ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

Written By:

ಸರ್ಜಿಕಲ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಣ ಮಿಲಿಟರಿ ಬಲಾಬಲದ ಹೋಲಿಕೆ ದಿನಂದಿನೇ ಹೆಚ್ಚಾಗುತ್ತಿದೆ. 'ಇಬ್ಬರ ಜಗಳ ಮೂರನೇಯವನಿಗೆ ಲಾಭ' ಎನ್ನುವ ಮಾತಿನ ಹಾಗೆ ಭಾರತ ಮತ್ತು ಪಾಕಿಸ್ತಾನ ನಡುವ ಉದ್ವಿಗ್ನ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆಯಲು ಚೀನಾ ಪಣತೊಟ್ಟಿದೆ. ಜಾಗತಿಕ ಮಟ್ಟದಲ್ಲಿ ಅಶ್ವಶಕ್ತಿಯಾಗಿರುವ ಚೀನಾ ಮಿಲಿಟರಿ ಬೆಳವಣಿಗೆಯನ್ನು ಭಾರತ ಬಹಳ ಸೂಕ್ಷ್ಮವಾಗಿ ವೀಕ್ಷಿಸಬೇಕಿದೆ. ಭಾರತ ಏನೇ ಅತ್ಯಾಧುನಿಕ ಯುದ್ಧ ವಿಮಾನ ಅಭಿವೃದ್ಧಿಪಡಿಸಿದರೂ ಪಾಕಿಸ್ತಾನ ಅದಕ್ಕೆ ಪ್ರತಿಯಾಗಿ ಚೀನಾ ನೆರವಿನೊಂದಿಗೆ ಮಿಲಿಟರಿ ಬಲ ವೃದ್ಧಿಸಿಕೊಳ್ಳುತ್ತಿದೆ. ಉನ್ನಲು ಆಹಾರವಿಲ್ಲದಿದ್ದರೂ, ಉಡಲು ಬಟ್ಟೆಯಿಲ್ಲದಿದ್ದರೂ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಮಾತ್ರ ಪಾಕಿಸ್ತಾನ ಕೋಟಿಗಟ್ಟಲೆ ರುಪಾಯಿಗಳನ್ನು ಸುರಿಯುತ್ತಿದೆ. ಚೀನಾ ಸಹಾಯದೊಂದಿಗೆ ಪಾಕಿಸ್ತಾನ ಅತ್ಯಾಧುನಿಕ ಜೆಎಫ್-17 ಥಂಡರ್ ಫೈಟರ್ ಜೆಟನ್ನು ಅಭಿವೃದ್ಧಿಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ 'ತೇಜಸ್' ಅಭಿವೃದ್ಧಿಗೊಳಿಸುವ ಮೂಲಕ ತಕ್ಕ ಉತ್ತರವನ್ನೇ ನೀಡಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಚೀನಾದ ಚೆಂಗ್ಡು ವೈಮಾನಿಕ ಉದ್ಯಮ ಕಾರ್ಪೊರೇಷನ್ (AVIC) ಜೊತೆಗಾರಿಕೆಯಲ್ಲಿ ಪಾಕಿಸ್ತಾನ ಏರೋನಾಟಿಕಲ್ಸ್ ಕಾಂಪ್ಲೆಕ್ಸ್ (ಪಿಎಸಿ), ಅತ್ಯಂತ ಶಕ್ತಿಶಾಲಿ ಜೆಎಫ್-17 ಥಂಡರ್ ಫೈಟರ್ ಜೆಟನ್ನು ನಿರ್ಮಿಸಿತ್ತು.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಹಗುರ ಭಾರದ ಸಿಂಗಲ್ ಎಂಜಿನ್ ನಿಯಂತ್ರಿತ ಬಹು ಕ್ರಿಯಾತ್ಮಕ ಯುದ್ಧ ವಿಮಾನವಾಗಿರುವ ಪಿಎಸಿ ಜೆಎಫ್-17 ಥಂಡರ್, ವೈಮಾನಿಕ ದಾಳಿ ಜೊತೆಗೆ ಬೇಹುಗಾರಿಕೆಗೆ, ನೆಲ ದಾಳಿ ಮತ್ತು ವಿಮಾನ ಪ್ರತಿಬಂಧಕಗಳಿಗೆ ಬಳಕೆ ಮಾಡಲಾಗುತ್ತದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಗಾಳಿಯಿಂದ ಗಾಳಿಗೆ ಹಾಗೂ ಆಕಾಶದಿಂದ ನೆಲಕ್ಕೆ ದಾಳಿಯಿಡುವ ಸಾಮರ್ಥ್ಯದ ಜೆಎಫ್-17 ಥಂಡರ್ ಫೈಟರ್ ಜೆಟ್ ಗಂಟೆಗೆ 2205 ಕೀ.ಮೀ. ವೇಗದಲ್ಲಿ 3,000 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಪಾಕಿಸ್ತಾನ ವಾಯುಸೇನೆಯ ಬೆನ್ನೆಲುಬು ಆಗಿ ಇದನ್ನು ಪರಿಗಣಿಸಲಾಗುತ್ತದೆ. ಇದನ್ನು ತಲಾ ಶೇಕಡಾ 50ರಷ್ಟು ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಆದರೆ ಇದ್ಯಾವುದಕ್ಕೂ ಭಾರತವೀಗ ಹೆದರುವ ಅಗತ್ಯವಿಲ್ಲ. ಆಗಲೇ ಪಾಕಿಸ್ತಾನದ ಜೆಎಫ್-17 ಥಂಡರ್ ಫೈಟರ್ ಜೆಟ್ ಗಿಂತಲೂ ಹೆಚ್ಚು ಬಲಶಾಲಿಯಾಗಿರುವ ತೇಜಸ್ ಹಗುರ ಯುದ್ಧ ವಿಮಾನವನ್ನು ಭಾರತ ಅಭಿವೃದ್ಧಿಪಡಿಸಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

33 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ತೇಜಸ್ ಯುದ್ಧ ವಿಮಾನವನ್ನು ಕಳೆದ ಮೇ ತಿಂಗಳಲ್ಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ, ಪ್ರಾಯೋಗಿಕ ಪರೀಕ್ಷೆ ನಡೆಸುವ ಮೂಲಕ ಜೂನಲ್ಲಿ ಮೊದಲ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಭಾರತೀಯ ವಾಯುಸೇನೆ ಯುದ್ಧ ವಿಮಾನ ಹಾಗೂ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತಿರುವ ಬೆಂಗಳೂರು ತಳಹದಿಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಸಂಪೂರ್ಣವಾಗಿಯೂ ಸ್ವದೇಶಿ ತಂತ್ರಜ್ಞಾನದ ತೇಜಸ್ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಈ ಮೊದಲು ತಾಂತ್ರಿಕ ವೈಫ್ಯಲ್ಯ ಹಾಗೂ ಅನೇಕ ಕಾರಣಾಂತರಗಳಿಂದಾಗಿ ಯೋಜನೆ ವಿಳಂಬಗೊಂಡಿತ್ತು. ಸಿಂಗಲ್ ಎಂಜಿನ್ ನಿಯಂತ್ರಿತ ಬಹು ಪಾತ್ರಧಾರಿ ವಿಶ್ವದ ಅತಿ ಕಿರಿಯ ಮತ್ತು ಲಘು ಗಾತ್ರದ ಸೂಪರ್ ಸೋನಿಕ್ ಫೈಟರ್ ಜೆಟ್ ಗಳಲ್ಲಿ ಒಂದಾಗಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಸ್ವದೇಶಿ ನಿರ್ಮಿತವಾದರೂ ಈಗಲೂ ಅನೇಕ ಉಪಕರಣಗಳನ್ನು ವಿದೇಶದಿಂದ ಆಮದು ಮಾಡಲಾಗಿದೆ. ಉದಾಹರಣೆಗೆ ತೇಜಸ್ ಹೃದಯವೇ ಆಗಿರುವ ಜಿಇ ಎಂಜಿನನ್ನು ಆಮದು ಮಾಡಲಾಗಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಇಸ್ರೇಲ್ ನಿರ್ಮಿತ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಮತ್ತು ಹೆಲ್ಮೆಟ್ ಮೌಂಟೆಡ್ ಡಿಸ್‌ಪ್ಲೇ ಸೈಟ್ (ಎಚ್ಎಂಡಿ) ತೇಜಸ್ ಹಗುರ ಯುದ್ಧ ವಿಮಾನದ ಪ್ರಮುಖ ವೈಶಿಷ್ಟ್ಯವಾಗಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಏರೋನಾಟಿಕಲ್ಸ್ ಅಭಿವೃದ್ಧಿ ಏಜೆನ್ಸಿ ಸಹ ಜೊತೆಗಾರಿಕೆಯಲ್ಲಿ ತೇಜಸ್ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಹಳೆಯದಾದ ಮತ್ತು ಶಕ್ತಿ ಕುಂದಿರುವ ಮಿಗ್-21 ಮತ್ತು ಮಿಗ್-23 ಯುದ್ಧ ವಿಮಾನಗಳ ಸ್ಥಾನವನ್ನು ತುಂಬಲಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ತೇಜಸ್ ಯುದ್ಧ ವಿಮಾನವು ಎಚ್ ಎಫ್-24 ಮಾರುತ್ ಬಳಿಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಗೊಳಿಸಿರುವ ಎರಡನೇ ಸೂಪರ್ ಸೋನಿಕ್ ಫೈಟರ್ ವಿಮಾನವಾಗಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

2003ರಲ್ಲಿ ಭಾರತದ ಅಂದಿನ ಪ್ರಧಾನ ಮಂತ್ರಿ ಅಟಾಲ್ ಬಿಹಾರಿ ವಾಜಪೇಯಿ ಅವರು ಹಗುರ ವಿಮಾನಕ್ಕೆ 'ತೇಜಸ್' ಎಂಬ ಹೆಸರನ್ನು ಸೂಚಿಸಿದ್ದರು. ಇದರರ್ಥ "ಪ್ರಕಾಶಮಾನವಾದ' ಎಂಬುದಾಗಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಬೆಂಗಳೂರಿನಲ್ಲಿ ಎಚ್‌ಎಎಲ್ ಕೇಂದ್ರಿಕರಿಸಿ ಕಾರ್ಯಾಚರಣೆ ನಡೆಸಲಿರುವ ತೇಜಸ್ ವಾಯುದಳವು "ಫ್ಲೈಯಿಂಗ್ ಡ್ರಾಗರ್ಸ್" (45 ಸ್ಕ್ವಾರ್ಡನ್) ಎಂದು ಗುರುತಿಸಿಕೊಳ್ಳಲಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಗ್ರೂಪ್ ಕ್ಯಾಪ್ಟನ್ ಎಂ ರಂಗಚಾರಿ ಎಂಬವರು ಫೈಯಿಂಗ್ ಡ್ರಾಗರ್ಸ್ ವಾಯುತಂಡದ ಮೊದಲ ಕಮಾಡಿಂಗ್ ಆಫೀಸರ್ ಆಗಿದ್ದು, ಅವರಡಿಯಲ್ಲಿ ಏಳು ಅಧಿಕಾರಿಗಳು, 42 ಏರ್ ವ್ಯಾರಿಯರ್ಸ್ ಮತ್ತು 20ರಷ್ಟು ನಾನ್ ಕಮಿಷನ್ಡ್ ಆಫೀಸರ್ ಗಳು ಇರಲಿದ್ದಾರೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಡಾ. ಕೋಟಾ ಹರಿನಾರಯಣ ಎಂಬವರು ತೇಜಸ್ ಲಘು ಯುದ್ಧ ವಿಮಾನದ ಪಿತಾಮಹ ಎಂದೆನಿಸಿಕೊಂಡಿದ್ದಾರೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ಭಾರತೀಯ ವಾಯುಸೇನೆಯ ಜೊತೆಗೆ ನಾವಿಕ ಪಡೆಯ ಸೇವೆಗೆ ಲಭ್ಯವಾಗಲಿರುವ ತೇಜಸ್ ಯುದ್ಧ ವಿಮಾನಗಳು 2018-20ರ ಅವಧಿಯಲ್ಲಿ ಪೂರ್ಣ ಪ್ರಮಾಣಕ್ಕೆ ತಲುಪಲಿದೆ. ಅಲ್ಲದೆ 120 ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯನ್ನು ಸೇರಲಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ತೇಜಸ್ ಯುದ್ಧ ವಿಮಾನವು ಶಬ್ದ ವೇಗ 1.8 ಅಥವಾ ಗಂಟೆಗೆ 2205 ಕೀ.ಮೀ. ವೇಗದಲ್ಲಿ ಸಂಚರಿಸಲಿದ್ದು, ಬರೋಬ್ಬರಿ 3,000 ಕೀ.ಮೀ. ವ್ಯಾಪ್ತಿ ವ್ಯಾಪ್ತಿ ಪ್ರದೇಶದಲ್ಲಿ ಕಾರ್ಯಾಚರಣೆ ನೆಡಸುವಷ್ಟು ಸಮರ್ಥವೆನಿಸಿಕೊಂಡಿದೆ.

ಚೀನಾ ನೆರವಿನೊಂದಿಗೆ ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್

ತೇಜಸ್ ವಿಮಾನದಲ್ಲಿ ಪೈಲಟ್ ಸುಲಭ ಹ್ಯಾಂಡ್ಲಿಂಗ್ ಗಾಗಿ ಕ್ವಾಡ್ರಾಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಂ ವ್ಯವಸ್ಥೆಯನ್ನು ಒದಗಿಸಲಾಗಿದೆ.

ತಾಂತ್ರಿಕತೆಗಳು

ತಾಂತ್ರಿಕತೆಗಳು

ಸಿಬ್ಬಂದಿ: 1

ಉದ್ದ: 13.20 ಮೀಟರ್

ರೆಕ್ಕೆ ಅಗಲ: 8.20 ಮೀಟರ್

ಎತ್ತರ: 4.40 ಮೀಟರ್

ಭಾರ: 9.500 ಕೆ.ಜಿ

ಗರಿಷ್ಠ ವೇಗ: 2205km/h

ವ್ಯಾಪ್ತಿ: 3000 ಕೀ.ಮೀ.

ಯೋಜಿತ ಉತ್ಪಾದನಾ ವೆರಿಯಂಟ್ ಗಳು

ಯೋಜಿತ ಉತ್ಪಾದನಾ ವೆರಿಯಂಟ್ ಗಳು

ತೇಜಸ್ ಟ್ರೈನರ್

ತೇಜಸ್ ಮಾರ್ಕ್ 1ಎ

ತೇಜಸ್ ಟ್ರೈನರ್ ಐಎನ್

ತೇಜಸ್ ಎಂಕೆ1 ನೇವಿ

ತೇಜಸ್ ಎಂಕೆ2 ನೇವಿ

ತೇಜಸ್ ಮಾರ್ಕ್ 2

ರಾಕೆಟ್, ಮಿಸೈಲ್, ಗನ್

ರಾಕೆಟ್, ಮಿಸೈಲ್, ಗನ್

ಎಸ್-8 ರಾಕೆಟ್ ಪೊಡ್, ಬೊಫಾರ್ಸ್ 135 ಎಂಎಂ ರಾಕೆಟ್,

ಏರ್ ಟು ಏರ್ ಮಿಸೈಲ್

ಆಸ್ಟ್ರಾ

ಡೆರ್ಬಿ

ಪೈಥೂನ್

ಆರ್-77

ಆರ್-73 ಮಿಸೈಲ್

1Xಮೌಂಟೆಡ್ 23 ಎಂಎಂ ಟ್ವಿನ್ ಬ್ಯಾರೆಲ್ ಜಿಎಸ್‌ಎಚ್-23 ಕ್ಯಾನನ್ ಜೊತೆಗೆ 220 ರೌಂಡ್ ಗಳ ಮದ್ದುಗುಂಡು.

ಆಕಾಶದಿಂದ ನೆಲಕ್ಕೆ ಕ್ಷಿಪಣಿ ದಾಳಿ

ಆಕಾಶದಿಂದ ನೆಲಕ್ಕೆ ಕ್ಷಿಪಣಿ ದಾಳಿ

ಡಿಆರ್ ಡಿಒ ಆ್ಯಂಟಿ ರೇಡಿಯೇಷನ್ ಮಿಸೈಲ್,

ಕೆಎಚ್-59 ಎಂಇ (ಟಿವಿ ಗೈಡಡ್ ಸ್ಟಾಂಡ್ ಆಫ್ ಮಿಸೈಲ್)

ಕೆಎಚ್-59 ಎಂಇ (ಲೇಸರ್ ಗೈಡಡ್ ಸ್ಟಾಂಡ್ ಆಫ್ ಮಿಸೈಲ್)

ಆ್ಯಂಟಿ ಶಿಪಿ ಮಿಸೈಲ್

ಕೆಎಚ್-35

ಕೆಎಚ್-31

ಬಾಂಬ್

ಬಾಂಬ್

ಕೆಎಬಿ-1500ಎಲ್ ಲೇಸರ್ ಗೈಡಡ್ ಬಾಂಬ್

ಜಿಬಿಯು-16 ಪೇವ್ ವೇ II

ಎಫ್ ಎಬಿ 250

ಒಡಿಎಬಿ-500ಪಿಎಂ ಫ್ಯೂಯಲ್ ಏರ್ ಸ್ಫೋಟಕ,

ಝಡ್ ಎಬಿ-250/350 ಬೆಂಕಿಯಿಡುವ ಬಾಂಬ್

ಬಾಂಬ್

ಬಾಂಬ್

ಬೆಟ್ ಎಬಿ-500 ಎಸ್‌ಎಚ್ ಪಿ ನಿಯಂತ್ರಿತ ಕಾಂಕ್ರೀಟ್ ನಾಶಕ ಬಾಂಬ್,

ಎಫ್ ಎಬಿ-500 ಟಿ ಗ್ರಾವಿಟಿ ಬಾಂಬ್,

ಒಎಫ್ ಎಬಿ-250-270 ಗ್ರಾವಿಟಿ ಬಾಂಬ್,

ಒಎಫ್ ಎಬಿ-100-120 ಗ್ರಾವಿಟಿ ಬಾಂಬ್,

ಆರ್ ಬಿಕೆ-500 ಕ್ಲಸ್ಟರ್ ಬಾಂಬ್ ಸ್ಟೇಕ್

ಇತರೆ ಶಕ್ತಿ

ಇತರೆ ಶಕ್ತಿ

ಡ್ರಾಪ್ ಟ್ಯಾಂಕ್ಸ್ ಫಾರ್ ಫೆರ್ರಿ ಫ್ಲೈಟ್

ವರ್ಧಿತ ವ್ಯಾಪ್ತಿ

ಕಾಯುವಿಕೆ ದಾಳಿ

ಮಿಂಚಿನ ದಾಳಿ

English summary
Amazing And Interesting Facts About HAL Tejas
Story first published: Thursday, October 13, 2016, 11:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark