ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದೆ. ಅಲ್ಲದೆ ಅದೊಂದು ದೊಡ್ಡ ಅಪರಾಧವಾಗಿದೆ. ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಬೇಕು.

ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದಕ್ಕಾಗಿ ಪೋಷಕರು ಜೈಲಿಗೆ ಹೋದ ಪ್ರಕರಣಗಳಿವೆ. ಪೋಷಕರು ತಮ್ಮ ಮಗನಿಗೆ ಸ್ಕೂಟರ್ ನೀಡಿ ದುಬಾರಿ ಮೊತ್ತದ ದಂಡ ಕಟ್ಟಬೇಕಾದ ಪ್ರಕರಣವೊಂದು ದಾಖಲಾಗಿದೆ. ದಾಖಲೆಗಳಿಲ್ಲದೆ ಮಗ ಸ್ಕೂಟರ್ ಚಲಾಯಿಸದಕ್ಕಾಗಿ ತಂದೆಗೆ ಬರೊಬ್ಬರಿ ರೂ.26,000 ದಂಡವನ್ನು ವಿಧಿಸಲಾಗಿದೆ.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಈ ಪ್ರಕರಣವು ಕಟಕ್‍‍ನ ಹೊರವಲಯದಲ್ಲಿ ನಡೆದಿದೆ. ದಾಖಲೆಗಳನ್ನು ಪರಿಶೀಲಿಸಲು ಪೊಲೀಸರು ಚೇಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುವ ವೇಳೆಯಲ್ಲಿ ಸ್ಕೂಟರ್ ಅನ್ನು ನಿಲ್ಲಿಸಿದ್ದಾರೆ. ಆದರೆ ಆ ಸ್ಕೂಟರ್‍‍ನಲ್ಲಿದ್ದ ಸವಾರ 17 ವರ್ಷ ವಯಸ್ಸಿನವನಾಗಿದ್ದಾನೆ. ಅಪ್ತಾಪ ವಯಸ್ಸಿನವನು ಸ್ಕೂಟರ್ ಚಲಾಯಿಸುತ್ತಿದ್ದರೆ ಆತನ ತಂದೆ ಹಿಂಬದಿಯಲ್ಲಿ ಕೂತಿದ್ದರು.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಈ ಇಬ್ಬರೂ ಸವಾರರು ಕೂಡ ಹೆಲ್ಮೆಟ್ ಅನ್ನು ಧರಿಸಿರಲಿಲ್ಲ. ಇದಕ್ಕಾಗಿ ಸ್ಥಳೀಯ ಸಂಚಾರಿ ಪೊಲೀಸರು ಎರಡು ರೀತಿಯ ದಂಡವನ್ನು ವಿಧಿಸಿದರು. ಸಾರ್ವಜನಿಕ ರಸ್ತೆಗಳಲ್ಲಿ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿದ್ದಕ್ಕಾಗಿ ರೂ.1,000 ದಂಡವಾದರೆ, ಅಪ್ರಾಪ್ತ ವಯಸ್ಸಿನವನು ಸ್ಕೂಟರ್ ಚಲಾಯಿಸಿದ್ದಕ್ಕಾಗಿ ರೂ.25 ಸಾವಿರ ದಂಡವನ್ನು ವಿಧಿಸಿದ್ದಾರೆ.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಪೊಲೀಸರು 198 ಡಿ ಮತ್ತು 199 ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಒಟ್ಟು ರೂ.26,000 ದಂಡವನ್ನು ವಿಧಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಸ್ಕೂಟರಿನ ಮಾಲೀಕನಿಗೆ ಆನ್‍‍ಲೈನ್‍ ಮೂಲಕ ದಂಡ ಪಾವತಿಸಲು ಅವಕಾಶ ನೀಡಿದ್ದಾರೆ. ಪೊಲೀಸರು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ದಂಡವನ್ನು ಪಾವತಿಸಿದ ಬಳಿಕ ಹಿಂತಿರುಗಿಸಲಾಗುತ್ತದೆ. ಒಂದು ವೇಳೆ ದಂಡವನ್ನು ಪಾವತಿಸದಿದ್ದರೆ, ಪೊಲೀಸರು ಸ್ಕೂಟರ್‍‍ನ ನೋಂದಣೆಯನ್ನು ರದ್ದುಗೊಳಿಸಬಹುದು ಮತ್ತು ಸ್ಕೂಟರ್‍‍ನ ಮಾಲೀಕನ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಅವಕಾಶವಿದೆ.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಇದೇ ರೀತಿಯ ಪ್ರಕರಣವೊಂದು ಕೆಲವೇ ವಾರಗಳ ಹಿಂದೆ ಒಡಿಶಾದಲ್ಲಿ ನಡೆದಿತ್ತು. ಒಡಿಶಾದ ಸಾರ್ವಜನಿಕ ರಸ್ತೆಗಳಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗ ಕಾರನ್ನು ಚಲಾಯಿಸಿದ್ದನು. ಆ ಪ್ರಕರಣದಲ್ಲಿ ರೂ.25 ಸಾವಿರ ದಂಡವನ್ನು ವಿಧಿಸಲಾಗಿತ್ತು. ಈ ದಂಡವನ್ನು ಕಾರು ಚಲಾಯಿಸಿದ ಅಪ್ರಾಪ್ತನ ತಂದೆಯು ದಂಡವನ್ನು ಪಾವತಿಸಬೇಕಾಗಿತ್ತು.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಅಪ್ರಾಪ್ತ ವಯಸ್ಸಿನವರು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ದೊಡ್ಡ ಅಪರಾಧ ಮತ್ತು ಪೊಲೀಸರು ಅಪ್ರಾಪ್ತ ಮಕ್ಕಳ ಪೋಷಕರ ವಿರುದ್ದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಮತ್ತು ಆದ್ದರಿಂದ ಯಾವುದೇ ವಿಮಾ ಪಾಲಿಸಿಯು ಲಭಿಸುವುದಿಲ್ಲ.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಈ ಹಿಂದೆ ಹೈದರಾಬಾದ್ ಪೊಲೀಸರು ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಅವರ ಪೋಷಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿಂದೆ ಅಪ್ರಾಪ್ತರು ವಾಹನ ಚಲಾಯಿಸಿದಾಗ ಅವರ ಪೋಷಕರನ್ನು ಜೈಲಿಗೆ ಕಳುಹಿಸಿದ ಉದಾಹರಣೆಗಳು ಕೂಡ ಇವೆ.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಅಲ್ಲದೇ ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಅದಕ್ಕೆ ಅವಕಾಶ ನೀಡಿದ ಪೋಷಕರು ಹೊಣೆಗಾರರು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಭಾರತದಲ್ಲಿ ಚಾಲನಾ ಪರವಾನಗಿ ಪಡೆಯಲು 18 ವರ್ಷ ಪ್ರಾಯವಾಗಬೇಕು. ಅದಕ್ಕೂ ಮೊದಲು ವಾಹನ ಚಾಲನೆ ಮಾಡುವುದನ್ನು ಕಲಿಯಬಹುದು.

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ಅಪ್ಪನಿಗೆ ಬಿತ್ತು ಭಾರೀ ದಂಡ

ಆದರೆ ಸಾರ್ವಜನಿಕ ರಸ್ತೆಗಳಲ್ಲಿ ಅಥವಾ ಸಾರ್ವಜನಿಕರು ಓಡಾಡುವ ಪ್ರದೇಶದಲ್ಲಿ ಚಾಲನೆ ಮಾಡಲು ಅವಕಾಶವಿಲ್ಲ. ಇಂತಹ ಪ್ರಕರಣಗಳು ಪೋಷಕರಿಗೆ ಒಂದು ಪಾಠವಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಇದೊಂದು ಎಚ್ಚರಿಕೆಯಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿದರೆ ದುರಂತಕ್ಕೆ ದಾರಿ ಮಾಡಿಕೊಡುವ ಮೊದಲು ಎಚ್ಚೆತ್ತುಕೊಳ್ಳಬೇಕು.

Most Read Articles

Kannada
English summary
Father FINED Rs. 26,000 for letting minor son ride his scooter. Read in Kannada.
Story first published: Thursday, January 16, 2020, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X