ಐತಿಹಾಸಿಕ ಲಂಬೋರ್ಗಿನಿ ಸೂಪರ್‌ ಕಾರುಗಳು

By Nagaraja

ಇಂದಿನ ಆ ದಿನ...
ಇಟಲಿಯ ಪ್ರಖ್ಯಾತ ಕೈಗೋರಿಕೋದ್ಯಮಿ ಫೆರುಸ್ಸಿಯೊ ಲಂಬೋರ್ಗಿನಿ ಇತಿಹಾಸದ ಇಂದಿನ ಆ ದಿನದಂದು (ಎಪ್ರಿಲ್ 28) ಜನಿಸಿದ್ದರು. ಬಹುಶ: ಅವರಿಂದು ಬದುಕುಳಿಯುತ್ತಿದ್ದರೆ 98ರ ಮುತ್ಸುದ್ದಿಯೆನಿಸುತ್ತಿದ್ದರು. ಎರಡನೇ ಮಹಾಯುದ್ಧದ ಬಳಿಕ ಫೆರುಸ್ಸಿಯೊ, ಮಿಲಿಟರಿ ವಾಹನಗಳ ಭಾಗಗಳಿಂದ ಟ್ರಾಕ್ಟರ್ ನಿರ್ಮಿಸುವ ಸಣ್ಣ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಬಳಿಕ ಏರ್ ಕಂಡೀಷನರ್ ಮತ್ತು ಹೀಟಿಂಗ್ ಸಿಸ್ಟಂ ನಿರ್ಮಿಸಿದರು.

ಕೆಲವೇ ವರ್ಷಗಳಲ್ಲಿ ಶ್ರೀಮಂತರ ಸಾಲಿಗೆ ಸೇರಿದ ಫೆರುಸ್ಸಿಯೊ, ಹಲವಾರು ಸೂಪರ್ ಕಾರುಗಳ ಒಡೆಯರಾದರು. ಈ ಪೈಕಿ ಫೆರಾರಿ 250ಜಿಟಿ ಪ್ರಮುಖವಾಗಿತ್ತು. ಆದರೆ ಇದರಲ್ಲಿ ಕೆಲವೊಂದು ಸಮಸ್ಯೆ (ಕ್ಲಚ್) ಕಾಡತೊಡಗಿತು. ತಕ್ಷಣವೇ ಎನ್ಜೊ ಫೆರಾರಿ ಅವರನ್ನು ಸಂಪರ್ಕಿಸಿದರೂ 'ಟ್ರಾಕ್ಟರ್ ಚಾಲಕ' ಎಂದು ಹೀಯಾಳಿಸಿದರು. ಅಷ್ಟೇ ಅಲ್ಲದೆ 'ಸಮಸ್ಯೆ ಕಾರಿಗಲ್ಲ; ಬದಲಾಗಿ ಕಾರಿನ ಚಾಲಕರಿಗೆ' ಎಂಬುದಾಗಿ ತಮಾಷೆ ಮಾಡಿದುರು.

ಇದು ಫೆರುಸ್ಸಿಯೊ ಅವರನ್ನು ನೂತನ ಆಟೊಮೊಬೈಲಿ ಲಂಬೋರ್ಗಿನಿ ಸ್ಥಾಪಿಸಲು ನಾಂದಿ ಹಾಡಿತು. ಇದು ಪ್ರಮುಖವಾಗಿಯೂ ಫೆರಾರಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿತು. 1963ನೇ ಇಸವಿಯಲ್ಲಿ ಸ್ಥಾಪಿತವಾದ ಲಂಬೋರ್ಗಿನಿ (Sant'Agata Bolognese) ಸಂಸ್ಥೆ ಅದೇ ಸಾಲಿನಲ್ಲಿ ತನ್ನ ಮೊತ್ತ ಮೊದಲ 350 ಜಿಟಿವಿ ಸ್ಪೋರ್ಟ್ಸ್ ಕಾರನ್ನು ಲಾಂಚ್ ಮಾಡಿತ್ತು.

ಲೊಗೊ ವೈಶಿಷ್ಟ್ಯ...
ಲಂಬೋರ್ಗಿನಿ ವಿಶೇಷವಾಗಿಯೂ 'ಗೂಳಿ' ಲೊಗೊವನ್ನು ಹೊಂದಿದೆ. ಯಾಕೆಂದರೆ ಬಹುತೇಕ ಲಂಬೋರ್ಗಿನಿ ಕಾರುಗಳು ಕಾದಾಡುವ ಗೂಳಿಗಳ ಹೆಸರನ್ನು ಹೊಂದಿದೆ. ಇಂದಿಗೂ ಇಂದೇ ಟ್ರೆಂಡ್ ಅನುಸರಿತ್ತಾ ಬಂದಿರುವುದು ಶ್ಲಾಘನೀಯ. ಈ ವರ್ಷಗಳೆಡೆ ಲಂಬೋರ್ಗಿನಿ ಮ್ಯುರಾ (Miura) ಮತ್ತು ಕೌಂಟಾಕ್‌ಗಳಂತಹ (Countach) ಹಲವಾರು ಐಕಾನಿಕ್ ಕಾರುಗಳನ್ನು ಉತ್ಪಾದಿಸಿವೆ.

ಆದರೆ 1973ರಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟಿನ ಬಳಿಕ ಗ್ರಾಹಕರು ಆಡಂಬರದ ಕಾರುಗಳಿಂದ ದೂರವುಳಿದ ಪರಿಣಾಮ ಹಣಕಾಸು ಬಿಕ್ಕಟ್ಟು ಅನುಭವಿಸಿದ್ದ ಫೆರುಸ್ಸಿಯೊ ಲಂಬೋರ್ಗಿನಿಯ ಶೇರುಗಳನ್ನು ಮಾರಾಟ ಮಾಡುವದಕ್ಕೆ ಪ್ರೇರಿತರಾದರು. ಹೀಗೆ ಹಲವಾರು ಮಾಲಿಕತ್ವ ಬದಲಾವಣೆ ಬಳಿಕ ಕೊನೆಗೆ 1990ರ ದಶಕದಲ್ಲಿ ಫೋಕ್ಸ್‌ವ್ಯಾಗನ್ ತೆಕ್ಕೆಗೆ ಬಂದು ಸೇರಿತು. ಈ ನಡುವೆ 1993ನೇ ಇಸವಿಯಲ್ಲಿ ಫೆರುಸ್ಸಿಯಾ 76ನೇ ಹರೆಯದಲ್ಲಿ ವಿಧಿವಶರಾದರು.

ಐತಿಹಾಸಿಕ ಲಂಬೋರ್ಗಿನಿ ಸೂಪರ್‌ ಕಾರುಗಳು

ಇತಿಹಾಸ ಪುಟದಲ್ಲಿ ಮೋಡಿ ಮಾಡಿರುವ ಲಂಬೋರ್ಗಿನಿ ಐಕಾನಿಕ್ ಮಾದರಿಗಳ ಬಗ್ಗೆ ಅರಿಯಲು ಸ್ಲೈಡರ್‌ನತ್ತ ಮುಂದುವರಿಯಿರಿ...

ಲಂಬೋರ್ಗಿನಿ ಮ್ಯುರಾ

ಲಂಬೋರ್ಗಿನಿ ಮ್ಯುರಾ

1966ರಿಂದ 1973ನೇ ಕಾಲಘಟ್ಟದಲ್ಲಿ ಮ್ಯುರಾ ಉತ್ಪಾದನೆಯಾಗಿದ್ದವು. ಇದು ಬಿಡುಗಡೆಯಾದ ಸಂದರ್ಭದಲ್ಲಿ ಜಗತ್ತಿನ ಅತ್ಯಂತ ವೇಗದ ಉತ್ಪಾದಕ ಕಾರು ಎಂಬ ಗೌರವಕ್ಕೆ ಪಾತ್ರವಾಗಿತ್ತು. ಗರಿಷ್ಠ ನಿರ್ವಹಣೆ, ಮಿಡ್ ಎಂಜಿನ್ ಹಾಗೂ ಎರಡು ಸೀಟುಗಳ ಕ್ರೀಡಾ ಕಾರು ಇದಾಗಿತ್ತು. ಬಳಿಕ ಮಾರ್ಸೆಲೊ ಗಾಂಡಿನಿ ವಿನ್ಯಾಸಿತ ಈ ಕಾರು 1966ನೇ ಜಿನೆವಾ ಆಟೋ ಶೋದಲ್ಲಿ ಬಿಡುಗಯಾಗಿತ್ತಲ್ಲದೆ ಅಭೂತಪೂರ್ವ ಪ್ರತಿಕ್ರಿಯಿಸಿ ಗಿಟ್ಟಿಸಿಕೊಂಡಿತ್ತು. ಇದು ಏಳು ವರ್ಷಗಳ ಅವಧಿಯಲ್ಲಿ 740 ಯುನಿಟ್ ಮಾರಾಟವಾಗಿತ್ತು.

ಲಂಬೋರ್ಗಿನಿ ಎಸ್ಪಡಾ

ಲಂಬೋರ್ಗಿನಿ ಎಸ್ಪಡಾ

ಲಂಬೋರ್ಗಿನಿ ಎಸ್ಪಡಾ

1967ನೇ ಜಿನೆವಾ ಆಟೋ ಶೋದಲ್ಲಿ ಲಂಬೋರ್ಗಿನಿ ಎಸ್ಪಡಾ ಪ್ರದರ್ಶನಗೊಂಡಿತ್ತು. ಅಂದಿನ ಯಶಸ್ವಿ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಈ ಕಾರು 1,217 ನಿರ್ಮಾಣ ವರ್ಷನ್ ಪಡೆದುಕೊಂಡಿತ್ತು. ಪೋರ್ಚುಗೀಸ್‌ನಲ್ಲಿ ಎಸ್ಪಡಾ ಅಂದರೆ ಕತ್ತರಿ ಆಗಿದ್ದು, ಇದು ಕಾದಾಡುವ ಗೂಳಿಯ ಕುತ್ತಿಗೆಯಲ್ಲಿ ಬಳಸಲಾಗುತ್ತಿತ್ತು.

ಮಗದೊಂದು ಮಾರ್ಸೆಲೊ ಗಾಂಡಿನಿ ವಿನ್ಯಾಸದ ಈ ನಾಲ್ಕು ಸೀಟುಗಳ ಕಾರು ಜಾಗ್ವಾರ್ ಇ ಟೈಪ್ ದೇಹ ವಿನ್ಯಾಸ ಪಡೆದುಕೊಂಡಿದೆ. ಇದು 4.0 ಲೀಟರ್, 325 ಅಶ್ವಶಕ್ತಿ ಉತ್ಪಾದಿಸಬಲ್ಲ ವಿ12 ಎಂಜಿನ್ ಪಡೆದುಕೊಂಡಿತ್ತು. ಹಾಗೆಯೇ ಮ್ಯಾನುವಲ್ ಜತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದಿತ್ತು.

ಲಂಬೋರ್ಗಿನಿ ಉರಕೊ

ಲಂಬೋರ್ಗಿನಿ ಉರಕೊ

1960ರ ದಶಕದಲ್ಲಿ ಕಾಂಪಾಕ್ಟ್ ಸೂಪರ್ ಕಾರುಗಳನ್ನು ನಿರ್ಮಿಸುವ ಫೆರುಸ್ಸಿಯೊ ಮಹಾದಾಸೆಯ ಫಲವಾಗಿ ಉರಕೊ ಉಗಮವಾಗಿತ್ತು. ಇದು ಫೆರಾರಿ ಡಿನೊ 246 ಜಿಟಿ ಮತ್ತು ಪೋರ್ಷೆ 911 ಪ್ರತಿಸ್ಪರ್ಧಿಯಾಗಿತ್ತು. ಇದು 780 ಯುನಿಟ್‌ಗಳಷ್ಟು ಮಾರಾಟವಾಗಿತ್ತು.

ಲಂಬೋರ್ಗಿನಿ ಕೌಂಟಾಕ್

ಲಂಬೋರ್ಗಿನಿ ಕೌಂಟಾಕ್

1980ರ ದಶಕದಲ್ಲಿ ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದ್ದ, ಲಂಬೋರ್ಗಿನಿ ಕೌಂಟಾಕ್, ಶ್ರೀಮಂತರ ಹಿಟ್‌ಲಿಸ್ಟ್‌ಗೆ ಸೇರ್ಪಡೆಯಾಗಿತ್ತು. ಇದು 455 ಅಶ್ವಶಕ್ತಿ ಉತ್ಪಾದಿಸುವ 5.2 ಲೀಟರ್, ವಿ12 ಎಂಜಿನ್ ಹೊಂದಿದ್ದು, ಮೊದಲು 1971ರ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶಿಸಲಾಗಿತ್ತು. 1974 ಹಾಗೂ 1990ನೇ ಇಸವಿಯಲ್ಲಿ ನಿರ್ಮಾಣವಾಗಿದ್ದ ಕೌಂಟಾಕ್ 1840 ಯುನಿಟ್ ಕಾರುಗಳು ಮಾರಾಟವಾಗಿದ್ದವು.

ಲಂಬೋರ್ಗಿನಿ ಹಾಲ್ಪಾ (Jalpa)

ಲಂಬೋರ್ಗಿನಿ ಹಾಲ್ಪಾ (Jalpa)

ಲಂಬೋರ್ಗಿನಿಯ ಪೈಕಿ ಅತ್ಯಂತ ಯಶಸ್ವಿ ವಿ-8 ಮಾದರಿಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಪ್ರಸ್ತುತ ಕಾರು ಕೇವಲ 7.3 ಸೆಕೆಂಡುಗಳಲ್ಲಿ ಗಂಟೆಗೆ 60 ಮೈಲ್ ಅದೇ ರೀತಿ ಗಂಟೆಗೆ ಗರಿಷ್ಠ 161 ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಲಂಬೋರ್ಗಿನಿ ಎಲ್‌ಎಂ002

ಲಂಬೋರ್ಗಿನಿ ಎಲ್‌ಎಂ002

ವಿಭಿನ್ನವಾಗಿದೆಯಲ್ಲವೇ? ಹೌದು ಊರುಸ್ ಮಾದರಿಗೂ ಮುನ್ನ ಲಂಬೋರ್ಗಿನಿ ಎಸ್‌ಯುವಿವೊಂದನ್ನು ನಿರ್ಮಿಸಿತ್ತು. ಇದೇ ರಾಂಬೊ ಲ್ಯಾಂಬೋ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೊದಲ ಫೋರ್ ವೀಲ್ ಡ್ರೈವ್ ಮಾದರಿಯಾಗಿದೆ. ಇದು 1977ರ ಚೀತಾ ಪ್ರೊಟೊಟೈಪ್ ತಲಹದಿಯಲ್ಲಿ ನಿರ್ಮಾಣವಾಗಿದೆ.

ಲಂಬೋರ್ಗಿನಿ ಡೈಯಾಬ್ಲೊ

ಲಂಬೋರ್ಗಿನಿ ಡೈಯಾಬ್ಲೊ

1990 ಹಾಗೂ 2001ರ ಅವಧಿಯಲ್ಲಿ ಡಯಾಬ್ಲೊ ತಯಾರಿಸಲಾಗಿತ್ತು. ಇದು ಗಂಟೆಗೆ 200 ಮೈಲ್ ವೇಗತೆ ಸಾಧಿಸಿದ ಮೊದಲ ಲಂಬೊರ್ಗಿನಿ ಕಾರಾಗಿದೆ. ಡಯಾಬ್ಲೊ ಎಂಬ ಪದ ಸ್ಪಾನಿಶ್‌ನಲ್ಲಿ ಡೆವಿಲ್ ಎಂಬುದಾಗಿದೆ. ಈ ಜನಪ್ರಿಯ ಕಾರು 2989 ಯುನಿಟ್‌ಗಳಷ್ಟು ಮಾರಾಟವಾಗಿದ್ದವು.

ಲಂಬೋರ್ಗಿನಿ ಮರ್ಸಿಲ್ಯಾಗೊ

ಲಂಬೋರ್ಗಿನಿ ಮರ್ಸಿಲ್ಯಾಗೊ

ಇದು ಫೋಕ್ಸ್‌ವ್ಯಾಗನ್ ಅಧೀನತೆಯ ಬಳಿಕ ಹೊರಬಂದಿರುವ ಮೊದಲ ಕಾರಾಗಿದೆ. ಇದು ಎರಡು ಸೀಟುಗಳ, ಆಲ್ ವೀಲ್ ಡ್ರೈವ್ ಸೂಪರ್ ಕೂಪೆ ಕಾರಾಗಿದೆ. ಇದರಲ್ಲಿ ಮಿಡ್ ಮೌಂಟೆಡ್ ವಿ12 ಎಂಜಿನ್ ಆಳವಡಿಸಲಾಗಿದ್ದು, 572 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಲಂಬೋರ್ಗಿನಿ ಗಲರ್ಡೊ

ಲಂಬೋರ್ಗಿನಿ ಗಲರ್ಡೊ

ನಿಮಗೆಲ್ಲರಿಗೂ ಪರಿಚಿತವಾಗಿರುವ ಗಲರ್ಡೊ, ಲಂಬೋರ್ಗಿನಿ ಪಾಲಿಗೆ ಅತ್ಯಂತ ಹೆಚ್ಚು ಯಶಸ್ಸನ್ನು ತಂದಿಕ್ಕಿದೆ. ಸಂಸ್ಥೆಯು ಇದುವರೆಗೆ 14,022 ಗಲರ್ಡೊ ಯುನಿಟ್‌ಗಳನ್ನು ಮಾರಾಟ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ 5.0 ಲೀಟರ್ ವಿ10 ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಮ್ಯಾನುವಲ್ ಜತೆಗೆ ಸಿಕ್ಸ್ ಸ್ಪೀಡ್ ಎಲೆಕ್ಟ್ರೊ ಹೈಡ್ರಾಲಿಕ್ ನಿಯಂತ್ರಿತ ಪ್ಯಾಡಲ್ ಶಿಫ್ಟ್ ಅಥವಾ ಇ ಗೇರ್ ಟ್ರಾನ್ಸ್‌ಮಿಷನ್ ಹೊಂದಿದೆ. 2003ರಿಂದ 2014ರ ಅವಧಿಯಲ್ಲಿ ನಿರ್ಮಾಣವಾಗಿತ್ತು.

ಲಂಬೋರ್ಗಿನಿ ಅವೆಂಟಡೊರ್

ಲಂಬೋರ್ಗಿನಿ ಅವೆಂಟಡೊರ್

2011ರಲ್ಲಿ ಜಿನೆವಾ ಮೋಟಾರು ಶೋದಲ್ಲಿ ಲಂಬೋರ್ಗಿನಿ ಅವೆಂಟಡೊರ್ ವಿಶ್ವಕ್ಕೆ ಪರಿಚಯವಾಗಿತ್ತು. ಇದು ಮರ್ಸಿಲ್ಯಾಗೊ ಬದಲಿಯಾಗಿ ರಸ್ತೆಗಿಳಿದಿತ್ತು. ಇದರಲ್ಲಿ 6.5 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದ್ದು, 690 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 2.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಹಾಗೆಯೇ ಗರಿಷ್ಠ 350 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಲಾಸ್ಟ್ ಬಟ್ ನಾಟ್ ಲೀಸ್ಟ್...

ಲಾಸ್ಟ್ ಬಟ್ ನಾಟ್ ಲೀಸ್ಟ್...

ಮೇಲೆ ಕೊಡಲಾಗಿರುವ ಪಟ್ಟಿಯಲ್ಲಿ ನೈಜ ಕಾರು ಪ್ರೇಮಿಗಳಿಗಾಗಿ ಹಂಚಿಕೊಳ್ಳಲಾಗಿದೆ. ಯಾಕೆಂದರೆ ಇವೆಲ್ಲದರಲ್ಲೂ ಆಧುನಿಕ ಕಾರುಗಳಲ್ಲಿ ಲಭ್ಯವಿರುವಂತಹ ಎಬಿಎಸ್, ಇಎಸ್‌ಪಿ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಿಲ್ಲ. ಇಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಿಂತಲೂ ಮಿಗಿಲಾಗಿ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಳು ನಿಜವಾದ ಚಾಲನಾ ಅನುಭವ ಪ್ರದಾನ ಮಾಡುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಇಂತಹ ಕಾರುಗಳು ಇತಿಹಾಸದ ಭಾಗವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

Most Read Articles

Kannada
Story first published: Monday, April 28, 2014, 18:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X