ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

Written By:

ವಿಮಾನವೊಂದು ಅಪಘಾತಕ್ಕೀಡಾಗುತ್ತಿದೆ ಎಂಬುದನ್ನು ತಿಳಿದ ತಕ್ಷಣ ನೀವೇನು ಮಾಡುವೀರಾ? ಪ್ರಾಣ ಭಯದಲ್ಲಿ ತಕ್ಷಣವೇ ಜಾಗ ಖಾಲಿ ಮಾಡಲಿದ್ದೇವೆ. ಆದರೆ ಕೇರಳದ ತಿರುವನಂತಪುರದಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನದಲ್ಲಿ ಆಗಿರುವ ಪ್ರಸಂಗವೇ ಬೇರೆ.

ಕೇರಳದ ತಿರುವನಂತಪುರದಿಂದ ಹೊರಟಿದ್ದ ಎಮಿರೇಟ್ಸ್‌ನ ಬೋಯಿಂಗ್ ವಿಮಾನವು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಾಶ್ ಲ್ಯಾಂಡಿಂಗ್ ಆಗಿರುವ ಹೊರತಾಗಿಯೂ ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿ ಹೋಗಿತ್ತು.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ಲ್ಯಾಂಡಿಂಗ್ ಗೇರ್ ದೋಷದಿಂದಾಗಿ ವಿಮಾನವನ್ನು ಕ್ರಾಶ್ ಲ್ಯಾಂಡಿಂಗ್ ಮಾಡುವುದು ಅನಿವಾರ್ಯವೆನಿಸಿತ್ತು. ಆದರೆ ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಎಲ್ಲ 282 ಪ್ರಯಾಣಿಕರು ಮತ್ತು 18 ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕೆಳಗಿಸಲಾಗಿತ್ತು.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ದುರದೃಷ್ಟವಶಾತ್ ರಕ್ಷಣಾ ಕಾರ್ಯಾಚರಣೆಯ ವೇಳೆ ಅಗ್ನಿಶಾಮಕ ಸಿಬ್ಬಂದಿ ಸಾವಿಗೆ ಶರಣಾಗಿದ್ದರು. 300ರಷ್ಟು ಜನರ ಜೀವನವನ್ನು ರಕ್ಷಣೆಯಲ್ಲಿ ಪಾಲ್ಗೊಂಡಿರುವ ರಕ್ಷಣಾ ಸಿಬ್ಬಂದಿ ತಮ್ಮ ಜೀವವನ್ನೇ ಮುಡಿಪಾಗಿಟ್ಟುಕೊಂಡಿದ್ದರು.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ಆದರೆ ಪ್ರಯಾಣಿಕರು ರಕ್ಷಣಾ ಕಾರ್ಯಾಚರಣೆಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿರುವುದು ಮತ್ತಷ್ಟು ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ಕೆಲವು ಪ್ರಯಾಣಿಕರು ಲ್ಯಾಪ್ ಟಾಪ್, ಲ್ಯಾಪ್ ಟಾಪ್, ಬ್ಯಾಗ್, ಬ್ಯಾಗ್ ಎಂದು ಬೊಬ್ಬೆ ಹಾಕುವುದನ್ನು ಕೇಳಿಸಬಹುದಿತ್ತು. ಸಹ ಪ್ರಯಾಣಿಕರ ಪ್ರಾಣವನ್ನು ಲೆಕ್ಕಿಸದ ಇಂತಹ ಪ್ರಯಾಣಿಕರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ಭದ್ರತಾ ಸಿಬ್ಬಂದಿಗಳು ಪದೇ ಪದೇ ನಿಮ್ಮ ವಸ್ತುಗಳನ್ನು ಅಲ್ಲೇ ಬಿಟ್ಟು ಆದಷ್ಟು ಬೇಗ ವಿಮಾನ ಬಿಟ್ಟು ಹೊರಗಡೆ ತೆರಳುವಂತೆ ಸೂಚಿಸುತ್ತಿದ್ದರು. ಯಾಕೆಂದರೆ ಇಂತಹ ತುರ್ತು ಸಂದರ್ಭದಲ್ಲಿ ಪ್ರಯಾಣಿಕರನ್ನು ವಸ್ತುಗಳ ಸುರಕ್ಷತೆಯನ್ನು ನೋಡುವ ಜವಾಬ್ದಾರಿ ಭದ್ರತಾ ಸಿಬ್ಬಂದಿಗಳಾಗಿರುತ್ತದೆ.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ಕ್ರಾಶ್ ಲ್ಯಾಂಡ್ ಆದ ವಿಮಾನಕ್ಕೆ ಸ್ವಲ್ಪದರಲ್ಲೇ ಬೆಂಕಿ ಹೊತ್ತಿಕೊಂಡಿತ್ತಲ್ಲದೆ ದಟ್ಟಾವಾದ ಹೊಗೆ ಆವರಿಸಿತ್ತು. ಆದರೆ ನುರಿತ ತರಬೇತಿ ಪಡೆದ ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಎಲ್ಲ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ವಿಶ್ವದ ಅತ್ಯಂತ ಸುರಕ್ಷಿತ ವಿಮಾನಗಳ ಸಾಲಿನಲ್ಲಿ ಸೇರಿಕೊಂಡಿರುವ ಎಮಿರೇಟ್ಸ್ ಸಂಸ್ಥೆಯ ವಿಮಾನದಲ್ಲಿ ಪ್ರಯಾಣ ಆರಂಭಕ್ಕೂ ಮೊದಲೇ ಅಪತ್ಕಾಲ ಪರಿಸ್ಥಿತಿ ಕೈಗೊಳ್ಳಬೇಕಾಗಿರುವ ಮುನ್ನಚೆರಿಕಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ ತಮ್ಮ ಜೀವ ಸೇಫಾಗಿದೆ ಎಂದು ಅಂದುಕೊಂಡಿರುವ ಪ್ರಯಾಣಿಕರ ವರ್ತನೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ವಿಳಂಬವುಂಟಾಗಿತ್ತು.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ಕಳೆದ 31 ವರ್ಷಗಳ ವಿಮಾನಯಾನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಮಿರೇಟ್ಸ್ ಸಂಸ್ಥೆಯು ಪ್ರಾಣವೊಂದನ್ನು ಕಳೆದುಕೊಳ್ಳುತ್ತಿದೆ. ವಿಮಾನದಲ್ಲಿ 20ರಷ್ಟು ದೇಶದ ಯಾತ್ರಿಕರು ಪ್ರಯಾಣಿಸುತ್ತಿದ್ದರು. ಇವರಲ್ಲಿ 226 ಮಂದಿ ಭಾರತೀಯರಾಗಿದ್ದರು.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ಅಪಘಾತಕ್ಕೀಡಾದ ಬೋಯಿಂಗ್ 777 ವಿಮಾನದಲ್ಲಿ ರಾಲ್ಸ್ ರಾಯ್ಸ್ ಟ್ರೆಂಟ್ 800 ಎಂಜಿನ್ ಜೋಡಣೆ ಮಾಡಲಾಗಿತ್ತು. ವಿಮಾನ ಹಾರಾಡುವ ವೇಳೆ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ ಎಂಬುದನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಫೆಡರಲ್ ಎವಿಯೇಷನ್ ಅಥಾರಟಿ ಖಚಿತಪಡಿಸಿದೆ.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ವಿಮಾನಯಾನ ಸುರಕ್ಷತೆ ಮತ್ತು ಭದ್ರತಾ ಮಾಹಿತಿಗಳನ್ನು ಕಲೆಹಾಕುವ ಸಂಸ್ಥೆ ಏರ್ ಸೇಫ್ ಪ್ರಕಾರ, ಕಳೆದ 30 ವರ್ಷಗಳಲ್ಲಿ ಎಮಿರೇಟ್ಸ್ ವಿಮಾನವು ಒಂದೇ ಒಂದು ಜೀವವನ್ನು ಕಳೆದುಕೊಂಡಿಲ್ಲ. ಮಗದೊಂದು ವಿಮಾನಯಾನ ಸುರಕ್ಷತಾ ರಾಂಕಿಂಗ್ ಜೆಎಸಿಡಿಇಸಿ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಎಮಿರೇಟ್ಸ್ 2015-16ನೇ ಸಾಲಿನ ಎರಡನೇ ಅತ್ಯಂತ ಸುರಕ್ಷಿತ ವಿಮಾನಯಾನ ಸಂಸ್ಥೆ ಎನಿಸಿಕೊಂಡಿದೆ.

ನಿಜಕ್ಕೂ ಸೇಫೆಸ್ಟ್ ಎಮಿರೇಟ್ಸ್ ವಿಮಾನದಲ್ಲಿ ಆಗಿದ್ದೇನು?

ವಿಮಾನದಲ್ಲಿ ಸಂಚರಿಸುವ ಯಾತ್ರಿಕರಿಂದ ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ಸ್ಕೈಟ್ರಾಕ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲೂ, ವಿಶ್ವದ ನಂ.1 ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಮಿರೇಟ್ಸ್ ಪಾತ್ರವಾಗಿತ್ತು.

ವಿಡಿಯೋ ವೀಕ್ಷಿಸಿ

Read more on ವಿಮಾನ plane
English summary
Emilrates is one of the safest airline service in the world
Story first published: Friday, August 5, 2016, 12:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark