ಚೆನ್ನೈನಲ್ಲಿ ಟೀ ಕುಡಿದರೆ, ಟಿಫನ್ ವೇಳೆಗೆ ಬೆಂಗಳೂರು ತಲುಪಬಹುದು! ವಂದೇ ಭಾರತ್ ರೈಲಿನ ವಿಶೇಷತೆಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ಚೆನ್ನೈನಿಂದ ಬೆಂಗಳೂರು ಮೂಲಕ ಮೈಸೂರು ತಲುಪುವ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ.

ಈ ರೈಲು ಕೇವಲ 6.30 ಗಂಟೆಗಳಲ್ಲಿ 500 ಕಿ.ಮೀ ದೂರವನ್ನು ಕ್ರಮಿಸಲಿದೆ. ವಂದೇ ಭಾರತ್ ಸಂಪೂರ್ಣ ಎಸಿ ಕೋಚ್‌ಗಳೊಂದಿಗೆ ಬುಲೆಟ್ ಟ್ರೈನ್ ಗುಣಮಟ್ಟವನ್ನು ಹೊಂದಿದ್ದು, ಹೆಚ್ಚಿನ ವೇಗದಲ್ಲಿ ಓಡಲು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ.

ಈ ರೈಲಿನ ಬ್ರೇಕಿಂಗ್ ವ್ಯವಸ್ಥೆ ಅತ್ಯಾಧುನಿವಾಗಿದ್ದು ಅಪಘಾತ ತಡೆಯುವ ಸಾಧ್ಯತೆ ಕಡಿಮೆ ಮಾಡಬಲ್ಲ ಟಿಸಿಎಎಸ್ ಅಥವಾ ಕವಚ್ ಎನ್ನಲಾಗುವ ವ್ಯವಸ್ಥೆ ಇದೆ. ಕೇಂದ್ರೀಕೃತ ಕೋಚ್ ಮಾನಿಟರಿಂಗ್ ಸಿಸ್ಟಂ ಅಳವಡಿಸಲಾಗಿದೆ. ರೈಲಿನ ಎಲೆಕ್ಟ್ರಿಕ್ ಭಾಗಗಳಿಂದ ಹಿಡಿದು ಕ್ಲೈಮೇಟ್ ಕಂಟ್ರೋಲ್‌ವರೆಗೂ ಎಲ್ಲವನ್ನೂ ಒಬ್ಬ ವ್ಯಕ್ತಿ ರಿಯಲ್-ಟೈಮ್‌ನಲ್ಲಿ ಮಾನಿಟರ್ ಮಾಡಲಾಗುವಂತಹ ವ್ಯವಸ್ಥೆ ಇದೆ.

ಸದ್ಯ ವಿಸ್ತರಣೆಯ ಭಾಗವಾಗಿ ಈ ರೈಲನ್ನು ಪ್ರಸ್ತುತ ಚೆನ್ನೈ-ಮೈಸೂರು ನಡುವೆ ಚೆನ್ನೈ-ಬೆಂಗಳೂರು ಮತ್ತು ಬೆಂಗಳೂರು-ಮೈಸೂರು ಸಂಪರ್ಕಿಸಲು ಪರಿಚಯಿಸಲಾಗಿದೆ. ಈ ರೈಲು ಚೆನ್ನೈನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಕಟ್ಪಾಡಿ ಮತ್ತು ಬೆಂಗಳೂರು ಎಂಬ ಎರಡು ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಈ ರೈಲು ಸಂಪೂರ್ಣ ವೇಗದಲ್ಲಿ ಓಡಿದರೆ ಚೆನ್ನೈನಿಂದ ಬೆಂಗಳೂರಿಗೆ ಕೇವಲ 3 ಗಂಟೆಗಳಲ್ಲಿ ಪ್ರಯಾಣಿಸಬಹುದು ಎಂದು ಇಲಾಖೆ ಹೇಳಿಕೊಂಡಿದೆ. ಪ್ರಸ್ತುತ ಈ ರೈಲು ಚೆನ್ನೈ-ಬೆಂಗಳೂರು ಪ್ರಯಾಣಕ್ಕೆ 4.30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ವಂದೇ ಭಾರತ್ ರೈಲನ್ನು ಚೆನ್ನೈನ ಐಸಿಎಫ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ.

ಈ ರೈಲಿಗೆ ಇಂಟೆಲಿಜೆಂಟ್ ಬ್ರೇಕಿಂಗ್ ಸಿಸ್ಟಮ್ ಎಂಬ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅಂದರೆ ರೈಲು ಕಡಿಮೆ ಸಮಯದಲ್ಲಿ ವೇಗವನ್ನು ಪಡೆಯುವುದರ ಜೊತೆಗೆ ಅಷ್ಟೇ ಕಡಿಮೆ ಸಮಯದಲ್ಲಿ ಸುರಕ್ಷಿತವಾಗಿ ವೇಗವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ರೈಲಿನ ಎಲ್ಲಾ ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್ ಸಕ್ರಿಯಗೊಳಿಸಿದ ಆಡಿಯೋ-ವಿಡಿಯೋ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಆನ್‌ಫೋರ್ಡ್ ಹಾಟ್‌ಸ್ಪಾಟ್ ವೈ-ಫೈ ಸೌಲಭ್ಯ ಮತ್ತು ಐಷಾರಾಮಿ ಆಸನ ಸೌಲಭ್ಯವನ್ನು ಹೊಂದಿವೆ.

ಭಾರತದ ಮೊದಲ ವಂದೇ ಭಾರತ್ ರೈಲನ್ನು ಫೆಬ್ರವರಿ 15, 2019 ರಂದು ದೆಹಲಿ-ಕಾನ್ಪುರ ಮತ್ತು ಅಲಹಾಬಾದ್-ವಾರಣಾಸಿಯನ್ನು ಸಂಪರ್ಕಿಸಲು ಪ್ರಾರಂಭಿಸಲಾಯಿತು. ಇನ್ನು ಪ್ರಯಾಣ ದರದ ವಿಚಾರಕ್ಕೆ ಬಂದರೆ ಎಕನಾಮಿ ಕ್ಲಾಸ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಹೀಗೆ ಪ್ರತ್ಯೇಕ ದರ ಇದೆ.

ಚೆನ್ನೈನಿಂದ ಮೈಸೂರಿಗೆ ಎಕನಾಮಿ ಕ್ಲಾಸ್‌ನಲ್ಲಿ ಹೋಗಲು 921 ರೂ ಅಗುತ್ತದೆ. ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ಪ್ರಯಾಣಿಸಲು 1,880 ರೂ. ದರ ಇದೆ. ಮೈಸೂರಿನಿಂದ ಬೆಂಗಳೂರಿಗೆ ಹೋಗಲು ಎಕನಾಮಿ ಕ್ಲಾಸ್‌ಗೆ 368 ರೂ., ಎಕ್ಸಿಕ್ಯೂಟಿವ್ ಕ್ಲಾಸ್‌ಗೆ 768 ರೂ. ಆಗುತ್ತದೆ. ಈ ರೈಲಿನ ಟಿಕೆಟ್ ಅನ್ನು IRCTC ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು.

ಈ ರೈಲು ಚೆನ್ನೈ ಸೆಂಟ್ರಲ್‌ನಿಂದ ಬೆಳಿಗ್ಗೆ 5.50 ಕ್ಕೆ ಹೊರಟು 10.20 ಕ್ಕೆ ಬೆಂಗಳೂರು ಮತ್ತು 12.20 ಕ್ಕೆ ಮೈಸೂರು ತಲುಪುತ್ತದೆ. ಮೈಸೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 2.55ಕ್ಕೆ ಮತ್ತು ಚೆನ್ನೈಗೆ ರಾತ್ರಿ 7.30ಕ್ಕೆ ತಲುಪುತ್ತದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟೆಸ್ಟಿಂಗ್ ಹಂತದಲ್ಲಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಾಗಿತ್ತು. ಆದರೆ, ಪ್ರಾಯೋಗಿಕವಾಗಿ ಈ ರೈಲಿನ ಗರಿಷ್ಠ ವೇಗ 130 ಕಿ.ಮೀ ಎನ್ನಲಾಗಿದೆ. ಯಾಕೆಂದರೆ 180 ಕಿ.ಮೀ ವೇಗದಲ್ಲಿ ರೈಲು ಸಾಗಲು ಬೇಕಾದ ಸಮರ್ಪಕ ಹಳಿ ವ್ಯವಸ್ಥೆ ನಮ್ಮಲ್ಲಿ ಇನ್ನೂ ರೂಪುಗೊಂಡಿಲ್ಲ. ಸದ್ಯದ ಸ್ಥಿತಿಯಲ್ಲಿ ಗಂಟೆಗೆ 80ರಿಂದ 100 ಕಿ.ಮೀ ವೇಗದಲ್ಲಿ ವಂದೇ ಭಾರತ್ ರೈಲು ಓಡಲಿದೆ.

Most Read Articles

Kannada
Read more on ರೈಲು train
English summary
Features of vande bharat trains
Story first published: Monday, November 14, 2022, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X