಧರಿತ ಕಾರುಗಳ ಎಂಜಿನ್ ಹೆಚ್ಚಿನ ಟಾರ್ಕ್ ಅನ್ನು ಉತ್ಪಾದಿಸುತ್ತವೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಜೊತೆಗೆ ಎಲೆಕ್ಟ್ರಿಕ್ ಕಾರುಗಳಲ್ಲಿನ ಟಾರ್ಕ್ ಔಟ್‌ಪುಟ್ ಹೆಚ್ಚು ವೇಗವಾಗಿರುವುದಲ್ಲದೆ ಹೆಚ್ಚಿನ ಆರ್‌ಪಿಎಂನಲ್ಲಿ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಏಕೆಂದರೆ ಎಲೆಕ್ಟ್ರಿಕ್ ಕಾರುಗಳು ಗೇರ್‌ಗಳನ್ನು ಹೊಂದಿರುವುದಿಲ್ಲ ಮತ್ತು ವಿದ್ಯುಚ್ಛಕ್ತಿಯಿಂದ ಚಲಿಸುತ್ತವೆ. ಆದ್ದರಿಂದ ಎಲೆಕ್ಟ್ರಿಕ್ ಮೋಟಾರ್ ಬ್ಯಾಟರಿಯಿಂದ ಶಕ್ತಿಯನ್ನು ಪಡೆದುಕೊಂಡ ತಕ್ಷಣವೇ ವೇಗವರ್ಧನೆ ಹೆಚ್ಚಳವಾಗುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಅದೇ ಸಮಯದಲ್ಲಿ ಹೆಚ್ಚಿನ ಆರ್‌ಪಿಎಂನಲ್ಲಿ ಇಂಧನ ಆಧರಿತ ಎಂಜಿನ್ ಕಾರುಗಳ ವೇಗವರ್ಧನೆಯು ಕ್ರಮೇಣ ಹೆಚ್ಚಳವಾಗಲಿದ್ದು, ಐಸಿ ಕಾರುಗಳ ಇಂಜಿನ್‌ನಿಂದ ಬಿಡುಗಡೆಯಾಗುವ ಶಕ್ತಿಯು ಗೇರ್‌ಗಳು ಮತ್ತು ಕ್ಲಚ್‌ಗಳ ಮೂಲಕ ಚಕ್ರಗಳಿಗೆ ಚಲಿಸುವ ಪ್ರಕ್ರಿಯೆಯು ವೇಗವರ್ಧನೆಯ ಟಾರ್ಕ್ ಅನ್ನು ವಿಳಂಬಗೊಳಿಸುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಎಲೆಕ್ಟ್ರಿಕ್ ಮೋಟಾರ್‌ಗಳು ಯಾವುದೇ ವೇಗದಲ್ಲಿ ಹೆಚ್ಚಿನ ಟಾರ್ಕ್ ಅನ್ನು ಒದಗಿಸಿದ್ದು, ಅದೇ ಇಂಧನ ಆಧರಿತ ಎಂಜಿನ್ ಕಾರುಗಳು ವಿದ್ಯುತ್ ಕಾರುಗಳಂತೆ ಟಾರ್ಕ್ ಅನ್ನು ತಲುಪಲು ಹೆಚ್ಚು ಆರ್‌ಪಿಎಂ ಅನ್ನು ಉತ್ಪಾದಿಸಬೇಕಾಗುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಆದರೆ ಇಂಧನ ಆಧರಿತ ಎಂಜಿನ್ ಕಾರುಗಳು ಗೇರ್‌ಗಳನ್ನು ಹೊಂದಿರುವುದರಿಂದ ಹೆದ್ದಾರಿಗಳಲ್ಲಿ ಕಡಿಮೆ ಆರ್‌ಪಿಎಮ್‌ನಲ್ಲಿಯೂ ಕಾರನ್ನು ಹೆಚ್ಚಿನ ವೇಗದಲ್ಲಿ ಓಡಿಸಲು ಸಹಾಯ ಮಾಡಲಿದ್ದು, ಮತ್ತೊಂದೆಡೆ ಎಲೆಕ್ಟ್ರಿಕ್ ಕಾರುಗಳಲ್ಲಿ ಗೇರ್ ವ್ಯವಸ್ಥೆಯ ಕೊರತೆಯಿಂದಾಗಿ ಅವುಗಳು ವೇಗವರ್ಧನೆಯು ಬ್ಯಾಟರಿಯಿಂದ ಮೋಟಾರ್‌ಗೆ ಹೋಗುವ ಶಕ್ತಿಯನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಉತ್ತಮ ವೇಗವರ್ಧಕವನ್ನು ನೀಡುವ ಎಲೆಕ್ಟ್ರಿಕ್ ಕಾರುಗಳ ವಿಷಯಕ್ಕೆ ಬಂದಾಗ ಟೆಸ್ಲಾ ಮಾಡೆಲ್ ಎಸ್ ಪ್ಲಾಯಿಡ್ ಮೊದಲ ಸ್ಥಾನದಲ್ಲಿದ್ದು, ಈ ಎಲೆಕ್ಟ್ರಿಕ್ ಕಾರು ಕೇವಲ 2 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಈ ಕಾರಿನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ 1020 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇವು ರಿಯರ್ ಟೈಮ್ ಮೈಲೇಜ್ ಮೇಲೆ ಪರಿಣಾಮ ಬೀರಿದರೂ ಇಂಧನ ಆಧರಿತ ಕಾರುಗಳಿಂತಲೂ ಹೆಚ್ಚು ಪರ್ಫಾಮೆನ್ಸ್ ಹಿಂದಿರುಗಿಸಲಿದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಹಾಗೆಯೇ ನಿಸ್ಸಾನ್ ಲೀಫ್ ಬಗ್ಗೆ ಮಾತನಾಡುವುದಾದರೆ ಅದು ಕೇವಲ 7 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ಪಡೆಯಬಹುದಾಗಿದ್ದು, ಅದೇ ಸಮಯದಲ್ಲಿ ಅದರ ಎಲೆಕ್ಟ್ರಿಕ್ ಮೋಟಾರ್ ಗರಿಷ್ಠ 214 ಬಿಎಚ್‌ಪಿ ಉತ್ಪಾದಿಸುತ್ತದೆ.

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತಲೂ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆ ಹೆಚ್ಚು ಯಾಕೆ? ಕಾರಣ ತಿಳಿಯಿರಿ..

ಇನ್ನು ಪೋರ್ಷೆಯ ಎಲೆಕ್ಟ್ರಿಕ್ ಕಾರು ಮಾದರಿಯಾದ ಪನಾಮೆರಾ ಟರ್ಬೊ ಎಸ್ ಎಲೆಕ್ಟ್ರಿಕ್ ಮೋಟಾರ್ 620 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸಲಿದ್ದು, ಇದು ಕೇವಲ ಮೂರು ಸೆಕೆಂಡುಗಳಲ್ಲಿ ಸೊನ್ನೆಯಿಂದ ರಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಈ ಮೂಲಕ ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆಯೂ ಭವಿಷ್ಯದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆ ಹುಟ್ಟುಹಾಕಿದ್ದು, ಇಂಧನ ಆಧರಿತ ವಾಹನಗಳಿಂತಲೂ ಇವಿ ವಾಹನಗಳ ಬಳಕೆಯು ಸಾಕಷ್ಟು ಪರಿಸರ ಸ್ನೇಹಿಯಾಗಿವೆ.

Most Read Articles

Kannada
English summary
Electric cars accelerate faster than internal combustion cars why explained
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X