ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ಆನೆಗಳು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿವೆ. ಆನೆಗಳ ಸಮಸ್ಯೆ ಪರಿಹರಿಸುವ ಕೌಶಲ್ಯ ಹಾಗೂ ಗ್ರಹಿಕೆಯ ಶಕ್ತಿ ನಮ್ಮನ್ನು ಬೆರಗುಗೊಳಿಸುತ್ತದೆ. ಈಗ ಆನೆಯ ಬುದ್ದಿಮತ್ತೆಗೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ಈ ವೀಡಿಯೊಗೆ ಸಂಬಂಧಿಸಿದ ಘಟನೆ ಹಂಪಿಯಲ್ಲಿ ನಡೆದಿದೆ. ವಿಪರೀತ ಬಾಯಾರಿಕೆಯಿಂದ ಬಳಲಿದ್ದ ಆನೆ ಟ್ಯಾಂಕರ್‌ನಿಂದ ನೀರು ಕುಡಿಯುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಆನೆ ಕಡೆಗೆ ಬರುತ್ತಿರುವುದನ್ನು ಕಂಡ ಚಾಲಕ ಗಾಬರಿಗೊಳಗಾದಂತೆ ಕಂಡು ಬರುತ್ತದೆ.

ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ಆದರೆ ಆನೆ ಚಾಲಕನಿಗೆ ಯಾವುದೇ ತೊಂದರೆ ನೀಡಿಲ್ಲ. ಬದಲಿಗೆ ಆನೆ ನೀರಿನ ಟ್ಯಾಂಕರ್ ಮೇಲಿದ್ದ ಮುಚ್ಚಳವನ್ನು ತೆರೆಯುವಂತೆ ಸನ್ನೆ ಮಾಡಿದೆ. ಇದನ್ನು ಅರಿತ ಟ್ರ್ಯಾಕ್ಟರ್‌ನಲ್ಲಿದ್ದ ಮತ್ತೊರ್ವ ವ್ಯಕ್ತಿ ಮುಚ್ಚಳವನ್ನು ತೆರೆದಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ನೀರು ಕುಡಿದ ನಂತರ ಆನೆ ಯಾರಿಗೂ ಹಾನಿ ಮಾಡದೇ ಅಲ್ಲಿಂದ ನಿರ್ಗಮಿಸಿದೆ. ಆನೆಗಳು ನೀರಿಗಾಗಿ ಹಾಗೂ ಆಹಾರಕ್ಕಾಗಿ ವಾಹನಗಳನ್ನು ಅಡ್ಡಗಟ್ಟುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಆನೆಗಳು ಬಸ್ ನಿಲ್ಲಿಸಿ ಒಳಗಿದ್ದ ಬಾಳೆಹಣ್ಣು ತಿಂದ ಬಗ್ಗೆ ವರದಿಯಾಗಿತ್ತು.

ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ಇಂತಹ ಘಟನೆಗಳು ಕಾಡಿನಲ್ಲಿ ಹೆಚ್ಚು ನಡೆಯುತ್ತವೆ. ಆನೆಗಳು ಕಾಡಿನಲ್ಲಿ ಆಕ್ರಮಣಕಾರಿಯಾಗುವುದರಿಂದ ವಾಹನ ಚಾಲಕರು ಜಾಗರೂಕರಾಗಿರಬೇಕು. ಆನೆಗಳನ್ನು ಕಾಡಿನಲ್ಲಿ ನೋಡಿದರೆ ವಾಹನ ಚಾಲಕರು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದಿರುವುದು ಅವಶ್ಯ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ಕೆಲವೊಮ್ಮೆ ಆನೆಗಳು ರಸ್ತೆಗಳಿಗೆ ಅಡ್ಡ ನಿಂತು ರಸ್ತೆಯನ್ನು ಬಂದ್ ಮಾಡುತ್ತವೆ. ಜೊತೆಗೆ ಆನೆಗಳು ಅಲ್ಲಿಂದ ಬೇಗ ಮುಂದಕ್ಕೆ ಹೋಗುವುದಿಲ್ಲ. ಅಂತಹ ಸಮಯದಲ್ಲಿ ಮುಂದೆ ಸಾಗುವುದಕ್ಕಿಂತ ಆನೆಗಳು ಹೋಗುವವರೆಗೂ ಕಾಯುವುದು ಉತ್ತಮ.

ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ಕಾಯುವಾಗ ಆನೆಗಳ ಚಟುವಟಿಕೆಗಳನ್ನು ಆನಂದಿಸಬಹುದು. ಕಾರಿನಿಂದ ಹೊರಬರದೇ ಆನಂದಿಸುವುದು ಉತ್ತಮ. ಪ್ರವಾಸಕ್ಕೆಂದು ಕಾರಿನಲ್ಲಿ ಕಾಡಿಗೆ ಹೋಗುವವರಿಗಿಂತ ಯಾವಾಗಲೂ ಕಾಡಿನ ಹಾದಿಯಲ್ಲಿ ಸಾಗುವ ಬಸ್ ಚಾಲಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ಕೆಲವೊಮ್ಮೆ ಅವರು ಆನೆಗಳು ಸಾಗುವವರೆಗೂ ಗಂಟೆಗಟ್ಟಲೇ ಕಾಯುತ್ತಾರೆ. ಈ ಸಂದರ್ಭಗಳಲ್ಲಿ ಅವರು ಬಸ್ಸಿನ ಎಂಜಿನ್ ಆಫ್ ಮಾಡಿ ಬಸ್ ಒಳಗಿರುವ ಪ್ರಯಾಣಿಕರಿಗೆ ಶಬ್ದ ಮಾಡದೇ ಸುಮ್ಮನಿರಲು ಸೂಚಿಸುತ್ತಾರೆ.

ಯಾವಾಗಲಾದರೂ ನಿಮಗೂ ಇದೇ ಪರಿಸ್ಥಿತಿ ಎದುರಾದರೆ ಆನೆ ಹಾಗೂ ನೀವಿರುವ ವಾಹನದ ನಡುವೆ ಸುರಕ್ಷಿತ ಅಂತರವನ್ನು ಇಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ವಾಹನದ ಹಾರ್ನ್ ಮಾಡದಿರಿ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟ್ರಾಕ್ಟರ್ ಅಡ್ಡಗಟ್ಟಿ ಟ್ಯಾಂಕರ್ ನೀರು ಕುಡಿದ ಗಜರಾಜ

ಹಾರ್ನ್ ಮಾಡುವುದರಿಂದ ಆನೆಗಳಿಗೆ ಕಿರಿಕಿರಿಯುಂಟಾಗಿ ಕೋಪ ಬರುವ ಸಾಧ್ಯತೆಗಳಿರುತ್ತವೆ. ವಾಹನದ ಎಂಜಿನ್ ಹಾಗೂ ಲೈಟ್ ಗಳನ್ನು ಆಫ್ ಮಾಡಿ. ಎಂಜಿನ್‌ನ ಶಬ್ದ ಹಾಗೂ ಲೈಟ್ ಗಳಿಂದ ಆನೆಗಳ ಗಮನ ನಿಮ್ಮ ಕಡೆ ತಿರುಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

Most Read Articles

Kannada
English summary
Elephant stops tractor and drinks water. Read in Kannada.
Story first published: Wednesday, November 18, 2020, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X